Defamation Case: ಬಂಧನದ ಭೀತಿಯಲ್ಲಿ ಬಾಲಿವುಡ್ ​ನಟಿ Kangana Ranaut

ಜಾವೇದ್​ ಅಖ್ತರ್ ಅವರು ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ಮೊಕದ್ದಮೆ ದಾಖಲಿಸಿದ್ದರು.​ ಈ ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದ ಕಂಗನಾ ರನೌತ್​ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ.

ಜಾವೇದ್​ ಅಖ್ತರ್ ಹಾಗೂ ಕಂಗನಾ ರನೌತ್​

ಜಾವೇದ್​ ಅಖ್ತರ್ ಹಾಗೂ ಕಂಗನಾ ರನೌತ್​

  • Share this:
ಸದಾ ಒಂದಿಲ್ಲೊಂದ ಹೇಳಿಕೆ ಕೊಟ್ಟು ವಿವಾದಕ್ಕೀಡಾಗುವ ನಟಿ ಕಂಗನಾ ರನೌತ್​. ಈ ಹಿಂದೆ ಅವರು ಕೊಟ್ಟಿದ್ದ ಹೇಳಿಕೆಯಿಂದಾಗಿಯೇ ಅವರ ವಿರುದ್ಧ ಮಾನಹಾನಿ ಪ್ರಕರಣವೊಂದು ದಾಖಲಾಗಿದೆ. ಬಾಲಿವುಡ್​ ನಟಿ ಕಂಗನಾ ರನೌತ್ (Kangana Ranaut) ಅವರ ವಿರುದ್ಧ ಚಿತ್ರ ಸಾಹಿತಿ ಜಾವೇದ್ ಅಖ್ತರ್ (Javed Akhtar) ಅವರು ಮಾನಹಾನಿ ಪ್ರಕರಣ (Defamation Case) ದಾಖಲಿಸಿದ್ದು ಹಳೇ ಸುದ್ದಿ. ಈ ಪ್ರಕರಣದ ವಿಚಾರಣೆ ಇಂದು ಇತ್ತು. ಅದಕ್ಕಾಗಿಯೇ ಸೆಲೆಬ್ರಿಟಿ ಪತ್ನಿ ಶಬಾನಾ ಆಜ್ಮಿ ಅವರ ಜೊತೆ ಜಾವೇದ್ ಅಖ್ತರ್ ಅವರು ನ್ಯಾಯಾಲಯಕ್ಕೆ ಬಂದಿದ್ದರು. ಆದರೆ ನಟಿ ಕಂಗನಾ ರನೌತ್​ ಮಾತ್ರ ಗೈರಾಗಿದ್ದರು. ಕಂಗನಾ ರನೌತ್ ಅವರ ವಕೀಲರಾದ ರಿಜ್ವಾನ್ ಸಿದ್ಧಿಕಿ ಅವರು ನ್ಯಾಯಾಲಯದಲ್ಲಿ ನಟಿ ಕಂಗನಾ ಅವರು ಇಂದು ಗೈರಾಗಲು ಏನು ಕಾರಣ ಎಂದು ತಿಳಿಸಿದ್ದಾರೆ.

ಜಾವೇದ್​ ಅಖ್ತರ್ ಅವರು ಕಂಗನಾ ವಿರುದ್ಧ ಮಾನಹಾನಿ ಪ್ರಕರಣ ಮೊಕದ್ದಮೆ ದಾಖಲಿಸಿದ್ದರು.​ ಈ ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗದ ಕಂಗನಾ ರನೌತ್​ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ.

The Kapil Sharma Show, Kangana Ranaut, Thalaivii, Kapil Sharma, Kangana Ranaut entering politics, Thalaivii, Thalaivii movie, Kangana Ranaut, Thalaivii release date, ಕಂಗನಾ ರಾಜಕೀಯ ಪ್ರವೇಶ, ತಲೈವಿ ಸಿನಿಮಾ, ಜಯಲಲಿತಾ ಪಾತ್ರದಲ್ಲಿ ನಟಿಸಿದ ನಂತರ ರಾಜಕೀಯ ಪ್ರವೇಶದ ಬಗ್ಗೆ ಬಾಯ್ಬಿಟ್ಟ ಕಂಗನಾ ರನೋತ್​, ಅರವಿಂದ್ ಸ್ವಾಮಿ, ತಲೈವಿ ಸಿನಿಮಾ ರಿಲೀಸ್​, Thalaivii songs, Thalaivii trailer, Thalaivii teaser, Thalaivii MGR, Thalaivii Arvind Swamy, Thalaivi, Kangana Ranaut says Daily 200 FIRs Were Lodged When She was on Twitter ae
ನಟಿ ಕಂಗನಾ ರನೌತ್​


ಕಂಗನಾ ರನೌತ್ ಅವರಿಗೆ ಆರೋಗ್ಯ ಸರಿಯಾಗಿಲ್ಲ. ಹೀಗಾಗಿಯೇ ಅವರು ಇವತ್ತು ನ್ಯಾಯಾಲಯದ ಮುಂದೆ ಹಾಜರಾಗಲು ಆಗಲಿಲ್ಲ ಎಂದು ವಕೀಲರು ಕಾರಣ ನೀಡಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕ ನೀಡುವಂತೆ ಮನವಿ ಮಾಡಿದರು. ವಕೀಲರ ಮನವಿಯಂತೆ ನ್ಯಾಯಾಲಯ ಸೆ. 20ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ. ಮುಂದಿನ ವಿಚಾರಣೆ ವೇಳೆ ಕಂಗನಾ ನ್ಯಾಯಾಲಯದ ಮುಂದೆ ಹಾಜರಾಗದೇ ಹೋದಲ್ಲಿ ಅವರನ್ನು ಬಂಧಿಸಲು ವಾರೆಂಟ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಂಗನಾ ಪರ ವಕೀಲರು ನ್ಯಾಯಾಲಯಕ್ಕೆ ನಟಿಯ ಮೆಡಿಕಲ್ ರಿಪೋರ್ಟ್ ನೀಡುವ ಮೂಲಕ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕುರಿತಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಎದುರಾಳಿ ವಕೀಲರಾದ ಜಯಕುಮಾರ್ ಭಾರದ್ವಾಜ್ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಅಲ್ಲದೆ ಈ ಪ್ರಕರಣ ವಿನಾ ಕಾರಣ ತಡವಾ​ಗುವಂತೆ ಮಾಡಲಾಗುತ್ತಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಇನ್​ಸ್ಟಾಗ್ರಾಂನಿಂದ ಸಹೋದರಿ ರಂಗೋಲಿಯನ್ನು ಅನ್‌ಫಾಲೋ ಮಾಡುತ್ತೇನೆಂದ Kangana Ranaut..!

ಕಂಗನಾ ರನೌತ್​ ಅವರು ಕೊರೋನಾ ಟೆಸ್ಟ್​ ಮಾಡಿಸಬೇಕಾಗಿದೆ. ಅವರು ಈ ಪರೀಕ್ಷೆ ಮಾಡಿಸದೆಯೇ ನ್ಯಾಯಾಲಯದ ಎದುರು ವಿಚಾರಣೇಗೆ ಹಾಜರಾದರೆ, ಅವರಿಗೆ ಪಾಸಿಟಿವ್ ಇದ್ದರೆ ಏನಾಗಬಹದು ಎಂದು ಕಂಗನಾ ಪರ ವಕೀಲರು ನ್ಯಾಯಾಲಯದ ಎದುರು ಹೇಳಿದ್ದಾರೆ. ಕೊರೋನಾ ಲಸಿಕೆಯ ಎರಡೂ ಡೋಸ್​ ಪಡೆದವರಿಗೂ ಮತ್ತೆ ಕೊರೋನಾ ಸೋಂಕಾಗುತ್ತಿದೆ. ಈ ಕಾರಣದಿಂದಾಗಿ ನಟಿಗೆ ಕೊರೋನಾ ಪರೀಕ್ಷೆ ಮಾಡಿಸುವ ಅಗತ್ಯವಿದೆ ಎಂದಿದ್ದಾರೆ.

ಇನ್ನು ಜಾವೇದ್ ಅಖ್ತರ್ ಅವರ ಪರ ವಕೀಲರು ತಮ್ಮ ವಾದ ಮಂಡಿಸಿದ್ದು, ಎಷ್ಟು ನೋಟಿಸ್​ ಕೊಟ್ಟರೂ ಕಂಗನಾ ಅವರು ನ್ಯಾಯಾಲಯದ ಎದುರು ಬಂದಿಲ್ಲ. ಅವರು ವಿಚಾರಣೆಯನ್ನು ನಿಧಾನ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

ಅಷ್ಟಕ್ಕೂ ಕಂಗನಾ ನೀಡಿದ್ದ ಹೇಳಿಕೆ ಏನು ಗೊತ್ತಾ..? 

ಹೃತಿಕ್​ ರೋಷನ್​ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೂ ಬಾಯಿಬಿಡದಂತೆ ಮೌನವಹಿಸಬೇಕೆಂದು ಜಾವೇದ್ ಅಖ್ತರ್​ ಒತ್ತಡವೇರಿದ್ದರು ಎಂದು ಕಂಗನಾ ಸಂದರ್ಶನದಲ್ಲಿ ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ಗೀತ ರಚನೆಕಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಂಗನಾ ಹಾಗೂ ಹೃತಿಕ್ ರೋಷನ್​ ಅವರ ನಡುವಿನ ಲವ್ ಅಫೇರ್ ಕುರಿತಾಗಿ ಈ ಹಿಂದೆ ಸಾಕಷ್ಟು ಸುದ್ದಿ ಹರಿದಾಡಿತ್ತು. ನಂತರ ಕಂಗನಾ ತಮ್ಮ ಹಾಗೂ ನೃತಿಕ್ ನಡುವಿನ ಪ್ರೀತಿಯ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು.
Published by:Anitha E
First published: