• Home
  • »
  • News
  • »
  • entertainment
  • »
  • Jennifer lopez: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ

Jennifer lopez: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ

ಜೆನ್ನಿಫರ್ ಲೋಪೆಜ್ ಮತ್ತು  ಬೆನ್ ಅಫ್ಲೆಕ್

ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್

Jennifer Lopez and Ben Affleck Marriage: ಇಷ್ಟೇ ಅಲ್ಲ JLo ಎಂದು ಜನಪ್ರಿಯವಾಗಿರುವ ಜೆನ್ನಿಫರ್ ಲೋಪೆಜ್ ಕೂಡ ತನ್ನ ಹೆಸರನ್ನು ಜೆನ್ನಿಫರ್ ಅಫ್ಲೆಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ದಂಪತಿಗಳು 2002 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು

  • Share this:

ನಟಿ ಹಾಗೂ ಗಾಯಕಿ ಜೆನ್ನಿಫರ್ ಲೋಪೆಜ್ (Jennifer Lopez) ಮತ್ತು ನಟ ಬೆನ್ ಅಫ್ಲೆಕ್ (Ben Affleck) ವಿವಾಹವಾಗಿದ್ದು (Wedding) , ಸುಮಾರು ಎರಡು ದಶಕಗಳ ನಂತರ ಲಾಸ್ ವೇಗಾಸ್‌ನಲ್ಲಿ  ಮದುವೆಯಾಗಿದ್ದಾರೆ. ಹೌದು,  ಸುಮಾರು 20 ವರ್ಷಗಳ ಕಾಲ ಪ್ರೀತಿಸಿ ಈ ಜೋಡಿ ಮದುವೆಯಾಗಿದೆ. 52 ವರ್ಷದ ಜೆನ್ನಿಫರ್ ಲೋಪೆಜ್ ಮತ್ತು 49 ವರ್ಷದ  ನಟ ಬೆನ್ ಅಫ್ಲೆಕ್​ ಈ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಫ್ಯಾನ್ಸ್​ ಕೂಡ ಸಂಸಗೊಂಡಿದ್ದಾರೆ.  ಇನ್ನು ಈ 20 ವರ್ಷಗಳ ಸಂಬಂಧದಲ್ಲಿ ಬ್ರೇಕಪ್​ ಮಾಡಿಕೊಂಡಿದ್ದ ಈ ಜೋಡಿ ದೀರ್ಘಕಾಲ ದೂರವಿದ್ದರು. ಆದರೆ ಇದೀಗ ವಿವಾಹಬಂಧನಕ್ಕೊಳಗಾಗಿದ್ದಾರೆ.  


20 ವರ್ಷಗಳ ನಂತರ ಮದುವೆಯಾದ ಜೋಡಿ


ಇಷ್ಟೇ ಅಲ್ಲ JLo ಎಂದು ಜನಪ್ರಿಯವಾಗಿರುವ ಜೆನ್ನಿಫರ್ ಲೋಪೆಜ್ ಕೂಡ ತನ್ನ ಹೆಸರನ್ನು ಜೆನ್ನಿಫರ್ ಅಫ್ಲೆಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ದಂಪತಿಗಳು 2002 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಒಂದು ವರ್ಷದ ನಂತರ ಆ ಸಂಬಂಧಕ್ಕೆ ಬ್ರೇಕ್​ ಹಾಕಿದ್ದರು. ನಂತರ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳನ್ನು ಮದುವೆಯಾಗಿ,ಮಕ್ಕಳನ್ನೂ ಸಹ ಹೊಂದಿದ್ದರು. ಆದರೆ ಕಳೆದ ವರ್ಷ ಮತ್ತೆ ಒಂದಾದ ಜೋಡಿ ಏಪ್ರಿಲ್​ನಲ್ಲಿ ಎಂಗೇಜ್​​ಮೆಂಟ್​ ಮಾಡಿಕೊಂಡು, ಈಗ ಮದುವೆಯಾಗಿದೆ.




ಜೆನ್ನಿಫರ್ ಅವರ ಆಪ್ತ  ಹಾಗೂ ಹೇರ್ ಸ್ಟೈಲಿಸ್ಟ್ ಕ್ರಿಸ್ ಆಪಲ್‌ಟೌನ್, ಆಕೆಯ ವಧುವಿನ ಲುಕ್​ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್,  ಜೆನ್ನಿಫರ್ ಸರಳವಾದ ಬಿಳಿ ಮದುವೆಯ ಗೌನ್‌ನಲ್ಲಿ ಮಿಂಚುತ್ತಿರುವ  ವೀಡಿಯೊವನ್ನು ಹಂಚಿಕೊಂಡಿದ್ದು, ಮದುವೆಯ ಮೊದಲು ಕೊನೆಯ ನಿಮಿಷದ ಭಾವನೆಗಳು ಎಂದು ಬರೆದಿದ್ದಾರೆ. ವೀಡಿಯೊದಲ್ಲಿ, ಕ್ರಿಸ್ ಜೆನ್ನಿಫರ್‌ಗೆ ಹೇಗೆ ಅನಿಸುತ್ತಿದೆ ಎಂದು ಕೇಳುವುದನ್ನು ನಾವು ಕೇಳಬಹುದು, ಅದಕ್ಕೆ ಅವರು "ನನಗೆ ಬಹಳ ಸಂತೋಷವಾಗಿದೆ, ಅದ್ಭುತ ಭಾವನೆ ಎಂದು ಉತ್ತರಿಸುತ್ತಾರೆ.




ವಿಡಿಯೋ ಹಂಚಿಕೊಂಡ ಜೆನ್ನಿಫರ್ ಆಪ್ತ


ಅಲ್ಲದೇ ಬಟ್ಟೆಯ ಬಗ್ಗೆ ಮಾತನಾಡಿದ ಅವರು ನಾನು ಈ ದಿನಕ್ಕಾಗಿಯೇ ಇದನ್ನು ಇಟ್ಟುಕೊಂಡಿದ್ದೆ, ಕಾಯ್ದಿರಿಸಿದ್ದೆ, ಈಗ ನಾನು ಅಂತಿಮವಾಗಿ ಅದನ್ನು ನನ್ನ ಮದುವೆಯ ದಿನದಂದು ಧರಿಸುತ್ತಿದ್ದೇನೆ ಎಂದು ಅವರು ಹೇಳಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.  ಪೀಪಲ್ ಮ್ಯಾಗಜೀನ್ ವರದಿ ಪ್ರಕಾರ ಜೆನ್ನಿಫರ್ ಮತ್ತು ಬೆನ್ ತಮ್ಮ ಮದುವೆಯನ್ನು ನ್ಯೂಸ್​ ಲೆಟರ್​ ಮೂಲಕ ಘೋಷಿಸಿದ್ದರು. ಅದರ ಪ್ರಕಾರ ದಂಪತಿಗಳು ನೆವಾಡಾದಲ್ಲಿ ಮದುವೆ ಲೈಸೆನ್ಸ್​ ಪಡೆದಿದ್ದು, ಶನಿವಾರ ಚಾಪೆಲ್‌ನಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.




ಆ ನ್ಯೂಸ್​ ಲೆಟರ್​ನಲ್ಲಿ ಪ್ರೀತಿ ಸುಂದರವಾಗಿದೆ. ಪ್ರೀತಿ ಕರುಣಾಮಯಿ. ಮತ್ತು ಪ್ರೀತಿಯು ತಾಳ್ಮೆಯಿಂದ ಹೊರಹೊಮ್ಮುತ್ತದೆ. ಇಪ್ಪತ್ತು ವರ್ಷಗಳ ತಾಳ್ಮೆ. ನಾವು ಬಯಸಿದ್ದು ನಿಖರವಾಗಿದೆ ಎಂದು ಬರೆದುಕೊಂಡಿದ್ದು, ಅಲ್ಲದೇ ಜೆನ್ನಿಫರ್ ತನ್ನನ್ನು ‘ಶ್ರೀಮತಿ’ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ.




ಇದನ್ನೂ ಓದಿ: ಹೊಸ ಫೋಟೋ ಶೇರ್ ಮಾಡಿಕೊಂಡ ರಚಿತಾ ರಾಮ್, ಎಲ್ಲಿದ್ದೀರಿ ಡಿಂಪಲ್ ಕ್ವೀನ್ ಎಂದ ಫ್ಯಾನ್ಸ್


ಕೌಂಟಿ ಕ್ಲರ್ಕ್ ಕಚೇರಿಯಿಂದ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿರುವ ದಾಖಲೆ ವಿವರಗಳ ಪ್ರಕಾರ, ಜುಲೈ 16 ರ ಶನಿವಾರದಂದು ಕ್ಲಾರ್ಕ್ ಕೌಂಟಿಯಿಂದ ಈ ಜೋಡಿಯ ಹೆಸರಿನಲ್ಲಿ ಮದುವೆ ಲೈಸೆನ್ಸ್​ ಪಡೆಯಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

Published by:Sandhya M
First published: