ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳಿಗೆ ನಾಳೆ ಅತಿ ದೊಡ್ಡ ಹಬ್ಬ. ಕಳೆದ 13 ವರ್ಷದಿಂದಲೂ ಆಗದೇ ಇರೋ ಒಂದು ಸ್ಮಾರಕ ಈಗ ಆಗಿದೆ. ಅದರ ಉದ್ಘಾಟನೆಯನ್ನ ಸ್ವತಃ ಸರ್ಕಾರ ಮಾಡುತ್ತಿದೆ. ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan Fans) ಅಭಿಮಾನಿಗಳು ಈ ಸ್ಮಾರಕ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕು ಅಂತಲೇ ಬಯಸಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಆದರೂ ಅಭಿಮಾನಿಗಳ ಸಹನೆಯನ್ನ ಮೆಚ್ಚಲೇಬೇಕು. ವಿಷ್ಣುವರ್ಧನ್ (Vishnuvardhan Smaraka) ಅವರ ಸಹನೆಯಂತೆ ಅಭಿಮಾನಿಗಳು ಸಹನೆಯಿಂದ ಇದ್ದರು. ಅದರ ಫಲವೋ ಏನೋ, ಕೊನೆಗೂ ಮೈಸೂರಿನಲ್ಲಿ (Mysore) ವಿಷ್ಣುವರ್ಧನ್ ಸ್ಮಾರಕ ಆಗಿದೆ. ಅದು 29 ರಂದು ಉದ್ಧಾಟನೆ ಕೂಡ ಆಗಲಿದೆ. ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದಾರೆ. ಅದರ ಬಗೆಗಿನ ಇತರ ಮಾಹಿತಿ ಇಲ್ಲಿದೆ ಓದಿ.
ಮೈಸೂರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಹಬ್ಬ
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಆಗದೇ ಇರೋ ಸ್ಮಾರಕ ಮೈಸೂರಲ್ಲಿ ಆಗಿದೆ ಅನ್ನೋದೇ ಅವರ ಖುಷಿಗೆ ಕಾರಣ ಅಂತಲೇ ಹೇಳಬಹುದು.
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಸಂಭ್ರಮ
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಆಗಬೇಕು ಅನ್ನೋದೇ ಅಭಿಮಾನಿಗಳ ಒತ್ತಾಸೆ ಆಗಿತ್ತು. ಆದರೆ ಅದು ಆಗಲೇ ಇಲ್ಲ. ಕಳೆದ 13 ವರ್ಷಗಳಿಂದಲೂ ಇದು ಕನಸಾಗಿಯೇ ಉಳಿದಿತ್ತು. ಆದರೆ ಮೈಸೂರಿನಲ್ಲಿ ಈಗ ವಿಷ್ಣು ಸ್ಮಾರಕ ನಿರ್ಮಾಣ ಆಗಿದೆ. ಜನವರಿ-29ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣು ಕಟೌಟ್!
ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಅಭಿಮಾನಿಗಳು ನಾಳೆ ಜನವರಿ-29 ರಂದು ದೊಡ್ಡ ಜಾತ್ರೆ ಮಾಡುತ್ತಿದ್ದಾರೆ. ವಿಷ್ಣುಸೇನಾ ಸಮಿತಿಯಿಂದ ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ.
ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳ ಸಡಗರ-ಸಂಭ್ರಮ
ಬೆಂಗಳೂರು-ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ಗಳು ರಾರಾಜಿಸುತ್ತಿವೆ. ಜನವರಿ-29 ರಂದು ಬೆಳಗ್ಗೆ 6 ಗಂಟೆಯಿಂದಲೇ ವಿಷ್ಣು ಅಭಿಮಾನಿಗಳ ಹಬ್ಬ ಶುರು ಆಗುತ್ತದೆ.
ಅಭಿಮಾನ್ ಸ್ಟುಡಿಯೋದಿಂದಲೇ ವಿಷ್ಣು ಫ್ಯಾನ್ಸ್ ಜಾತ್ರೆ
ಬೆಳಗ್ಗೆ 6.30ರ ಹೊತ್ತಿಗೆ ಅಭಿಮಾನ್ ಸ್ಟುಡಿಯೋದಿಂದ ವಿಷ್ಣು ಅಭಿಮಾನಿಗಳು ಮೈಸೂರಿನತ್ತ ಸಾಗುತ್ತಾರೆ. ಮೈಸೂರಿನಲ್ಲಿ ಜಮಾ ಆಗೋ ವಿಷ್ಣು ಎಲ್ಲ ಅಭಿಮಾನಿಗಳು ಮೈಸೂರಿನ ಕೋಟೆ ಆಂಜನೇಯ ಟೆಂಪಲ್ನಿಂದ ವಿಷ್ಣು ಸ್ಮಾರಕದವರೆಗೂ ಮೆರವಣಿಗೆ ಹೊರಡಲಿದ್ದಾರೆ.
ಬೆಂಗಳೂರಿನ ಗೋಡೆಗಳ ಮೇಲೆ ವಿಷ್ಣು ಸ್ಮಾರಕ ಪೋಸ್ಟರ್!
ವಿಷ್ಣುವರ್ಧನ್ ಅಭಿಮಾನಿಗಳು ದೊಡ್ಡಮಟ್ಟದ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ವಿಷ್ಣುವರ್ಧನ್ ಸ್ಮಾರಕದ ಪೋಸ್ಟರ್ಗಳನ್ನ ಕೂಡ ಹಚ್ಚಲಾಗಿದೆ. ವಿಷ್ಣುಸೇನಾ ಸಮಿತಿಯ ಸದಸ್ಯರು ಹತ್ತು ಹಲವು ಕಾರ್ಯಕ್ರಮಗಳನ್ನ ಕೂಡ ಹಮ್ಮಿಕೊಂಡಿದ್ದಾರೆ.
ವಿಷ್ಣು ಸ್ಮಾರಕ ಲೋಕಾರ್ಪಣೆ-ಜಾನಪದ ಮೇಳದ ಸಂಭ್ರಮ
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹಿನ್ನೆಲೆಯಲ್ಲಿ ವಾಹನ ಜಾಥಾ, ಕುಂಭ ಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಇನ್ನು ಹಲವು ಕಾರ್ಯಕ್ರಮಗಳನ್ನ ಕೂಡ ವಿಷ್ಣುಸೇನಾ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆ ಹೊತ್ತಿಗೆ ವಿಷ್ಣು ಸ್ಮಾರಕ ಲೋಕಾರ್ಪಣೆ
ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಾಳೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಲೋಕಾರ್ಪಣೆ ಆಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ.
ಸಾಹಸ ಸಿಂಹ ವಿಷ್ಣು ಸ್ಮಾರಕದಲ್ಲಿ ಏನೆಲ್ಲ ಇದೆ ಗೊತ್ತೇ?
ಸಾಹಸ ಸಿಂಹ ವಿಷ್ಣುವರ್ಧನ್ ಅವರ 8 ಅಡಿ ಸ್ಮಾರಕ ಕೂಡ ಸ್ಥಾಪನೆ ಆಗಿದೆ. ವಿಷ್ಣುವರ್ಧನ್ ಅವರ 600 ಫೋಟೋಗಳ ಗ್ಯಾಲರಿ ಕೂಡ ಇಲ್ಲಿದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಆಗಿವೆ.
ಇದನ್ನೂ ಓದಿ: Keerthy Krishna: ಶ್ರುತಿ ಮನೆ ಮಗಳು ಕೀರ್ತಿ ಕೃಷ್ಣ ಸ್ಯಾಂಡಲ್ವುಡ್ಗೆ ಎಂಟ್ರಿ!
ಆಡಿಟೋರಿಯಂ ಕೂಡ ಇಲ್ಲಿ ನಿರ್ಮಾಣ ಮಾಡಲಾಗಿದ್ದು, ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಸ್ಮಾರಕ ಲೋಕಾರ್ಪಣೆಯನ್ನ ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ