• Home
  • »
  • News
  • »
  • entertainment
  • »
  • ಮಾಸ್ಕ್‌ ಧರಿಸಿ ಮುಂಬೈನಲ್ಲಿ ಸೈಕ್ಲಿಂಗ್ ಮಾಡಿದ ಜಾಹ್ನವಿ ಮತ್ತು ಖುಷಿ ಕಪೂರ್

ಮಾಸ್ಕ್‌ ಧರಿಸಿ ಮುಂಬೈನಲ್ಲಿ ಸೈಕ್ಲಿಂಗ್ ಮಾಡಿದ ಜಾಹ್ನವಿ ಮತ್ತು ಖುಷಿ ಕಪೂರ್

ಸೈಕಲ್​ ರೈಡ್ ಎಂಜಾಯ್​ ಮಾಡಿದ ಜಾಹ್ನವಿ ಹಾಗೂ ಖುಷಿ ಕಪೂರ್​

ಸೈಕಲ್​ ರೈಡ್ ಎಂಜಾಯ್​ ಮಾಡಿದ ಜಾಹ್ನವಿ ಹಾಗೂ ಖುಷಿ ಕಪೂರ್​

ಜಾಹ್ನವಿ ಹಾಗೂ ಖುಷಿ ಕಪೂರ್​ ಸೈಕ್ಲಿಂಗ್ ಮಾಡುವ ವೇಳೆ ಪಾಪರಾಜಿಗಳು ಅಂದರೆ ಹವ್ಯಾಸಿ ಛಾಯಾಗ್ರಾಹಕರು ಸುತ್ತುವರಿದಿದ್ದರು. ಖುಷಿ ಹಾಗೂ ಜಾಹ್ನವಿ ಕಪೂರ್​ ಅವರು ಫೋಟೋಗಳಿಗೆ ಪೋಸ್‌ ನೀಡಲಿಲ್ಲ.

  • Share this:

ಬಾಲಿವುಡ್​ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ಗಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಈಗ ಕೊರೋನಾ ಲಾಕ್​ಡೌನ್​ನಿಂದಾಗಿ ಜಿಮ್​ಗಳ ಬಾಗಿಲು ಮುಚ್ಚಲಾಗಿದೆ. ಇದರಿಂದಾಗಿಯೇ ಈಗ ಸ್ಟಾರ್​ಗಳು ಮನೆಗಳ ಬಳಿಯೇ ವ್ಯಾಯಾಮ, ಯೋಗ ಅಂತ ಕಾಲ ಕಳೆಯುತ್ತಿದ್ದಾರೆ. ಈಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತು ತಂಗಿ ಖುಷಿ ಕಪೂರ್ ಫಿಟ್‌ ಆಗಿರಲು ನಗರದಲ್ಲಿ ಸೈಕ್ಲಿಂಗ್ ಮಾಡಿರುವಂತೆ ತೋರುತ್ತದೆ. ಗುರುವಾರ ಸಂಜೆ ಸಹೋದರಿಯರಿಬ್ಬರು ತನ್ನ ಸ್ನೇಹಿತರೊಬ್ಬರ ಜತೆ ತಮ್ಮ ಸೈಕಲ್‌ಗಳಲ್ಲಿ ಮಹಾರಾಷ್ಟ್ರದ ಮುಂಬೈನ ಲೋಖಂಡ್ವಾಲಾದಲ್ಲಿ ಕೆಲ ಕಾಲ ಸೈಕಲ್​ನಲ್ಲಿ ಸುತ್ತಾಡಿದ್ದಾರೆ. ಸಿನಿಮಾದ ಶೂಟಿಂಗ್ ಇರದ ಕಾರಣ ಮುಂಬೈನಲ್ಲಿನ ಕೊರೋನಾ ವೈರಸ್‌ ನಿರ್ಬಂಧದ ನಡುವೆ ಸೈಕ್ಲಿಂಗ್ ಮಾಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.


ಈ ವಿಡಿಯೋದಲ್ಲಿ ಜಾಹ್ನವಿ ಕಪೂರ್​  ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್‌ ಜೊತೆಗೆ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿರುವುದನ್ನು ಕಾಣಬಹುದು. ಖುಷಿ ಕಪೂರ್ ಕಪ್ಪು ಜಾಗರ್‌ ಜೊತೆಗೆ ಕ್ಯಾಶುಯಲ್ ಟೈ-ಡೈ ನೀಲಿ ಟಿ-ಶರ್ಟ್ ಧರಿಸಿದ್ದಾರೆ. ಜತೆಗೆ ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ ಇಬ್ಬರೂ ಹುಡುಗಿಯರು ಫೇಸ್ ಮಾಸ್ಕ್‌ಗಳನ್ನು ಸಹ ಧರಿಸಿದ್ದರು.




ಈ ತಾರಾ ಸಹೋದರಿಯರು ಸೈಕ್ಲಿಂಗ್ ಮಾಡುವ ವೇಳೆ ಪಾಪರಾಜಿಗಳು ಅಂದರೆ ಹವ್ಯಾಸಿ ಛಾಯಾಗ್ರಾಹಕರು ಸುತ್ತುವರಿದಿದ್ದರು. ಖುಷಿ ಹಾಗೂ ಜಾಹ್ನವಿ ಕಪೂರ್​ ಅವರು ಫೋಟೋಗಳಿಗೆ ಪೋಸ್‌ ನೀಡಲಿಲ್ಲ. ಅಲ್ಲದೆ, ಅವರು ತಮ್ಮ ಮುಂಬೈ ನಿವಾಸದ ಬಳಿ ಸೈಕಲ್ ಚಲಾಯಿಸಲು ಪ್ರಯತ್ನಿಸುತ್ತಿದ್ದಂತೆ ಪಾಪರಾಜಿಗಳು ನಟಿ ಹಾಗೂ ಸಹೋದರಿಯ ಸುತ್ತಮುತ್ತ ಓಡಾಡುತ್ತಿದ್ದರಿಂದ ಅವರಿಗೆ ಅಸಮಾಧಾನವಾಯಿತು. ಇದರಿಂದಾಗಿ ಸೈಕಲ್​ ತೆಗೆದುಕೊಂಡು ತಮ್ಮ ಮನೆಯ ಕಾಂಪೌಂಡ್​ ಒಳಗೆ ಹೋಗಿ ಬಿಡುತ್ತಾರೆ.


ಇದನ್ನೂ ಓದಿ: Aravind K P: ಮುದ್ದಿನ ನಾಯಿ ಜೊತೆ ಬಿಗ್​ ಬಾಸ್​ ಖ್ಯಾತಿಯ ಕೆ.ಪಿ. ಅರವಿಂದ್​ ಕ್ರೇಜಿ ಪೋಸ್​..!


ಇನ್ಸ್ಟಾಗ್ರಾಂ‌ನಲ್ಲಿ ಪಾಪರಾಜಿಯೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ಕೆಲವು ಕ್ಯಾಮೆರಾ ವ್ಯಕ್ತಿಗಳು ಸಹೋದರಿಯರು ಹೋಗುತ್ತಿದ್ದ ದಾರಿಯನ್ನು ಹೇಗೆ ನಿರ್ಬಂಧಿಸಿದ್ದಾರೆ ಎಂಬುದನ್ನು ನೋಡಬಹುದು. ಒಬ್ಬರು ಜಾಹ್ನವಿ ಕಪೂರ್​ ಮುಂದೆ ಇದ್ದರೆ, ಇನ್ನೊಬ್ಬರು ಹತ್ತಿರ ನಿಂತಿದ್ದರು. ಅಲ್ಲದೆ, ಪಾಪರಾಜಿಯೊಬ್ಬರಿಗೆ ಅದು ಅಪಾಯಕಾರಿಯಾದ ಕಾರಣ ಅಂತಹ ಚಟುವಟಿಕೆಗಳನ್ನು ಮಾಡಬಾರದೆಂದು ಜಾಹ್ನವಿ ಕಪೂರ್‌ ಬುದ್ಧಿ ಮಾತು ಹೇಳಿದ್ದಾರೆ.


ಇನ್ನು, ಸ್ಟಾರ್‌ ನಟಿ ತನ್ನ ಅಪಾರ್ಟ್‌ಮೆಂಟ್‌ಗೆ ಪ್ರವೇಶ ಮಾಡುತ್ತಿದ್ದಾಗ ಅವರನ್ನು ಹಲವು ಪಾಪರಾಜಿಗಳು ಹಿಂಬಾಲಿಸಿದ್ದು, ಅವರಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಜಾಹ್ನವಿ ಕಪೂರ್‌ ಪ್ರಯತ್ನಿಸುತ್ತಿರುವುದನ್ನು ಕ್ಲಿಪ್‌ನಲ್ಲಿ ಕಾಣಬಹುದು. ತನ್ನ ಮತ್ತು ಅವಳ ಸಹೋದರಿಗೆ ದಾರಿ ಮಾಡಿಕೊಡಬೇಕೆಂದು ವಿನಯದಿಂದ ಖುಷಿ ಕಪೂರ್‌ ವಿನಂತಿಸುವುದನ್ನು ಸಹ ಕೇಳಬಹುದು. ನಂತರ ಖುಷಿ ತನ್ನ ಸ್ನೇಹಿತನ ಜತೆ ವಸತಿ ಸಮುಚ್ಚದ ಒಳಗೆ ಹೋಗುತ್ತಾರೆ. ನಂತರ ಜಾಹ್ನವಿ ಕಪೂರ್​ ಬೇಗನೆ ಸೈಕಲ್‌ನಿಂದ ಇಳಿದು ಗೇಟ್‌ಗಳ ಮೂಲಕ ಒಳಗೆ ಹೋಗುತ್ತಾರೆ.


ಇದನ್ನೂ ಓದಿ: ಬೋನಿ ಕಪೂರ್​- ಶ್ರೀದೇವಿ ನಡುವಿನ ಪ್ರೇಮ ಸಂಬಂಧದ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್​..!


ನಂತರ ಸಹೋದರಿಯರು ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಸ್ವಲ್ಪ ಸಮಯದವರೆಗೆ ತಮ್ಮ ಸ್ನೇಹಿತನೊಂದಿಗೆ ಕೆಲ ಕಾಲ ಮಾತನಾಡುತ್ತಾರೆ. ಈ ವೇಳೆಯೂ ನಟಿ ಜಾಹ್ನವಿ ಪಾಪರಾಜಿಗಳನ್ನು ನೋಡಿ, ಬಳಿಕ ಸೈಕಲ್‌ನಿಂದ ಇಳಿದರು. ಆದರೂ, ಖುಷಿ ಅಲ್ಲೇ ಕೆಲ ಕಾಲ ನಿಂತಿದ್ದು, ತನ್ನ ಸ್ನೇಹಿತನೊಂದಿಗೆ ಮಾತುಕತೆಯನ್ನು ಮುಂದುವರಿಸುತ್ತಾರೆ.


ಇನ್ನು, ಜಾಹ್ನವಿ ಕಪೂರ್‌ ಗುಡ್ ಲಕ್ ಜೆರ್ರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ಕರಣ್ ಜೋಹರ್ ಅವರ ಮಲ್ಟಿ-ಸ್ಟಾರ್ ತಕ್ತ್ ಚಿತ್ರದಲ್ಲೂ ನಟಿಸಲಿದ್ದಾರೆ.


ಸ್ಟಾರ್​ಗಳಿಗೆ ಪಾಪರಾಜಿಗಳು ಸುತ್ತುವರಿಯೋದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೆ ಖುಷಿ ಕಪೂರ್ ತಮ್ಮ ಮುದ್ದಿನ ನಾಯಿಯನ್ನು ವಾಕಿಂಗ್​ಗೆ ಕರೆದುಕೊಂಡು ಬಂದಾಗಲೂ ಅವರ ವಿಡಿಯೋ ಹಾಗೂ ಫೋಟೋ ತೆಗೆಯಲಾಗಿತ್ತು.




ಈ ವೇಳೆ ಖುಷಿ ಕಪೂರ್​ ಅವರ ಫೋನ್​ನ ಸ್ಟ್ರೀನ್​ ಸೇವರ್​ ಸಹ ಫೋಟೋದಲ್ಲಿ ಸೆರೆಯಾಗಿತ್ತು.ಅದರಲ್ಲಿ ಖುಷಿ ಅಮ್ಮನ ಜೊತೆಗಿರುವ ತಮ್ಮ ಫೋಟೋವನ್ನು ಇಟ್ಟುಕೊಂಡಿರುವುದು ತಿಳಿಯಿತು.ಈ ಫೋಟೋಗಳು ಆಗ ವೈರಲ್​ ಆಗಿತ್ತು.

Published by:Anitha E
First published: