ಮೊದಲ ಪಿರಿಯಡ್ಸ್ (First Period) ಎಲ್ಲ ಮಹಿಳೆಯರಿಗೂ ನೆನಪಿರುವ ದಿನವಾಗಿರುತ್ತೆ. ಕೆಲವರು ಆ ದಿನ ನೆನಪಿಸಿಕೊಳ್ಳುವುದಕ್ಕೂ ವಿಪರೀತವಾಗಿ ನಾಚಿಕೆ ಪಡುತ್ತಾರೆ. ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಪ್ರತಿಯೊಬ್ಬ ಮಹಿಳೆಯರಲ್ಲೂ (Women) ವಿಭಿನ್ನವಾಗಿರುತ್ತೆ. ಕೆಲವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ್ರೆ, ಇನ್ನು ಕೆಲವರಿಗೆ ಹೊಟ್ಟೆ ನೋವು (Stomach Ache) ಆಗೋದೆ ಇಲ್ಲ, ಮತ್ತೆ ಕೆಲವರಿಗೆ, ಸೊಂಟ ನೋವು, ವಾಂತಿ ಸಮಸ್ಯೆ ಕಾಡುತ್ತೆ. ಕೆಲವರಿಗೆ ಮೂರು ದಿನದಲ್ಲೇ ರಕ್ತಸ್ರಾವ (Bleeding) ನಿಂತ್ರೆ, ಇನ್ನೂ ಕೆಲವರಿಗೆ ವಾರಗಳವರೆಗೆ ರಕ್ತಸ್ರಾವ ಮುಂದುವರೆಯುತ್ತೆ. ಹೀಗೆ ಪಿರಿಯಡ್ಸ್ ಅನುಭವ ಒಬ್ಬ ಮಹಿಳೆಗಿಂತ ಮತ್ತೊಬ್ಬರಲ್ಲಿ ಭಿನ್ನವಾಗಿರುತ್ತೆ.
ಮಹಿಳೆಯರು ಪಿರಿಯಡ್ಸ್ ಬಗ್ಗೆ ಮಾತನಾಡುವುದಕ್ಕೆ ಹಿಂಜರಿಯುತ್ತಿದ್ದ ಕಾಲ ಇಂದಿಲ್ಲ. ಇಂದು ಬಹುಪಾಲು ಮಹಿಳೆಯರು ತಮ್ಮ ಪಿರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ಸಾಮಾನ್ಯ ಮಹಿಳೆಯರಲ್ಲಿ ಪಿರಿಯಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಅಂತಹವರ ಸಾಲಿನಲ್ಲಿ ಈಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಕೂಡಾ ಸೇರ್ಪಡೆಗೊಂಡಿದ್ದಾರೆ. ಅವರು ತಮ್ಮ ಮೊದಲ ಪಿರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದೇನು ವಿಷ್ಯಾ ಅಂತ ಮುಂದೆ ಓದೋಣ ಬನ್ನಿ.
ಇದನ್ನೂ ಓದಿ: ನೆನಪಿನ ಸಾಗರದಲ್ಲಿ, ಎಂದು ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್ಕುಮಾರ್!
ಮೊದಲ ಪಿರಿಯಡ್ಸ್ ಅನುಭವ ಹೇಗಿತ್ತು?
ನಟ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ತಮ್ಮ ಪಾಡ್ಕಾಸ್ಟ್ ʼವಾಟ್ ದಿ ಹೆಲ್ ನವ್ಯʼ ದ ಇತ್ತಿಚೀನ ಎಪಿಸೋಡ್ ನಲ್ಲಿ ತನ್ನ ತಾಯಿ ಶ್ವೇತಾ ಬಚ್ಚನ್ ಮತ್ತು ಅಜ್ಜಿ ಜಯಾ ಬಚ್ಚನ್ ಅವರ ಮೊದಲ ಪಿರಿಯಡ್ಸ್ನ ಅನುಭವದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಎಪಿಸೋಡ್ನ ಟೈಟಲ್ 'ಬಯಾಲಜಿ: ಬ್ಲೆಸ್ಡ್ ಬಟ್ ಬಯಾಸ್ಡ್' ಆಗಿದ್ದು, ಇಲ್ಲಿ ನವ್ಯ ಅವರು ತನ್ನ ತಾಯಿ ಮತ್ತು ಅಜ್ಜಿಯ ಜೊತೆಗೆ ಪಿರಿಯಡ್ಸ್ ಮತ್ತು ಸಂತಾನೋತ್ಪತ್ತಿ ಬಗ್ಗೆ ಮುಕ್ತವಾಗಿ ಸಂಭಾಷಣೆ ನಡೆಸಿದರು. ಇದರೊಂದಿಗೆ ಅವರಿಬ್ಬರ ಮೊದಲ ಪಿರಿಯಡ್ಸ್ ಅನುಭವದ ಬಗ್ಗೆ ಮುಕ್ತ ಪ್ರಶ್ನೆಗಳನ್ನು ಕೇಳಿದರು.
ʼಶೂಟಿಂಗ್ ಸೆಟ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿತ್ತುʼ -ಜಯಾ ಬಚ್ಚನ್
ಜಯಾ ಬಚ್ಚನ್ ಅವರು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಮೊದಲ ಪಿರಿಯಡ್ಸ್ ಬಗ್ಗೆ ಕೇಳಿದಾಗ, “ಹೌದು, ನನಗೆ ಇನ್ನು ಚೆನ್ನಾಗಿ ನೆನಪಿದೆ. ನಾನು ಕೆಲಸ ಮಾಡುವ ಸಂದರ್ಭದಲ್ಲಿ ಪಿರಿಯಡ್ಸ್ ಬಂದಾಗ ಎದುರಿಸುತ್ತಿದ್ದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ಶೂಟಿಂಗ್ ಸೆಟ್ನಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಬದಲಾಯಿಸಲು ಸಹ ಸಾಕಷ್ಟು ಹೆಣಗಾಡುತ್ತಿದ್ದೆ. ಅವರು ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಶೂಟಿಂಗ್ ಸೆಟ್ನಲ್ಲಿ ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳ ಕೊರತೆ ಇತ್ತು” ಎಂದು ನೆನಪಿಸಿಕೊಂಡರು.
“ಪಿರಿಯಡ್ಸ್ ಅನುಭವ ಬಹಳ ಭಯಾನಕವಾಗಿತ್ತು. ನಾವು ಹೊರಾಂಗಣ ಚಿತ್ರೀಕರಣ ಮಾಡುವಾಗ, ನಮ್ಮಲ್ಲಿ ಈಗ ಇರುವಂತೆ ಕ್ಯಾರವಾನ್ಗಳು ಇದ್ದಿಲ್ಲ. ಆದ್ದರಿಂದ ನಾವು ಪೊದೆಗಳ ಹಿಂದೆ ಸ್ಯಾನಿಟರಿ ಪ್ಯಾಡ್ ಬದಲಿಸಬೇಕಿತ್ತು. ಶೌಚಾಲಯಗಳು ಸಹ ಇರಲಿಲ್ಲ ಎಂದಿದ್ದಾರೆ.
ಮುಂದುವರೆಸಿ ಮಾತನಾಡಿದ ಅವರು ಇದರಿಂದ ನಾವು ನಟಿ ಮಣಿಯರು ಸಾಕಷ್ಟು ಮುಜುಗರವನ್ನು ಅಂದಿನ ಕಾಲದಲ್ಲಿ ಎದುರಿಸುತ್ತಿದ್ದೆವು. ಅದರ ಜೊತೆಗೆ ಆಗ ನಾವೆಲ್ಲ ಸ್ಯಾನಿಟರಿ ಟವೆಲ್ಗಳನ್ನು ಬಳಸುತ್ತಿದ್ದೆವು. ಈಗ ಇರುವಂತೆ ಸ್ಯಾನಿಟರಿ ಪ್ಯಾಡ್ಗಳು ಆಗ ಲಭ್ಯವಿರಲಿಲ್ಲ” ಎಂದು ಜಯಾ ಬಚ್ಚನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ʼಪಿರಿಯಡ್ಸ್ ಸಮಯದಲ್ಲಿ ಒಬ್ಬಂಟಿಯಾಗಿರಲು ಇಷ್ಟಪಡುತ್ತಿದ್ದೆʼ - ಶ್ವೇತಾ ಬಚ್ಚನ್
ಶ್ವೇತಾ ಬಚ್ಚನ್ ಅವರು ತಮ್ಮ ಆರಂಭಿಕ ದಿನಗಳಲ್ಲಿ ತಮ್ಮ ಮೊದಲ ಪಿರಿಯಡ್ಸ್ ಅನುಭವವನ್ನು ನೆನಪಿಸಿಕೊಂಡರು. “ಆ ಸಮಯದಲ್ಲಿ ನನಗೆ ಯಾವ ಕೆಲಸ ಮಾಡಲು ಸಹ ಇಷ್ಟವಾಗುತ್ತಿರಲಿಲ್ಲ. ಕೇವಲ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಿದ್ದೆ. ಅದರ ಜೊತೆಗೆ ಚಾಕೊಲೇಟ್ ತಿನ್ನಲು ಮತ್ತು ಒಬ್ಬಂಟಿಯಾಗಿರಲು ಇಷ್ಟಪಡುತ್ತಿದ್ದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಅತಿಥಿಯಾಗಿ ಬರಲಿದ್ದಾರೆ ಜೂನಿಯರ್ ಎನ್ಟಿಆರ್
ʼವಾಟ್ ದಿ ಹೆಲ್ ನವ್ಯಾʼ
ವಾಟ್ ದಿ ಹೆಲ್ ನವ್ಯಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ “ಮಹಿಳೆಯ ಜೀವನ ಹಂತ ಹಂತವಾಗಿ ಬದಲಾಗುತ್ತಲೇ ಇರುತ್ತದೆ. ಮಹಿಳೆಯರು ಅನೇಕ ಪರಿಸ್ಥಿತಿಗಳಿಂದ ನಿಯಂತ್ರಿಸಿಕೊಳ್ಳುತ್ತಾರೆ. ಮಹಿಳೆಯರ ಒತ್ತಡಕ್ಕೆ ಅನೇಕ ಕಾರಣಗಳು ಇವೆ. ಅದಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಮಹಿಳೆಯರಲ್ಲಿ ಮೊದಲಿಗೆ ಪಿರಿಯಡ್ಸ್ ಆರಂಭಗೊಳ್ಳುತ್ತದೆ. ನಂತರ ಗರ್ಭಾವಸ್ಥೆ ನಂತರ ಋತುಬಂಧ ಹೀಗೆ ಜೈವಿಕ ಗಡಿಯಾರ ಸುತ್ತುತ್ತಲೆ ಇರುತ್ತದೆ. ಈ ಎಪಿಸೋಡ್ನಲ್ಲಿ ನಮ್ಮ ಅತಿಥಿಗಳು ತಮ್ಮ ಮೊದಲ ಪಿರಿಯಡ್ಸ್ ಮತ್ತು ಅನೇಕ ವಿಷಯಗಳ ಕುರಿತು ಮಾತನಾಡಿ, ಮುಜುಗರ ಪಡುವುದು ಬೇಡ ಎಂದು ಸಲಹೆ ಸಹ ನೀಡುತ್ತಾರೆ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ