HOME » NEWS » Entertainment » JOHN ABRAHAM HAS HANDED OVER HIS SOCIAL MEDIA ACCOUNTS TO SEVERAL NGOS STG AE

John Abraham: ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಎನ್‌ಜಿಒಗೆ ನೀಡಿದ ಜಾನ್ ಅಬ್ರಹಾಂ: ಕೊರೋನಾ ಹತೋಟಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ನಟ

John Abraham: ಬಾಲಿವುಡ್‌ ನಟ ಜಾನ್ ಅಬ್ರಹಾಂ ಸಹ ಕೋವಿಡ್​ನಿಂದ ಎದುರಾಗಿರುವ ಸಂಕಷ್ಟ ಸಮಯದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಜಾನ್​ ಎನ್‌ಜಿಒಗಳಿಗೆ ಹಸ್ತಾಂತರಿಸಿದ್ದಾರೆ.

news18-kannada
Updated:May 1, 2021, 2:07 PM IST
John Abraham: ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಎನ್‌ಜಿಒಗೆ ನೀಡಿದ ಜಾನ್ ಅಬ್ರಹಾಂ: ಕೊರೋನಾ ಹತೋಟಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ ನಟ
ಬಾಲಿವುಡ್‌ ನಟ ಜಾನ್ ಅಬ್ರಹಾಂ
  • Share this:
ಕೊರೋನಾ ಮಹಾಮಾರಿ ಭಾರತ ದೇಶದಲ್ಲಿ ತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹತೋಟಿಗೆ ಬಾರದ ಕೊರೋನಾ ಸೊಂಕು, ಮೂರನೇ ಅಲೆಯತ್ತ ಸಾಗುವ ಲಕ್ಷಣ ಗೊಚರಿಸುತ್ತಿದೆ. ಕೊರೋನಾ ವೈರಸ್ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಹಾನಿ ಮಾಡಿದ್ದು, ಮತ್ತಷ್ಟು ಉಲ್ಬಣಗೊಳ್ಳುತ್ತಾ ಸಾಗುತ್ತಿದೆ. ವೈರಸ್‌ನ ಎರಡನೇ ಅಲೆ ಭಾರತದಲ್ಲಿ ಆರಂಭವಾದಾಗಿನಿಂದ, ದೇಶಕ್ಕೆ ಬಹಳ ನಷ್ಟವನ್ನು ತಂದೊಡ್ಡಿದೆ. ಈ ವಿಷಮ ಪರಿಸ್ಥಿತಿಯಲ್ಲಿ ಮಾನವೀಯತೆಯ ದೃಷ್ಟಿಯಿಂದ ಆಮ್ಲಜನಕ ಸಿಲಿಂಡರ್‌ಗಳು, ಅಗತ್ಯ ಔಷಧಿಗಳು ಮತ್ತು ಇತರ ಅನೇಕ ವಸ್ತುಗಳನ್ನು ಒದಗಿಸಲು ಕೇವಲ ಸರ್ಕಾರ ಮಾತ್ರವಲ್ಲದೇ ಹಲವಾರು ಸಮಾಜ ಸೇವಕರು, ಸಂಘ ಸಂಸ್ಥೆಗಳೂ ಸೇರಿದಂತೆ ಸಿನಿಮಾ ನಟ - ನಟಿಯರು ಸಹ ಸಹಾಯ ಹಸ್ತ ಚಾಚಿದ್ದಾರೆ.

ಇದೇ ರೀತಿ, ಬಾಲಿವುಡ್‌ ನಟ ಜಾನ್ ಅಬ್ರಹಾಂ ಸಹ ಕೋವಿಡ್​ನಿಂದ ಎದುರಾಗಿರುವ ಸಂಕಷ್ಟ ಸಮಯದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಜಾನ್​ ಎನ್‌ಜಿಒಗಳಿಗೆ ಹಸ್ತಾಂತರಿಸಿದ್ದಾರೆ. ಇದರ ಮೂಲಕ ಈ ಸರ್ಕಾರೇತರ ಸಂಸ್ಥೆಗಳು ಕೊರೋನಾ ಸೋಂಕಿನಿಂದಾಗಿ ಬಳಲುತ್ತಿರುವವರಿಗೆ ಬೇಕಾದ ಸಹಾಯವನ್ನು ಅಂದರೆ, ಆಸ್ಪತ್ರೆ, ಐಸಿಯು ಬೆಡ್​, ಆಮ್ಲಜನಕ ಒದಗಿಸುವ ವ್ಯವಸ್ಥೆ ಮಾಡಲಿದೆಯಂತೆ. ಈ ಉದ್ದೇಶದಿಂದಲೇ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ ಜಾನ್​.





ದೇಶದ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಜಾನ್ ಅಬ್ರಹಾಂ, ಜನರ ಜೀವ ಉಳಿಸುವ ಸಲುವಾಗಿ ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ ಈಗಿರುವ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ. ಜಾನ್​ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ತುಂಬಾ ಜನ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಈ ವಾರವೂ ಕಿಚ್ಚನ ಅನುಪಸ್ಥಿತಿಯಲ್ಲೇ ನಡೆಯಲಿದೆ ಬಿಗ್ ಬಾಸ್​: ವಿಭಿನ್ನವಾದ ಬೇಡಿಕೆಯಿಟ್ಟ ಕಿಚ್ಚನ ಅಭಿಮಾನಿಗಳು

"ದೇಶದಲ್ಲಿ ಕಠೋರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಆಮ್ಲಜನಕ, ಐಸಿಯು ಹಾಸಿಗೆ, ಲಸಿಕೆ ಮತ್ತು ಕೆಲವೊಮ್ಮೆ ಆಹಾರವನ್ನು ಸಹ ಪಡೆಯಲು ಸಾಧ್ಯವಾಗದ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಹೇಗಾದರೂ, ಜನರನ್ನು ಒಟ್ಟುಗೂಡಿಸಲು, ಬೆಂಬಲಿಸಲು ಮತ್ತು ಅಗತ್ಯ ಕರ್ಮಗಳನ್ನು ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಇಂದಿನಿಂದ, ನಾನು ದೇಶಾದ್ಯಂತ ಪಾಲುದಾರಿಕೆ ಹೊಂದಿರುವ ಎನ್‌ಜಿಒಗಳಿಗೆ ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹಸ್ತಾಂತರಿಸುತ್ತೇನೆ ಮತ್ತು ನನ್ನ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ ” ಎಂದು ಜಾನ್‌ ವಿವರಿಸಿದ್ದಾರೆ.

ಇದನ್ನೂ ಓದಿ: 50ನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಮದುವೆಯಲ್ಲಿ ತೊಟ್ಟಿದ್ದ ಆಭರಣ ಧರಿಸಿ ಖುಷಿ ಪಟ್ಟ ಹೃತಿಕ್ ತಾಯಿ

ಜಾನ್, ಈ ಸುದ್ದಿಯನ್ನು ಹಂಚಿಕೊಂಡ ನಂತರ, ಅವರ ಪ್ರೊಫೈಲ್‌ನಲ್ಲಿ ರಕ್ತದ ಅಗತ್ಯವಿರುವ ಜನರನ್ನು ಸಂಪರ್ಕಿಸುವ ಪೋಸ್ಟ್​ ಅನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ರಕ್ತದ ಅಗತ್ಯವಿರುವವರನ್ನು ರಕ್ತದಾನಿಗಳು ಸಂಪರ್ಕಿಸಬಹುದಾಗಿದೆ. ರಕ್ತದಾನ ಮಾಡಲು ಸಿದ್ಧರಿರುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.









ಈ ಮಧ್ಯೆ, ಏಪ್ರಿಲ್ 28, ಬುಧವಾರ ಸಂಜೆಯಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ನೋಂದಣಿ ಪ್ರಕ್ರಿಯೆಯು ಭಾರತದಾದ್ಯಂತ ಪ್ರಾರಂಭವಾಗಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯು ಮೇ 1 ರಿಂದ ಪ್ರಾರಂಭವಾಗಿದ್ದು, ಪ್ರಿಯಾಂಕಾ ಚೋಪ್ರಾ, ಅರ್ಜುನ್ ರಾಂಪಾಲ್, ಜಾನ್ವಿ ಕಪೂರ್ ಮತ್ತು ಅನೇಕ ಚಲನಚಿತ್ರ ತಾರೆಯರು ತಮ್ಮ ಅಭಿಮಾನಿಗಳು ಲಸಿಕೆ ಹಾಕಿಸಿಕೊಳ್ಳಲು ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಲಸಿಕೆಯನ್ನು ಬೇಗನೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Published by: Anitha E
First published: May 1, 2021, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories