• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಪಾಪರಾಜಿಗಳ ಕಣ್ಣು ತಪ್ಪಿಸಲು ಕಾರಿನ ಬೂಟ್​ ಸ್ವೇಸ್​ನಲ್ಲಿ ಬಚ್ಚಿಟ್ಟುಕೊಳ್ಳುವ Janhvi Kapoor

ಪಾಪರಾಜಿಗಳ ಕಣ್ಣು ತಪ್ಪಿಸಲು ಕಾರಿನ ಬೂಟ್​ ಸ್ವೇಸ್​ನಲ್ಲಿ ಬಚ್ಚಿಟ್ಟುಕೊಳ್ಳುವ Janhvi Kapoor

ನಟಿ ಜಾಹ್ನವಿ ಕಪೂರ್​

ನಟಿ ಜಾಹ್ನವಿ ಕಪೂರ್​

ಜಾಹ್ನವಿ ಕಪೂರ್​ ಅವರು ಸದಾ ತಮ್ಮ ಕಾರಿನಲ್ಲಿ ಒಂದು ಬೆಡ್​ಶೀಟ್​ ಇಟ್ಟುಕೊಂಡಿರುತ್ತಾರಂತೆ. ಅವರು ಪಾಪರಾಜಿಗಳನ್ನು ನೋಡಿದಾಗ ಅದನ್ನು ಮೇಲೆ ಹಾಕಿಕೊಂಡು ಕಾರಿನ ಬೂಟ್​ ಸ್ಪೇಸ್​ನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರಂತೆ.

  • Share this:

ಬಾಲಿವುಡ್​ ನಟಿ  (Bollywood Actress) ಜಾಹ್ನವಿ ಕಪೂರ್ (Janhvi Kapoor) ಶೀಘ್ರದಲ್ಲೇ ಸ್ಟಾರ್​ ವರ್ಸಸ್​ ಫುಡ್​ನ (Star vs Food Season 2) ಮತ್ತೊಂದು ಸೀಸನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಎರಡನೇ ಸೀಸನ್​ನ ಮೊದಲ ಸಂಚಿಕೆಯಲ್ಲಿ ಜಾಹ್ನವಿ ಕಪೂರ್​ ಮಾಸ್ಟರ್​ ಶೆಫ್​ಗಳ ಮಾರ್ಗದರ್ಶನದಲ್ಲಿ ರುಚಿಕರ ಅಡುಗೆ ಮಾಡಲಿದ್ದಾರಂತೆ. ಇನ್ನು ಜಾಹ್ನವಿ ಕಪೂರ್ ಪಾಪರಾಜಿಗಳ (paparazzi) ಫೇವರಿಟ್​ ನಟಿ. ಅವರು ಜಿಮ್​ಗೆ ಹೋಗಲು, ಹೊರಗೆ ಲಂಚ್​, ಡಿನ್ನರ್​ ಅಂತ ಹೋದರೂ ಸಹ ಪಾಪರಾಜಿಗಳು ಅವರ ಹಿಂದೆಯೇ ಇರುತ್ತಾರೆ. ಹೀಗಿರುವಾಗಲೇ ಜಾಹ್ನವಿ ಕಪೂರ್​ ತಮ್ಮ ಜೀವನದಲ್ಲಾದ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಹೌದು, ಜಾಹ್ನವಿ  ಕಪೂರ್​ ಪಾಪರಾಜಿಗಳಿಂದ ಬಚಾವ್​ ಆಗಲು ಸಾಕಷ್ಟು ಸರ್ಕಸ್​ ಮಾಡಿದ್ದಾರಂತೆ. ಈ ಕುರಿತಾಗಿ ಈ ಸ್ಟಾರ್​ ವರ್ಸ್​ಸ್​ ಫುಡ್​ (Star vs Food) ಕಾರ್ಯಕ್ರಮದ ಚಿತ್ರೀಕರಣದ ವೇಳೆ ಹಂಚಿಕೊಂಡಿದ್ದಾರೆ.


ಜಾಹ್ನವಿ ಕಪೂರ್​ ಅವರು ಸದಾ ತಮ್ಮ ಕಾರಿನಲ್ಲಿ ಒಂದು ಬೆಡ್​ಶೀಟ್​ ಇಟ್ಟುಕೊಂಡಿರುತ್ತಾರಂತೆ. ಅವರು ಪಾಪರಾಜಿಗಳನ್ನು ನೋಡಿದಾಗ ಅದನ್ನು ಮೇಲೆ ಹಾಕಿಕೊಂಡು ಕಾರಿನ ಬೂಟ್​ ಸ್ಪೇಸ್​ನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರಂತೆ. ಈ ಬಗ್ಗೆ ಅವರು ಕುಕ್ಕಿಂಗ್​ ಶೋನಲ್ಲಿ ಹಂಚಿಕೊಂಡಿದ್ದಾರೆ. ನಾನು ಈ ರೀತಿ ತುಂಬಾ ಸಲ ಮಾಡಿದ್ದೇನೆ. ಎಷ್ಟು ಸಲ ಅನ್ನೋದು ಲೆಕ್ಕವೇ ಇಲ್ಲ ಎಂದಿದ್ದಾರೆ.


Arjun Kapoor, Arjun Kapoor pics, Arjun Kapoor photos, Arjun Kapoor latest photoshoot, Arjun Kapoor news, Janhvi Kapoor, Janhvi Kapoor latest photoshoot, Janhvi Kapoor latest pics, Janhvi Kapoor news, Janhvi Kapoor and Arjun Kapoor, Janhvi Kapoor and Arjun Kapoor pics, Janhvi Kapoor and Arjun Kapoor bond, Janhvi Kapoor and Arjun Kapoor relation, Janhvi Kapoor and Arjun Kapoor photoshoot, Janhvi Kapoor and Arjun Kapoor latest cover shoot, Janhvi Kapoor and Arjun Kapoor news, Janhvi Kapoor and Arjun Kapoor Instagram, ಅರ್ಜುನ್ ಕಪೂರ್​, ಜಾಹ್ನವಿ ಕಪೂರ್​, ಅಣ್ಣ ತಂಗಿಯ ಫೋಟೋಶೂಟ್​, Janhvi Kapoor photoshoot with Arjun Kapoor goes viral on social media ae
ನಟಿ ಜಾಹ್ನವಿ ಕಪೂರ್​


ಇನ್ನು ಜಾಹ್ನವಿ ಕಪೂರ್ ಅವರ ತರಬೇತುದಾರರಾದ ನಮ್ರತಾ ಸಹ ಈ ಕುರಿತಾಗಿ ಮಾತನಾಡಿದ್ದಾರೆ. ಜಾಹ್ನವಿ ಕಪೂರ್ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು ನನ್ನ ಸಹಾಯ ಸಹ ಕೇಳುತ್ತಾರೆ. ಪ್ಲೀಜ್​ ನಮೋ ನೀನು ನನಗೆ ಈಗ ಸಹಾಯ ಮಾಡಬೇಕು ಎಂದು ಕೇಳುವ ಜಾಹ್ನವಿ ಅವರಿಗೆ ನಮ್ರತಾ ಹೇಗೆ ಸಹಾಯ ಮಾಡುತ್ತಾರಂತೆ ಗೊತ್ತಾ.?


ಇದನ್ನೂ ಓದಿ: ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ


ಮೊದಲು ಜಾಹ್ನವಿ ಅವರ ಕಾರನ್ನು ಒಂದು ದಾರಿಯಲ್ಲಿ ಕಳುಹಿಸಿ ಪಾಪರಾಜಿಗಳ ದಾರಿ ತಪ್ಪಿಸು ಯತ್ನ ಮಾಡಲಾಗುತ್ತದೆಯಂತೆ. ನಂತರ ತಮ್ಮ ಕಾರಿನಲ್ಲಿ ಜಾಹ್ನವಿ ಅವರನ್ನು ಕೂರಿಸಿಕೊಂಡು ಹೋಗುತ್ತಿದ್ದರಂತೆ. ಕೆಲವೊಮ್ಮೆ ಇದು ಸಕ್ಸಸ್​ ಸಹ ಆಗುತ್ತಿತ್ತು, ಮತ್ತೆ ಕೆಲವು ಸಲ ಪಾಪರಾಜಿಗಳಿಗೆ ಈ ವಿಷಯ ತಿಳಿದು ಅವರು ನಮ್ಮ ಕಾರನ್ನು ಹಿಂಬಾಲಿಸುತ್ತಿದ್ದರು. ಆಗ ನನಗೆ ನಿಜಕ್ಕೂ ಫಾಸ್ಟ್​ ಆ್ಯಂಡ್ ಫ್ಯೂರಿಸ್​ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಆಗುತ್ತಿತ್ತು ಎಂದು ವಿವರಿಸಿದ್ದಾರೆ ನಮ್ರತಾ.


ಜಾಹ್ನವಿ ಕಪೂರ್ ಅವರು ಪಾಪರಾಜಿಗಳ ಫೋಟೋಗಳಿಗೆ ಈಗ ಎಷ್ಟು ಚೆನ್ನಾಗಿ ಪೋಸ್​ ಕೊಟ್ಟರೂ ಅವರು, ಕೆಲವೊಮ್ಮೆ ಬೇಡ ಎಂದು ನಿರಾಕರಿಸಿದ್ದೂ ಇದೆ. ಕೆಲವೇ ದಿನಗಳ ಹಿಂದೆಯಷ್ಟೆ ಜಾಹ್ನವಿ ತಮ್ಮ ಅಪಾರ್ಟ್​ಮೆಂಟ್​ ಬಳಿ ತಂಗಿ ಖುಷಿ ಜತೆ ಸೈಕಲ್ ತುಳಿಯುವಾಗಲೂ ಪಾಪರಾಜಿಗಳು ಫೋಟೋಗಾಗಿ ಬೆನ್ನು ಹತ್ತಿದ್ದರು. ಇದರಿಂದಾಗಿ ಬೇಸರಗೊಂಡು ಕಡೆಗೆ ಅವರು ಬೇರೆ ದಾರಿ ಹಿಡಯುವ ಯತ್ನದಲ್ಲಿದ್ದರು. ಅಲ್ಲದೆ ಫೋಟೋ ತೆಗೆಯಬೇಡಿ ಎಂದು ಮನವಿ ಮಾಡಿದ್ದರು. ಪಾಪರಾಜಿಗಳ ಜತೆ ಇಂತಹ ಘಟನೆಗಳು ಆಗಾಗ ಅವರ ಜತೆ ನಡೆಯುತ್ತಲೇ ಇರುತ್ತದೆ.


ಇದನ್ನೂ ಓದಿ: Darlings ಚಿತ್ರೀಕರಣಕ್ಕೆ ತೆರೆ: ಚಿತ್ರತಂಡದ ಜೊತೆ ಪಾರ್ಟಿ ಮಾಡಿದ Alia Bhatt


ಸ್ಟಾರ್​ ವರ್ಸಸ್​ ಫುಡ್​ ಕಾರ್ಯಕ್ರಮದ ಸೆಕೆಂಢ್​ ಸೀಸನ್​ ಸೆ.8ರಂದು ಅಂದರೆ ಇಂದು ಡಿಸ್ಕವರಿ ಪ್ಲಸ್​ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಜಾಹ್ನವಿ ಕಪೂರ್ ಅವರ ಚಿಕ್ಕಪ್ಪ ಅನಿಲ್ ಕಪೂರ್ ಸಹ ಅತಿಥಿಯಾಗಿ ಇರಲಿದ್ದಾರಂತೆ. ಜೊತೆಗೆ ಅನನ್ಯಾ ಪಾಂಡೆ ಜಾಕಿರ್​ ಖಾನ್​ ಸಹ ಇರಲಿದ್ದಾರಂತೆ.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು