ಸಾಮಾನ್ಯವಾಗಿ ಈ ಬಾಲಿವುಡ್ ನಟ-ನಟಿಯರ (Bollywood Stars) ಹೆಸರುಗಳು ಇನ್ನೊಬ್ಬ ನಟ-ನಟಿಯರ ಹೆಸರುಗಳೊಂದಿಗೆ ಕೇಳಿ ಬರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಇಲ್ಲಿ ಒಬ್ಬ ನಟಿಯ ಹೆಸರು ರಾಜ್ಯದ ಮಾಜಿ ಮುಖ್ಯಮಂತ್ರಿಯ ಮೊಮ್ಮಗನ ಹೆಸರಿನೊಂದಿಗೆ ಕೇಳಿ ಬರುತ್ತಿದೆ ನೋಡಿ. ಈ ನಟಿ ಬೇರೆ ಯಾರೂ ಅಲ್ಲ, ದಿವಂಗತ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಹಿರಿಯ ಮಗಳಾದ ಜಾಹ್ನವಿ ಕಪೂರ್ (Janhvi Kapoor) ಅವರು ಅಂತ ಹೇಳಬಹುದು.
ಅಂದ ಹಾಗೆ ಇವರ ಹೆಸರು ಯಾರ ಹೆಸರಿನೊಂದಿಗೆ ಕೇಳಿ ಬರುತ್ತಿದೆ ಅಂತ ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ? ಮೊದಲು ಒಂದು ಸುದ್ದಿ ಬಲವಾಗಿ ಹರಡಿತ್ತು, ಅದೇನೆಂದರೆ ಜಾಹ್ನವಿ ಮತ್ತು ಶಿಖರ್ ಪಹಾರಿಯಾ ಅವರ ಮಧ್ಯೆ ಏನೋ ನಡೀತಾ ಇದೆ ಅಂತ. ನಂತರ ಆ ಸುದ್ದಿ ಮಧ್ಯೆದಲ್ಲಿ ಸ್ವಲ್ಪ ಕಾಲ ಮಾಯವಾಗಿತ್ತು. ಆಶ್ಚರ್ಯ ಎಂದರೆ ಈಗ ಮತ್ತೆ ಈ ಜೋಡಿ ಸುದ್ದಿಯಲ್ಲಿದೆ ನೋಡಿ.
ಮತ್ತೆ ಒಂದಾದ್ರ ನಟಿ ಜಾಹ್ನವಿ ಮತ್ತು ಶಿಖರ್?
ಕಳೆದ ಎರಡು-ಮೂರು ತಿಂಗಳುಗಳಿಂದ ಮತ್ತೆ ನಟಿ ಜಾಹ್ನವಿ ಕಪೂರ್ ತನ್ನ ಮಾಜಿ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.
ಸರಿ, ಸುದ್ದಿ ಮಧ್ಯಮವೊಂದು ಈಗ ಜಾಹ್ನವಿ ಮತ್ತು ಶಿಖರ್ ತಮ್ಮ ಸಂಬಂಧವನ್ನು ಮತ್ತೆ ಮುಂದುವರೆಸಿದ್ದಾರೆ ಎಂಬ ಸುದ್ದಿಯನ್ನು ತಂದಿದೆ. ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮಗಳು ಶಿಖರ್ ಅವರೊಂದಿಗೆ ಮತ್ತೆ ಒಂದಾಗಿದ್ದಾರೆನ್ನಲಾಗಿದೆ.
ಹೌದು.. ಇನ್ನೇನು ಶಿಖರ್ ಅವರನ್ನು ಜಾಹ್ನವಿ ಅವರ ಬಾಯ್ಫ್ರೆಂಡ್ ಅಂತ ಹೇಳೊದನ್ನ ಜನರು ಮರಿಬೇಕು ಅನ್ನೋವಷ್ಟರಲ್ಲಿಯೇ ಮತ್ತೆ ಈ ಇಬ್ಬರು ಒಂದಾಗಿದ್ದಾರಂತೆ ಎಂದು ಹೇಳಲಾಗುತ್ತಿದೆ.
ಜಾಹ್ನವಿ ಮತ್ತು ಶಿಖರ್ ಕೆಲವು ತಿಂಗಳ ಹಿಂದೆ ಮತ್ತೊಮ್ಮೆ ಪರಸ್ಪರ ಮಾತನಾಡಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದ ನಂತರ, ಅವರು ಮತ್ತೆ ಒಟ್ಟಿಗೆ ಸೇರಬಹುದೇ ಎಂಬುದರ ಬಗ್ಗೆ ಪ್ರಯತ್ನಿಸಿದರು ಎಂದು ಉನ್ನತ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆಯಂತೆ.
ಕಳೆದ ವಾರವಂತೂ, ಈ ಜೋಡಿ ಮತ್ತೆ ಪರಸ್ಪರ ಹತ್ತಿರ ಬಂದು ಪ್ರೀತಿಸಲು ನಿರ್ಧರಿಸಿದರು ಎಂಬ ಗುಸುಗುಸು ಈಗ ಜೋರಾಗಿ ಸದ್ದು ಮಾಡುತ್ತಿದೆ ಎನ್ನಲಾಗಿದೆ.
ಜಾಹ್ನವಿ ಕಪೂರ್ ಅವರ ಗೆಳೆಯ ಶಿಖರ್ ಯಾರು ಗೊತ್ತೇ?
ನಟಿ ಜಾಹ್ನವಿ ಕಪೂರ್ ಅವರ ಗೆಳೆಯ ಶಿಖರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಅಂತೆ. ಈ ಹಿಂದೆ ನಟಿ ಜಾಹ್ನವಿ ಅವರು ಒರ್ಹಾನ್ ಅವತ್ರಮಣಿ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅನಗತ್ಯ ಊಹಾಪೋಹಗಳು ಹರಿದಾಡುತ್ತಿದ್ದವು.
ಆದರೆ ಮಾಧ್ಯಮವೊಂದು ಆ ಊಹಾಪೂಹಗಳಿಗೆ ಅಲ್ಪವಿರಾಮವನ್ನು ಇಟ್ಟು, ಅವರಿಬ್ಬರು ಕೇವಲ ಒಳ್ಳೆಯ ಸ್ನೇಹಿತರು ಮತ್ತು ಇಬ್ಬರು ಸಂಪೂರ್ಣವಾಗಿ ವಿಭಿನ್ನವಾಗಿರುವ ವ್ಯಕ್ತಿತ್ವವನ್ನು ಹೊಂದಿರುವಂತಹವರು ಎಂದು ಸ್ಪಷ್ಟವಾಗಿ ವರದಿ ಮಾಡಿತ್ತು.
ಶಿಖರ್ ಇತ್ತೀಚೆಗೆ ಯಾರ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು?
ಅನಿಲ್ ಕಪೂರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಿಖರ್ ಅವರೊಂದಿಗೆ ಬೋನಿ ತೆಗೆಸಿಕೊಂಡ ಇತ್ತೀಚಿನ ಫೋಟೋ ನೋಡಿದರೆ, ಮಗಳು ಜಾಹ್ನವಿ ಮತ್ತು ಶಿಖರ್ ಹಳೆಯದ್ದನ್ನ ಮರೆತು ಮತ್ತೆ ಒಂದಾದರೆ, ಅವರಿಗೇನೂ ಸಮಸ್ಯೆಯಿಲ್ಲ ಅನ್ನೋ ಹಾಗೆ ಕಾಣಿಸುತ್ತಿದ್ದೆ ಅಂತ ಹೇಳಬಹುದು.
ಇದನ್ನೂ ಓದಿ: Nora Fatehi-Aryan Khan: ನೋರಾ ಫತೇಹಿ ಜೊತೆ ಶಾರುಖ್ ಮಗನ ಕುಚ್ ಕುಚ್! 30ರ ನಟಿ ಜೊತೆ 25ರ ಆರ್ಯನ್ ಖಾನ್ ಡೇಟಿಂಗ್!?
ಅದೇ ಪಾರ್ಟಿಯಲ್ಲಿ ಜಾಹ್ನವಿ ಮತ್ತು ಶಿಖರ್ ಇಬ್ಬರು ಒಂದೇ ಕಾರಿನಲ್ಲಿ ಕೂತು ಅನಿಲ್ ಕಪೂರ್ ಅವರ ಜುಹು ನಿವಾಸದಿಂದ ಹೊರಟಿರುವುದು ಸಹ ಕಂಡು ಬಂದಿದೆ. ಈ ಫೋಟೋದಲ್ಲಿ ಜಾಹ್ನವಿ ಬೆಳ್ಳಿ ಬಣ್ಣದ ಉಡುಪನ್ನು ಧರಿಸಿದ್ದರೆ, ಶಿಖರ್ ನೀಲಿ ಡೆನಿಮ್ ನೊಂದಿಗೆ ಜೋಡಿಯಾದ ಕಪ್ಪು ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ