ಬಿಗ್ ಬಾಸ್​ನ 3 ಸ್ಪರ್ಧಿಗಳನ್ನು ಮುಖವಾಡದ ಮನುಷ್ಯರೆಂದ ಜಯಶ್ರೀನಿವಾಸನ್

ಒಬ್ಬ ವ್ಯಕ್ತಿ ಮುಖವಾಡ ಹೊಂದಿರಲೇಬಾರದು. ಒಂದು ನಾಣ್ಯಕ್ಕೆ ಎರಡು ಮುಖವಿರುವಂತೆ ಮನುಷ್ಯನಿಗೆ ಎರಡು ಮುಖವಿರುವುದರಲ್ಲಿ ತಪ್ಪೇನಿಲ್ಲ. ಆದರೆ, ಹತ್ತಾರು ಮುಖವಾಡಗಳನ್ನು ಹಾಕುವುದು ದೊಡ್ಡ ತಪ್ಪು. ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯ, ದಿವಾಕರ್ ಮತ್ತು ಚಂದನ್ ಶೆಟ್ಟಿ ಇಂತಹ ಬಹುಮುಖವಾಡ ಹಾಕಿದ್ದರು ಎಂದು ಸಂಖ್ಯಾಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ.

Updated:January 23, 2018, 11:30 AM IST
ಬಿಗ್ ಬಾಸ್​ನ 3 ಸ್ಪರ್ಧಿಗಳನ್ನು ಮುಖವಾಡದ ಮನುಷ್ಯರೆಂದ ಜಯಶ್ರೀನಿವಾಸನ್
ಬಿಗ್​ಬಾಸ್ ಮಾಜಿ ಸ್ಪರ್ಧಿ ಜಯಶ್ರೀನಿವಾಸನ್
  • Share this:
ಬೆಂಗಳೂರು(ಜ. 23): ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಈಗ ಫಿನಾಲೆ ಹಂತಕ್ಕೆ ಸಮೀಪಿಸಿದೆ. ಸ್ಪರ್ಧೆ ಗೆಲ್ಲಬಹುದೆಂದು ನಿರೀಕ್ಷಿಸಲಾಗಿದ್ದ ಹಲವು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈಗೇನಿದ್ದರೂ ಫಿನಾಲೆಯಲ್ಲಿ ಐವರು ಸ್ಪರ್ಧಾಳುಗಳ ಮಧ್ಯೆ ಫೈಟ್. ಜೆಕೆ, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಮತ್ತು ನಿವೇದಿತಾ ಗೌಡ ಮಧ್ಯೆ ಬಿಗ್ ಬಾಸ್ ಪಟ್ಟಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ಈ ನಡುವೆ, ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸಂಖ್ಯಾಶಾಸ್ತ್ರ ಜಯಶ್ರೀನಿವಾಸನ್ ಅವರು ತಮ್ಮ ಮೂವರು ಸಹಸ್ಪರ್ಧಿಗಳನ್ನು ಟೀಕಿಸಿದ್ದಾರೆ. ನ್ಯೂಸ್18 ಕನ್ನಡ ವಾಹಿನಿಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯಶ್ರೀನಿವಾಸನ್ ಅವರು ಚಂದನ್ ಶೆಟ್ಟಿ, ಸಮೀರ್ ಆಚಾರ್ಯ ಮತ್ತು ದಿವಾಕರ್ ಅವರನ್ನು ಮುಖವಾಡದ ಮನುಷ್ಯರೆಂದು ಬಣ್ಣಿಸಿದ್ದಾರೆ.

ಒಬ್ಬ ವ್ಯಕ್ತಿ ಮುಖವಾಡ ಹೊಂದಿರಲೇಬಾರದು. ಒಂದು ನಾಣ್ಯಕ್ಕೆ ಎರಡು ಮುಖವಿರುವಂತೆ ಮನುಷ್ಯನಿಗೆ ಎರಡು ಮುಖವಿರುವುದರಲ್ಲಿ ತಪ್ಪೇನಿಲ್ಲ. ಆದರೆ, ಹತ್ತಾರು ಮುಖವಾಡಗಳನ್ನು ಹಾಕುವುದು ದೊಡ್ಡ ತಪ್ಪು. ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯ, ದಿವಾಕರ್ ಮತ್ತು ಚಂದನ್ ಶೆಟ್ಟಿ ಇಂತಹ ಬಹುಮುಖವಾಡ ಹಾಕಿದ್ದರು ಎಂದು ಸಂಖ್ಯಾಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ.

ಈಗಿರುವ ಫೀನಾಲೆ ಸ್ಪರ್ಧಾಳುಗಳ ಪೈಕಿ ಚಂದನ್ ಶೆಟ್ಟಿ ಪಕ್ಕಾ ಗೇಮ್ ಪ್ಲಾನ್ ಆಡುತ್ತಿದ್ದಾರೆ. ಯಾವ ಸಂದರ್ಭಕ್ಕೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳುತ್ತಾರೆ ಎಂದು ಜಯಶ್ರೀನಿವಾಸನ್ ಹೇಳುತ್ತಾರೆ.

ದಿನಾಕರ್ ಅವರನ್ನು ಜಗತ್​ಕಿಲಾಡಿ ಎಂದು ವ್ಯಂಗ್ಯ ಮಾಡಿದ ಜಯಶ್ರೀನಿವಾಸನ್, ನಿವೇದಿತಾ ಗೌಡ ಸೂಪರ್ರಾಗಿ ಆಡುತ್ತಿದ್ದಾಳೆಂದು ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ.

ನ್ಯೂಸ್18 ಚರ್ಚಾ ಕಾರ್ಯಕ್ರಮದಲ್ಲಿ ಜಯಶ್ರೀನಿವಾಸನ್ ಜೊತೆ ಅನುಪಮಾ ಗೌಡ ಕೂಡ ಪಾಲ್ಗೊಂಡಿದ್ದರು.
First published:January 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...