ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಚಿತ್ರಕ್ಕೆ ಟೈಟಲ್ ಫಿಕ್ಸ್

ಬಾಲಿವುಡ್​ನಲ್ಲೂ ಜಮೀರ್ ಅಹ್ಮದ್ ಪುತ್ರನಿಗೆ ಉತ್ತಮ ನಂಟಿದೆ. ಅಂತದ್ರಲ್ಲಿ ನಮ್ಮ ನೆಲದಿಂದಲೇ ಸಿನಿ ಕೆರಿಯರ್ ಆರಂಭಿಸಬೇಕು ಎಂಬ ಮಾತು ನನಗೆ ತುಂಬಾ ಖುಷಿ ಕೊಟ್ಟಿದೆ. ಹೀಗಾಗಿ ಒಂದು ಅತ್ಯುತ್ತಮ ಚಿತ್ರದ ಮೂಲಕ ಹೊಸ  ಹೀರೋ ಪರಿಚಯಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.

zahir | news18-kannada
Updated:August 15, 2019, 7:52 PM IST
ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಚಿತ್ರಕ್ಕೆ ಟೈಟಲ್ ಫಿಕ್ಸ್
ಜೈದ್ ಖಾನ್
  • Share this:
ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ 'ಜಾಗ್ವಾರ್', ಚೆಲುವರಾಯ ಸ್ವಾಮಿ ಮಗ ಸಚಿನ್ 'ಹ್ಯಾಪಿ ಬರ್ತ್‌ ಡೇ' , ಹಾಗೂ ಹೆಚ್. ಎಂ ರೇವಣ್ಣ ಸುಪುತ್ರ ಅನೂಪ್ 'ಲಕ್ಷಣ'ನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಾಯ್ತು. ಹಾಗೆಯೇ ಈ ಚಿತ್ರಗಳ ಮುಹೂರ್ತದ ಸಂದರ್ಭದಲ್ಲಿ ಕೇಳಿ ಬಂದ ಮತ್ತೊಂದು ಹೆಸರು ಜೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಗನ  ಚಿತ್ರದ ಕುರಿತು ಆರಂಭದಲ್ಲಿ ಸದ್ದು ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಆ ಬಳಿಕ ಯಾವುದೇ ಸೌಂಡ್ ಇರಲಿಲ್ಲ.

ಆದರೀಗ ಬಾಲಿವುಡ್​ನ ಯಾವುದೇ ಹೀರೋಗಳಿಗೂ ಕಡಿಮೆ ಇಲ್ಲವೆಂಬಂತೆ ಸುರಸುಂದರಾಂಗನಾಗಿರುವ ಜೈದ್ ಖಾನ್ ಸ್ಯಾಂಡಲ್​​ವುಡ್​ ಪಾದರ್ಪಣೆಗೆ ಸಕಲ ಸಿದ್ಧತೆಯಲ್ಲಿದ್ದಾರೆ. ಈ ಚಿತ್ರಕ್ಕೆ ಇದೀಗ ಬನಾರಸ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ನವಿರಾದ ಲವ್​ಸ್ಟೋರಿ ಹೊಂದಿರಲಿರುವ ಈ ಸಿನಿಮಾ ಕಥೆಗೂ ಕಾಶಿಗೂ ನಂಟಿರಲಿದೆ. ಹೀಗಾಗಿ ಚಿತ್ರಕ್ಕೆ ಬನಾರಸ್ ಎಂದು ಹೆಸರಿಡಲಾಗಿದೆ.

ಅಂದಹಾಗೆ ಜಮೀರ್ ಅಹ್ಮದ್ ಪುತ್ರನ ಚೊಚ್ಚಲ ಚಿತ್ರಕ್ಕೆ ಬೆಲ್​ ಬಾಟಂ ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ.

ಈ ಹಿಂದೊಮ್ಮೆ ಜೈದ್ ಖಾನ್ ಹಿಂದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆತನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ. ನಾನು ಇಲ್ಲಿಯವನು. ಹೀಗಾಗಿ ಈ ನೆಲದಲ್ಲೇ ಸಿನಿ ಪಯಣದ ಮೊದಲ ಹೆಜ್ಜೆ ಕನ್ನಡದಿಂದ ಆರಂಭವಾಗಬೇಕು. ಈಗಾಗಲೇ 60 ನಿರ್ದೇಶಕರ ಕಥೆಗಳನ್ನು ಕೇಳಿದ್ದೇನೆ. ಆದರೆ ನನಗೆ ಜಯತೀರ್ಥರವರು ಹೇಳಿರುವ ಸ್ಟೋರಿ ಇಷ್ಟವಾಗಿದ್ದು, ಈ ಚಿತ್ರಕಥೆಯೊಂದಿಗೆ ಪಾದರ್ಪಣೆ ಮಾಡಲಿದ್ದೇನೆ ಎಂದು ಜೈದ್ ಖಾನ್ ಇಂತಹ ಸುದ್ದಿಗಳಿಗೆ ಪುಲಿಸ್ಟಾಪ್ ಹಾಕಿದ್ದರು.

ಜೈದ್ ಖಾನ್


ಬಾಲಿವುಡ್​ನಲ್ಲೂ ಜಮೀರ್ ಅಹ್ಮದ್ ಪುತ್ರನಿಗೆ ಉತ್ತಮ ನಂಟಿದೆ. ಅಂತದ್ರಲ್ಲಿ ನಮ್ಮ ನೆಲದಿಂದಲೇ ಸಿನಿ ಕೆರಿಯರ್ ಆರಂಭಿಸಬೇಕು ಎಂಬ ಮಾತು ನನಗೆ ತುಂಬಾ ಖುಷಿ ಕೊಟ್ಟಿದೆ. ಹೀಗಾಗಿ ಒಂದು ಅತ್ಯುತ್ತಮ ಚಿತ್ರದ ಮೂಲಕ ಹೊಸ  ಹೀರೋ ಪರಿಚಯಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.

ಸದ್ಯ ಬನಾರಸ್​ಗಾಗಿ ಜೈದ್ ಭರ್ಜರಿ ತಯಾರಿಯಲ್ಲಿದ್ದು, ಇದೇ​ ತಿಂಗಳಲ್ಲಿ ಚಿತ್ರದ ಸಂಪೂರ್ಣ ಮಾಹಿತಿಗಳು ಹೊರ ಬೀಳುವ ಸಾಧ್ಯತೆಯಿದೆ. ಈ ಮೂಲಕ ಬಣ್ಣದ ಲೋಕದ ಅದೃಷ್ಟ ಪರೀಕ್ಷೆ ಮತ್ತೊಬ್ಬರು ರಾಜಕಾರಣಿಯ ಪುತ್ರ ಎಂಟ್ರಿಯಾಗುವುದು ಪಕ್ಕಾ ಆದಂತಾಗಿದೆ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...