Prem: ಲೊಕೇಷನ್​ ಹುಡುಕುತ್ತಾ ಕಾಶ್ಮೀರದತ್ತ ಹೊರಟ ಜೋಗಿ ಪ್ರೇಮ್: ಮಗನ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ನಿರ್ದೇಶಕ..!

ಹೌದು, ಏಕ್​ ಲವ್​ ಯಾ ಸಿನಿಮಾದ ಚಿತ್ರೀಕರಣ ಇನ್ನು ಮುಂದೆ ರಾಜಸ್ತಾನ, ಗುಜರಾತ್​, ಲಡಾಖ್​ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆಯಂತೆ. ಸಿನಿಮಾದ ಹಾಡುಗಳ ಶೂಟಿಂಗ್​ಗಾಗಿ ಲೊಕೇಷನ್​ಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ ಪ್ರೇಮ್​.

ನಿರ್ದೇಶಕ ಪ್ರೇಮ್​

ನಿರ್ದೇಶಕ ಪ್ರೇಮ್​

  • Share this:
ನಿರ್ದೇಶಕ ಜೋಗಿ ಪ್ರೇಮ್​ ಸದ್ಯ ಏಕ್​ ಲವ್​ ಯಾ ಸಿನಿಮಾ ಚಿತ್ರೀಕರಣವನ್ನು ಪೂರ್ಣಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದಿಂದಾಗಿಯೇ ಈ ಸಲ ತಮ್ಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಳ್ಳಲು ಆಗಲಿಲ್ಲ. ಬದಲಿಗೆ ಏಕ್​ ಲವ್​ ಯಾ ತಂಡದೊಂದಿಗೆ ಊಟಿಯಲ್ಲಿ ಆಚರಿಸಿಕೊಂಡಿದ್ದರು. ಈಗ ಮಗನ ಹುಟ್ಟುಹಬ್ಬಕ್ಕೂ ಸಹ ಪ್ರೇಮ್​ ಈ ಸಲ ಕುಟುಂಬದೊಂದಿಗೆ ಇಲ್ಲ. ಕಾರಣ ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಲೊಕೇಷನ್​ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲೂ ಒಂದು ಕಡೆ ನಿಲ್ಲದಂತೆ ಪ್ರಯಾಣ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಊಟಿಯಲ್ಲಿ ಚಿತ್ರೀಕರಣಕ್ಕಾಗಿ ಲೊಕೇಷನ್​ ಹುಡುಕಿ, ಅಲ್ಲಿ ಚಿತ್ರೀಕರಣ ಮುಗಿಸಿದ್ದರು. ಈಗ ಮತ್ತೆ ಹೊಸ ಲೊಕೇಷನ್​ಗಳ  ಬೆನ್ನುಹತ್ತಿ ಮತ್ತೆ ಅಲೆಮಾರಿಯಂತೆ ಸಂಚರಿಸುತ್ತಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್​.

ಹೌದು, ರಕ್ಷಿತಾ ಅವರ ಸಹೋದರ ರಾಣಾ ಅವರನ್ನು ನಾಯಕನಾಗಿ ಪರಿಚಯಿಸುತ್ತಿರುವ ಸಿನಿಮಾ ಏಕ್​ ಲವ್​ ಯಾ. ಈ ಸಿನಿಮಾದ ಚಿತ್ರೀಕರಣ ಲಾಕ್​ಡೌನ್​ಗೂ ಮೊದಲೇ ಆರಂಭವಾಗಿತ್ತಾದರೂ, ಕೊರೋನಾ ಭೀತಿಯಿಂದಾಗಿ ಅದಕ್ಕೆ ಬ್ರೇಕ್​ ಬಿದ್ದಿತ್ತು. ಈಗ ಈ ಚಿತ್ರದ ಶೂಟಿಂಗ್​ ಮತ್ತೆ ಆರಂಭವಾಗಿದೆ. ಇತ್ತೀಚೆಗಷ್ಟೆ ಊಟಿಯಲ್ಲಿ ಇದರ ಚಿತ್ರೀಕರಣ ನಡೆದಿತ್ತು.
ಈಗ ಮತ್ತೆ ಇದೇ ಸಿನಿಮಾ ಚಿತ್ರೀಕರಣಕ್ಕಾಗಿ ಲೊಕೇಷನ್​ ಹಂಟಿಂಗ್​ನಲ್ಲಿದ್ದಾರೆ ಪ್ರೇಮ್​. ಅದಕ್ಕಾಗಿ ಅವರು ಮತ್ತೆ ಪ್ರಯಾಣ ಆರಂಭಿಸಿದ್ದಾರೆ.
ಹೌದು, ಏಕ್​ ಲವ್​ ಯಾ ಸಿನಿಮಾದ ಚಿತ್ರೀಕರಣ ಇನ್ನು ಮುಂದೆ ರಾಜಸ್ತಾನ, ಗುಜರಾತ್​, ಲಡಾಖ್​ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆಯಂತೆ. ಸಿನಿಮಾದ ಹಾಡುಗಳ ಶೂಟಿಂಗ್​ಗಾಗಿ ಲೊಕೇಷನ್​ಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ ಪ್ರೇಮ್​.


ಇದೇ ಕಾರಣದಿಂದಾಗಿ ಈ ಸಲ ಮಗ ಸೂರ್ಯನ ಹುಟ್ಟುಹಬ್ಬದಂದು ಪ್ರೇಮ್​ ಮನೆಯಲ್ಲಿ ಇಲ್ಲ. ಅದಕ್ಕಾಗಿಯೇ ಅಮ್ಮನ ಮಗನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೇಮ್​ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಪ್ರೇಮ್​ ನಾಯಕನಾಗಿ ನಟಿಸಲು ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್​ ಆರಂಭವಾಗಲಿದೆ. ಎಲ್ಲ ಮುಗಿದ ನಂತರ ಪ್ರೇಮ್​ ಹಾಗೂ ಕಿಚ್ಚನ ಕಾಂಬಿನೇಷನ್​ನಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಪ್ರಕಟಣೆಯಾಗಲಿದೆ.
Published by:Anitha E
First published: