ತುಂಡುಡುಗೆಯಲ್ಲಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಸಖತ್ ಡ್ಯಾನ್ಸ್​: ವಿಡಿಯೋ ವೈರಲ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎವರ್​ ಗ್ರೀನ್ ನಟಿಯ ಮಗಳು ಟ್ರೋಲ್​ಗೂ ಒಳಗಾಗಿದ್ದರು. ಇದೀಗ ವ್ಯಂಗ್ಯವಾಡಿದವರಿಗೆ ಉತ್ತರ ಎಂಬಂತೆ ಜಾಹ್ನವಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಅದು ಕೂಡ ಬೆಲ್ಲಿ ಡ್ಯಾನ್ಸ್​ನೊಂದಿಗೆ ಎಂಬುದು ವಿಶೇಷ.

zahir | news18
Updated:June 17, 2019, 9:48 PM IST
ತುಂಡುಡುಗೆಯಲ್ಲಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಸಖತ್ ಡ್ಯಾನ್ಸ್​: ವಿಡಿಯೋ ವೈರಲ್
janhvi kapoor
zahir | news18
Updated: June 17, 2019, 9:48 PM IST
ತಮ್ಮ ಚೊಚ್ಚಲ ಚಿತ್ರ 'ದಢಕ್'​ನಲ್ಲಿ ಒಂದಷ್ಟು ಗಮನ ಸೆಳೆದಿದ್ದ ಜಾಹ್ನವಿ ಕಪೂರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊದಲ ಸಿನಿಮಾದಲ್ಲಿ ಅಭಿನಯ ಮತ್ತು ಮೈಮಾಟಕ್ಕೆ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಯುವ ನಟಿ ಇದೀಗ ಅದನ್ನೇ ಸವಾಲಾಗಿ ಸ್ವೀಕರಿಸಿದಂತಿದೆ.

ಬಾಲಿವುಡ್​ ಎವರ್​ ಗ್ರೀನ್ ನಟಿ ಶ್ರೀದೇವಿ ಮಗಳಾಗಿದ್ದರಿಂದ ಜಾಹ್ನವಿಯ ಮೊದಲ ಚಿತ್ರದ ಲುಕ್ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಚಿತ್ರದಲ್ಲಿನ ಪಾತ್ರ ಅದೇಕೋ ಫ್ಯಾನ್ಸ್​ಗಳನ್ನು ಅಷ್ಟಾಗಿ ಸೆಳೆಯಲಿಲ್ಲ ಎಂಬ ಕೂಗುಗಳು ಕೇಳಿ ಬಂದಿದ್ದವು. ಹಾಗೆಯೇ ಝಿರೋ ಸೈಜ್ ದೇಹಸಿರಿ ಟ್ರೆಂಡ್​ನಲ್ಲಿರುವಾಗ ಜಾಹ್ನವಿ ಮಾತ್ರ ದುಂಡು ಸೌಂದರ್ಯದಿಂದ ಬಿಟೌನ್​ಗೆ ಎಂಟ್ರಿ ಕೊಟ್ಟಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎವರ್​ ಗ್ರೀನ್ ನಟಿಯ ಮಗಳು ಟ್ರೋಲ್​ಗೂ ಒಳಗಾಗಿದ್ದರು. ಇದೀಗ ವ್ಯಂಗ್ಯವಾಡಿದವರಿಗೆ ಉತ್ತರ ಎಂಬಂತೆ ಜಾಹ್ನವಿ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಅದು ಕೂಡ ಬೆಲ್ಲಿ ಡ್ಯಾನ್ಸ್​ನೊಂದಿಗೆ ಎಂಬುದು ವಿಶೇಷ.
 
Loading...

View this post on Instagram
 

#janhvikapoor belly dancing moves 🔥🔥🔥🔥


A post shared by Viral Bhayani (@viralbhayani) on


ತುಂಡುಡುಗೆಯಲ್ಲಿ ಮೈ ಬಳುಕಿಸುತ್ತಿರುವ ಜಾಹ್ನವಿ ವಿಡಿಯೋವೊಂದು ಇತ್ತೀಚೆಗೆ ಭಾರೀ ವೈರಲ್ ಆಗಿದೆ. ಈ ಡ್ಯಾನ್ಸಿಂಗ್ ವಿಡಿಯೋ ನೋಡಿದವರೂ ಈಗ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಟೀಕಾಕಾರರ ಬಾಯಿ ಮುಚ್ಚಿಸಲು ಜಾಹ್ನವಿ ಸಖತ್ತಾಗೆ ವರ್ಕೌಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದರ ಭಾಗವಾಗಿ ಬೆಲ್ಲಿ ಡ್ಯಾನ್ಸ್​​ ಕೂಡ ಕಲಿಯುತ್ತಿದ್ದಾರೆ. ಇದರ ಒಂದು ಝಲಕನ್ನು ಯುವ ನಟಿ ಇದೀಗ ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಈ ವೈರಲ್ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದು, ಶೀಘ್ರದಲ್ಲೇ ಜಾಹ್ನವಿ ಕೂಡ ಹೊಸ ಲುಕ್​ನಲ್ಲಿ ಡ್ಯಾನ್ಸ್ ದಿವಾನೆ ಎಂಬ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ.
First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...