news18-kannada Updated:February 8, 2020, 6:06 PM IST
ಏಕ್ ಲವ್ ಯಾ
ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ‘ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಬಿಡುಗಡೆಗೊಂಡ ಮೋಷನ್ ಪೋಸ್ಟರ್ನಲ್ಲಿ ನಟ ರಾಣಾ(ಅಭಿಷೇಕ್), ರಕ್ಷಿತಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಎಣ್ಣೆ ಬಾಟಲಿ ಹಿಡಿದುಕೊಂಡು ನಿಂತಿರುವ ದೃಶ್ಯ ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿಂದೆಯೇ ಚಿತ್ರತಂಡ ಫೆಬ್ರವರಿ 8ಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಪ್ಲಾನ್ ಮಾಡಿತ್ತು. ಅದರಂತೆ ಇಂದು ಮೋಷನ್ ಪೊಸ್ಟರ್ ರಿಲೀಸ್ ಮಾಡುವ ಮೂಲಕ ನಿರ್ದೇಶಕ ಪ್ರೇಮ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿ ರಕ್ಷಿತಾ ಗೆಸ್ಟ್ ಅಪಿಯರೆನ್ಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಈ ಚಿತ್ರವನ್ನು
ನಿರ್ಮಾಣ ಜವಬ್ದಾರಿ
ರಕ್ಷಿತಾ ಪ್ರೇಮ್ ಹೊತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ರಾಣಾಗೆ ಇಬ್ಬರು ನಾಯಕಿಯರು ಇದ್ದಾರೆ. ಮೊದಲೆನೆಯವರು ಡಿಂಪಲ್ ಕ್ವೀನ್
ರಚಿತಾ ರಾಮ್ ಆದರೆ ಮತ್ತೊಬ್ಬರು ಕೊಡಗಿನ ಯುವ ನಟಿ ರೀಷ್ಮಾ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಇಂದು ಮರೆಯಲಾಗದ ದಿನ; ಯಾಕೆ ಗೊತ್ತೇ?
First published:
February 8, 2020, 6:04 PM IST