• Home
 • »
 • News
 • »
 • entertainment
 • »
 • Jaya Bachchan: ಸಂಸಾರ, ಮಕ್ಕಳಿಗಾಗಿ ವೃತ್ತಿಜೀವನವನ್ನೇ ತ್ಯಾಗ ಮಾಡಿದ ಜಯಾ ಬಚ್ಚನ್ ಹೇಳಿದ್ದಿಷ್ಟು!

Jaya Bachchan: ಸಂಸಾರ, ಮಕ್ಕಳಿಗಾಗಿ ವೃತ್ತಿಜೀವನವನ್ನೇ ತ್ಯಾಗ ಮಾಡಿದ ಜಯಾ ಬಚ್ಚನ್ ಹೇಳಿದ್ದಿಷ್ಟು!

ಜಯಾ ಬಚ್ಚನ್​

ಜಯಾ ಬಚ್ಚನ್​

ಇತ್ತೀಚೆಗೆ, ಫಿನಾಲೆ ಎಪಿಸೋಡ್ ನಲ್ಲಿ 74 ವರ್ಷದ ನಟಿ, ಜಯಾ ಬಚ್ಚನ್ ತನ್ನ ವೈಯಕ್ತಿಕ ಜೀವನಕ್ಕಾಗಿ ತನ್ನ ವೃತ್ತಿಪರ ಜೀವನದಿಂದ ವಿರಾಮ ತೆಗೆದುಕೊಂಡಿದ್ದರ ಬಗ್ಗೆ ಮಾತನಾಡಿದರು.

 • Trending Desk
 • 3-MIN READ
 • Last Updated :
 • Mumbai, India
 • Share this:

  ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಲ್ಲಿ ಹಿಂದೆ ಬಿದ್ದಿಲ್ಲ ಅಂತ ಹೇಳಬಹುದು. ತಮಗೆ ಅನ್ನಿಸಿದ್ದನ್ನ ಹಾಗೆಯೇ ಹೇಳಿ ಬಿಡುವ ವ್ಯಕ್ತಿತ್ವ ಜಯಾ ಬಚ್ಚನ್ ಅವರದ್ದು. ಆ ಒಂದು ನಿರ್ಭೀತಿ ಗುಣದಿಂದಲೇ ಜಯಾ ಅನೇಕ ಬಾರಿ ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಈ ಹಿರಿಯ ನಟಿ ಶ್ಬರ(Senior Actress) ಲವಾದ ಸ್ತ್ರೀವಾದಿಯಾಗಿದ್ದು, ಸರಿ ಮತ್ತು ತಪ್ಪುಗಳ ಬಗ್ಗೆ ಮಾತನಾಡುವಾಗ ಎಂದಿಗೂ ಹಿಂಜರಿಯುವುದಿಲ್ಲ.


  ವೈಯುಕ್ತಿಕ ಜೀವನದ ಅನೇಕ ಘಟನೆಯನ್ನೂ ಹಂಚಿಕೊಳ್ಳುತ್ತಿರುವ ಜಯಾ


  ಜಯಾ ಬಚ್ಚನ್ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್ಕಾಸ್ಟ್ ‘ವಾಟ್ ದಿ ಹೆಲ್ ನವ್ಯಾ’ ದಲ್ಲಿ ತಮ್ಮ ವೈಯುಕ್ತಿಕ ಜೀವನದ ಅನೇಕ ಘಟನೆಗಳು, ಅನುಭವಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ನಾವೆಲ್ಲಾ ನೋಡಿದ ಹಾಗೆ ಜಯಾ ಅವರು ತಮ್ಮ ಇಬ್ಬರು ಮಕ್ಕಳಲ್ಲಿ ಮಗ ಅಭಿಷೇಕ್ ಗಿಂತಲೂ ಮಗಳು ಶ್ವೇತಾಗೆ ಬಾಲ್ಯದಲ್ಲಿ ಹೆಚ್ಚು ಏಟು ಕೊಟ್ಟಿರುವುದಾಗಿ ಹೇಳಿಕೊಂಡಿದ್ದರು.


  ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡ ಬಗ್ಗೆ ಜಯಾ ಹೇಳಿದ್ದೇನು?


  ಇತ್ತೀಚೆಗೆ, ಫಿನಾಲೆ ಎಪಿಸೋಡ್ ನಲ್ಲಿ 74 ವರ್ಷದ ನಟಿ ತನ್ನ ವೈಯಕ್ತಿಕ ಜೀವನಕ್ಕಾಗಿ ತನ್ನ ವೃತ್ತಿಪರ ಜೀವನದಿಂದ ವಿರಾಮ ತೆಗೆದುಕೊಂಡಿದ್ದರ ಬಗ್ಗೆ ಮಾತನಾಡಿದರು.


  ಹಿರಿಯ ನಟಿ 1971 ರಲ್ಲಿ 'ಗುಡ್ಡಿ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು ಮತ್ತು ಅವರು 'ಮಿಲಿ', 'ಅಭಿಮಾನ್' ಮತ್ತು 'ಚುಪ್ಕೆ ಚುಪ್ಕೆ' ನಂತಹ ಹಿಟ್ ಚಿತ್ರಗಳನ್ನು ನೀಡಿದರು. 'ಸಿಲ್ಸಿಲಾ' (1981) ಚಿತ್ರದಲ್ಲಿನ ಬ್ಲಾಕ್ ಬಸ್ಟರ್ ಪ್ರದರ್ಶನದ ನಂತರ, ಯಶಸ್ವಿ ನಟಿ ತನ್ನ ವೈಯಕ್ತಿಕ ಜೀವನದ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಂಡಿದ್ದರು.


  ದನ್ನೂ ಓದಿ: ನೆನಪಿನ ಸಾಗರದಲ್ಲಿ, ಎಂದು ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್!


  ವಿರಾಮದ ಬಗ್ಗೆ ಮಾತನಾಡಿದ ಜಯಾ ಬಚ್ಚನ್ "ನಾನು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಮತ್ತು ಎಲ್ಲರೂ 'ಓಹ್ ಅವಳು ತನ್ನ ಮದುವೆ ಮತ್ತು ಮಕ್ಕಳಿಗಾಗಿ ತನ್ನ ವೃತ್ತಿಜೀವನವನ್ನು ತ್ಯಾಗ ಮಾಡಿದಳು' ಎಂದು ಹೇಳಿದ್ದು ನನಗೆ ನೆನಪಿದೆ. ಅದು ಹಾಗಿರಲಿಲ್ಲ. ತಾಯಿ ಮತ್ತು ಪತ್ನಿಯಾಗಿ ನಾನು ತುಂಬಾ ಸಂತೋಷಪಟ್ಟೆ. ಆ ಪಾತ್ರವನ್ನು ನಾನು ಮಾಡುತ್ತಿರುವುದಕ್ಕಿಂತ ಹೆಚ್ಚಾಗಿ ನಾನು ಆನಂದಿಸಿದೆ, ಆದರೆ ತ್ಯಾಗ ಆಗಿರಲಿಲ್ಲ" ಎಂದು ಹೇಳಿದರು.


  Jaya Bachchan says she has no problem if granddaughter Navya has child without marriage
  ಸಾಂದರ್ಭಿಕ ಚಿತ್ರ


  ಅನೇಕ ವರ್ಷಗಳ ನಂತರ ಮತ್ತೆ ಸಿನೆಮಾರಂಗಕ್ಕೆ ಎಂಟ್ರಿ ನೀಡಿದ್ರು ಜಯಾ


  ಜಯಾ ಬಚ್ಚನ್ ಅವರು 2000ನೇ ಇಸವಿಯಲ್ಲಿ ನಟ ಹೃತಿಕ್ ರೋಶನ್ ಮತ್ತು ನಟಿ ಕರಿಷ್ಮಾ ಕಪೂರ್ ಅಭಿನಯದ 'ಫಿಜಾ' ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸುವುದರ ಮೂಲಕ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ಮರಳಿದ್ದರು. ಆನಂತರ ಅವರು 'ಕಭಿ ಖುಷಿ ಕಭಿ ಗಮ್' ಮತ್ತು 'ಕಲ್ ಹೋ ನಾ ಹೋ' ಚಿತ್ರಗಳಲ್ಲಿ ತಮ್ಮ ಉತ್ತಮವಾದ ನಟನೆಯನ್ನು ಮುಂದುವರೆಸಿದರು. ಈಗ ಅವರು ನಟಿ ಆಲಿಯಾ ಭಟ್, ರಣವೀರ್ ಸಿಂಗ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಅವರೊಂದಿಗೆ ನಟಿಸುತ್ತಿರುವ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿ ಆಗಿದ್ದಾರೆ ಅಂತ ಹೇಳಬಹುದು.


  ಇದನ್ನೂ ಓದಿ: Pushpa ಸ್ಟಾರ್​ ನಟ ಅಲ್ಲು ಅರ್ಜುನ್​​ ಮಡದಿ ತೊಟ್ಟ ಈ ಸೀರೆ ಬೆಲೆ ಊಹೆ ಮಾಡಿ!


  ಮಹಿಳೆಯರ ಫ್ಯಾಷನ್ ಬಗ್ಗೆ ಜಯಾ ಮಾತು


  ತನ್ನ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಇತ್ತೀಚಿನ ಪಾಡ್ಕಾಸ್ಟ್ ಎಪಿಸೋಡ್ ನಲ್ಲಿ ಜಯಾ ಭಾರತೀಯ ಮಹಿಳೆಯರ ಫ್ಯಾಷನ್ ಪ್ರಜ್ಞೆಯ ಬಗ್ಗೆ ಸಹ ಮಾತಾಡಿದ್ದರು. ನಮ್ಮದೇ ಆದ ಭಾರತೀಯ ಉಡುಪುಗಳ ಬದಲಿಗೆ ಪಾಶ್ಚಿಮಾತ್ಯ ಉಡುಪುಗಳಿಗೆ ಏಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಜಯಾ ಬಚ್ಚನ್ ಹೇಳಿದರು.

  Published by:Precilla Olivia Dias
  First published: