Jayanti Health Updates: ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು!; ವೆಂಟಿಲೇಟರ್​​ನಲ್ಲಿ ಚಿಕಿತ್ಸೆ!

Jayanti: ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ ಎಸ್ ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್​​ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಎಚ್ಚರದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ನ್ಯೂಸ್ 18 ಕನ್ನಡ ವಾಹಿನಿಗೆ ಮಾಹಿತಿ ನೀಡಿದ್ದಾರೆ.

ನಟಿ ಜಯಂತಿ

ನಟಿ ಜಯಂತಿ

  • Share this:
ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ತಮಾದಿಂದ ಬಳಲುತ್ತಿರುವ ಅವರಿಗೆ ನಿನ್ನೆ ಉಸಿರಾಟದ ತೊಂದರೆ ಎದುರಾಗಿತ್ತು. ತಕ್ಷಣ ಅವರ ಪುತ್ರ ಕೃಷ್ಣ ಕುಮಾರ್, ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ ಎಸ್ ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್​​ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಎಚ್ಚರದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ನ್ಯೂಸ್ 18 ಕನ್ನಡ ವಾಹಿನಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಯೇ ಕೋವಿಡ್-19 ಸ್ವ್ಯಾಬ್ ಸ್ಯಾಂಪ್ ಪಡೆಯಲಾಗಿತ್ತು. ಅವರ ವಯಸ್ಸು 70 ದಾಟಿರುವ ಕಾರಣ, ಅವರ ಕುಟುಂಬದವರೆಲ್ಲರೂ ಆತಂಕದಲ್ಲಿದ್ದರು. ಆದರೆ ಇವತ್ತು ರಿಪೋರ್ಟ್ ನೆಗಟಿವ್ ಎಂದು ಬಂದಿದೆ. ಇದು ಅವರ ಕುಟುಂಬದವರು, ಸಂಬಂಧಿಕರು, ಆಪ್ತರು, ಚಿತ್ರರಂಗದ ಗಣ್ಯರು ಮಾತ್ರವಲ್ಲ ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೀಗೆ ಎರಡು ವರ್ಷಗಳ ಹಿಂದೆ ಅರ್ಥಾತ್ 2018ರ ಮಾರ್ಚ್ ತಿಂಗಳಲ್ಲಿಯೂ ಇದೇ ರೀತಿ ಅಸ್ತಮಾ ಉಲ್ಬಣಿಸಿ ಉಸಿರಾಟದ ತೊಂದರೆ ಎದುರಾಗಿತ್ತು. ಆಗಲೂ ಜಯಂತಿ ಅವರನ್ನು ವಿಕ್ರಮ್ ಆಸ್ಪತ್ರೆಯಲ್ಲೇ ವೈದ್ಯರಾದ ಡಾ. ಸತೀಶ್ ಅವರೇ ಚಿಕಿತ್ಸೆ ನೀಡಿದ್ದರು. ಈಗ ಕೆಲ ದಿನಗಳಿಂದ ಮಳೆ ಹಾಗೂ ಚಳಿಯ ಕಾರಣದಿಂದಾಗಿ ಉಸಿರಾಟದ ತೊಂದರೆ ಎದುರಾಗಿದೆ ಎನ್ನಲಾಗಿದೆ. ಸದ್ಯ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಅಭಿನಯ ಶಾರದೆ ಜಯಂತಿ ಅವರು ಆದಷ್ಟು ಬೇಗ ಗುಣಮುಖರಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ಐದು ಭಾಷೆಗಳಲ್ಲಿ ರಿಲೀಸ್ ಆದ ಸೈರಾ ನರಸಿಂಹ ರೆಡ್ಡಿ ಚಿತ್ರದ ಬಳಿಕ ಹಿರಿಯ ನಟಿ ಜಯಂತಿ ಮತ್ತೆ ಬೇರೆ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅವರು ನಟಿಸಿದ ಕೊನೆಯ ಕನ್ನಡ ಸಿನಿಮಾ ‘ನಮಿತಾ ಐ ಲವ್ ಯೂ’ 2011ರಲ್ಲಿ ರಿಲೀಸ್ ಆಗಿತ್ತು.

ಕೊರೋನಾ ವಿರುದ್ಧ ಹಗಲಿರುಳು ದುಡಿಯುತ್ತಿರುವ ವಾರಿಯರ್ಸ್​ಗೆ ಯಮಹಾ ನೀಡಿದೆ ಭರ್ಜರಿ ಆಫರ್​!

Tiktok Ban: ಟಿಕ್​ಟಾಕ್ ರೀತಿಯಲ್ಲೇ ಫೀಚರ್ ನೀಡಲು ಮುಂದಾದ ಫೇಸ್​ಬುಕ್, ಇನ್​​ಸ್ಟಾಗ್ರಾಂ?
Published by:Harshith AS
First published: