ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar)... ಈ ಹೆಸರು ಕೇಳಿದರೆ ಸಾಕು ಮೈಯಲ್ಲಿ ಒಂದು ಶಕ್ತಿ (Power) ಹುಟ್ಟುತ್ತೆ. ಈಗ ಪುನೀತ್ ರಾಜ್ಕುಮಾರ್ಗೆ ದೇವರ ಸ್ಥಾನ ನೀಡಲಾಗಿದೆ.ಸ್ಯಾಂಡಲ್ವುಡ್(Sandalwood)ನ ಸರಳತೆಯ ಸಾಮ್ರಾಟ್, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯುವುದಿಲ್ಲ. ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ದೇವರು (God) ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪ ಹಾಕಿದ್ದರು. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಈ ಮಧ್ಯೆ ಮಾರ್ಚ್ 17ರಂದು ಪವರ್ ಸ್ಟಾರ್ ಹುಟ್ಟುಹಬ್ಬ(Puneeth Rajkumar Birthday)ದಂದು ಅವರ ಕೊನೆಯ ಸಿನಿಮಾ ‘ಜೇಮ್ಸ್’(James) ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಅಪ್ಪು ಅವರಿಗೆ ಸೆಂಚುರಿ ಸ್ಟಾರ್ ಶಿವಣ್ಣ (Shivanna) ಧ್ವನಿ ನೀಡಿದ್ದರೂ, ಅಪ್ಪು (Appu) ಅವರ ಧ್ವನಿಯನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು.
ಅಪ್ಪು ಧ್ವನಿಯಲ್ಲೇ ಜೇಮ್ಸ್ ರಿ ರಿಲೀಸ್!
ಜೇಮ್ಸ್ ಚಿತ್ರದಲ್ಲಿ ನಟ ಪುನೀತ್ ರಾಜ್ಕುಮಾರ್ ಧ್ವನಿ ಇಲ್ಲ. ಅಪ್ಪು ಅಕಾಲಿಕ ನಿಧನದಿಂದ ಈ ಚಿತ್ರಕ್ಕೆ ಅವರು ಡಬ್ ಮಾಡಲು ಸಾಧ್ಯವಾಗಲಿಲ್ಲ. ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಅವರಿಗೆ ಧ್ವನಿ ನೀಡಿದ್ದರು. ಇದೀಗ ಚಿತ್ರತಂಡದಿಂದ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಜೇಮ್ಸ್’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು 'ಜೇಮ್ಸ್' ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ.ಇದೀಗ ಮತ್ತೆ ಚಿತ್ರ ರೀ ರಿಲೀಸ್ ಆಗಲಿದೆ. ಅದು ಪುನೀತ್ ರಾಜ್ಕುಮಾರ್ ಅವರ ಧ್ವನಿ ಇರಲಿದೆ. ಈ ವಿಚಾರ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಮುಂದಿನ ವಾರ ಜೇಮ್ಸ್ ಮರು ಬಿಡುಗಡೆ!
ಮುಂದಿನ ವಾರ 'ಜೇಮ್ಸ್' ಮರು ಬಿಡುಗಡೆ ಆಗುತ್ತಿದೆ. ‘ಇನ್ನು ಈ ಚಿತ್ರವನ್ನು ಶಿವಣ್ಣ ನೋಡಬೇಕು, ನಾವು ಚಿತ್ರವನ್ನು ನೋಡಿದ್ದೇವೆ. ಈಗ ಇರುವ ಚಿತ್ರಮಂದಿರಗಳಲ್ಲಿ ಅಪ್ಪು ಧ್ವನಿ ಇರುವ ಚಿತ್ರ ಅಪ್ಡೇಟ್ ಆಗುತ್ತದೆ" ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.'ಈಗ ಇರುವ ಚಿತ್ರಮಂದಿರಗಳಲ್ಲಿ ಅಪ್ಪು ಧ್ವನಿ ಇರುವ ಚಿತ್ರ ಅಪ್ಡೇಟ್ ಆಗುತ್ತದೆ' ಎಂದು ಸ್ಪಷ್ಟ ಪಡಿಸಿದ್ದಾರೆ. iಈ ವಿಚಾರ ಅಪ್ಪು ಅಭಿಮಾನಗಳಿಗೆ ಮತ್ತಷ್ಟು ಸಂತಸ ಮೂಡಿಸಿದೆ.
ಇದನ್ನೂ ಓದಿ: `ದ್ವಿತ್ವ’ ಸಿನಿಮಾದಲ್ಲಿ ಅಪ್ಪು ಲುಕ್ ಹೇಗಿರ್ತಿತ್ತು ಗೊತ್ತಾ? ವೈರಲ್ ಆಯ್ತು ಮೀಸೆ ಬಿಟ್ಟ ಪುನೀತ್ ಫೋಟೋ!
'ಜೇಮ್ಸ್' ತಂಡದ ಪ್ರರಿಶ್ರಮಕ್ಕೆ ಫಲ!
ತಾಂತ್ರಿಕ ವಿಚಾರದ ಬಗ್ಗೆ ಮಾತನಾಡಿದ ಚೇತನ್ ಕುಮಾರ್, "ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದೇವು. ಅಪ್ಪು ಅವರ 15 ಗಂಟೆಯ ಧ್ವನಿ ಸಂಗ್ರಣೆಯಿಂದ, ಈ ಸಂಸ್ಥೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಧ್ವನಿ ಉಳಿಸಿದೆ. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪನಿಗೂ ರಾಕಿ ಭಾಯ್ ಇಷ್ಟ, `ಅಧೀರ’ನ ಮಕ್ಕಳಿಗೂ ಯಶ್ ಅಂದ್ರೆ ಪಂಚಪ್ರಾಣವಂತೆ! ಇದಕ್ಕಿಂತ ಇನ್ನೇನು ಬೇಕು
ಸೋನಿ ಲೈವ್ನಲ್ಲಿ ಜೇಮ್ಸ್ ಸಿನಿಮಾ!
ಜೇಮ್ಸ್ ಕನ್ನಡದ ದಿವಂಗತ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ. ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸೂಪರ್ಸ್ಟಾರ್ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್ಗೆ ನಾಯಕಿಯಾಗಿ ನಟಿಸಿದ್ದಾರೆ. ಸೇನೆ, ಸ್ನೇಹಿತರನ್ನು ಒಳಗೊಂಡ ಫ್ಯಾಮಿಲಿ ಕುಳಿತು ನೋಡಬಹುದಾದ ಆ್ಯಕ್ಷನ್ ಥ್ರಿಲ್ಲರ್ ಜೇಮ್ಸ್ ಸಿನಿಮಾ ಏಪ್ರಿಲ್ 15 ರಿಂದ ಸೋನಿ ಲೈವ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ