HOME » NEWS » Entertainment » JANHVI KAPOOR STARRER GUNJAN SAXENA THE KARGIL GIRL COMING SOON ON NETFLIX AE

Janhvi Kapoor: ಒಟಿಟಿ ಮೂಲಕ ತೆರೆ ಕಾಣಲಿದೆ ಜಾಹ್ನವಿ ಕಪೂರ್​​ರ ಗುಂಜನ್​ ಸಕ್ಸೇನಾ-ದ ಕಾರ್ಗಿಲ್ ಗರ್ಲ್​..!

Gunjan Saxena The Kargil Girl: ಜಾಹ್ನವಿ ಕಪೂರ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಗುಂಜನ್​ ಸಕ್ಸೇನಾ ದ ಕಾರ್ಗಿಲ್ ಗರ್ಲ್​. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ಹೊಸ ಪೋಸ್ಟರ್​ ಹಂಚಿಕೊಂಡಿರುವ ಜಾಹ್ನವಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. 

Anitha E | news18-kannada
Updated:June 9, 2020, 6:09 PM IST
Janhvi Kapoor: ಒಟಿಟಿ ಮೂಲಕ ತೆರೆ ಕಾಣಲಿದೆ ಜಾಹ್ನವಿ ಕಪೂರ್​​ರ ಗುಂಜನ್​ ಸಕ್ಸೇನಾ-ದ ಕಾರ್ಗಿಲ್ ಗರ್ಲ್​..!
ಜಾಹ್ನವಿ ಕಪೂರ್​
  • Share this:
ಲಾಕ್​ಡೌನ್​ ಆರಂಭವಾದಾಗ ಮುಚ್ಚಿದ ಸಿನಿಮಾ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಇನ್ನೂ ತೆರೆದಿಲ್ಲ. ಲಾಕ್​ಡೌನ್​ ಸಡಿಲಗೊಳಿಸಿದ್ದರೂ ಸಿನಿಮಾ ಪ್ರದರ್ಶನಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಇದೇ ಕಾರಣಕ್ಕೆ ಹಲವಾರು ಸಿನಿಮಾಗಳು ಈಗ ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗುತ್ತಿವೆ. 

ಜಾಹ್ನವಿ ಕಪೂರ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಗುಂಜನ್​ ಸಕ್ಸೇನಾ- ದ ಕಾರ್ಗಿಲ್ ಗರ್ಲ್'​. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ಹೊಸ ಪೋಸ್ಟರ್​ ಹಂಚಿಕೊಂಡಿರುವ ಜಾಹ್ನವಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

janhvi kapoor
ಜಾಹ್ನವಿ ಕಪೂರ್​


ಹೌದು, ಜಾಹ್ನವಿ ಕಪೂರ್ ಅಭಿನಯದ 'ಗುಂಜನ್​ ಸಕ್ಸೇನಾ- ದ ಕಾರ್ಗಿಲ್​ ಗರ್ಲ್'​ ಶೀಘ್ರದಲ್ಲೇ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಲಿದೆ. ಈ ಸುದ್ದಿ ಗಾಳಿಸುದ್ದಿಯಲ್ಲ. ಬದಲಿಗೆ ಜಾಹ್ನವಿ ಕಪೂರ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.


ಈ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ಮಾತ್ರ ಹೇಳಿಲ್ಲ. ಆದರೆ ಶೀಘ್ರದಲ್ಲೇ ನೆಟ್​ಫ್ಲಿಕ್ಸ್​ನಲ್ಲಿ ನಿರೀಕ್ಷಿಸಿ ಎಂದು ಪೋಸ್ಟ್​ ಮಾಡಲಾಗಿದೆ. ಇದೇ ವರ್ಷ ಏ.24ರಂದು ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: HBD Shilpa Shetty: ಹೆಂಡತಿ ಶಿಲ್ಪಾ ಶೆಟ್ಟಿಗೆ ಇಷ್ಟವಾದ ರೀತಿಯಲ್ಲಿ ಸರ್ಪ್ರೈಸ್​ ಕೊಟ್ಟ ರಾಜ್​ ಕುಂದ್ರಾ..!

ಈಗ ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಲಿದೆ. ಈ ವಿಷಯವನ್ನು ಫಿಲ್ಮ್​ ಮೇಕರ್​ ಕರಣ್​ ಜೋಹರ್ ಸಹ ಟ್ವೀಟ್​ ಮಾಡಿದ್ದಾರೆ.



ಶರಣ್​ ಶರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಪಂಕಜ್​ ತ್ರಿಪಾಠಿ ಸಹ ನಟಿಸಿದ್ದಾರೆ. ಇದು ಭಾರತದ ಮೊದಲ ಏರ್​ಫೋರ್ಸ್​ ಮಹಿಳಾ ಪೈಲಟ್​ ಗುಂಜನ್​ ಸಕ್ಸೇನಾ ಅವರ ಜೀವನಾಧಾರಿತ ಸಿನಿಮಾ ಆಗಿದೆ. ಈ ಸಿನಿಮಾಗೂ ಮುನ್ನ ಅಮಿತಾಭ್​ ಬಚ್ಚನ್​ ಅವರ ಗುಲಾಬೊ ಸಿತಾಬೊ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ರಿಲೀಸ್​ ಆಗಿತ್ತು.

 Sonam Kapoor: ಮುಂಬೈನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೋನಮ್​ ಕಪೂರ್​..!
First published: June 9, 2020, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories