Jogi Prem: ಮಲ್ಟಿಪ್ಲೆಕ್ಸ್​​ಗಳ ವಿರುದ್ಧ ಸ್ಯಾಂಡಲ್​ವುಡ್​ ನಿರ್ದೇಶಕ ಗರಂ.. ಫಿಲ್ಮ್ ಚೇಂಬರ್​ಗೆ ಜೋಗಿ ಪ್ರೇಮ್ ದೂರು!

ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಅನ್ಯಾಯ ಆಗುತ್ತಲೇ ಬಂದಿದೆ. ಇಷ್ಟು ದಿನ ಸಹಿಸಿಕೊಂಡಿದ್ದ ಪ್ರೇಮ್​, ಇದೀಗ ಫಿಲ್ಮ್​ ಚೇಂಬರ್(Film Chamber)​ ಮೆಟ್ಟಿಲೇರಿದ್ದಾರೆ. ಮಲ್ಟಿಪ್ಲೆಕ್ಸ್​​ಗಳ ವಿರುದ್ಧ ಕಿಡಿಕಾರಿದ್ದಾರೆ.

ರಾಣಾ, ರಚಿತಾ, ಪ್ರೇಮ್​

ರಾಣಾ, ರಚಿತಾ, ಪ್ರೇಮ್​

  • Share this:
ಪ್ರೇಮ್(Prem)​.. ಕನ್ನಡ ಸಿನಿಮಾರಂಗಕ್ಕೆ  ನಿರ್ದೇಶಕನಾಇ ಎಂಟ್ರಿ ಕೊಟ್ಟಿದ್ದರು.  ಸ್ಯಾಂಡಲ್​ವುಡ್​​ನಲ್ಲಿ ಈ ರೀತಿಯ ಸಿನಿಮಾಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟವರು. ಇವರ ಸಿನಿಮಾದಲ್ಲಿ ಎಮೋಷನ್​(Emotion)ಗೆ ಹೆಚ್ಚಿನ ಪಾಮುಖ್ಯತೆ ನೀಡಿಕೊಂಡು ಬಂದಿದ್ದಾರೆ.  ‘ಎಕ್ಸ್‌ಕ್ಯೂಸ್‌ ಮಿ’(Excuse Me) ಸಿನಿಮಾದಿಂದ ಹಿಡಿದು ನಿರ್ದೇಶಕ ಪ್ರೇಮ್‌ ನಿರ್ದೇಶನದ ಬಹುತೇಕ ಸಿನಿಮಾಗಳ ಹಾಡುಗಳು ಹಿಟ್‌ ಆಗಿವೆ. ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಪ್ರೇಮ್‌ ಅವರು ಇದೀಗ ಮಲ್ಟಿಪ್ಲೆಕ್ಸ್‌(Multiplex)ಗಳಲ್ಲಿ ಕನ್ನಡ ಸಿನಿಮಾಗಳಲ್ಲಿನ ಹಿನ್ನಲೆ ಸಂಗೀತ ಹಾಗೂ ಹಾಡುಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಜೋಗಿ(Jogi) ಸಿನಿಮಾದ ಮೂಲಕ ಪ್ರೇಮ್​ ಸಾಕಷ್ಟು ಹೆಸರು ಗಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜೋಗಿ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಇದೀಗ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’(Ek Love Ya) ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಅನ್ಯಾಯ ಆಗುತ್ತಲೇ ಬಂದಿದೆ. ಇಷ್ಟು ದಿನ ಸಹಿಸಿಕೊಂಡಿದ್ದ ಪ್ರೇಮ್​, ಇದೀಗ ಫಿಲ್ಮ್​ ಚೇಂಬರ್(Film Chamber)​ ಮೆಟ್ಟಿಲೇರಿದ್ದಾರೆ. ಮಲ್ಟಿಪ್ಲೆಕ್ಸ್​​ಗಳ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಮಲ್ಟಿಪ್ಲೆಕ್ಸ್​ನಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗುತ್ತಿದೆ ಎಂದು ನಿರ್ದೇಶಕ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲ್ಟಿಪ್ಲೆಕ್ಸ್​​ಗಳಲ್ಲಿ ಹೆಚ್ಚಿನ ಸೌಂಡ್​ ಕೊಡುವುದಿಲ್ವಂತೆ!

ಜೋಗಿ ಪ್ರೇಮ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿರುವುದಕ್ಕೆ ಒಂದು ಬಲವಾದ ಕಾರಣವಿದೆ. ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚು ಸೌಂಡ್​ಕೊಡುವುದಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಲು ಫೆಬ್ರವರಿ 7ರಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ದೂರು ನೀಡಿದ್ದಾರೆ. ಅಧ್ಯಕ್ಷ ಜೈ ರಾಜ್‌ಗೆ ದೂರು ನೋಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಜೋಗಿ ಪ್ರೇಮ್​ ಮನವಿ ಮಾಡಿಕೊಂಡಿದ್ದಾರೆ. ಏಕ್​ ಲವ್​ ಯಾ ಸಿನಿಮಾ ಇದೇ ತಿಂಗಳ 24ರಂದು ತೆರೆಗೆ ಬರವುದಕ್ಕೆ ಸಜ್ಜಗಿ ನಿಂತಿದೆ. ಪ್ರೇಮ್​ ಅವರ ಈ ಸಿನಿಮಾಗೆ ಯವುದೇ ತೊಂದರೆಯಾಗದಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ವಿಚಿತ್ರ ರೋಗದಿಂದ ಬಳಲುತ್ತಿದ್ದಾರಂತೆ ವೈಷ್ಣವಿ ಗೌಡ.. ಎಲ್ಲದಕ್ಕೂ ಕಾರಣ `ಬಹುಕೃತ ವೇಷಂ’ ಎಂದ ನಟಿ! 

ಯಾಕೆ ಕನ್ನಡ ಸಿನಿಮಾಗಳಿಗೆ ಮಾತ್ರ ಹೀಗ್​ ಮಾಡ್ತಾರೆ? 

ಮಲ್ಟಿಪ್ಲೆಕ್ಸ್ ಗಳಲ್ಲಿ ತೆಲುಗು, ತಮಿಳು, ಇಂಗ್ಲೀಷ್ ಸಿನಿಮಾಗಳಿಗೆ 7 ಸೌಂಡ್ ಪಾಯಿಂಟ್ ಇರುತ್ತೆ. ಆದರೆ ಕನ್ನಡ ಸಿನಿಮಾಗೆ ಕೇವಲ 4 ಸೌಂಡ್ ಪಾಯಿಂಟ್ ಮಾತ್ರ ಇಡ್ತಾರೆ. ಹೀಗೆ ಸೌಂಡ್‌ನಲ್ಲಿ ವ್ಯತಾಸ ಮಾಡಿದರೆ ಸಿನಿಮಾ ನೋಡಲು ಮಜಾ ಬರುವುದಿಲ್ಲ. ವಿಲನ್ ಸಮಯದಲ್ಲೂ ಹೀಗೆ ಆಗಿತ್ತು ಎಂದು ನಿರ್ದೇಶಕ ಜೋಗಿ ಪ್ರೇಮ್ ಆರೋಪಿಸಿದ್ದಾರೆ. ಕೇವಲ ನನ್ನ ಸಿನಿಮಾಗಷ್ಟೇ ಈ ರೀತಿಯ ತೊಂದರೆಯಾಗುತ್ತಿಲ್ಲ. ಎಲ್ಲ ಕನ್ನಡ ಸಿನಿಮಾಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಿಕೊಡಿ ಎಂದು ಪ್ರೇಮ್​ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಲಕ್​ ಅಂದ್ರೆ ರಶ್ಮಿಕಾದೇ ಗುರೂ.. ಇವ್ರ ಜೊತೆನೂ ಆ್ಯಕ್ಟ್ ಮಾಡೋ ಬಂಪರ್​ ಚಾನ್ಸ್​ ಸಿಕ್ಕಿದೆ!

‘ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ’

‘ನನ್ನ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅದಕ್ಕೆ ನಾನು ಬಂದಿದ್ದೇನೆ. ನಾನು ನನ್ನ ಚಿತ್ರದ ಹಾಡು, ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ಗೆ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಯುಎಫ್​ಒ ಹಾಗೂ ಕ್ಯೂಬ್​ಗೆ ಸಿನಿಮಾ ಅಪ್​ಲೋಡ್​ ಮಾಡಿಸಬೇಕು ಎಂದರೆ ಈಗಲೂ ಚೆನ್ನೈಗೆ ತೆರಳಬೇಕು. ಇಲ್ಲಿ ಕನ್ನಡ ಸಿನಿಮಾಗಳು ಹೆಚ್ಚು ಕಲೆಕ್ಷನ್​ ಮಾಡುತ್ತಿದ್ದರೂ, ಕರ್ನಾಟಕದಲ್ಲಿ ಏಕೆ ಯುಎಫ್​ಒ ಹಾಗೂ ಕ್ಯೂಬ್​ ಕಚೇರಿ ಇಲ್ಲ ಎಂಬುದು ನನ್ನ ಪ್ರಶ್ನೆ. ಚೆನ್ನೈಗೆ ಹೋದರೆ ದಿನಗಟ್ಟಲೆ ಕಾಯಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

Published by:Vasudeva M
First published: