ಬಾಲಿವುಡ್ನ ಹೆಸರಾಂತ ನಟಿ (Actress) ಆ ದಿನ ಮುಂಬೈನ (Mumbai) ಜುಹುವಿನಲ್ಲಿರುವ (Juhu) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ಸ್ಥತಿಯಲ್ಲಿ ಪತ್ತೆಯಾದರು. ಹಿಂದಿ ಚಿತ್ರರಂಗದ ಸ್ಟಾರ್ ನಟರೊಂದಿಗೆ (Star Actors) ತೆರೆ ಹಂಚಿಕೊಂಡಿದ್ದ ಈ ನಟಿ ಕೆರಿಯರ್ನ ಪೀಕ್ನಲ್ಲಿರುವಾಗಲೇ ಅವರ ಜೀವನ ಕೊನೆಯಾಯಿತು. ಸುಶಾಂತ್ ಸಿಂಗ್ ರಜಪೂತ್ ಸಾವು ಹೇಗೆ ಚರ್ಚೆ, ವಿವಾದ, ಡ್ರಾಮಾ, ಆರೋಪ-ಪ್ರತ್ಯಾರೋಪಗಳಿಗೆ ಒಳಗಾಯಿತೋ ಅದೇ ರೀತಿ ಜಿಯಾ ಖಾನ್ (Jiah Khan) ಸಾವಿನ ಸುತ್ತಲೂ ಭಾರೀ ಬೆಳವಣಿಗೆಗಳಾದವು. ಇಂದು ಜಿಯಾ ಖಾನ್ ಖಾನ್ ಸಾವಿಗೆ ಸಂಬಂಧಿಸಿ ಪ್ರಮುಖ ತೀರ್ಪು ಹೊರಬಿದ್ದಿದೆ.
ಸೂರಜ್ ಪಾಂಚೋಲಿ ಖುಲಾಸೆ
ಭಾರೀ ಕುತೂಹಲ ಮೂಡಿಸಿದ್ದ ಜಿಯಾ ಖಾನ್ ಸಾವಿನ ಪ್ರಕರಣದಲ್ಲಿ ಕೊನೆಗೂ ತೀರ್ಪು ಹೊರಬಿದ್ದಿದ್ದು ಆರೋಪಿತ ನಟ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಲಾಗಿದೆ.
ಏನಿದು ಜಿಯಾ ಖಾನ್ ಸಾವಿನ ಪ್ರಕರಣ?
ಸ್ಪೆಷಲ್ ಸಿಬಿಐ ಕೋರ್ಟ್ ಜಿಯಾ ಖಾನ್ ಸಾವಿನ ತೀರ್ಪನ್ನು ಏಪ್ರಿಲ್ 28ರಂದು ನೀಡುತ್ತದೆ ಎಂದು ಮೊದಲೇ ನಿಗದಿಯಾಗಿದೆ. ಇದು ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ. ನಟಿ ಜಿಯಾ ಖಾನ್ ಮುಂಬೈನ ಜುಹು ಮನೆಯಲ್ಲಿ ಜೂನ್ 3, 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ನಟಿಗೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಆರೋಪ ಬಾಲಿವುಡ್ ನಟ ಸೂರಜ್ ಪಾಂಚೋಲಿ ಮೇಲಿತ್ತು.
ಜೂನ್ 2013
ಜಿಯಾ ಖಾನ್ ಎನ್ನುವ ಬಾಲಿವುಡ್ ನಟಿ ಮುಂಬೈನ ಜುಹು ಮನೆಯಲ್ಲಿ ಆತ್ಮಹತ್ಯೆಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಾರೆ. ಈ ಘಟನೆ ನಡೆದಿದ್ದು 2013 ಜೂನ್ 3ರಂದು. ನಟಿ ಬರೆದಿದ್ದಾರೆ ಎನ್ನಲಾದ ಸುಮಾರು 6 ಪುಟಗಳ ಪತ್ರವನ್ನು ಜಿಯಾ ಖಾನ್ ಕುಟುಂಬ ಪೊಲೀಸರಿಗೆ ನೀಡಿತ್ತು. ಇದಾಗಿ ಒಂದು ವಾರದ ನಂತರ ನಟರಾದ ಆದಿತ್ಯ ಪಾಂಚೋಲಿ ಹಾಗೂ ಝರೀನಾ ವಾಹಬ್ ಅವರ ಪುತ್ರ ಸೂರಜ್ ಪಾಂಚೋಲಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಲ್ಲಿ ಅರೆಸ್ಟ್ ಮಾಡಲಾಯಿತು.
ಜುಲೈ 2013
ಸೂರಜ್ ಪಾಂಚೋಲಿಗೆ ಒಂದೇ ತಿಂಗಳಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ಕೊಟ್ಟಿತು. ಆದರೆ ಪಾಸ್ಪೋರ್ಟ್ ಒಪ್ಪಿಸುವಂತೆ ಕೇಳಲಾಯಿತು. ಅಕ್ಟೋಬರ್ 2013ರಲ್ಲಿ ಜಿಯಾ ಖಾನ್ ಅವರ ತಾಯಿ ರಬಿಯಾ ತನ್ನ ಮಗಳು ಆತ್ಮಹತ್ಯೆ ಮಾಡಿದ್ದಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು. ನಂತರ ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿತು.
ಜುಲೈ 2014ರಲ್ಲಿ ಮುಂಬೈ ಪೊಲೀಸರು ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಸ್ ಕ್ಲೋಸ್ ಮಾಡಿದಾಗ ಇದನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸೂರಜ್ ಪಾಂಚೋಲಿ ಅವರ ಪೋಷಕರು ನಟಿ ಜಿಯಾ ಖಾನ್ ತಾಯಿಯ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮ್ಮೆಯನ್ನು ಹೂಡಿದ್ದರು. ಆಗಸ್ಟ್ 2014ರಲ್ಲಿ ಸಿಬಿಐ ಬಾಲಿವುಡ್ ನಟಿಯ ಸಾವಿನ ಫಾರ್ಮಲ್ ಕೇಸ್ ರಿಜಿಸ್ಟರ್ ಮಾಡಿಕೊಂಡಿತ್ತು.
ಇದನ್ನೂ ಓದಿ: ಬೇಸಿಗೆ ರಜೆಗೆ ಬಂಪರ್! OTTಯಲ್ಲಿ ಸಿನಿಮಾ, ಸಿರೀಸ್ಗಳ ಸರಮಾಲೆ, ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
2015ರ ಮೇ ತಿಂಗಳಲ್ಲಿ ಸಿಬಿಐ ಆದಿತ್ಯ ಹಾಗೂ ಸೂರಜ್ ಪಾಂಚೋಲಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿತು. 2015ರ ಡಿಸೆಂಬರ್ನಲ್ಲಿ ಸೂರಜ್ ಪಾಂಚೋಲಿ ವಿರುದ್ಧ ಸಿಬಿಐ ಚಾರ್ಜ್ಶೀಟ್ ಫೈಲ್ ಮಾಡಿತು. 2016ರಲ್ಲಿ ಸಿಬಿಐ ಈ ಪ್ರಕರಣದಲ್ಲಿ ಯಾವುದೇ ಕುತಂತ್ರ ಇಲ್ಲ, ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿತು. 2018ರಲ್ಲಿ ಸೂರಜ್ ಪಾಂಚೋಲಿ ಈ ಕೇಸ್ನಲ್ಲಿ ಸಂಬಂಧ ಪಟ್ಟಿದ್ದಾರೆ ಎನ್ನುವ ವಿಚಾರಣಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸುತ್ತದೆ.
2021ರಲ್ಲಿ ಜಿಯಾ ಖಾನ್ ಕೇಸ್ನ್ನು ಸ್ಪೆಷಲ್ ಸಿಬಿಐಗೆ ನೀಡಲಾಯಿತು. 2022ರಲ್ಲಿ ಬಾಂಬೆ ಹೈಕೋರ್ಟ್ ಈ ಪ್ರಕರಣದಲ್ಲಿ ಹೊಸ ತನಿಖೆ ನಡೆಸುವಂತೆ ಆದೇಶಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ