Kireeti Reddy: ಜನಾರ್ದನ ರೆಡ್ಡಿ ಮಗನ ಜಬರ್​ದಸ್ತ್​ ಎಂಟ್ರಿ.. ಫಸ್ಟ್​​ ಸಿನಿಮಾದಲ್ಲಿ ಫೇಮಸ್​ ನಟಿಮಣಿಯರ ಜೊತೆ ರೊಮ್ಯಾನ್ಸ್!

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ಇಂದು ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.  ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

ಕಿರೀಟಿ ರೆಡ್ಡಿ

ಕಿರೀಟಿ ರೆಡ್ಡಿ

  • Share this:
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gali  Janardhan Reddy)ಪುತ್ರ ಕಿರೀಟಿ(Kireeti) ಸ್ಯಾಂಡಲ್ ವುಡ್(Sandalwood) ಅಂಗಳಕ್ಕೆ ಬಂದಾಗಿದೆ. ಇಂದು ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.  ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಧಾ ಕೃಷ್ಣ(Radha Krishna) ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ಆಗಮಿಸಿ ಕ್ಲ್ಯಾಪ್​ ಮಾಡಿದ್ದಾರೆ. ಇದೇ ವೇಳೆ ಜಬರ್​ದಸ್ತ್​ ಆ್ಯಕ್ಷನ್​ ಸೀನ್​ ಇರೋ ಟೀಸರ್​(Teaser) ರಿಲೀಸ್​ ಆಗಿದ್ದು, ಸಖತ್​​ ವೈರಲ್ ಆಗುತ್ತಿದೆ.. ಈ ವಿಡಿಯೋ ನೋಡಿ ರಾಜಮೌಳಿ ಖುಷಿಪಟ್ಟಿದ್ದಾರೆ. ‘ಕಿರೀಟಿ ಬಳಿ ತುಂಬಾನೇ ಟ್ಯಾಲೆಂಟ್(Talent)​ ಇದೆ. ಅವರು ಸ್ಟಂಟ್ಸ್(Stunts)​, ಡ್ಯಾನ್ಸ್(Dance), ನಟನೆ ಮಾಡುತ್ತಾರೆ. ಅವರು ಒಳ್ಳೆಯ ತಂಡ ಸೇರಿದ್ದಾರೆ ಅನ್ನೋದು ಖುಷಿಯ ವಿಚಾರ’ ಎಂದರು ರಾಜಮೌಳಿ. ಇನ್ನೂ ಮೊದಲ ಸಿನಿಮಾದಲ್ಲೇ ಇಬ್ಬರು ನಾಯಕಿಯರೊಂದಿಗೆ ಕಿರೀಟಿ ನಟಿಸಿಲಿದ್ದಾರೆ. 

ಕಿರೀಟಿ ಸಿನಿಮಾಗೆ ಶ್ರೀಲೀಲಾ, ಜೆನಿಲಿಯಾ ನಾಯಕಿಯರು!

ಹೌದು, ಮೊದಲ ಸಿನಿಮಾದಲ್ಲೇ ಕಿರೀಟಿ ಇಬ್ಬರು ನಾಯಕಿಯರು. ಸ್ಯಾಂಡಲ್​ವುಡ್​ನ ಕ್ಯೂಟ್​ ಹುಡುಗಿ ಶ್ರೀಲೀಲಾ ಒಬ್ಬರಾದರೆ, ಬಾಲಿವುಡ್​ನ ಕ್ಯೂಟ್​ ಬೆಡಗಿ ಜೆನಿಲಿಯಾ ರಿತೇಶ್​ ದೇಶ್​ ಮುಖ್​. ಆದರೆ ಸದ್ಯಕ್ಕೆ ಜೆನಿಲಿಯಾ ಪಾತ್ರ ಸಸ್ಪೆನ್ಸ್​ನಲ್ಲಿದೆ.ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ನಂತರ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾವನ್ನು ಮಾಡಿರಲಿಲ್ಲ. ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಇದೀಗ ಕಿರೀಟಿ ನಟನೆಯ ಚೊಚ್ಚಲು ಸಿನಿಮಾದ ಮೂಲಕ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಭಾರೀ ಬಜೆಟ್​ನಲ್ಲಿ ತಯಾರಾಗಲಿದೆ ಸಿನಿಮಾ!

ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ.  ಇನ್ನೂ ಹೆಸರಿಡದ ಈ ಸಿನಿಮಾವನ್ನು ಭಾರೀ ಬಜೆಟ್ ನಲ್ಲಿ ತಯಾರಿಸುತ್ತಿದ್ದು, ಹೆಸರಾಂತರ ತಾರಾಬಳಗವ ಇರಲಿದೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಇದನ್ನೂ ಓದಿ: ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು, ಇಂದು ಜನಾರ್ದನ ​ರೆಡ್ಡಿ ಮಗನ ಸಿನಿಮಾ ಟೀಸರ್​ ರಿಲೀಸ್​!

ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು!
ಅಪ್ಪು ಅಂದ್ರೆ ಅಪ್ಪುಗೆ, ಪ್ರೀತಿ, ಸ್ನೇಹ.. ಆತ್ಮೀಯತೆ.. ಸ್ಟಾರ್ ಅನ್ನುವ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬರೆಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರೊಟ್ಟಿಗೆ ಒಡನಾಟ ಹೊಂದಿದ್ದವರು. ಅದೇ ರೀತಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬಕ್ಕೂ ಅಪ್ಪುಗೆ ಕುಟುಂಬಕ್ಕೂ ಒಂದೊಳ್ಳೆ ಅವಿನಾಭಾವ ಸಂಬಂಧವಿತ್ತು.

ಇದನ್ನೂ ಓದಿ: ಡಿವೋರ್ಸ್ ಬಳಿಕ ವಿಜಯ್​ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್​! ಹಾಗಿದ್ರೆ ರಶ್ಮಿಕಾ ಕಥೆಯೇನು?

ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು..ಪ್ರೀತಿಯ ಹುಚ್ಚು. ಬಾಲ್ಯದಲ್ಲೊಮ್ಮೆ ಕಿರೀಟಿ ಅಪ್ಪು ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದರು.
Published by:Vasudeva M
First published: