ಕಂಗನಾ ರನೋತ್ (Kangana Ranaut) ಅವರು ಜಯಲಲಿತಾ (Jayalalithaa) ಪಾತ್ರದಲ್ಲಿ ನಟಿಸಿರುವ ಸಿನಿಮಾ ತಲೈವಿ (Thalaivii) ನಿನ್ನೆಯಷ್ಟೆ ಬಿಡುಗಡೆಯಾಗಿದ್ದು, ಎಲ್ಲೆಡೆ ಯಸಸ್ವಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಳ್ಳುತ್ತಿದೆ. ಅದರಲ್ಲೂ ಕಂಗನಾ ಅಭಿನಯಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ (Biopic) ಆಗಿದೆ. ಇನ್ನು ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಜಯಲಲಿತಾ ಅವರ ಬಯೋಪಿಕ್ಗೆ ಸಂಬಂಧಿಸಿದ ವಿಷಯವೊಂದು ಹರಿದಾಡುತ್ತಿದೆ. ಅದೇ ಜಯಲಲಿತಾ ಅವರಿಗೆ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಬೇರೆ ನಟಿಯಾಗಿ ನಟಿಸಬೇಕೆಂಬ ಆಸೆ ಇತ್ತಂತೆ. ಅದನ್ನು ಅವರೂ ಹೇಳಿಕೊಂಡಿಯೂ ಇದ್ದರಂತೆ.
ಹಿರಯ ನಟಿ ಸಿಮಿ ಗರೆವಾಲ್ (Simi Garewal) ಅವರು ಸಹ ಕಂಗನಾ ಅಭಿನಯದ ತಲೈವಿ ಚಿತ್ರತಂಡ ಆಯೋಜಿಸಲಾಗಿದ್ದ ವಿಶೇಷ ಸ್ಕ್ರೀನಿಂಗ್ಗೆ ಹೋಗಿದ್ದರಂತೆ. ಸಿನಿಮಾ ನೋಡಿದ ನಂತರ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ತಿಳಿದಿದ್ದ ವಿಷಯವನ್ನೂ ಬರೆದುಕೊಂಡಿದ್ದಾರೆ.
Altho I do not support #KanganaRanaut's radical comments..I do support her acting talent. In #Thailavii she gives it her heart & soul! Jaya-ji wanted Aishwarya to play her..my hunch is JJ wud hv approved of Kangana's portrayal👍. As for @thearvindswamy he is MGR reincarnate!!
— Simi Garewal (@Simi_Garewal) September 10, 2021
ಇದನ್ನೂಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty
ಕಂಗನಾ ರಾಜಕೀಯ ಪ್ರವೇಶ
ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಂಗನಾ ರನೋತ್ ತಮ್ಮ ರಾಜಕೀಯ ಪ್ರವೇಶ ಕುರಿತಂತೆ ಮಾತನಾಡಿದ್ದರು. 'ನಾನು ರಾಷ್ಟ್ರೀಯವಾದಿ ಹಾಗೂ ನಾನು ನನ್ನ ದೇಶಕ್ಕಾಗಿ ಮಾತನಾಡುತ್ತೇನೆ. ಅದಕ್ಕೆ ನಾನು ರಾಜಕಾರಣಿಯಾಗಬೇಕಿಲ್ಲ. ಅದಕ್ಕೆ ಜವಾಬ್ದಾರಿ ಇರುವ ನಾಗರಿಕರಾಗಿದ್ದರೆ ಸಾಕು. ರಾಜಕೀಯಕ್ಕೆ ಬರಲು ನನಗೆ ಸಾರ್ವಜನಿಕರ ಬೆಂಬಲ ಬೇಕು. ಆದರೆ, ಸದ್ಯಕ್ಕೆ ನಾನು ನಟಿಯಾಗಿ ಖುಷಿಯಾಗಿದ್ದೇನೆ. ಭವಿಷ್ಯದಲ್ಲಿ ಜನರು ನನಗೆ ಇಷ್ಟಪಟ್ಟು ಬೆಂಬಲ ನೀಡಿದರೆ, ಖಂಡಿತ ನಾನು ಖುಷಿಯಿಂದ ರಾಜಕೀಯಕ್ಕೆ ಬರುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ತಲೈವಿ ಸಿನಿಮಾ ಒಟಿಟಿಯಲ್ಲಿ ಇನ್ನೇನು ತೆರೆ ಕಾಣಬೇಕಿದೆ. ನೆಟ್ಫ್ಲೆಕ್ಸ್, ಅಮೆಜಾನ್ ಪ್ರೈಮ್ನಲ್ಲಿ ತಲೈವಿ ಚಿತ್ರವನ್ನು ರಿಲೀಸ್ ಮಾಡಲಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ತಲೈವಿ ಹಿಂದಿ ವರ್ಷನ್, ಅಮೆಜಾನ್ ಪ್ರೈಂನಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಚಿತ್ರಗಳು ತೆರೆಕಾಣಲಿವೆ. ಈ ಹಿಂದೆ ದೊಡ್ಡ ಮಟ್ಟದಲ್ಲಿ ಆಫರ್ ಸಿಕ್ಕರೂ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಲು ಹಿಂಜರಿಯುತ್ತಿದ್ದರು. ಆದರೆ, ಈಗ ತಲೈವಿ ಸಿನಿಮಾದ ನಿರ್ಮಾಪಕರು ಮಾತ್ರ ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದ ಒಟಿಟಿ ರಿಲೀಸ್ಗೆ 55 ಕೋಟಿ ಹಣ ಸಿಕ್ಕಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Ganesh Chaturthi: ಪತಿ ನಿಖಿಲ್ ಕುಮಾರಸ್ವಾಮಿ ಜೊತೆ ಗಣಪನ ಪೂಜೆ ಮಾಡಿದ ರೇವತಿ: ಇಲ್ಲಿವೆ ಲೆಟೆಸ್ಟ್ ಫೋಟೋಗಳು..!
ನಟಿ ಮತ್ತು ರಾಜಕಾರಣಿ ಆಗಿದ್ದ ಜೆ ಜಯಲಲಿತಾ ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು. ಕಂಗನಾ ಅಭಿನಯದ ತಲೈವಿ ಸಿನಿಮಾ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಏಪ್ರಿಲ್ 30ರಂದೇ ಬಿಡುಗಡೆ ಆಗಬೇಕಿತ್ತಾದರೂ, ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಬಳಿಕ ನಿರ್ಮಾಪಕರು ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ