'ಜೇಮ್ಸ್', ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಕೇಳಿ ಬರುತ್ತಿರುವ ಪವರ್ಫುಲ್ ಟೈಟಲ್. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ನಾಯಕನಾಗಿ ಅಭಿನಯಿಸಲಿರುವುದು ಗೊತ್ತಿರುವ ವಿಷಯ. ಹಾಗೆಯೇ ಆ್ಯಕ್ಷನ್ ಕಟ್ ಹೇಳುತ್ತಿರುವುದು ಭರ್ಜರಿ ನಿರ್ದೇಶಕ ಚೇತನ್. ಹೀಗಾಗಿಯೇ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇತ್ತು. ಈ ನಿರೀಕ್ಷೆಯನ್ನು ಕಿಂಚಿತ್ತೂ ಹುಸಿಗೊಳಿಸದಂತಹ ಮೇಕಿಂಗ್ ಮೂಲಕ ಜೇಮ್ಸ್ ಲುಕ್ ಹೊರಬಿದ್ದಿದೆ.
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಚೇತನ್ ಮತ್ತು ತಂಡ ಅದ್ಭುತ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಒಂದೇ ನೋಟಕ್ಕೆ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ ಎಂದೆನಿಸಿಬಿಡುತ್ತೆ. ಕಷ್ಟ ಬಂದಾಗ ಹೆದುರ್ಕೋಳೋರು ಕಾಮನ್. ಎಲ್ಲಾನೂ ಎದುರಿಸಿ ಮುಂದೆ ನಿಲ್ಲೋನು ನಂಬರ್ 1 ಎಂಬ ಡೈಲಾಗ್ ಮೂಲಕ ಆರಂಭವಾಗುವ ಜೇಮ್ಸ್ ವಿಡಿಯೋ ರೇಸಿಂಗ್ ಅಂಗಳಕ್ಕೆ ತಂದು ನಿಲ್ಲಿಸುತ್ತೆ. ಅಲ್ಲಿ ದೊಡ್ಡದೊಂದು ಟ್ರಕ್ ಕಂಟೈನರ್, ಅದನ್ನು ಚೇಸ್ ಮಾಡಿ ಬರುವ ಜೇಮ್ಸ್. ಅದಕ್ಕೆ ಇಂಗ್ಲಿಷ್ ಸಾಹಿತ್ಯದೊಂದಿಗೆ ಅತ್ಯಾದ್ಭುತ ಚರಣ್ ರಾಜ್ ಮ್ಯೂಸಿಕ್.
1.31 ನಿಮಿಷದ ಈ ವಿಡಿಯೋ ಒಂದು ಕ್ಷಣ ಹಾಲಿವುಡ್ ಚಿತ್ರದ ಫೀಲ್ ಕೊಡುತ್ತೆ. ಅಲ್ಲಿಗೆ ಅಪ್ಪು ಅಭಿಮಾನಿಗಳ ಕಾತುರತೆಗೆ ಸದ್ಯಕ್ಕೆ ಫುಲ್ಸ್ಟಾಪ್ ಬಿದ್ದಿದೆ. ಆದರೆ ಚೇತನ್ ಅವರ ಈ ಸಣ್ಣ ಝಲಕ್ ಮಾತ್ರ ಜೇಮ್ಸ್ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡುವುದರಲ್ಲಿ ಡೌಟೇ ಇಲ್ಲ.
ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪತ್ತೆಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಈ ಚಿತ್ರದಲ್ಲಿ ಟಾಲಿವುಡ್ ನಟಿ ನಿಧಿ ಅಗರ್ವಾಲ್ ಅಥವಾ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಸಣ್ಣ ಝಲಕ್ ಮೂಲಕವೇ ಮೋಡಿ ಮಾಡಿರುವ ತಮ್ಮ ಬತ್ತಳಿಕೆಯಿಂದ ಪವರ್ ಫುಲ್ ಸಿನಿಮಾ ಬರಲಿದೆ ಎಂಬುದರ ಕ್ಲೂ ನೀಡಿದ್ದಾರೆ ನಿರ್ದೇಶಕ ಚೇತನ್ ಕುಮಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ