Yash: ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ, ಜಪಾನ್​ ನಲ್ಲೂ KGF 2 ಗುಣಗಾನ

ಕೆಜಿಎಫ್ 2 ಚಿತ್ರ ಬಿಡುಗಡೆ ಆಗಿ ತಿಂಗಳುಗಳೇ ಕಳೆದಿದೆ. ಆದರೂ ಇನ್ನೂ ಅದರ ಅಬ್ಬರ ಮಾತ್ರ ನಿಂತಂತೆ ಕಾಣುತ್ತಿಲ್ಲ. ಏಕೆಂದರೆ ಇದೀಗ ಜಪಾನ್​ನ ಪತ್ರಿಕೆಯೊಂದು ಸಂಪೂರ್ಣ ಪುಟವೊಂದರಲ್ಲಿ ಕೆಜಿಎಫ್ 2 ಚಿತ್ರದ ಬಗ್ಗೆ ಬರೆದಿದೆ.

ಕೆಜಿಏಫ್ 2

ಕೆಜಿಏಫ್ 2

  • Share this:
ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ 2 (KGF 2) ನಂತರ ಯಾವ ಸಿನಿಮಾ ಮಾಡ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಅವರ ಯಾವುದೇ ಚಿತ್ರದ ಅನೌನ್ಸ್​ ಆಗಿಲ್ಲ. ಅಭಿಮಾನಿಗಳಂತೂ (Fans) ಯಾವಾಗ ರಾಕಿಭಾಯ್ (Rocky Bhai) ಹೊಸ ಸಿನಿಮಾದ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.  ಇದರ ನಡುವೆ ಜಪಾನ್​ನಲ್ಲಿ ಇನ್ನೂ ಕೆಜಿಎಫ್ 2 ಚಿತ್ರದ ಅಬ್ಬರ ಕಡಿಮೆ ಆದಂತೆ ಕಾಣುತ್ತಿಲ್ಲ. ಹೌದು, ಕೆಜಿಎಫ್ 2 ಚಿತ್ರದ ಮೂಲಕ ಪ್ರಪಂಚವೇ ಒಮ್ಮೆ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಯಶ್​ ಮತ್ತು ಪ್ರಶಾಂತ್​ ನೀಲ್​ (Prashnath Neel) ಕನ್ನಡದವರ ತಾಕತ್ತು ಏನೆಂದು ತೋರಿಸಿದ್ದಾರೆ. ಇದೀಗ ಜಪಾನ್​ನ ಪತ್ರಿಕೆಯೊಂದು ಕೆಜಿಎಫ್ 2 ಮತ್ತು ಆರ್​ಆರ್​ಆರ್​ ಚಿತ್ರದ ಕುರಿತು ಗುಣಗಾನ ಮಾಡಿದೆ.

ಜಪಾನ್​ ಪತ್ರಿಕೆಯಲ್ಲಿ ಕೆಜಿಎಫ್ 2 ಗುಣಗಾನ:

ಹೌದು, ಕೆಜಿಎಫ್ 2 ಚಿತ್ರ ಎಲ್ಲಾ ಗಡಿಗಳನ್ನೂ ಮೀರಿ ಪ್ರಪಂಚವೇ ತಿರುಗಿ ಮಾತನಾಡುವಂತೆ ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ. ಈ ಸಿನಿಮಾ ಮೂಲಕ ನಟ ರಾಕಿಂಗ್ ಸ್ಟಾರ್​ ಯಶ್​ ನ್ಯಾಷನಲ್ ಸ್ಟಾರ್​ ಆಗಿ ಮಿಂಚಿದರು. ಚಿತ್ರ ಬಿಡುಗಡೆ ಆಗಿ ತಿಂಗಳುಗಳೇ ಕಳೆದಿದೆ. ಆದರೂ ಇನ್ನೂ ಅದರ ಅಬ್ಬರ ಮಾತ್ರ ನಿಂತಂತೆ ಕಾಣುತ್ತಿಲ್ಲ. ಏಕೆಂದರೆ ಇದೀಗ ಜಪಾನ್​ನ ಪತ್ರಿಕೆಯೊಂದು ಸಂಪೂರ್ಣ ಪುಟವೊಂದರಲ್ಲಿ ಕೆಜಿಎಫ್ 2 ಚಿತ್ರದ ಬಗ್ಗೆ ಬರೆದಿದೆ. ಈ ಅದರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಜಪಾನ್ ಪತ್ರಿಕೆಯಲ್ಲಿ ಕೆಜಿಎಫ್ 2 ಕುರಿತ ಬರಹ


ಜಪಾನಿನ ಬುನ್‌ಶುನ್ ಎನ್ನುವ ಪತ್ರಿಕೆ 'ಕೆಜಿಎಫ್ 2' ಸಕ್ಸಸ್ ಜರ್ನಿಯನ್ನು ವರ್ಣಿಸಿದ್ದು, ಈ ಚಿತ್ರವು ಭಾರತದಲ್ಲಿ ಕೊರೋನಾ ನಂತರ ಅತೀ ಹೆಚ್ಚು ಗಳಿಕೆ ಂಆಡಿದ ಸಿನಿಮಾವಾಗಿದೆ ಎಂದು ವರ್ಣಿಸಿದೆ, ಇದನ್ನು ನೋಡಿದ ಯಶ್​ ಅಭಿಮಾನಿಗಳು ಸಖತ್ ಖುಷಿ ಆಗಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಯಶ್​ ಅವರ ಮುಂದಿನ ಸಿನಿಮಾ ಯಾವುದು ಎಂದು ಅವರ ಅಭಿಮಾನಿಗಳ ಜೊತೆ ಭಾರತೀಯ ಚಿತ್ರರಂಗವೇ ಕಾದು ಕುಳಿತಿದೆ. ಆದರೆ ಈವರೆಗೂ YASH19 ಕುರಿತ ಯಾವೊಂದು ಮಾಹಿತಿಯೂ ಲಭ್ಯವಾಗಿಲ್ಲ.

ಇದನ್ನೂ ಓದಿ: YASH: ಹರ್ ಘರ್ ತಿರಂಗಾ ಎಂದ ರಾಕಿ ಭಾಯ್​, ಪ್ರಧಾನಿ ಮೋದಿ ಅಭಿಯಾನಕ್ಕೆ ಯಶ್​ ಸಾಥ್​

RRR  ಚಿತ್ರದ ಕುರಿತು ಬರಹ ಪ್ರಕಟ:

ಹೌದು, ಕೆಜಿಎಫ್ 2 ಚಿತ್ರಕ್ಕೂ ಮುಂಚೆ ಬಿಡುಗಡೆ ಆಗಿದ್ದ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ RRR ಕುರಿತೂ ಸಹ ಪತ್ರಿಕೆಯಲ್ಲಿ ಬರೆಯಲಾಗಿದೆ. ಜೂ. ಎನ್‌ಟಿಆರ್, ರಾಮ್‌ ಚರಣ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'RRR' ಕೂಡ ಬಾಕ್ಸಾಪೀಸ್‌ನಲ್ಲಿ 1150 ಕೋಟಿ ಕಲೆ ಹಾಕಿತ್ತು. ಈ ಕುರಿತೇ ಇದೀಗ ಜಪಾನ್ ಪತ್ರಿಕೆ ಈ ಎರಡೂ ಸಿನಿಮಾಗಳ ಕಲೆಕ್ಷನ್ ಮತ್ತು ಮೇಕಿಂಗ್ ಬಗ್ಗೆ ಗುಣಗಾನ ಮಾಡಿ ಬರೆದಿದೆ.

ಇದನ್ನೂ ಓದಿ:  ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್​, KGF 2 ಎದುರು ಬರದೇ ಬದುಕಿದೆವು ಎಂದ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್!

ತಿರಂಗ ನಮ್ಮೆಲ್ಲರ ಹೆಮ್ಮೆ ಎಂದ ರಾಕಿ ಭಾಯ್​:

ಹೌದು, ಈಗಾಗಲೇ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಅಭಿಯಾನಕ್ಕೆ ಯಶ್​ ಸಹ ಸಾಥ್ ನೀಡಿದ್ದಾರೆ. ಈ ಕುರಿತು ನ್ಯಾಷನಲ್ ಸ್ಟಾರ್​ ಯಶ್​ ಸಹ ಟ್ವೀಟ್​ ಮಾಡಿದ್ದು, ‘ನಮ್ಮ ವೈವಿಧ್ಯತೆಯಲ್ಲಿ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವಾದ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ವೇಳೆ ನಮ್ಮ ರಾಷ್ಟ್ರದ ಗುರುತಾದ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ. ಆಗಸ್ಟ್ 13-15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸೋಣ‘ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಶ್​ ತಮ್ಮ ಅಭಿಮಾನಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮನವಿ ಮಾಡಿದ್ದಾರೆ.
Published by:shrikrishna bhat
First published: