• Home
  • »
  • News
  • »
  • entertainment
  • »
  • Janhavi Kapoor: ಬಾತ್​ರೂಮ್​ ಲಾಕ್ ಮಾಡಲು ಅಮ್ಮ ಬಿಡುತ್ತಿರಲಿಲ್ಲ; ಜಾಹ್ನವಿ ಕಪೂರ್

Janhavi Kapoor: ಬಾತ್​ರೂಮ್​ ಲಾಕ್ ಮಾಡಲು ಅಮ್ಮ ಬಿಡುತ್ತಿರಲಿಲ್ಲ; ಜಾಹ್ನವಿ ಕಪೂರ್

ಜಾಹ್ನವಿ ಕಪೂರ್

ಜಾಹ್ನವಿ ಕಪೂರ್

ಅಲ್ಲಿಯೇ ಇರುವ ಒಂದು 'ರಹಸ್ಯ ಕೊಠಡಿ' ಯನ್ನು ಸಹ ತೋರಿಸಿದರು. "ಅಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ, ಬಹುಶಃ ಏನೋ ನೆರಳು ಇರಬಹುದು" ಎಂದು ಅವರು ಹೇಳಿದರು.

  • Share this:

ಬಾಲಿವುಡ್ ನ ನಟಿ ಜಾಹ್ನವಿ ಕಪೂರ್ (Bollywood Actress Janhavi Kapoor) ಸದಾ ತಮ್ಮ ದಿವಂಗತ ತಾಯಿ ನಟಿ ಶ್ರೀದೇವಿ (Actress Sridevi) ಅವರ ಬಗ್ಗೆ ಇರುವ ನೆನಪುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು. ಈಗ ಜಾಹ್ನವಿ ಅವರು ತಮ್ಮ ತಾಯಿಯು ಮೊದಲು ಖರೀದಿಸಿದ್ದ ಮತ್ತು ಪ್ರೀತಿಸಿದ ಮೊದಲ ಮನೆಯನ್ನು (Home) ಪೂರ್ತಿಯಾಗಿ ಅಭಿಮಾನಿಗಳಿಗೆ ತೋರಿಸಿದ್ದಾರೆ ನೋಡಿ. ತನ್ನ ದಿವಂಗತ ತಾಯಿ ಅದನ್ನು ಖರೀದಿಸಿದಾಗ ಮನೆ ಹೀಗಿರಲಿಲ್ಲ ಎಂದು ಜಾಹ್ನವಿ ಹೇಳಿದ್ದಾರೆ. ಮದುವೆಯ ನಂತರ ಅದನ್ನು ಅಲಂಕರಿಸಲು ತನ್ನ ತಾಯಿ ನಿರ್ಧರಿಸಿದ್ದಳು ಮತ್ತು ಪ್ರಪಂಚದಾದ್ಯಂತ ಪ್ರಯಾಣಿಸಿದ ನಂತರ ಅಲ್ಲಿಂದ ತಂದ ಎಲ್ಲಾ ವಸ್ತುಗಳನ್ನು ಆ ಮನೆಯಲ್ಲಿಡಲು ಬಯಸಿದ್ದರು ಎಂದು ಜಾಹ್ನವಿ ಹೇಳಿದ್ದಾರೆ.


ತನ್ನ ದಿವಂಗತ ತಾಯಿಗೆ ಸೇರಿದ್ದ ತನ್ನ ಮಲಗುವ ಕೋಣೆಯೊಳಗಿನ ಬಾತ್‌ರೂಮ್ ಗೆ ಇನ್ನೂ ಏಕೆ ಬೀಗ ಹಾಕಿಲ್ಲ ಎಂದೂ ಸಹ ಜಾಹ್ನವಿ ಬಹಿರಂಗಪಡಿಸಿದ್ದಾರೆ.


 ಚೆನ್ನೈ ಬಂಗಲೆ ತೋರಿಸಿದ ಜಾಹ್ನವಿ


ನಟಿ ತಮ್ಮ ಚೆನ್ನೈ ಬಂಗಲೆಯನ್ನು ಪೂರ್ತಿಯಾಗಿ ಹೊಸ ವಿಡಿಯೋವೊಂದರಲ್ಲಿ ತೋರಿಸಿದರು, ವಿಡಿಯೋದಲ್ಲಿ ತಂದೆ ಬೋನಿ ಕಪೂರ್ ಸಹ ಸ್ವಲ್ಪ ಕಾಣಿಸಿಕೊಂಡಿದ್ದಾರೆ. ಜಾಹ್ನವಿ ಅವರ ಚಿಕ್ಕಮ್ಮ ಮತ್ತು ಇತರ ಕುಟುಂಬ ಸದಸ್ಯರು ಸಹ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.


janhvi kapoor recalls her mother memory stg mrq
ಜಾಹ್ನವಿ ಕಪೂರ್


2018 ರಲ್ಲಿ ಶ್ರೀದೇವಿ ಅವರ ನಿಧನದ ನಂತರ ಅವರ ದಿವಂಗತ ತಾಯಿಯ ನೆನಪಿಗಾಗಿ ಈ ಮನೆಯನ್ನು ಮರುನಿರ್ಮಾಣ ಮಾಡಲಾಯಿತು,


ಆದ್ದರಿಂದ ಕುಟುಂಬವು ಅಲ್ಲಿಗೆ ಬಂದು ಅವರನ್ನು ನೆನಪಿಸಿಕೊಳ್ಳಲು ಒಟ್ಟಿಗೆ ಸಮಯ ಕಳೆಯಬಹುದು ಎಂದು ಜಾಹ್ನವಿ ಹೇಳಿದರು.


ತನ್ನ ತಾಯಿಯ ಮನೆಯ ಬಗ್ಗೆ ಏನ್ ಹೇಳಿದ್ರು ಜಾಹ್ನವಿ


"ಈ ಮನೆಯ ಬಗ್ಗೆ ನಾನು ಪ್ರೀತಿಸುವ ಒಂದು ವಿಷಯವೆಂದರೆ, ಇದು ಹಳೆಯದಾಗಿದ್ದು ಅನೇಕ ನೆನಪುಗಳು ಇಲ್ಲಿವೆ, ಆದರೆ ಇಲ್ಲಿ ಸ್ವಲ್ಪ ಹೊಸತನವನ್ನು ಸಹ ನೋಡಬಹುದು.


ನನ್ನ ಕೋಣೆಯಲ್ಲಿರುವ ಬಾತ್‌ರೂಮ್ ಗೆ ಲಾಕ್ ಹಾಕಿಸಿಲ್ಲ, ಏಕೆಂದರೆ ನಾನು ಬಾತ್‌ರೂಮ್ ಗೆ ಹೋಗಿ ಫೋನ್ ನಲ್ಲಿ ಹುಡುಗರೊಂದಿಗೆ ಮಾತನಾಡುತ್ತೇನೆ ಎಂದು ತಾಯಿಗೆ ತುಂಬಾ ಹೆದರಿಕೆ ಇದ್ದುದ್ದರಿಂದ ಅಮ್ಮ ಬೀಗ ಹಾಕಿಸಲು ನಿರಾಕರಿಸಿದ್ದಳು ಎಂದು ನನಗೆ ನೆನಪಿದೆ. ಈಗಲೂ ಸಹ ಇದು ಹಾಗೆಯೇ ಇದೆ" ಎಂದು ಜಾಹ್ನವಿ ಹೇಳಿದರು.


ವೋಗ್ ಇಂಡಿಯಾದೊಂದಿಗಿನ ಹೋಮ್ ಟೂರ್ ವೀಡಿಯೋದಲ್ಲಿ ಜಾಹ್ನವಿ ಮನೆಯಲ್ಲಿ ತನ್ನ ನೆಚ್ಚಿನ ಕೆಲವು ಸ್ಥಳಗಳನ್ನು ತೋರಿಸಿದರು.


janhvi kapoor recalls her mother memory stg mrq
ಜಾಹ್ನವಿ ಕಪೂರ್


ಇದರಲ್ಲಿ ಸುಭಾಷ್ ಅವ್ಚಟ್ ವರ್ಣಚಿತ್ರದಿಂದ ಅಲಂಕೃತವಾದ ಮೂಲೆಯೂ ಸೇರಿದೆ. ಈ ಮನೆಯಲ್ಲಿ ಕಲೆಯೂ ತುಂಬಿದೆ, ದಿವಂಗತ ಶ್ರೀದೇವಿಯವರು ಸ್ವತಃ ಚಿತ್ರಿಸಿದ ಕೆಲವು ತುಣುಕುಗಳು ಸಹ ಇವೆ.


ಮನೆಯಲ್ಲಿರುವ ಪ್ರತಿ ಕೋಣೆಯಲ್ಲಿನ ನೆನಪುಗಳನ್ನು ಬಿಚ್ಚಿಟ್ಟ ನಟಿ..


ನಂತರ, ಜಾಹ್ನವಿ ಕುಟುಂಬದವರೆಲ್ಲಾ ಸೇರಿ ಊಟ ಮಾಡಿದ್ದ ಊಟದ ಕೋಣೆಯೊಳಗೆ ಕರೆದೊಯ್ದರು. ಅಲ್ಲಿಯೇ ಇರುವ ಒಂದು 'ರಹಸ್ಯ ಕೊಠಡಿ' ಯನ್ನು ಸಹ ತೋರಿಸಿದರು. "ಅಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ, ಬಹುಶಃ ಏನೋ ನೆರಳು ಇರಬಹುದು" ಎಂದು ಅವರು ಹೇಳಿದರು.


ನಂತರ ಜಾಹ್ನವಿ ತನ್ನ 'ಮನೆಯ ನೆಚ್ಚಿನ ಭಾಗ' ದ ಒಳಗೆ ವೀಕ್ಷಕರನ್ನು ಕರೆದೊಯ್ದರು, ಅವರು ಮೆಟ್ಟಿಲುಗಳನ್ನು ಏರಿದರು ಮತ್ತು ಅಲ್ಲಿರುವ ಗೋಡೆಯು ಕುಟುಂಬದ ಹಳೆಯ ಫೋಟೋಗಳಿಂದ ತುಂಬಿದ್ದನ್ನು ತೋರಿಸಿದರು.


ಇದನ್ನೂ ಓದಿ:  Urfi Javed: ನಾನೊಂದು ಬಾಂಬ್, ಎಲ್ಲಿ ಸಿಡಿಯುತ್ತೇನೆ ಗೊತ್ತಿಲ್ಲ ಎಂದ ಉರ್ಫಿ


“ಇದು ಸ್ಮರಣೀಯ ಗೋಡೆಯಂತಿದೆ. ಇದು ನಿಜವಾಗಿ ಅಮ್ಮನ ಆಲೋಚನೆಯಾಗಿತ್ತು" ಎಂದು ಅವರು ಹೇಳಿದರು. ಅವರು 2013 ರಲ್ಲಿ ಪದ್ಮಶ್ರೀ ಗೆದ್ದಾಗ ಸೇರಿದಂತೆ ಹಲವಾರು ವರ್ಷಗಳಿಂದ ಶ್ರೀದೇವಿ ಅವರ ಕುಟುಂಬದೊಂದಿಗೆ ರಜಾದಿನದ ಫೋಟೋಗಳು ಮತ್ತು ದಿವಂಗತ ನಟಿಯ ಫೋಟೋವನ್ನು ಸಹ ತೋರಿಸಿದರು. ಶ್ರೀದೇವಿ ಮತ್ತು ಬೋನಿ ಅವರ ಬಾಲ್ಯದ ಫೋಟೋಗಳನ್ನು ಸಹ ಅಲ್ಲಿರುವುದನ್ನು ನಟಿ ತೋರಿಸಿದರು.


ನಟ ಮತ್ತು ತನ್ನ ಸಹೋದರ ಅರ್ಜುನ್ ಕಪೂರ್ ಅವರೊಂದಿಗೆ ಜಾಹ್ನವಿ ಕಾಫಿ ವಿತ್ ಕರಣ್ ಸೀಸನ್ 6 ರಲ್ಲಿ ತೆಗೆಸಿಕೊಂಡ ಮತ್ತು ಇಟಲಿಯಲ್ಲಿ ಶ್ರೀದೇವಿ ಮತ್ತು ಬೋನಿ ಅವರ 'ಲಿಟಲ್ ಹನಿಮೂನ್' ಫೋಟೋಗಳು ಸಹ ಗ್ಯಾಲರಿ ಗೋಡೆಯ ಭಾಗವಾಗಿತ್ತು.


ಜಾಹ್ನವಿ ಕಪೂರ್


ಮದುವೆ ಫೋಟೋ ತೋರಿಸಿದ ನಟಿ


ಜಾಹ್ನವಿ ಅವರು ತಮ್ಮ ಪೋಷಕರ ಮದುವೆಯ ಫೋಟೋಗಳನ್ನು ತೋರಿಸುತ್ತಾ "ಇದು ಒಂದು ರೀತಿಯ ರಹಸ್ಯ ಮದುವೆ ಎಂದು ನಾನು ಭಾವಿಸುತ್ತೇನೆ, ಅದಕ್ಕಾಗಿಯೇ ಅವರು ತುಂಬಾ ಒತ್ತಡದಲ್ಲಿದ್ದಂತೆ ಕಾಣುತ್ತಿದೆ. ನಾನು ಅದನ್ನು ಹೇಳಬೇಕೇ ಎಂದು ನನಗೆ ತಿಳಿದಿಲ್ಲ" ಎಂದರು.


ಇದನ್ನೂ ಓದಿ:  Bigg Boss Kannada: ಪ್ರಶಾಂತ್ ಸಂಬರ್ಗಿಗೆ ಕಿಚ್ಚನ ಮುಂದೆಯೇ ಕ್ಲಾಸ್, ಲೋ ಥಿಂಕಿಂಗ್ ಎಂದಿದ್ದಕ್ಕೆ ಅಮೂಲ್ಯ ತರಾಟೆ!


ತನ್ನ ಮಲಗುವ ಕೋಣೆಗೆ ಕಾಲಿಡುವ ಮೊದಲು ಸಹೋದರಿ ಖುಷಿ ಕಪೂರ್ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಟಿವಿ ಕೋಣೆಯನ್ನು ಸಹ ತೋರಿಸಿದರು, ಇದು ಬೋನಿಯನ್ನು ಮದುವೆಯಾಗುವ ಮೊದಲು ಶ್ರೀದೇವಿ ಅವರ ಮಲಗುವ ಕೋಣೆಯಾಗಿತ್ತು.


ಹಲವು ಚಿತ್ರಗಳಲ್ಲಿ ಜಾಹ್ನವಿ ಬ್ಯುಸಿ


2020 ರಲ್ಲಿ ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಅವರು ಮತ್ತು ಖುಷಿ ಮಾಡಿದ ಪೇಂಟಿಂಗ್‌ಗಳಿಂದ ಅಲಂಕರಿಸಲ್ಪಟ್ಟ ಜಿಮ್ ಅನ್ನು ಸಹ ತೋರಿಸಿದರು.


ಜಾಹ್ನವಿ ಇತ್ತೀಚೆಗೆ ಮಿಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ನಿತೇಶ್ ತಿವಾರಿ ಅವರ ಬವಾಲ್ ಚಿತ್ರದಲ್ಲಿ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ ಅಂಡ್ ಮಿಸಸ್ ಮಾಹಿ ಚಿತ್ರದಲ್ಲಿಯೂ ಸಹ ಜಾಹ್ನವಿ ಕೆಲಸ ಮಾಡುತ್ತಿದ್ದಾರೆ.

Published by:Mahmadrafik K
First published: