ಇತ್ತೀಚೆಗೆ ಕೆಲವು ರಿಯಾಲಿಟಿ ಶೋಗಳಲ್ಲಿ (Reality Show), ವೆಬ್ ಸಿರೀಸ್ ಗಳಲ್ಲಿ (Web series) ಮತ್ತು ಕಾಮಿಡಿ ಶೋಗಳಲ್ಲಿ (Comedy Show) ಕೆಲವು ಚಿತ್ರರಂಗದ ನಟ ಮತ್ತು ನಟಿಯರ ಹೆಸರುಗಳನ್ನು ಬಳಸಿಕೊಂಡು ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಕೆಲವು ಮಾತುಗಳನ್ನು ಕಾಮಿಡಿ ಮಾಡುತ್ತಿದ್ದಾರೆ. ತಮಾಷೆ ಇತಿ-ಮಿತಿಯಲ್ಲಿದ್ದರೆ ಒಳ್ಳೆಯದು ಅನ್ನೋ ವಿಷಯವನ್ನು ಕೆಲವು ಬಾರಿ ಈ ಶೋ ಗಳು ಮರೆತು ಬಿಡುತ್ತಿವೆ.
ಆದ್ದರಿಂದಲೇ ಕೆಲವು ನಟ-ನಟಿಯರು ಈ ರೀತಿಯ ಶೋ ಗಳಿಗೆ ಹೋಗುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಯಾವುದೋ ಒಂದು ಕೆಲಸದ ನೆಪ ಹೇಳಿಕೊಂಡು ಇಂತಹ ಶೋಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.
ಮಾಧುರಿ ಮತ್ತು ಐಶ್ವರ್ಯಾ ಬಗ್ಗೆ ಕಾಮೆಂಟ್ ಮಾಡಿದ್ದು ಇದೇ ವೆಬ್ ಸೀರಿಸ್ನಲ್ಲಿ
ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ‘ದಿ ಬಿಗ್ ಬ್ಯಾಂಗ್ ಥಿಯರಿ’ ವೆಬ್ ಸೀರಿಸ್ ನಲ್ಲಿ ಬಾಲಿವುಡ್ ನಟಿಯರಿಬ್ಬರನ್ನು ಹೋಲಿಕೆ ಮಾಡಿ ಅವರಿಬ್ಬರ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಈಗ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಅವರು ನಟಿ ಮಾಧುರಿ ದೀಕ್ಷಿತ್ ವಿರುದ್ಧ ಅವಹೇಳನಕಾರಿ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಈ ವೆಬ್ ಸೀರಿಸ್ ನ ಒಂದು ಎಪಿಸೋಡ್ ನಲ್ಲಿ ನಟ ಕುನಾಲ್ ನಯ್ಯರ್ ಮಾಧುರಿ ದೀಕ್ಷಿತ್ ಅವರನ್ನು ನಟಿ ಐಶ್ವರ್ಯಾ ರೈ ಬಚ್ಚನ್ ಗೆ ಹೋಲಿಸಿದ್ದಾರೆ. ಈ ಸಂಚಿಕೆಯನ್ನು ಮೊದಲು 2008 ರಲ್ಲಿ ಪ್ರಸಾರ ಮಾಡಲಾಯಿತು.
ಅವಹೇಳನಕಾರಿ ಹೇಳಿಕೆಗೆ ನಟಿ ಜಯಾ ಬಚ್ಚನ್ ಹೇಳಿದ್ದೇನು ಗೊತ್ತೇ?
ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಟಿ, ಸಂಸದೆ ಜಯಾ ಬಚ್ಚನ್ ಸಹ ಖಡಕ್ ಆಗಿ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ನಟಿ ಜಯಾ ಬಚ್ಚನ್ ಅವರು ಕುನಾಲ್ ನಯ್ಯರ್ ನನ್ನು "ಹುಚ್ಚ" ಮತ್ತು ಅವರು "ಕೆಟ್ಟ ಮಾತುಗಳನ್ನು ಆಡುತ್ತಾರೆ” ಅಂತ ಹೇಳಿದ್ದಾರೆ.
ಅಷ್ಟೇ ಅಲ್ಲದೆ “ಈ ನಟನನ್ನು ಮೆಂಟಲ್ ಆಸ್ಪತ್ರೆಗೆ ಕಳುಹಿಸುವ ಅಗತ್ಯವಿದೆ. ಅವರ ಕಮೆಂಟ್ ಬಗ್ಗೆ ಅವರ ಕುಟುಂಬದವರನ್ನು ಕೇಳಬೇಕು” ಎಂದು ಜಯಾ ಹೇಳಿದ್ದಾರೆ.
ಇದನ್ನೂ ಓದಿ: Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ
ವಿವಾದದಲ್ಲಿ ಸಿಲುಕಿರುವ ‘ದಿ ಬಿಗ್ ಬ್ಯಾಂಗ್ ಥಿಯರಿ’ ಯ ಎಪಿಸೋಡ್ ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಮಾಧುರಿ ದೀಕ್ಷಿತ್ ಗೆ ಹೋಲಿಸಿದ್ದಾರೆ. "ಬಡವನ ಮಾಧುರಿ ದೀಕ್ಷಿತ್" ಎಂದು ಹೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಕುನಾಲ್ ನಯ್ಯರ್ "ಐಶ್ವರ್ಯಾ ರೈ ಒಬ್ಬ ದೇವತೆ ಆದರೆ ಮಾಧುರಿ ದೀಕ್ಷಿತ್ ಕುಷ್ಠರೋಗಿ ವೇಶ್ಯೆ" ಎಂದು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಿಥುನ್ ವಿಜಯ್ ಕುಮಾರ್ ಕಳುಹಿಸಿದ ಲೀಗಲ್ ನೋಟಿಸ್ ನಲ್ಲಿ ಏನಂತ ಬರೆದಿದ್ರು?
ಮಿಥುನ್ ವಿಜಯ್ ಕುಮಾರ್ ಅವರು ಕಳುಹಿಸಿದ ಲೀಗಲ್ ನೋಟಿಸ್ ನಲ್ಲಿ ಈ ವೆಬ್ ಸೀರಿಸ್ ನ ಸೀಸನ್ 2 ರ ಮೊದಲ ಎಪಿಸೋಡ್ ಅನ್ನು ತೆಗೆದು ಹಾಕುವಂತೆ ಸ್ಟ್ರೀಮಿಂಗ್ ಅವರನ್ನು ಕೇಳಿದ್ದಾರೆ.
ಜಯಾ ಮಾತ್ರವಲ್ಲದೆ, ನಟಿ ದಿಯಾ ಮಿರ್ಜಾ ಮತ್ತು ನಟಿ ಮತ್ತು ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕೂಡ ಈ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದು ಅಗೌರವ ಮತ್ತು ಅಸಹ್ಯಕರವಾದ ಹೇಳಿಕೆ" ಅಂತ ದಿಯಾ ಮಿರ್ಜಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ