ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಭಿಮಾನಿಗಳ ಬಿಟ್ಟು ಹೋಗಿ 4 ತಿಂಗಳಾಗಿವೆ. ಅದ್ರೆ ಅಪ್ಪು (Appu) ನಮ್ಮನ್ನ ಅಗಲಿ ಹೋಗೋಕು ಮುನ್ನ ಅಭಿಮಾನಿ ದೇವರುಗಳಿಗಾಗಿ " ಜೇಮ್ಸ್"(James) ಎಂಬ ಉಡುಗೊರೆಯನ್ನು ಕೊಟ್ಟು ಹೋಗಿದ್ದಾರೆ. ಈಗ ಈ ಉಡುಗೊರೆ ಅಭಿಮಾನಿಗಳ ಅಂಗಳಕ್ಕೆ ತಲುಪುವ ಶುಭ ಸಮಯ ಸನಿಹವಾಗ್ತಿದ್ದು,ಆ ಸಮಯ ಸದಾ ನೆನಪಲ್ಲಿ ಉಳಿಯುವಂತೆ ಮಾಡಲು ದೊಡ್ಮನೆ ಅಭಿಮಾನಿಗಳು ಹಾಗೂ ಜೇಮ್ಸ್ ಸಿನಿ ಬಳಗ ದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಸದ್ಯ ಜೇಮ್ಸ್, ಜೇಮ್ಸ್, ಜೇಮ್ಸ್, ಎಂಬ ಹೆಸರು ದಶ ದಿಕ್ಕುಗಳಲ್ಲೂ ಕೇಳಿ ಬರ್ತಿದ್ದು, ಅಪ್ಪು ಅಭಿಮಾನಿಗಳ ಅಂತರಾಳದ ಪಿಸು ಮಾತು ಕೂಡ ಅದೇ ಆಗಿದೆ.
ಪ್ರತಿದಿನ ಪ್ರತಿಕ್ಷಣ ಯಾವಾಗ " ಜೇಮ್ಸ್" ಪವರ್ ನ ಕಣ್ತುಂಬಿ ಕೊಳ್ತಿವೋ ಅನ್ನೋ ಕಾತರದಲ್ಲಿ ದೊಡ್ಮನೆ ದೇವರುಗಳಿದ್ದಾರೆ. ಅಲ್ಲದೆ ಜೇಮ್ಸ್ ಚಿತ್ರದ ರಿಲೀಸ್ ಅನ್ನು ಕನ್ನಡ ಚಿತ್ರರಂಗದಲ್ಲಿ ಕಂಡು ಕೇಳರಿಯದ ರೀತಿ ಸಂಭ್ರಮಿಸಿಲು ಸಜ್ಜಾಗಿದ್ದಾರೆ. ಅದರಲ್ಲೂ ಜೇಮ್ಸ್ ಅಪ್ಪು ಹುಟ್ಟಿದ ಹಬ್ಬದ ದಿನವೇ ಬರ್ತಿರುವ ಕಾರಣ ಒಂದಲ್ಲ ನಾಲ್ಕು ದಿನ ಜೇಮ್ಸ್ ಉತ್ಸವಕ್ಕೆ ಇಡೀ ಕರುನಾಡೇ ಸಿದ್ದವಾಗಿದೆ. ರಾಜ್ಯಾದ್ಯಂತ 130ಕಟೌಟ್, ಮಾರ್ಚ್ 17 ರಿಂದ ಮಾ.20ರ ವರೆಗೆ ನಾಲ್ಕು ದಿನ ಅಪ್ಪು ಹೆಸರಲ್ಲಿ ಅನ್ನ ದಾಸೋಹ, ಸಮಾಜ ಸೇವೆಯ ಜೊತೆಗೆ ಜೇಮ್ಸ್ ಜಾತ್ರೆಗೆ ಪಕ್ಕಾ ಪ್ಲಾನ್ ಫಿಕ್ಸ್ ಆಗಿದೆ.
ವಿಶೇಷ ಅಂದ್ರೆ ಜೇಮ್ಸ್ ರಿಲೀಸ್ ಗೆ ಇನ್ನು ಒಂದು ವಾರ ಇರುವಾಗಲೇ ಮಾಗಡಿ ರಸ್ತೆಯ ವೀರೇಶ ಚಿತ್ರಮಂದಿರದಲ್ಲಿ ಬರೋ ಬರಿ30 ಕಟೌಟ್ ಗಳನ್ನು ನಿಲ್ಲಿಸಲು ಅಪ್ಪು ಫ್ಯಾನ್ಸ್ ಸಿದ್ದತೆ ಮಾಡಿದ್ದಾರೆ. ಇನ್ನು ವಿರೇಶ ಚಿತ್ರಮಂದಿರದ ಬಳಿ ಪುನೀತ್ ರಾಜ್ ಕುಮಾರ್ ಅಭಿನಯದ ಮೊದಲ ಚಿತ್ರ"ಅಪ್ಪು" ಚಿತ್ರದಿಂದ ಕೊನೆಯ ಚಿತ್ರ ಜೇಮ್ಸ್ ವರೆಗೂ ನಟಿಸಿರುವ ಎಲ್ಲಾ ಚಿತ್ರದ ಕಟೌಟ್ ಗಳು ರಾರಾಜಿಸಲಿವೆ. ಇತ್ತ ಅಭಿಮಾನಿಗಳು ಜೇಮ್ಸ್ ಜಾತ್ರೆಗೆ ಸಕಲ ರೀತಿಯಲ್ಲು ಸಿದ್ದರಾಗಿದ್ರೆ..ಅತ್ತ ಜೇಮ್ಸ್ ಸಿನಿ ಬಳಗ ಜೇಮ್ಸ್ ಚಿತ್ರವನ್ನು ಮಂಡ್ಯದಿಂದ ಇಂಡಿಯಾದ ಮೂಲೆ ಮೂಲೆಗೂ ತಲುಪಿಸಲು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ: ಮಳೆ ನಿಂತರೂ ಮರದ ಹನಿ ನಿಲ್ಲದು.. ಅಕ್ಕಿನೇನಿ ಕುಟುಂಬಕ್ಕೆ ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ!
ಇದಕ್ಕೆ ಪೂರಕವಾಗಿ "ಜೇಮ್ಸ್" ಚಿತ್ರತಂಡ ಇದೇ ತಿಂಗಳ 12 ತಾರೀಖು ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಲು ತಿರ್ಮಾನಿಸಿದ್ದಾರೆ. ನಗರದ ಒರಾಯನ್ ಮಾಲ್ ನಲ್ಲಿ ನಡೆಯುವ ಜೇಮ್ಸ್ ಸುದ್ದಿಗೋಷ್ಠಿಗೆ ಮುಂಬೈ, ಕೇರಳ, ತಮಿಳುನಾಡು, ಹೈದರಾಬಾದ್ ನಿಂದ ಸುಮಾರು 350 ಸಿನಿ ಪತ್ರಕರ್ತರು ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲ ಜೇಮ್ಸ್ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ. ಅಪ್ಪು ನಿಧನದ ನಂತ್ರ ಜೇಮ್ಸ್ ಚಿತ್ರವನ್ನು ಅಪ್ಪಿರುವ ಶಿವಣ್ಣ, ಜೇಮ್ಸ್ ಚಿತ್ರದ ಪ್ರಚಾರದ ತೇರನ್ನು ಎಳೆಯುವ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈಗಾಗಲೇ ಅಪ್ಪು ಪಾತ್ರಕ್ಕೆ ನೋವನ್ನು ನುಂಗಿ ಡಬ್ಬಿಂಗ್ ಮಾಡಿರುವ ಶಿವಣ್ಣ.ಅಪ್ಪು ಅನುಪಸ್ಥಿತಿಯಲ್ಲಿ ಜೇಮ್ಸ್ ಪ್ರಮೋಶನ್ಗೆ ಹೆಗಲು ಕೊಟ್ಟಿದ್ದಾರೆ. ಅಲ್ಲದೆ ಮಾರ್ಚ್ 13ಕ್ಕೆ ನಗರದ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುವ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಗೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಚಿತ್ರದಲ್ಲಿ ಶಿವರಾಜ್ ಕುಮಾರ್! ಥ್ಯಾಂಕ್ಯೂ ಎಂದ ಬಾಹುಬಲಿ
ಅಲ್ಲದೆ ಅರಮನೆ ಮೈದಾನದಲ್ಲಿ ನಡೆಯುವ ಜೇಮ್ಸ್ ಪ್ರೀ ರಿಲೀಸ್ ಇವೆಂಟ್ ಗೆ ಪವರ್ ಸ್ಟಾರ್ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಮನೆ ಬಳಗವೇ ಅಲ್ಲಿ ಸೇರುವ ಸಾಧ್ಯತೆ ಇದೆ. ಜೊತೆಗೆ ಜೇಮ್ಸ್ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಸಮಾಗಮ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ