HOME » NEWS » Entertainment » JOGI PREM DIRECTED EK LOVE YA MOVIE AUDIO RELEASED IN YOUTUBE A2 MUSIC HG

ಏಕ್​ ಲವ್​ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆ: ಮತ್ತೊಮ್ಮೆ ಮ್ಯೂಸಿಕ್ ಮ್ಯಾಜಿಕ್​ನ ಸುಳಿವು ಕೊಟ್ಟ ಜೋಗಿ ಪ್ರೇಮ್

ಟ್ವೀಟ್​ನಲ್ಲಿ ಎದೆ ಬಡಿತ ಹೇಳಿದ್ದನ್ನಷ್ಟೇ ಕೇಳಿದವನು ನಾನು. ಯಾವ ಸಂಗೀತದ ಸೆನ್ಸನ್ನೂ ಲೆಕ್ಕಿಸದೆ ನನ್ನ ಸಂಗೀತದ ಅಭಿರುಚಿಯನ್ನು ಅಪ್ಪಿ- ಒಪ್ಪಿದವರು ನೀವು. ಕರಿಯನಿಂದ ವಿಲನ್​ವರೆಗೂ ಮ್ಯೂಸಿಕಲಿ ಹರಸಿ, ಮೆರೆಸಿದ್ದೀರಿ. ನೀವು ಕೊಟ್ಟ ಆ ಪ್ರೀತಿ, ಅಭಿಮಾನಕ್ಕೆ ಉಡುಗೊರೆಯಾಗಿ ಏಕ್​ ಲವ್​ ಯಾ ನಿಮ್ಮುಂದೆ…A2 ಮ್ಯೂಸಿಕ್​ನೊಂದಿಗೆ ಎಂದು ಬರೆದುಕೊಂಡಿದ್ದಾರೆ.

news18-kannada
Updated:January 31, 2020, 8:27 PM IST
ಏಕ್​ ಲವ್​ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆ: ಮತ್ತೊಮ್ಮೆ ಮ್ಯೂಸಿಕ್ ಮ್ಯಾಜಿಕ್​ನ ಸುಳಿವು ಕೊಟ್ಟ ಜೋಗಿ ಪ್ರೇಮ್
‘ಎಕ್​ ಲವ್​ ಯಾ
  • Share this:
ಜೋಗಿ ಪ್ರೇಮ್​ ನಿರ್ದೇಶನದ ‘ಎಕ್​ ಲವ್​ ಯಾ‘ ಸಿನಿಮಾದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ​

ವಿಲನ್​ ಚಿತ್ರದ ನಂತರ ಪ್ರೇಮ್​ ‘ಎಕ್​ ಲವ್​ ಯಾ‘ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ವರ್ಷ ಪ್ರೇಕ್ಷಕರೆದುರು ಸಿನಿಮಾವನ್ನ ತರುವಲ್ಲಿ ಚಿಂತನೆ ನಡೆಸಿದ್ದಾರೆ. ಹಾಗಾಗಿ ಈ ಸಿನಿಮಾ ಕೆಲಸದಲ್ಲಿ ಜೋಗಿ ಪ್ರೇಮ್​ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರದ ಆಡಿಯೋ ಟೀಸರ್​ ಅನ್ನು ಎ2 ಮ್ಯೂಸಿಕ್​ ಸಂಸ್ಥೆ  ಬಿಡುಗಡೆಮಾಡಿದೆ.

ಪ್ರೇಮ್​ ನಿರ್ದೇಶನದ  ಸಿನಿಮಾಗಳಲ್ಲಿ ಒಂದಲ್ಲಾ ಒಂದು ಸ್ಪೆಷಲ್​ ಇದ್ದೇ ಇರುತ್ತದೆ. ದರ್ಶನ್​ ನಟನೆಯ ಕರಿಯ ಚಿತ್ರದಿಂದ ಹಿಡಿದು ವಿಲನ್​ ಚಿತ್ರದವರೆಗೂ ಹಿಟ್​ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ಮಾತ್ರವಲ್ಲದೆ ಪ್ರತಿ ಸಿನಿಮಾಗಳಲ್ಲಿ ಹಿಟ್​ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ‘ಎಕ್​ ಲವ್​ ಯಾ‘ ಸಿನಿಮಾದ ಮೂಲಕ ಪ್ರೇಕ್ಷಕರೆದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಪ್ರೇಮ್​ ಟ್ಟೀಟ್​ ಮಾಡಿದ್ದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಟ್ವೀಟ್​ನಲ್ಲಿ ‘ಎದೆ ಬಡಿತ ಹೇಳಿದ್ದನ್ನಷ್ಟೇ ಕೇಳಿದವನು ನಾನು. ಯಾವ ಸಂಗೀತದ ಸೆನ್ಸನ್ನೂ ಲೆಕ್ಕಿಸದೆ ನನ್ನ ಸಂಗೀತದ ಅಭಿರುಚಿಯನ್ನು ಅಪ್ಪಿ- ಒಪ್ಪಿದವರು ನೀವು. ಕರಿಯನಿಂದ ವಿಲನ್​ವರೆಗೂ ಮ್ಯೂಸಿಕಲಿ ಹರಸಿ, ಮೆರೆಸಿದ್ದೀರಿ. ನೀವು ಕೊಟ್ಟ ಆ ಪ್ರೀತಿ, ಅಭಿಮಾನಕ್ಕೆ ಉಡುಗೊರೆಯಾಗಿ ಏಕ್​ ಲವ್​ ಯಾ ನಿಮ್ಮುಂದೆ…A2 ಮ್ಯೂಸಿಕ್​ನೊಂದಿಗೆ‘ ಎಂದು ಬರೆದುಕೊಂಡಿದ್ದಾರೆ.

 ಏಕ್ ಲವ್ ಯಾ’ ಸಿನಿಮಾದ ಆಡಿಯೋ ಹಕ್ಕನ್ನು ಎ2 ಮ್ಯೂಸಿಕ್​ ಸಂಸ್ಥೆ ಖರೀದಿಸಿದೆ. ಅಂದಹಾಗೆ 81 ಲಕ್ಷ ರೂ.ಗೆ ಆಡಿಯೋ ರೈಟ್ಸ್​ ಮಾರಾಟವಾಗಿದೆ.

‘ಎಕ್​ ಲವ್​ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತಾ ಸಹೋದರ ರಾಣಾ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ‘ಏಕ್ ಲವ್ ಯಾ’ದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಫೆಬ್ರುವರಿ 8ಕ್ಕೆ ಮೋಷನ್ ಪೋಸ್ಟರ್, ಪ್ರೇಮಿಗಳ ದಿನಾಚರಣೆಗೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡದ್ದು.

Youtube Video


 
First published: January 31, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories