HOME » NEWS » Entertainment » JOGI PREM DIRECTED EK LOVE YA MOVIE AUDIO RIGHTS SALE FOR 81 LAKH RMD

ಭಾರೀ ಮೊತ್ತಕ್ಕೆ ಮಾರಾಟವಾಯ್ತು ಪ್ರೇಮ್​ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಹಕ್ಕು

‘ಏಕ್ ಲವ್ ಯಾ’ ಆಡಿಯೋ ಖರೀದಿಗೆ ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿದ್ದವು ಎನ್ನಲಾಗಿದೆ. ಸದ್ಯ, ಎ2 ಮ್ಯೂಸಿಕ್​ ಸಂಸ್ಥೆ ಸಿನಿಮಾದ ಆಡಿಯೋ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ.

news18-kannada
Updated:January 30, 2020, 1:36 PM IST
ಭಾರೀ ಮೊತ್ತಕ್ಕೆ ಮಾರಾಟವಾಯ್ತು ಪ್ರೇಮ್​ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಹಕ್ಕು
ಏಕ್ ಲವ್ ಯಾ ಪೋಸ್ಟರ್​
  • Share this:
‘ಜೋಗಿ’ ಪ್ರೇಮ್​ ನಿರ್ದೇಶನದ ಸಿನಿಮಾ ಎಂದಾಗ ಅಲ್ಲಿ ಹಾಡುಗಳು ಸಖತ್​ ಸದ್ದು ಮಾಡುತ್ತವೆ. ‘ಜೋಗಿ’ ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ಅವರ ನಿರ್ದೇಶನದ ಸಿನಿಮಾದ ಹಾಡುಗಳು ಸಖತ್​ ಹಿಟ್​ ಆಗಿದ್ದವು. ಈಗ ಅವರ ನಿರ್ದೇಶನದ ಮುಂದಿನ ಚಿತ್ರ ‘ಎಕ್​ ಲವ್​ ಯಾ’ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.

ಏಕ್ ಲವ್ ಯಾ’ ಆಡಿಯೋ ಖರೀದಿಗೆ ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿದ್ದವು ಎನ್ನಲಾಗಿದೆ. ಸದ್ಯ, ಎ2 ಮ್ಯೂಸಿಕ್​ ಸಂಸ್ಥೆ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿಸಿದೆ. ಅಂದಹಾಗೆ 81 ಲಕ್ಷ ರೂಪಾಯಿಗೆ ಈ ಸಿನಿಮಾದ ಆಡಿಯೋ ರೈಟ್ಸ್​ ಮಾರಾಟವಾಗಿದೆಯಂತೆ. ಸಾಮಾನ್ಯವಾಗಿ ಹೊಸ ನಾಯಕನ ಸಿನಿಮಾ ಎಂದಾಗ ಚಿತ್ರದ ಆಡಿಯೋ ಖರೀದಿಗೆ ಸಂಸ್ಥೆಗಳು ಹಿಂದೇಟು ಹಾಕುತ್ತಾರೆ. ಆದಾಗ್ಯೂ ಈ ಚಿತ್ರದ ಆಡಿಯೋ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟವಾಗಿದೆ.

ಈ ಮೊದಲು ಜೋಗಿ ನಿರ್ದೇಶನದ ‘ಕರಿಯ’, ‘ಎಕ್ಸ್ ಕ್ಯೂಸ್ ಮೀ’, ‘ಜೋಗಿ’, ‘ಜೋಗಯ್ಯ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಈಗ ಈ ಸಿನಿಮಾದ ಹಾಡುಗಳು ಕೂಡ ಭರವಸೆ ಮೂಡಿಸುವ ಲಕ್ಷಣ ಗೋಚರವಾಗಿದೆ.

ಇದನ್ನೂ ಓದಿ: ಏಕ್ ಲವ್​ ಯಾ: ಜೋಗಿ ಪ್ರೇಮ್​ - ಭಾಮೈದನನ ಚಿತ್ರಕ್ಕೆ ಸಿಕ್ಕಳು ನಾಯಕಿ..!

‘ಎಕ್​ ಲವ್​ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ‘ಏಕ್ ಲವ್ ಯಾ’ದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಫೆಬ್ರುವರಿ 8ಕ್ಕೆ ಮೋಷನ್ ಪೋಸ್ಟರ್, ಪ್ರೇಮಿಗಳ ದಿನಾಚರಣೆಗೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.
Youtube Video
First published: January 30, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories