ಬಾಲಿವುಡ್ನ ಹಿಟ್ ಸರಣಿಗಳ ಸಿನಿಮಾಗಳಲ್ಲಿ ಒಂದಾದ 'ಧೂಮ್' (Dhoom 4)ಸರಣಿಯ 4ನೇ ಚಿತ್ರ ಕುರಿತಾಗಿ ಬಹಳ ಸಮಯದಿಂದ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇದೆ. 'ಧೂಮ್' ಸರಣಿಯಲ್ಲಿ ವಿಲನ್ ಪಾತ್ರಧಾರಿಯೇ ನಾಯಕ. ನಾಯಕನ ಪಾತ್ರಕ್ಕೆ ಅಷ್ಟು ಮಹತ್ವ ಇಲ್ಲ. ಹೀಗಾಗಿಯೇ ಈ ಸಿನಿಮಾದಲ್ಲಿ ವಿಲನ್ ಪಾತ್ರ ಯಾರು ಮಾಡಲಿದ್ದಾರೆ ಅನ್ನೋದು ಚರ್ಚೆಯ ವಿಷಯವಾಗಿದೆ. ಯಾರು ವಿಲನ್ ಆಗ್ತಾರೆ ಅನ್ನೊದಕ್ಕೆ ಅಂತೆ ಕಂತೆ ಅಂತ ಸ್ಟಾರ್ ನಟರ ಹೆಸರುಗಳು ಕೇಳಿ ಬರುತ್ತಲೇ ಇದೆ. ಈ ಸುದ್ದಿಗಳ ಪಟ್ಟಿಗೆ ಈಗ ಮತ್ತೊಂದು ಸುದ್ದಿ ಸೇರ್ಪಡೆಯಾಗಿದೆ. ಅದು ಧೂಮ್ 4 ಸಿನಿಮಾದಲ್ಲಿ ಮೊದಲ ಸಲ ಹೃತಿಕ್ ರೋಷನ್ ಹಾಗೂ ಜಾನ್ ಅಬ್ರಹಾಂ ತೆರೆ ಹಂಚಿಕೊಳ್ಳಲಿದ್ದಾರಂತೆ. ಹೀಗೊಂದು ಸುದ್ದಿ ಬಿ-ಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಈ ಸಿನಿಮಾದ ಲೇಡಿ ವಿಲನ್ ಯಾರು ಅನ್ನೋ ಸುದ್ದಿ ಸಹ ಈಗ ಬಹಿರಂಗವಾಗಿದೆ.
'ಧೂಮ್' ಸರಣಿಯ ಮೂರು ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಸೂಪರ್ ಕಾಪ್ ಪಾತ್ರದಲ್ಲಿ ನಟಿಸಿದ್ದರೆ, ವಿಲನ್ಗಳು ಬದಲಾಗಿದ್ದರು. ಮೊದಲ ಚಿತ್ರದಲ್ಲಿ ಜಾನ್ ಅಬ್ರಹಂ, 'ಧೂಮ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ 'ಧೂಮ್ 3' ಸಿನಿಮಾದಲ್ಲಿ ಅಮೀರ್ ಖಾನ್ ಖತರ್ನಾಕ್ ವಿಲನ್ಗಳಾಗಿ ಮಿಂಚಿದ್ದರು.
![Hrithik roshan, John abraham, Dhoom 4, Deepika Padukone, Hrithik roshan, John abraham and Deepika Padukone Dhoom 4, ಹೃತಿಕ್ ರೋಷನ್, ಜಾನ್ ಅಬ್ರಹಾಂ, ಧೂಮ್ 4, ದೀಪಿಕಾ ಪಡುಕೋಣೆ, ಬಾಲಿವುಡ್ ಸಿನಿಮಾ ಧೂಮ್ 4, john abraham and hrithik roshan work together for the first time in dhoom 4]()
'ಧೂಮ್ 1' ಸಿನಿಮಾದ ಪೋಸ್ಟರ್
ಧೂಮ್ ಮೊದಲ ಚಿತ್ರದಲ್ಲಿ ಜಾನ್ ಅಬ್ರಹಂ, 'ಧೂಮ್ 2' ಚಿತ್ರದಲ್ಲಿ ಹೃತಿಕ್ ರೋಷನ್ ವಿಲನ್ ಆಗಿ ಮಿಚಿದ್ದರು. ಈಗ ಈ ಜೋಡಿ ಧೂಮ್ 4ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇವರ ಜೊತೆ ಲೇಡಿ ವಿಲನ್ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಿದ್ದಾರಂತೆ. ಇನ್ನು ದೀಪಿಕಾ ಈಗಾಗಲೇ ಅಕ್ಷಯ್ ಕುಮಾರ್ ಅಭಿನಯದ ಚಾಂದನಿ ಚೌಕ್ ಟು ಚೈನಾ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ 'ಧೂಮ್ 4' ಚಿತ್ರದಲ್ಲಿ ವಿಲನ್ ಆಗಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಈಗ ಸುಳ್ಳು ಎಂದಾಯಿತು. ನಂತರ ಈ ಚಿತ್ರಕ್ಕೆ ವಿಲನ್ ಆಗಿ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿತ್ತು. ಹೀಗೆಂದು ಖ್ಯಾತ ಸಿನಿ ವಿಶ್ಲೇಷಕ ಅತುಲ್ ಮೋಹನ್ ಟ್ವೀಟ್ ಮಾಡಿದ್ದರು. ಇದೇ ವಿಷ್ಯ ಟ್ವಿಟರ್ನಲ್ಲಿ ಟ್ರೆಂಡ್ ಆಗಿ, ಅಕ್ಕಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದರು.
2013ರಲ್ಲಿ 'ಧೂಮ್ 3' ತೆರೆ ಕಂಡಿತ್ತು. ಇದಾದ ನಂತರ ಬಹಳ ಸಮಯದಿಂದ 'ಧೂಮ್ 4' ಚಿತ್ರದ ಸುದ್ದಿ ಹರಿದಾಡುತ್ತಿದೆ. ಬಹಳ ಹಿಂದೆಯೇ ಅಕ್ಷಯ್ ಕುಮಾರ್ ಹೆಸರು ಕೇಳಿ ಬಂದಿತ್ತು. ಆದರೆ ಆದಿತ್ಯ ಚೋಪ್ರಾ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿಲ್ಲ ಎಂದು ಕಳೆದ ವರ್ಷ ಸ್ಪಷ್ಟನೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ