Janhvi Kapoor: ಹಳೇ ಹಾಡಿಗೆ ಸೊಂಟ ಬಳುಕಿಸಿದ ಜಾಹ್ನವಿ ಕಪೂರ್​: ಶ್ರೀದೇವಿ ಅಭಿಮಾನಿಗಳು ಫಿದಾ..!

Janhvi Kapoor: ಮಗಳು ಸಿನಿ ರಂಗದಲ್ಲಿ ಹೆಸರು ಮಾಡುವುನ್ನು ನೋಡುವ ಕನಸು ಕಂಡಿದ್ದ ಶ್ರೀದೇವಿ ಅದು ನನಸಾಗದೆಯೇ ವಿದಾಯ ಹೇಳಿದರು. ಆದರೆ ಅಮ್ಮನ ಕನಸನ್ನು ನನಸು ಮಾಡಲು ಜಾಹ್ನವಿ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.

Anitha E | news18-kannada
Updated:February 26, 2020, 10:16 AM IST
Janhvi Kapoor: ಹಳೇ ಹಾಡಿಗೆ ಸೊಂಟ ಬಳುಕಿಸಿದ ಜಾಹ್ನವಿ ಕಪೂರ್​: ಶ್ರೀದೇವಿ ಅಭಿಮಾನಿಗಳು ಫಿದಾ..!
ಜಾಹ್ನವಿ ಕಪೂರ್​
  • Share this:
ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್​ ಮಾಡಿದ್ದು ಒಂದೇ ಸಿನಿಮಾ ಆದರೂ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಕರಣ್​ ಜೋಹರ್ ನಿರ್ಮಾಣದ 'ಧಡಕ್​' ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿಕೊಟ್ಟವರು ಜಾಹ್ನವಿ.

ಮಗಳು ಸಿನಿ ರಂಗದಲ್ಲಿ ಹೆಸರು ಮಾಡುವುನ್ನು ನೋಡುವ ಕನಸು ಕಂಡಿದ್ದ ಶ್ರೀದೇವಿ ಅದು ನನಸಾಗದೆಯೇ ವಿದಾಯ ಹೇಳಿದರು. ಆದರೆ ಅಮ್ಮನ ಕನಸನ್ನು ನನಸು ಮಾಡಲು ಜಾಹ್ನವಿ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.

ಜಾಹ್ನವಿ ಕಪೂರ್​


ಸದ್ಯ ಜಾಹ್ನವಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದು ಅಭಿಮಾನಿಗಳ ಮನ ಗೆಲ್ಲುತ್ತಿದೆ. ಹೌದು, ಜಾಹ್ನವಿ 'ಪಿಯಾ ತೋಸೆ ...'ಅನ್ನೋ ಹಳೇ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.



 




View this post on Instagram




 

When u lose balance so u have to improv an over dramatic end 🕺🏼🎶🌈


A post shared by Janhvi Kapoor (@janhvikapoor) on






ಈ ವಿಡಿಯೋದಲ್ಲಿ ಜಾಹ್ನವಿ ಸಖತ್​ ಸ್ಟೆಪ್​ ಹಾಕಿದ್ದು, ಅದು ಅಮ್ಮ ಶ್ರೀದೇವಿ ಅವರನ್ನೇ ನೆನೆಪಿಸುವಂತಿದೆ. ಇದೇ ಕಾರಣಕ್ಕೆ ಇರಬೇಕು ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.

ಇದನ್ನೂ ಓದಿ: Jaggesh: ಕೊಟ್ಟ ಮಾತಿನಂತೆ ಅಂಧ ಗಾಯಕಿಯರಿಗೆ ಮನೆ ಕಟ್ಟಿಸಿದ ನವರಸ ನಾಯಕ ಜಗ್ಗೇಶ್​..!

ಸದ್ಯ ಜಾಹ್ನವಿ 'ತಕ್ತ್​', 'ಗುಂಜನ್​ ಸಕ್ಸೇನಾ',  'ರೂಹಿ  ಅಫ್ಜಾನಾ' ಹಾಗೂ 'ದೋಸ್ತಾನಾ 2' ಹಾಗೂ 'ಗೋಸ್ಟ್​ ಸ್ಟೋರೀಸ್​' ಎಂಬ ವೆಬ್​ ಸರಣಿಯಲ್ಲೂ ನಟಿಸುತ್ತಿದ್ದಾರೆ. 2020ರಲ್ಲಿ ಒಂದರ ಹಿಂದೆ ಒಂದರಂತೆ ಜಾಹ್ನವಿ ಅಭಿನಯದ ಸಿನಿಮಾಗಳು ಬಿಡುಗಡೆಯಾಗಲಿವೆ.

Chandan Shetty-Niveditha Wedding Photos: ನವಜೀವನಕ್ಕೆ ಕಾಲಿರಿಸಿದ ಚಂದನ್ ಶೆಟ್ಟಿ​-ಗೊಂಬೆ ನಿವೇದಿತಾ ಗೌಡ..!

First published: February 26, 2020, 10:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading