HOME » NEWS » Entertainment » JOGI PREM EK LOVE YA MOVIE TEASER GET THUMBS FROM AUDIENCE RMD

ಪ್ರೀತಿ, ಲವ್ ಫೇಲ್ಯೂರ್, ಲಿಪ್ ಕಿಸ್, ಆ್ಯಕ್ಷನ್; ಪ್ರೇಮಕ್ಕೆ ಹೊಸ ಅರ್ಥ ನೀಡಲು ಬಂದ ಏಕ್ ಲವ್ ಯಾ

ರಕ್ಷಿತಾ ಪ್ರೇಮ್​ ಸಹೋದರ ರಾಣಾ ಅಭಿನಯದ ‘ಏಕ್​ ಲವ್​ ಯಾ’ ಚಿತ್ರದಲ್ಲಿ ರಚಿತಾ  ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್​ನಲ್ಲಿ ಇಬ್ಬರೂ ಸಖತ್​ ಬೋಲ್ಡ್​ ಆಗಿ ಮಿಂಚಿದ್ದಾರೆ.

news18-kannada
Updated:February 14, 2020, 10:59 AM IST
ಪ್ರೀತಿ, ಲವ್ ಫೇಲ್ಯೂರ್, ಲಿಪ್ ಕಿಸ್, ಆ್ಯಕ್ಷನ್;  ಪ್ರೇಮಕ್ಕೆ ಹೊಸ ಅರ್ಥ ನೀಡಲು ಬಂದ ಏಕ್ ಲವ್ ಯಾ
ರಕ್ಷಿತಾ ಪ್ರೇಮ್​ ಸಹೋದರ ರಾಣಾ ಅಭಿನಯದ ‘ಏಕ್​ ಲವ್​ ಯಾ’ ಚಿತ್ರದಲ್ಲಿ ರಚಿತಾ  ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್​ನಲ್ಲಿ ಇಬ್ಬರೂ ಸಖತ್​ ಬೋಲ್ಡ್​ ಆಗಿ ಮಿಂಚಿದ್ದಾರೆ.
  • Share this:
ಬಹು ನಿರೀಕ್ಷಿತ ‘ಏಕ್​ ಲವ್​ ಯಾ’ ಸಿನಿಮಾದ ಟೀಸರ್​ ಪ್ರೇಮಿಗಳ ದಿನಾಚರಣೆಯಂದು ತೆರೆಗೆ ಬಂದಿದೆ. ಹೆಚ್ಚು ಪ್ರೀತಿ ಪ್ರೇಮದ ವಿಚಾರ, ಒಂದಷ್ಟು ಆ್ಯಕ್ಷನ್​ ಹೀಗೆ ಹಲವು ವಿಚಾರಗಳನ್ನು ಟೀಸರ್​ನಲ್ಲಿ ಇಟ್ಟಿದ್ದಾರೆ ನಿರ್ದೇಶಕ ಪ್ರೇಮ್​.

ರಕ್ಷಿತಾ ಪ್ರೇಮ್​ ಸಹೋದರ ರಾಣಾ ಅಭಿನಯದ ‘ಏಕ್​ ಲವ್​ ಯಾ’ ಚಿತ್ರದಲ್ಲಿ ರಚಿತಾ  ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್​ನಲ್ಲಿ ಇಬ್ಬರೂ ಸಖತ್​ ಬೋಲ್ಡ್​ ಆಗಿ ಮಿಂಚಿದ್ದಾರೆ.

‘ಏಕ್​ ಲವ್​ ಯಾ’ ಶೀರ್ಷಿಕೆ ಮೂಲಕವೇ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲವೂ ಪ್ರೇಕ್ಷಕರಲ್ಲಿತ್ತು. ಈಗ ಟೀಸರ್​ ಮೂಲಕ ಒಂದಷ್ಟು ವಿಚಾರಗಳನ್ನು ಬಿಟ್ಟುಕೊಡಲಾಗಿದೆ.

ಇದನ್ನೂ ಓದಿ: Rachita Ram: ನಟಿ ರಚಿತಾ ರಾಮ್ ಸಿಗರೇಟ್​ ಸೇದುತ್ತಿರುವ ಫೋಟೋ ವೈರಲ್

ಪ್ರೇಮ್​ ಸಿನಿಮಾ ಎಂದರೆ ಅಲ್ಲಿ ಪ್ರೀತಿ ಪ್ರೇಮದ ವಿಚಾರ ಇರುತ್ತದೆ. ಆದರೆ, ‘ಏಕ್ ಲವ್ ಯಾ’ದಲ್ಲಿ ತುಸು ಹೆಚ್ಚಾಗೇ ಹೇಳಿದಂತೆ ಕಾಣುತ್ತಿದೆ. ಈ ಮೂಲಕ ಬಾಮೈದನ ಸಿನಿಮಾ ಕರಿಯರ್​ಗೆ ಒಂದೊಳ್ಳೆಯ ಆರಂಭಕೊಡಲು ಪ್ರೇಮ್​ ಸಿದ್ಧರಾಗಿದ್ದಾರೆ.

Youtube Video

‘ಎಕ್​ ಲವ್​ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ‘ಏಕ್ ಲವ್ ಯಾ’ದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆ ಅಂಗವಾಗಿ ನಾಳೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.ಇದನ್ನೂ ಓದಿ: Rachita Ram: ನಟಿ ರಚಿತಾ ರಾಮ್ ಸಿಗರೇಟ್​ ಸೇದುತ್ತಿರುವ ಫೋಟೋ ವೈರಲ್
First published: February 14, 2020, 10:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories