HOME » NEWS » Entertainment » JOGI PREM DIRECTED EK LOVE YA FILM TEASER RELEASE FEBRUARY 14 VALENTINE DAY SPECIAL HEROINE RACHITA RAM LIP LOCK SEENE VIRAL HG

‘ಏಕ್​ ಲವ್​ ಯಾ‘ ಟೀಸರ್​ನಲ್ಲಿ ರಾಣಾ-ರಚಿತಾ ಲಿಪ್​ ಕಿಸ್​?

Ek Love Ya: ಪ್ರೇಮ್​ ಏಕ್​ ಲವ್​ ಯಾ ಸಿನಿಮಾಗೆ ಭಾಮೈದುನ ರಾಣಾರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ನಾಯಕಿಯರಾಗಿ ಸ್ಯಾಂಡಲ್​ವುಡ್​ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಮತ್ತು ಕೊಡಗಿನ ಯುವ ನಟಿ ರೀಷ್ಮಾ ಕಾಣಿಸಿಕೊಂಡಿದ್ದಾರೆ.

news18-kannada
Updated:February 13, 2020, 3:02 PM IST
‘ಏಕ್​ ಲವ್​ ಯಾ‘ ಟೀಸರ್​ನಲ್ಲಿ ರಾಣಾ-ರಚಿತಾ ಲಿಪ್​ ಕಿಸ್​?
‘ಏಕ್​ ಲವ್​ ಯಾ‘
  • Share this:
ಇತ್ತೀಚೆಗೆ ಜೋಗಿ ಪ್ರೇಮ್​ ನಿರ್ದೇಶನ ಏಕ್​ ಲವ್​ ಯಾ ಸಿನಿಮಾದ ಮೊಷನ್​ ಪೋಸ್ಟರ್​ ಅನ್ನು​ ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಪ್ರೇಮಿಗಳ ದಿನಾಚರಣೆ ಅಂಗವಾಗಿ ಮೊದಲ ಟೀಸರ್​ ಬಿಡುಗಡೆ ಮಾಡಲು ಸಜ್ಜಾಗಿದೆ. ನಾಳೆ ಬೆಳಗ್ಗೆ (ಫೆ.14) 10 ಗಂಟೆಗೆ ಎ2 ಮ್ಯೂಸಿಕ್​ ಚಾನೆಲ್​ ಮೂಲಕ ಟೀಸರ್​ ಬಿಡುಗಡೆ ಆಗಲಿದೆ.

ನಿರ್ದೇಶಕ ಜೋಗಿ ಪ್ರೇಮ್​ ಈ ಬಾರಿ ಹೊಸ ನಾಯಕನನ್ನು ಮತ್ತು ಹೊಸ ಕಥೆಯನ್ನು ಒಳಗೊಂಡ ಸಿನಿಮಾ ಸ್ಯಾಂಡಲ್​ವುಡ್​ಗೆ ಪರಿಚಯ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾದ ಬಗ್ಗೆ ಪ್ರೇಮ್​ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

ಪ್ರೇಮ್​ ಏಕ್​ ಲವ್​ ಯಾ ಸಿನಿಮಾಗೆ ಭಾಮೈದುನ ರಾಣಾರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ನಾಯಕಿಯರಾಗಿ ಸ್ಯಾಂಡಲ್​ವುಡ್​ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಮತ್ತು ಕೊಡಗಿನ ಯುವ ನಟಿ ರೀಷ್ಮಾ ಕಾಣಿಸಿಕೊಂಡಿದ್ದಾರೆ.

ಮಾಹಿತಿಯ ಪ್ರಕಾರ ಬಿಡುಗಡೆಯಾಗುವ ಈ ಟೀಸರ್​ನಲ್ಲಿ ನಟ ರಾಣಾ ಜೊತೆ ರಚಿತಾ ರಾಮ್​ ಮೊದಲ ಚುಂಬನ ದೃಶ್ಯ ಇರಲಿದೆಯಂತೆ. ಮಾತ್ರವಲ್ಲದೆ ಕೈಯಲ್ಲಿ ಸಿಗರೇಟ್​ ಹಿಡಿದುಕೊಂಡು ಸೈಲೀಶ್​ ಆಗಿ  ರಚಿತಾ ಮಿಂಚಿದ್ದಾರಂತೆ.

 

‘ಏಕ್​ ಲವ್​ ಯಾ‘ ಸಿನಿಮಾ ಸೆಟ್ಟೇರಿದಾಗಿನಿಂದ ಈ ಸಿನಿಮಾದ ಬಗ್ಗೆ ಒಂದಲ್ಲಾ ಒಂದು ಸುದ್ದಿಯಾಗುತ್ತಲೇ ಇದೆ. ಕಳೆದ ಬಾರಿ ಈ ಸಿನಿಮಾದ ಆಡಿಯೋ ರೈಟ್ಸ್​ ದೊಡ್ಡ ಮೊತ್ತಕ್ಕೆ ಸೇಲ್​ ಆಯ್ತು ಎಂಬ ಸುದ್ದಿ ಹರಿದಾಡಿತ್ತು. ನಂತರ ದಿನಗಳಲ್ಲಿ ಜೋಗಿ ಪ್ರೇಮ್​ ಅವರೇ ಈ ಸಿನಿಮಾಗೆ ಹಾಡು ರಚಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಗಾಗಿ ಜೋಗಿ ಪ್ರೇಮ್​ ಟೀಸರ್​ ಬಿಡುಗಡೆ ಮಾಡುತ್ತಿದ್ದಾರೆ.ಇತ್ತೀಚೆಗಷ್ಟೇ ‘ಏಕ್​ ಲವ್​ ಯಾ‘ ಸಿನಿಮಾದ ಮೋಷನ್​ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ, ಇದರಲ್ಲಿ ರಾಣಾ ಜೊತೆಗೆ ನಟಿ ರಕ್ಷಿತಾ ಪ್ರೇಮ್​ ಮತ್ತು ರಚಿತಾ ರಾಮ್​ ಎಣ್ಣೆ ಬಾಟಲಿ ಹಿಡಿಕೊಂಡಿರುವ ದೃಶ್ಯ ಕಂಡುಬಂದಿತ್ತು. ಇದೀಗ ವ್ಯಾಲೆಂಟೈನ್ಸ್​ ಡೇ ದಿನದಂದು ಟೀಸರ್​ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: BSNL: ಕೇವಲ 96 ರೂ. ರಿಚಾರ್ಜ್​ ಮಾಡಿದರೆ 10GB ಡೇಟಾ ಉಚಿತ!
First published: February 13, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories