Jr. NTRಗೆ ನಾಯಕಿಯಾಗ್ತಾರಾ ಜಾನ್ವಿ ಕಪೂರ್? ಟಾಲಿವುಡ್​ಗೆ ಕಾಲಿಡಲು ರೆಡಿಯಾಗ್ತಿದ್ದಾರಂತೆ ಜಾನ್ವಿ!

ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮನೋರಂಜನಾ ಮಾಧ್ಯಮವೊಂದು ತಿಳಿಸಿದೆ.

ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್

ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್

  • Share this:
ಬಾಲಿವುಡ್‌ನ ಹಿರಿಯ ದಿವಂಗತ ನಟಿ ಶ್ರೀದೇವಿ (Bollywood veteran actress Sridevi) ಮತ್ತು ನಿರ್ಮಾಪಕರಾದ ಬೋನಿ ಕಪೂರ್ ಅವರ ಮಗಳು ನಟಿ ಜಾನ್ವಿ ಕಪೂರ್ (Actress Janvi Kapoor) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಈಗಾಗಲೇ ಇವರು ಸಹ ತಮ್ಮ ನಟನೆಯಿಂದ ಬಾಲಿವುಡ್‌ನಲ್ಲಿ ಮನೆ ಮಾತಾಗಿದ್ದು, ಇವರು ಇದೀಗ ತೆಲುಗು ಚಿತ್ರದಲ್ಲಿ ಒಬ್ಬ ದೊಡ್ಡ ನಟನೊಂದಿಗೆ ಚಿತ್ರ ಮಾಡಲಿದ್ದಾರೆ ಎಂಬ ವದಂತಿಗಳು ಬಲವಾಗಿ ಕೇಳಿ ಬರುತ್ತಿವೆ. ಈ ನಟಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಬೆರಳೆಣಿಕೆಯ ಚಿತ್ರಗಳನ್ನು ಮಾಡಿದ್ದು, ಈಗ ಇವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದ (Hindi Film Industry) ಕಡೆಗೆ ಮುಖ ಮಾಡಿದ್ದಾರೆಯೋ ಅಥವಾ ಅವರಿಗಾಗಿಯೇ ದಕ್ಷಿಣ ಭಾರತ ಚಿತ್ರೋದ್ಯಮವು ಹುಡುಕಿಕೊಂಡು ಹೋಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ಟಾಲಿವುಡ್‌ನ ಒಂದು ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ ಎಂದು ಹಿಂದಿ ಚಿತ್ರೋದ್ಯಮದಲ್ಲಿ (Tollywood Movie) ಗುಸುಗುಸು ಶುರುವಾಗಿದೆ.

ಪ್ರಮುಖ ಪಾತ್ರದಲ್ಲಿ ಜಾನ್ವಿ ಕಪೂರ್
ಈ ಗುಸುಗುಸು ಏನೆಂದರೆ ತೆಲುಗಿನ ಜನಪ್ರಿಯ ನಟರಲ್ಲೊಬ್ಬರಾದ ಜೂನಿಯರ್ ಎನ್‌ಟಿಆರ್ ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಬುಚ್ಚಿ ಬಾಬು ಅವರೊಂದಿಗೆ ಜೊತೆಗೂಡಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.

ಆದರೂ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಜಾನ್ವಿ ಕಪೂರ್ ಅವರು ನಟಿಸಲಿದ್ದಾರೆ ಎಂಬ ವದಂತಿಗಳು ಈಗಾಗಲೇ  ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೇಗವಾಗಿ ಹರಿದಾಡುತ್ತಿದೆ ಎಂದು ಹೇಳಲಾಗುತ್ತಿದೆ. ಹೌದು, ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮನೋರಂಜನಾ ಮಾಧ್ಯಮವೊಂದು ತಿಳಿಸಿದೆ.

ವರದಿಗಳ ಪ್ರಕಾರ, ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಅವರ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಅವರು ಬಂಡವಾಳ ಹೂಡಲಿದ್ದಾರೆ ಮತ್ತು ಅವರು ಜಾನ್ವಿ ಕಪೂರ್ ಅವರನ್ನು ಈ ಚಿತ್ರಕ್ಕಾಗಿ ಕರೆತರಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: RRR vs James: ‘ಆರ್‌ಆರ್‌ಆರ್’ಗೆ ಡಿಚ್ಚಿ ಕೊಡುತ್ತಾ ‘ಪವರ್‘ ಫುಲ್ ‘ಜೇಮ್ಸ್’? ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಕ್ಲಾಶ್

ತೆಲುಗು ಚಿತ್ರರಂಗಕ್ಕೆ ಎಂಟ್ರಿ
ಜಾನ್ವಿ ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ನಿರ್ದೇಶಕರು ಭಾವಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಚಿತ್ರದ ತಯಾರಕರು ನಟಿಯೊಂದಿಗೆ ಮಾತುಕತೆ ನಡೆಸಲು ಮತ್ತು ಆಕೆಯನ್ನು ಈ ಚಿತ್ರಕ್ಕೆ ಒಪ್ಪಿಸಲು ಯಾವುದೇ ಅವಕಾಶಗಳನ್ನು ಬಿಡಲು ಇಷ್ಟ ಪಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಜಾನ್ವಿ ಚಿತ್ರದ ಭಾಗವಾಗಲಿದ್ದಾರೆಯೇ ಎಂಬುದು ಇನ್ನೂ ಕಾದು ನೋಡಬೇಕಿದೆ ಎನ್ನುತ್ತವೆ ವರದಿಗಳು.

ಸರಿ, ಜಾನ್ವಿ ಕಪೂರ್ ಅವರ ದಕ್ಷಿಣ ಭಾರತದ ಚೊಚ್ಚಲ ಚಿತ್ರದ ವದಂತಿಗಳು ಸುದ್ದಿಯಲ್ಲಿರುವುದು ಇದೇನು ಮೊದಲನೆಯ ಬಾರಿ ಅಲ್ಲ. ಈ ಹಿಂದೆ ಅವರು ಜೂನಿಯರ್ ಎನ್‌ಟಿಆರ್ ಜೊತೆಗೆ ಟಾಲಿವುಡ್‌ನಲ್ಲಿ ತ್ರಿವಿಕ್ರಮ್ ಶ್ರೀನಿವಾಸ ಅವರ ಎನ್‌ಟಿಆರ್ 30 ಮತ್ತು ಪುರಿ ಜಗನ್ನಾಥ್ ಅವರ ಚಿತ್ರವಾದ ಜನ ಗಣ ಮನದೊಂದಿಗೆ ತೆಲುಗು ಚಿತ್ರೋದ್ಯಮಕ್ಕೆ ಬರಲಿದ್ದಾರೆ ಎಂಬ ಬಲವಾದ ವರದಿಗಳು ಕೇಳಿ ಬಂದಿದ್ದವು.

ಬಹು ನಿರೀಕ್ಷಿತ ಚಿತ್ರ
ಇತ್ತೀಚೆಗೆ ಮನೋರಂಜನಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ದಕ್ಷಿಣದ ಚೊಚ್ಚಲ ಚಿತ್ರಕ್ಕಾಗಿ ಏನಾದರೂ ಅವಕಾಶಗಳು ಸಿಗುತ್ತಿದೆಯೇ ಎಂದು ಕೇಳಿದಾಗ, ಜಾನ್ವಿ ಅವರು "ನಾನು ಒಂದೆರಡು ಚಿತ್ರ ತಯಾರಕರೊಂದಿಗೆ ಮಾತನಾಡುತ್ತಿದ್ದೇನೆ, ಆದರೆ ನಾನು ಓ ದೇವರೇ, ನಾನು ಇದನ್ನು ಮಾಡಬೇಕಾಗಿದೆ ಎಂದು ಇನ್ನೂ ಭಾವಿಸಿಲ್ಲ" ಎಂದು ಹೇಳಿದ್ದರು.

ಇದನ್ನೂ ಓದಿ: RRR New Release Date: `ಆರ್​ಆರ್​ಆರ್​’ ಹೊಸ ರಿಲೀಸ್​ ಡೇಟ್​ ಫಿಕ್ಸ್​.. ಸ್ಪೆಷಲ್​ ದಿನದಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಜ್ಜು!

ಜಾನ್ವಿ ಕಪೂರ್ ಅವರ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಇವರ ಚೊಚ್ಚಲ ಚಿತ್ರವೂ ಬಹು ನಿರೀಕ್ಷಿತ ಚಿತ್ರವಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಚಲನಚಿತ್ರ ನಿರ್ಮಾಪಕರು ಮಾತ್ರವಲ್ಲದೆ, ಪ್ರೇಕ್ಷಕರು ತೆಲುಗು ಅಥವಾ ತಮಿಳು ಚಿತ್ರದಲ್ಲಿ ಜಾನ್ವಿಯನ್ನು ನೋಡಲು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.

ಸದ್ಯಕ್ಕೆ ನಟಿ ಜಾನ್ವಿ ಕಪೂರ್ ಅವರು ಕ್ರಿಕೆಟ್ ಶಿಬಿರದಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿರುವ ತಮ್ಮ ಮುಂದಿನ ಚಿತ್ರದಲ್ಲಿನ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ಕಥೆಯು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ. ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಜೀವನಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: