HOME » NEWS » Entertainment » JASPRIT BUMRAH WEDDING SOUTH ACTRESS OR SPORTS PRESENTER ZP

Jasprit Bumrah: ಕನ್ನಡ ಚಿತ್ರನಟಿಯನ್ನು ವರಿಸಲಿದ್ದಾರಾ ಜಸ್​​ಪ್ರೀತ್ ಬುಮ್ರಾ?

ಕಳೆದ ಕೆಲ ದಿನಗಳಿಂದ ನಟಿ-ನಿರೂಪಕಿ ಹೆಸರುಗಳೊಂದಿಗೆ ಟೀಮ್ ಇಂಡಿಯಾ ವೇಗಿಯ ಹೆಸರು ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಾದ ಬುಮ್ರಾ ಮಾತ್ರ ಮದುವೆ ಬ್ಯುಸಿಯಲ್ಲಿದ್ದಾರೆ.

news18-kannada
Updated:March 7, 2021, 10:17 PM IST
Jasprit Bumrah: ಕನ್ನಡ ಚಿತ್ರನಟಿಯನ್ನು ವರಿಸಲಿದ್ದಾರಾ ಜಸ್​​ಪ್ರೀತ್ ಬುಮ್ರಾ?
Jasprit Bumrah
  • Share this:
ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು ಟಿ20 ಹಾಗೂ ಏಕದಿನ ಪಂದ್ಯಗಳಿಂದಲೂ ಹೊರುಗಳಿಯುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬುಮ್ರಾ ಎರಡು ಸರಣಿಗಳಿಂದ ಯಾಕಾಗಿ ಹೊರುಗುಳಿಯುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಹೌದು, ಯಾರ್ಕರ್ ಕಿಂಗ್ ಶೀಘ್ರದಲ್ಲೇ ಹಸಮಣೆ ಏರಲಿದ್ದಾರೆ. ಇದೇ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದಾರೆ.

ವಿವಾಹದ ಸುದ್ದಿ ಬೆನ್ನಲ್ಲೇ ಬುಮ್ರಾ ಅವರ ಮನಗೆದ್ದ ಸುಂದರಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಸದ್ಯ ಸ್ಪಷ್ಟ ಉತ್ತರವಂತು ಸಿಗುತ್ತಿಲ್ಲ. ಏಕೆಂದರೆ ವಧು ಯಾರು ಎಂಬ ಮಾಹಿತಿಯನ್ನು ಬುಮ್ರಾ ಆಗಲಿ, ಅವರ ಕುಟುಂಬದವರಾಗಲಿ ಹೊರ ಬಿಡುತ್ತಿಲ್ಲ.

ಇತ್ತ ಈ ಹಿಂದೆ ಜಸ್ಪ್ರೀತ್ ಬೂಮ್ರಾ ಜೊತೆಗೆ ಕೇಳಿ ಬಂದ ಕೆಲ ಹೆಸರುಗಳು ಕೂಡ ಇದೀಗ ಮುನ್ನಲೆಗೆ ಬರುತ್ತಿದೆ. ಅದರಲ್ಲಿ ದಕ್ಷಿಣ ಭಾರತದ ನಟಿಯ ಹೆಸರು ಹಾಗೂ ಟಿವಿ ನಿರೂಪಕಿಯೊಬ್ಬರ ಹೆಸರು ಮುಂಚೂಣಿಯಲ್ಲಿದೆ.

ಈ ಹಿಂದೆ ದಕ್ಷಿಣ ಭಾರತದ ನಟಿ ಅನುಪಮ ಪರಮೇಶ್ವರನ್ ಹೆಸರು ಬುಮ್ರಾ ಜೊತೆಗೆ ಜೋರಾಗಿ ಕೇಳಿ ಬಂದಿತ್ತು. ಕನ್ನಡದ ನಟಸಾರ್ವಭೌವ ಚಿತ್ರದಲ್ಲಿ ನಟಿಸಿದ್ದ ಅನುಪಮ ಜೊತೆ ಬುಮ್ರಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೇ ಅನುಪಮ ಕೂಡ ಗುಜರಾತ್​ನತ್ತ ಪ್ರಯಾಣ ಬೆಳೆಸಿದ್ದಾರೆ.

ಬುಮ್ರಾ ಅವರ ತವರೂರು ಕೂಡ ಗುಜರಾತ್ ಆಗಿರುವುದರಿಂದ ವಧು ಅನುಪಮ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಬುಮ್ರಾ ದಕ್ಷಿಣ ಭಾರತದ ನಟಿಯನ್ನೇ ವರಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಬುಮ್ರಾ ಅವರ ಆಪ್ತರಲ್ಲೇ ಗುರುತಿಸಿಕೊಂಡಿದ್ದ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಹೆಸರು ಕೂಡ ಚರ್ಚೆಯಲ್ಲಿದೆ. ಕೆಲ ವರದಿಗಳು ಬುಮ್ರಾ ಅವರು ಸ್ಪೋಟ್ಸ್​ ಆ್ಯಂಕರ್​ನ್ನು ಮದುವೆಯಾಗಲಿದ್ದಾರೆ ಎಂದು ತಿಳಿಸಿದೆ.

ಐಪಿಎಲ್​, ಐಸಿಸಿ ವಿಶ್ವಕಪ್​ ಟೂರ್ನಿಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವ ದಕ್ಷಿಣ ಭಾರತದ ಸಂಜನಾ ಗಣೇಶನ್ ಅವರನ್ನು ಟೀಮ್ ಇಂಡಿಯಾ ವೇಗಿ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸ್ಟಾರ್ ಸ್ಪೋಟ್ಸ್​ ನಿರೂಪಕಿಯಾಗಿರುವ ಸಂಜನಾ ಈ ಬಗ್ಗೆ ಯಾವುದೇ ಕ್ಲಾರಿಟಿ ನೀಡಿಲ್ಲ. ಹೀಗಾಗಿ ಬುಮ್ರಾ ಅವರ ಭಾವಿ ಪತ್ನಿ ಸಂಜನಾ ಎಂಬ ಪೋಸ್ಟ್​ಗಳು ಹರಿದಾಡುತ್ತಿದೆ.

ಒಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ನಟಿ-ನಿರೂಪಕಿ ಹೆಸರುಗಳೊಂದಿಗೆ ಟೀಮ್ ಇಂಡಿಯಾ ವೇಗಿಯ ಹೆಸರು ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಾದ ಬುಮ್ರಾ ಮಾತ್ರ ಮದುವೆ ಬ್ಯುಸಿಯಲ್ಲಿದ್ದಾರೆ. ಹೀಗಾಗಿ ಯಾರ್ಕರ್​ ಕಿಂಗ್​ನ ಹೃದಯ ಕದ್ದ ಚೋರಿ ಯಾರೆಂದು ತಿಳಿಯಲು ಇನ್ನೂ ಕೆಲ ದಿನಗಳ ಕಾಲ ಕಾಯಬೇಕಿದೆ.
Published by: zahir
First published: March 7, 2021, 10:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories