Janhvi Kapoor: ಮತ್ತೆ ಸುದ್ದಿಯಲ್ಲಿದ್ದಾರೆ ಜಾಹ್ನವಿ ಕಪೂರ್: ಇಲ್ಲಿದೆ ನಟಿಯ ಬೆಲ್ಲಿ ಡ್ಯಾನ್ಸ್ ವಿಡಿಯೋ..!
ಇತ್ತೀಚೆಗಷ್ಟೆ 39 ಕೋಟಿ ಮೌಲ್ಯದ ಮೂರು ಅಂತಸ್ತಿನ ಫ್ಲ್ಯಾಟ್ ಖರೀದಿಸುವ ಮೂಲಕ ಜಾಹ್ನವಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈಗ ಇದೇ ನಟಿ ಮತ್ತೆ ತಮ್ಮ ಬೆಲ್ಲಿ ಡ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.

ಜಾಹ್ನವಿ ಕಪೂರ್
- News18 Kannada
- Last Updated: January 13, 2021, 2:29 PM IST
'ದಢಕ್' ಸಿನಿಮಾದ ಮೂಲಕ ನಾಯಕಿಯಾಗಿ ಬಿ-ಟೌನ್ ಮಂದಿಗೆ ಪರಿಚಯವಾದ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ತುಂಬಾ ಸುದ್ದಿಯಲ್ಲಿದ್ದಾರೆ. ಮೊದಲ ಸಿನಿಮಾದಲ್ಲಿ ಜಾಹ್ನವಿ ಅವರ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ, ಜಾಹ್ನವಿ ಹಾಗೂ ಬಾಲಿವುಡ್ ಊಹಿಸಿದಷ್ಟರ ಮಟ್ಟಿಗಿನ ಯಶಸ್ಸು ಸಿಗಲಿಲ್ಲ. ಇದಾದ ನಂತರ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಯಾವ ಸಿನಿಮಾಗಳೂ ಹಿಟ್ ಆಗಿಲ್ಲ. ಆದರೂ ಶ್ರೀದೇವಿ ಅವರ ಮೊದಲ ಸಂತಾನವಾಗಿರುವ ಜಾಹ್ನವಿಗೆ ಸಿಗುತ್ತಿರುವ ಅವಕಾಶಗಳಿಗೆ ಮಾತ್ರ ಕಡಿಮೆಯಾಗಿಲ್ಲ. ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಮಗಳಾಗಿದ್ದರಿಂದ ಜಾಹ್ನವಿಯ ಮೊದಲ ಚಿತ್ರದ ಲುಕ್ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿತ್ತು. ಆದರೆ ಚಿತ್ರದಲ್ಲಿನ ಪಾತ್ರ ಅದೇಕೋ ಪ್ರೇಕ್ಷಕರನ್ನು ಅಷ್ಟಾಗಿ ಸೆಳೆಯಲಿಲ್ಲ ಅನ್ನೋ ಮಾತು ಕೇಳಿ ಬಂದಿತ್ತು. ಝಿರೋ ಸೈಜ್ ದೇಹಸಿರಿ ಟ್ರೆಂಡ್ನಲ್ಲಿರುವಾಗ ಜಾಹ್ನವಿ ಮಾತ್ರ ಬಬ್ಲಿ ಗರ್ಲ್ ಆಗಿ ಬಿಟೌನ್ಗೆ ಎಂಟ್ರಿ ಕೊಟ್ಟಿದ್ದರು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎವರ್ ಗ್ರೀನ್ ನಟಿಯ ಮಗಳು ಟ್ರೋಲ್ಗೂ ಬಲಿಯಾಗಿದ್ದರು. ಇದಕ್ಕೆ ಇರಬೇಕು ಈಗ ಸಿನಿಮಾಗಳ ಜತೆಗೆ ಫಿಟ್ನೆಸ್ ಹಾಗೂ ಡ್ಯಾನ್ಸ್ ಸ್ಕಿಲ್ಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಈ ನಟಿ.
ದೇಹದ ತೂಕ ಕೊಂಚ ಇಳಿಸಿಕೊಂಡು, ತಮ್ಮ ಡ್ಯಾನ್ಸ್ ಸ್ಕಿಲ್ಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಜಾಹ್ನವಿ ಈ ಹಿಂದೆ ಅಂದರೆ 2019ರಲ್ಲಿ ಬೆಲ್ಲಿ ಡ್ಯಾನ್ಸ್ ಕಲಿಯುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.
ಇತ್ತೀಚೆಗಷ್ಟೆ 39 ಕೋಟಿ ಮೌಲ್ಯದ ಮೂರು ಅಂತಸ್ತಿನ ಫ್ಲ್ಯಾಟ್ ಖರೀದಿಸುವ ಮೂಲಕ ಜಾಹ್ನವಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈಗ ಇದೇ ನಟಿ ಮತ್ತೆ ತಮ್ಮ ಬೆಲ್ಲಿ ಡ್ಯಾನ್ಸ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.
ಜಾಹ್ನವಿ ಈ ವಿಡಿಯೋದಲ್ಲಿ ಅಸೋಕ ಸಿನಿಮಾದಲ್ಲಿ ಕರೀನಾ ಸೊಂಟ ಬಳುಕಿಸಿರುವ ಸನ್ ಸನನ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದು ಜಾಹ್ನವಿ ಅವರ ಹಳೇ ವಿಡಿಯೋ ಎಂದು ಹೇಳಲಾಗುತ್ತಿದೆ. ಆದರೆ ಜಾಹ್ನವಿ ಮಾಡಿರುವ ಬೆಲ್ಲಿ ಡ್ಯಾನ್ಸ್ ಮೂವ್ಗಳಿಗೆ ನೆಟ್ಟಿಗರು ಮತ್ತೊಮ್ಮೆ ಫಿದಾ ಆಗಿರುವುದಂತೂ ಸತ್ಯ.
ಜಾಹ್ನವಿ ಅಭಿನಯದ ಹೊಸ ಸಿನಿಮಾ ಸೆಟ್ಟೇರಿದ್ದು, ಅದರ ಹೊಸ ಲುಕ್ ಅನ್ನು ಜಾಹ್ನವಿ ಇತ್ತೀಚೆಗಷ್ಟೆ ಹಂಚಿಕೊಂಡಿದ್ದಾರೆ. ಆ ಹೊಸ ಸಿನಿಮಾ ಗುಡ್ ಲಕ್ ಜೆರ್ರಿ. ಈ ಚಿತ್ರದ ಶೂಟಿಂಗ್ ಪಂಜಾಬ್ನಲ್ಲಿ ನಡೆಯುತ್ತಿದ್ದು. ಮಾರ್ಚ್ವರೆಗೂ ನಡೆಯಲಿದೆ. ಆನಂದ್ ಎಲ್ ರೈ ನಿರ್ಮಾಣದ ಈ ಸಿನಿಮಾವನ್ನು ಸಿದ್ಧಾರ್ಥ್ ಸೇನ್ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ.
ಟೀಕಾಕಾರರ ಬಾಯಿ ಮುಚ್ಚಿಸಲು ಜಾಹ್ನವಿ ಸಖತ್ತಾಗೆ ವರ್ಕೌಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದರ ಭಾಗವಾಗಿ ಬೆಲ್ಲಿ ಡ್ಯಾನ್ಸ್ ಕೂಡ ಕಲಿಯುತ್ತಿದ್ದಾರೆ. ಇದರ ಒಂದು ಝಲಕನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

View this post on Instagram