Prem-Dhruva: ಮತ್ತೆ `ಅಂಡರ್​ವರ್ಲ್ಡ್’​​ಗೆ ಹೊರಟ ಜೋಗಿ ಪ್ರೇಮ್​.. 70ರ ದಶಕದ ರಕ್ತಸಿಕ್ತ ಕಥೆಯಲ್ಲಿ ಧ್ರುವ!

‘ದಿ ವಿಲನ್’(The Villain) ಚಿತ್ರದ ಸೋಲಿನ ಬಳಿಕ ಗೆಲುವಿನ ಕುದುರೆ ಏರಲು ಬಾಮೈದನ ಜೊತೆ  ಹೊರಟಿದ್ದ ಪ್ರೇಮ್​ಗೆ ‘ಏಕ್ ಲವ್ ಯಾ’ ಚಿತ್ರವೂ ಕೈ ಹಿಡಿಯೋ ಸಾಧ್ಯತೆ ಕಡಿಮೆಯಾಗಿದೆ. ಧ್ರುವ(Dhruva) ಜೊತೆಗಿನ‌ ಚಿತ್ರದಲ್ಲಾದರೂ ಪ್ರೇಮ್ ಗೆಲುವಿನ ಟ್ರಾಕ್​ ಗೆ ವಾಪಸ್ ಬರಲು ಮತ್ತೆ ಭೂಗತ ಲೋಕಕ್ಕೆ ಹೊರಟಿದ್ದಾರೆ.

ಧ್ರುವ ಸರ್ಜಾ, ಜೋಗಿ ಪ್ರೇಮ್​

ಧ್ರುವ ಸರ್ಜಾ, ಜೋಗಿ ಪ್ರೇಮ್​

  • Share this:
‘ಏಕ್ ಲವ್ ಯಾ’(Ek Love Ya) ಸಿನಿಮಾ ನಿನ್ನೆ ರಿಲೀಸ್ ಆಗಿದ್ದು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಕೆಲವು ಪ್ರೇಕ್ಷಕರಿಗೆ ಸಿನಿಮಾ ಒಕೆ ಅನಿಸಿದ್ದರೆ, ಇನ್ನು ಕೆಲವು ಪ್ರೇಕ್ಷಕರಿಗೆ ಸಿನಿಮಾ ಇಷ್ಟವೇ ಆಗಿಲ್ಲ. ಅಷ್ಟೇ ಅಲ್ಲ ಇಂತ ಸಿನಿಮಾಗಳು ಈ ಹಿಂದೆ ಸಾಕಷ್ಟು ಬಂದಿವೆ. ಪ್ರೇಮ್(Prem) ಕತೆಯಲ್ಲಿ ಹೊಸತನವೇನು ಇಲ್ಲ. ಆದರೆ,  ಸಿನಿಮಾದಲ್ಲಿ ಸಂಗೀತ(Music) ಎಲ್ಲಾ ವರ್ಗದ ಆಡಿಯನ್ಸ್ ಇಷ್ಟ ಆಗುತ್ತೆ. ಅದೇನೆ ಇರಲಿ ‘ದಿ ವಿಲನ್’(The Villain) ಚಿತ್ರದ ಸೋಲಿನ ಬಳಿಕ ಗೆಲುವಿನ ಕುದುರೆ ಏರಲು ಬಾಮೈದನ ಜೊತೆ  ಹೊರಟಿದ್ದ ಪ್ರೇಮ್​ಗೆ ‘ಏಕ್ ಲವ್ ಯಾ’ ಚಿತ್ರವೂ ಕೈ ಹಿಡಿಯೋ ಸಾಧ್ಯತೆ ಕಡಿಮೆಯಾಗಿದೆ. ಧ್ರುವ(Dhruva) ಜೊತೆಗಿನ‌ ಚಿತ್ರದಲ್ಲಾದರೂ ಪ್ರೇಮ್ ಗೆಲುವಿನ ಟ್ರಾಕ್​ ಗೆ ವಾಪಸ್ ಬರುತ್ತಾರೆ ಕಾದು ನೋಡಬೇಕು ಅಂತಿದ್ದಾರೆ ಗಾಂಧಿನಗರ ಸಿನಿಮಾ ಪಂಡಿತರು. ಜೋಗಿ ಪ್ರೇಮ್(Jogi Prem) ಸಿನಿಮಾ ಸೋಲುತ್ತೋ, ಗೆಲ್ಲುತ್ತೋ ಬೇರೆ ಮಾತು. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್(Hype) ತೆಗೆದುಕೊಳ್ಳುತ್ತೆ. ಇಂದು ತೆರೆಕಂಡಿರುವ ‘ಏಕ್‌ ಲವ್ ಯಾ’ ಸಿನಿಮಾ ಕೂಡ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್(Craze) ಹುಟ್ಟಾಕಿತ್ತು.

70ರ ದಶಕದ ಕಥೆಯಲ್ಲಿ ಧ್ರುವ ಸರ್ಜಾ!


‘ಏಕ್ ಲವ್ ಯಾ’ ರಿಲೀಸ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳ ಹೆಡ್ ಆಫೀಸ್ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಿದ್ಯಂತೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್​ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ, ಪ್ರೇಮ್ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.​

ಇದನ್ನೂ ಓದಿ: ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಟ್ಟ ಸ್ಯಾಂಡಲ್​ವುಡ್ `ಸಲಗ’, ಶಿವರಾತ್ರಿಗೆ ಟೈಟಲ್​ ಲಾಂಚ್​!

ಭೂಗತಲೋಕದ ಹೊಸ ಚರಿತ್ರೆ ಬರೆದಿದ್ದ ಪ್ರೇಮ್​!

ಭೂಗತಲೋಕದ ಹೊಸ ಚರಿತ್ರೆಯನ್ನು ಈ ಹಿಂದೆ ತೆರೆಮೇಲೆ ನಿರ್ದೇಶಕ ಪ್ರೇಮ್​ ತಂದಿಟ್ಟಿದ್ದರು. ಈಗ ಮತ್ತೆ ಅಂತಹದ್ದೇ ಒಂದು ಕಥೆಯನ್ನು ತೆರೆಮೇಲೆ ಜೋಗಿ ಪ್ರೇಮ್ ತರುತ್ತಿದ್ದಾರೆ. ಜೋಗಿ ಪ್ರೇಮ್​ ಅವರ ಮೊದಲ ನಿರ್ದೇಶನದ ಎಕ್ಸ್​ಕ್ಯೂಸ್​​ಮಿ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಇದಾದ ಬಳಿಕ ರಕ್ತಸಿಕ್ತ ಕರಿಯಾ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಇದಾದ ಬಳಿಕ ಜೋಗಿ ಸಿನಿಮಾ ಬಗ್ಗೆ ಹೇಳುವು ಅವಶ್ಯಕಥೆ ಇಲ್ಲ.ಈಗ ಧ್ರುವ ಸರ್ಜಾ ಜೊತೆ ಮಾಡುತ್ತಿರುವ ಸಿನಿಮಾಗೂ ದುಬಾರಿ ಸೆಟ್ ಒಂದನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ. ಸೀಗೆಹಳ್ಳಿ ಸಮೀಪ 70ರ ದಶಕದ ಸೆಟ್‌ ಅನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: "ಕೆಜಿಎಫ್‌-2 ರಿಲೀಸ್‌ ಯಾವಾಗ?" ಮೋದಿಗೂ ಕಾಡ್ತಿದೆಯಂತೆ ಈ ಪ್ರಶ್ನೆ! ಏನಿದು Letterನ ಅಸಲಿ ಕಥೆ?

ಕೋಟಿ ವೆಚ್ಚದಲ್ಲಿ ಬೃಹತ್​ ಸೆಟ್​ ನಿರ್ಮಾಣ?

ಏಕ್​ ಲವ್​ ಯಾ ಸಿನಿಮಾ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಒಂದೆರಡು ವಾರದ ಬಳಿಕ ಧ್ರುವ ಸರ್ಜಾ ಸಿನಿಮಾ ಕಡೆ ಮುಖ ಮಾಡಲಿದ್ದಾರೆ . ಈ ಕಾರಣಕ್ಕೆ 70 ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

Published by:Vasudeva M
First published: