• Home
  • »
  • News
  • »
  • entertainment
  • »
  • Janhvi Kapoor: ‘ಮಿಲಿ’ ಶೂಟಿಂಗ್​​ನಲ್ಲಿ ವಿಪರೀತ ನೋವು! ವೇದನೆ ತಾಳದೆ ಪೇನ್ ಕಿಲ್ಲರ್ ತಗೊಳ್ತಿದ್ರಂತೆ ಜಾನ್ವಿ

Janhvi Kapoor: ‘ಮಿಲಿ’ ಶೂಟಿಂಗ್​​ನಲ್ಲಿ ವಿಪರೀತ ನೋವು! ವೇದನೆ ತಾಳದೆ ಪೇನ್ ಕಿಲ್ಲರ್ ತಗೊಳ್ತಿದ್ರಂತೆ ಜಾನ್ವಿ

ಜಾನ್ವಿ ಕಪೂರ್ ಅವರ ಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಾಯಗೊಂಡ ಮುಖದ ಚಿತ್ರವನ್ನು ನಟಿ ಶೇರ್ ಮಾಡಿದ್ದಾರೆ. ಶೂಟಿಂಗ್ ಸಂದರ್ಭ ತಾವು ಅನುಭವಿಸಿದ ನೋವು ಕಮ್ಮಿಯಲ್ಲ ಎಂದು ನಟಿ ರಿವೀಲ್ ಮಾಡಿದ್ದಾರೆ.

ಜಾನ್ವಿ ಕಪೂರ್ ಅವರ ಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಾಯಗೊಂಡ ಮುಖದ ಚಿತ್ರವನ್ನು ನಟಿ ಶೇರ್ ಮಾಡಿದ್ದಾರೆ. ಶೂಟಿಂಗ್ ಸಂದರ್ಭ ತಾವು ಅನುಭವಿಸಿದ ನೋವು ಕಮ್ಮಿಯಲ್ಲ ಎಂದು ನಟಿ ರಿವೀಲ್ ಮಾಡಿದ್ದಾರೆ.

ಜಾನ್ವಿ ಕಪೂರ್ ಅವರ ಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಗಾಯಗೊಂಡ ಮುಖದ ಚಿತ್ರವನ್ನು ನಟಿ ಶೇರ್ ಮಾಡಿದ್ದಾರೆ. ಶೂಟಿಂಗ್ ಸಂದರ್ಭ ತಾವು ಅನುಭವಿಸಿದ ನೋವು ಕಮ್ಮಿಯಲ್ಲ ಎಂದು ನಟಿ ರಿವೀಲ್ ಮಾಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಬಾಲಿವುಡ್ ನ (Bollywood) ದಿವಂಗತ ನಟಿ ಶ್ರೀದೇವಿ ಅವರ ಮಗಳು ಮತ್ತು ನಟಿ ಜಾನ್ವಿ ಕಪೂರ್ (Janhvi Kapoor) ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಮೊನ್ನೆ ತಾನೇ ತಮ್ಮ ತಂದೆಯ ಸಿಗರೇಟ್ ಚಟವನ್ನು ಬಿಡಿಸಲು ತನ್ನ ತಾಯಿ ಶ್ರೀದೇವಿ (Sridevi) ಅವರು ಹೇಗೆ ಸಂಪೂರ್ಣವಾಗಿ ಸಸ್ಯಾಹಾರಿಯಾಗಿ ಬದಲಾಗಿದ್ದರು ಎಂಬುದರ ಬಗ್ಗೆ ಹೇಳಿ ಸುದ್ದಿಯಲ್ಲಿದ್ದರು ಜಾಹ್ನವಿ. ಈಗ ನಟಿ ಮತ್ತೊಮ್ಮೆ ಸುದ್ದಿಯಲ್ಲಿರುವುದು ಆಕೆಯ ಮುಂಬರುವ ಚಿತ್ರದಿಂದ ಅಂತ ಹೇಳಬಹುದು. ನಟಿ ಜಾನ್ವಿ ಕಪೂರ್  ಅವರ ಮುಂಬರುವ ‘ಮಿಲಿ’ (Mili) ಚಿತ್ರವು ಇದೇ ಶುಕ್ರವಾರದಂದು ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರ (Movie) ಬಿಡುಗಡೆಗೂ ಮುನ್ನ ಸುಮಾರು ಒಂದು ತಿಂಗಳವರೆಗೆ ನಡೆದ ಚಲನಚಿತ್ರ ಚಿತ್ರೀಕರಣವು (Shooting) ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ನಟಿ ವಿವರಿಸಿದ್ದಾರೆ ನೋಡಿ. ಈ ಚಿತ್ರದಲ್ಲಿ, ಅವರು ಸ್ಟೋರೇಜ್ ಫ್ರೀಜರ್ ನಲ್ಲಿ ಅನೇಕ ಗಂಟೆಗಳ ಕಾಲ ಸಿಕ್ಕಿಹಾಕಿಕೊಳ್ಳುವ ಒಬ್ಬ ಹುಡುಗಿಯ (Girl) ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.


‘ಮಿಲಿ’ ಮಲಯಾಳಂ ಹಿಟ್ ‘ಹೆಲೆನ್’ ಚಿತ್ರದ ಹಿಂದಿ ರಿಮೇಕ್


ಮಥುಕುಟ್ಟಿ ಕ್ಸೇವಿಯರ್ ನಿರ್ದೇಶನದ ಮಿಲಿ ಚಿತ್ರವು 2019 ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ (Malayalam) ಹಿಟ್ ‘ಹೆಲೆನ್’ ಚಿತ್ರದ ಹಿಂದಿ ರಿಮೇಕ್ ಆಗಿದೆ. ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾಗುವ ಈ ಚಿತ್ರದಲ್ಲಿರುವ ಮಿಲಿ ಎಂಬ ಹುಡುಗಿಯ ಪಾತ್ರದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆ.


ಚಿತ್ರದಲ್ಲಿ ಅವರು ಒಂದು ಫ್ರೀಜರ್ ಒಳಗೆ ಜೀವಂತವಾಗಿರಲು ಸಮಯದ ವಿರುದ್ಧ ಹೋರಾಡುತ್ತಾರೆ. ನಟಿಯ ಪ್ರಕಾರ, ಚಿತ್ರದ ತಂಡವು ವಿಶೇಷ ಫ್ರೀಜರ್ ಅನ್ನು ನಿರ್ಮಿಸಿದೆ, ಅಲ್ಲಿ ಅವರು ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 20 ದಿನಗಳ ಕಾಲ ಚಿತ್ರೀಕರಿಸಿದರು.


ಅನಾರೋಗ್ಯಕ್ಕೆ ತುತ್ತಾಗಿದ್ರಂತೆ ನಟಿ ಜಾನ್ವಿ


ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡ ಜಾಹ್ನವಿ ಅವರು "ಈ ಚಲನಚಿತ್ರ ನನ್ನ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು ಎಂದು ನನಗೆ ಚೆನ್ನಾಗಿ ನೆನಪಿದೆ, ಏಕೆಂದರೆ ನಾನು ಚಿತ್ರೀಕರಣವನ್ನು ಮುಗಿಸಿದ ನಂತರ ಮನೆಗೆ ಹಿಂತಿರುಗುತ್ತಿದ್ದೆ. ನಾನು ನಿದ್ರೆ ಮಾಡುತ್ತಿದ್ದೆ. ಆದರೆ ಆಗ ನನಗೆ ಇನ್ನೂ ನಾನು ಫ್ರೀಜರ್ ನಲ್ಲಿಯೇ ಇದ್ದೇನೆ ಅಂತ ಕನಸುಗಳು ಬೀಳುತ್ತಿದ್ದವು. ಮಧ್ಯೆ ನನ್ನ ಆರೋಗ್ಯ ಸಹ ಹದಗೆಟ್ಟಿತ್ತು ಮತ್ತು ನಾನು ಎರಡು ಮೂರು ದಿನಗಳಿಂದ ತೀವ್ರವಾದ ನೋವು ನಿವಾರಕಗಳ ಮೇಲೆ ಇದ್ದೆ ಮತ್ತು ನಿರ್ದೇಶಕರು ಸಹ ಅಸ್ವಸ್ಥರಾಗಿದ್ದರು" ಎಂದು ಹೇಳಿದರು.


ಇದನ್ನೂ ಓದಿ: Janhvi Kapoor: ಪ್ರಿಂಟೆಡ್ ಲೆಹಂಗಾದಲ್ಲಿ ಜಾನ್ವಿ ಕಪೂರ್! ಸಮ್ಮೋಹಕ ನೋಟ ಎಂದ ಫ್ಯಾನ್ಸ್


"ನೀವು ನಿಮ್ಮ ದಿನದ 15 ಗಂಟೆಗಳ ಕಾಲ ಮುಚ್ಚಿದ ವಾತಾವರಣದಲ್ಲಿ ಎಂದರೆ ಫ್ರೀಜರ್ ನಲ್ಲಿ ದಿನದ ಹೆಚ್ಚಿನ ಸಮಯ ಅಳುತ್ತಿದ್ದರೆ, ಆ ಪಾತ್ರ ಖಂಡಿತವಾಗಿಯೂ ಗ್ಲಾಮರಸ್ ಅಲ್ಲ" ಎಂದು ಜಾನ್ವಿ ಹೇಳಿದರು. ಈ ಚಿತ್ರಕ್ಕಾಗಿ 7.5 ಕೆಜಿಯಷ್ಟು ತೂಕವನ್ನು ಹೆಚ್ಚಿಸುವಂತೆ ಕೇಳಲಾಗಿತ್ತು ಎಂದು ಅವರು ಹೇಳಿದರು.


ಚಿತ್ರದಲ್ಲಿ ಜಾಹ್ನವಿ ಜೊತೆ ಯಾರೆಲ್ಲಾ ನಟಿಸಿದ್ದಾರೆ?


ನಟಿ ಜಾನ್ವಿ ಕಪೂರ್ ಜೊತೆಗೆ ‘ಮಿಲಿ’ ಚಿತ್ರದಲ್ಲಿ ನಟರಾದ ಸನ್ನಿ ಕೌಶಲ್ ಮತ್ತು ಮನೋಜ್ ಪಹ್ವಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ತಮ್ಮ ತಂದೆ ಬೋನಿ ಕಪೂರ್ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ: Jahvi Kapoor: ಜೂನಿಯರ್ NTR ಜೊತೆ ಜಾನ್ವಿ! ಸೌತ್​ ಇಂಡಸ್ಟ್ರಿಗೆ ಶ್ರೀದೇವಿ ಮಗಳ ಎಂಟ್ರಿ


ಬೋನಿ ಕಪೂರ್ ಅವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನವೆಂಬರ್ 4, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲದೆ ಇದರ ನಂತರ ನಟಿ ಜಾನ್ವಿ ‘ಬವಾಲ್’ ಮತ್ತು ‘ಮಿಸ್ಟರ್ ಆಂಡ್ ಮಿಸೆಸ್ ಮಾಹಿ’ ಎಂಬ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Published by:Divya D
First published: