• Home
  • »
  • News
  • »
  • entertainment
  • »
  • Janhvi Kapoor: ಗೌರಿ ಶಿಂಧೆ ಜೊತೆ ಕೆಲಸ ಮಾಡಬೇಕೆಂಬುದು ತಾಯಿಯ ಕನಸು: ಜಾನ್ವಿ ಕಪೂರ್‌

Janhvi Kapoor: ಗೌರಿ ಶಿಂಧೆ ಜೊತೆ ಕೆಲಸ ಮಾಡಬೇಕೆಂಬುದು ತಾಯಿಯ ಕನಸು: ಜಾನ್ವಿ ಕಪೂರ್‌

ಜಾನ್ವಿ ಕಪೂರ್​​

ಜಾನ್ವಿ ಕಪೂರ್​​

2012 ರಲ್ಲಿ ಗೌರಿ ಶಿಂಧೆ ನಿರ್ದೇಶನದ ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಗೃಹಿಣಿಯೊಬ್ಬಳು ಇಂಗ್ಲೀಷ್‌ ಕಲಿಯಲು ಪರದಾಡುವ ಹಾಗೂ ಅದಕ್ಕಾಗಿ ಕಷ್ಟ ಪಡುವ ಕೌಟುಂಬಿಕ ಚಿತ್ರಕಥೆ ಹೊಂದಿದ್ದ ಈ ಚಿತ್ರದಲ್ಲಿ ಶ್ರೀದೇವಿ ಅದ್ಭುತವಾಗಿ ನಟಿಸಿದ್ದರು.

  • Share this:

ಸದ್ಯ 'ಮಿಲಿ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಜಾನ್ವಿ ಕಪೂರ್‌ (Janhvi Kapoor), ತನ್ನ ತಾಯಿಯ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಗೌರಿ ಶಿಂಧೆ (Gauri Shinde) ಚಿತ್ರವೊಂದರಲ್ಲಿ ಕೆಲಸ ಮಾಡಬೇಕೆಂದು ತಾಯಿ ಶ್ರೀದೇವಿ (Actress Sridevi) ಬಯಸಿದ್ದರು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಮಿಲಿ ಚಿತ್ರದ ಪ್ರಮೋಷನ್‌ ನಲ್ಲಿ ಭಾಗವಹಿಸಿದ್ದ ಜಾನ್ವಿ ಕಪೂರ್‌ ಅವರ ಹಾಗೂ ತಾಯಿ, ದಿವಂಗತ ನಟಿ ಶ್ರೀದೇವಿ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ನಿರ್ದೇಶಕಿ ಗೌರಿ ಶಿಂಧೆ ಜತೆಗಿನ ಸಂಬಂಧದ ಬಗ್ಗೆಯೂ ಜಾನ್ವಿ ಹೇಳಿದ್ದಾರೆ.


ಗೌರಿ ಶಿಂಧೆಯನ್ನು ತುಂಬ ಇಷ್ಟ ಪಡುತ್ತಿದ್ದ ನಟಿ ಶ್ರೀದೇವಿ ಅವರ ನಿರ್ದೇಶನದಲ್ಲಿ ಚಿತ್ರವೊಂದರಲ್ಲಿ ಅಭಿನಯಿಸುವಂತೆ ಆಗಾಗ ಹೇಳುತ್ತಿದ್ದರು ಎಂಬುದಾಗಿ ಇದೀಗ ಜಾನ್ವಿ ಕಪೂರ್‌ ಹೇಳಿದ್ದಾರೆ. ತನ್ನ ತಾಯಿ ಯಾವಾಗಲೂ ಗೌರಿಯೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದರು ಎಂಬುದಾಗಿ ಜಾನ್ವಿ ಹೇಳಿದ್ದಾರೆ.


"ಅಮ್ಮ ನನಗೆ ಅನೇಕ ಬಾರಿ ಹೇಳಿದ್ದು ನನಗೆ ನೆನಪಿದೆ, 'ನೀನು ಗೌರಿಯೊಂದಿಗೆ ಕೆಲಸ ಮಾಡುತ್ತೀಯಾ ಎಂದು ನಾನು ಭಾವಿಸುತ್ತೇನೆ. ನಾನು ನಿಜವಾಗಿಯೂ ಆ ಕನಸು ಕಾಣುತ್ತೇನೆʼ ಎಂದು ಅಮ್ಮ ಹೇಳಿದ್ದರು. ಹೀಗಾಗಿ ಗೌರಿ ಅವರೊಂದಿಗೆ ಕೆಲಸ ಮಾಡುವುದು ನಮ್ಮ ಅಮ್ಮನ ಕನಸು. ನಾನು ಗೌರಿ ಶಿಂಧೆ ಅವರಿಗೆ ನಿಜವಾಗಿಯೂ ಹತ್ತಿರವಾಗಿದ್ದೇನೆ. ಅವರೊಂದು ಕುಟುಂಬದಂತೆ ಅನಿಸುತ್ತಾರೆ" ಎಂದು ಜಾನ್ವಿ ಹೇಳಿದ್ದಾರೆ.


2012 ರಲ್ಲಿ ಗೌರಿ ಶಿಂಧೆ ನಿರ್ದೇಶನದ ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಗೃಹಿಣಿಯೊಬ್ಬಳು ಇಂಗ್ಲೀಷ್‌ ಕಲಿಯಲು ಪರದಾಡುವ ಹಾಗೂ ಅದಕ್ಕಾಗಿ ಕಷ್ಟ ಪಡುವ ಕೌಟುಂಬಿಕ ಚಿತ್ರಕಥೆ ಹೊಂದಿದ್ದ ಈ ಚಿತ್ರದಲ್ಲಿ ಶ್ರೀದೇವಿ ಅದ್ಭುತವಾಗಿ ನಟಿಸಿದ್ದರು.


ಇದನ್ನೂ ಓದಿ: Dhananjay-Head Bush: ವೀರಗಾಸೆ ವಿವಾದ! ಚಿತ್ರತಂಡ ಹೇಳಿದ್ದೇನು?


ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿದ್ದೂ ಅಲ್ಲದೇ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿಯೂ ಯಶಸ್ವಿಯಾಗಿತ್ತು. ಇದು ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿತ್ತು. ಇತ್ತೀಚೆಗಷ್ಟೇ 10 ವರ್ಷ ಆಚರಿಸಿಕೊಂಡ ಆ ಚಿತ್ರದ ಬಗ್ಗೆ ನಿರ್ದೇಶಕಿ ಗೌರಿ ಶಿಂಧೆ ನೆನಪುಗಳನ್ನು ಹಂಚಿಕೊಂಡಿದ್ದರು.


ಇನ್ನು, ಶ್ರೀದೇವಿಯೊಂದಿಗೆ ಕೆಲಸ ಮಾಡಿದ ನಂತರ, ನಿರ್ದೇಶಕಿ ಗೌರಿ, ಶ್ರೀದೇವಿ ಮಗಳು ಜಾನ್ವಿ ಕಪೂರ್ ಅವರ ಜೊತೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ಜಾನ್ವಿ ಜೊತೆಗೆ ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿದ್ದೇನೆ ಎಂದು ಗೌರಿ ಸಂದರ್ಶನವೊಂದರಲ್ಲಿ ಹೇಳಿದ್ದರು.


ಇದನ್ನೂ ಓದಿ: ಡಾಲಿಗೆ ಫ್ಯಾನ್ಸ್ ಸಪೋರ್ಟ್! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ


ಇನ್ನು 25 ವರ್ಷ ವಯಸ್ಸಿನ ಸ್ಟಾರ್‌ ಕುಟುಂಬದ ಕುಡಿ ಜಾನ್ವಿ ಕಪೂರ್‌ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್‌ ದಂಪತಿಯ ಮಗಳು. 2018 ರಲ್ಲಿ ತಮ್ಮ ಚೊಚ್ಚಲ ಚಿತ್ರ ಧಡಕ್‌ ನಲ್ಲಿ ನಟಿಸಿದರು. ನಂತರ ಗೋಸ್ಟ್‌ ಸ್ಟೋರೀಸ್‌, ಗುಂಜನ್‌ ಸಕ್ಸೇನಾ, ರೂಹಿ, ಗುಡ್‌ ಲಕ್‌ ಜೆರ್ರಿ ಚಿತ್ರಗಳಲ್ಲಿ ನಟಿಸಿದ್ದಾರೆ.


ಸದ್ಯ ಅವರು ನಟಿಸಿರುವ 'ಮಿಲಿ' ಹಾಗೂ 'ಜನ ಗಣ ಮನ' ಚಿತ್ರಗಳ ತೆರೆ ಕಾಣಬೇಕಿದೆ. ನಟನೆಯಲ್ಲಿ ಅಷ್ಟೇನೂ ಯಶಸ್ಸು ಕಾಣದೇ ಹೋದರೂ ಜಾನ್ವಿ ತಮ್ಮ ಸೌಂದರ್ಯ ಹಾಗೂ ಸ್ಟೈಲಿಶ್‌ ಔಟ್‌ ಫಿಟ್‌ ಗಳಿಂದಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರ ನೃತ್ಯಕ್ಕಂತೂ ಅಭಿಮಾನಿಗಳು ಫಿದಾ ಆಗುತ್ತಾರೆ.

Published by:Seema R
First published: