• Home
 • »
 • News
 • »
 • entertainment
 • »
 • 'James' ಟೀಂನಿಂದ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹೇಗಿರುತ್ತೆ ಗೊತ್ತಾ 'ಪವರ್‌'ಫುಲ್ ಇಂಟ್ರಡಕ್ಷನ್ ಸಾಂಗ್?

'James' ಟೀಂನಿಂದ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹೇಗಿರುತ್ತೆ ಗೊತ್ತಾ 'ಪವರ್‌'ಫುಲ್ ಇಂಟ್ರಡಕ್ಷನ್ ಸಾಂಗ್?

Puneet Rajkumar: ಇದರ ಜೊತೆಗೆ  ಜೇಮ್ಸ್ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಪ್ಲಾನ್ ಮಾಡಿರುವ ಜೇಮ್ಸ್ ಸಿನಿ ಬಳಗ ಮೂರು ಕಡೆ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲು ಸಿದ್ದತೆ ಮಾಡಿ ಕೊಳ್ತಿದೆ.  ಪುನೀತ್ ರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವ ಬಳ್ಳಾರಿಯ ಹೋಸ ಕೋಟೆ, ಬೆಂಗಳೂರು ಹಾಗೂ ಅಣ್ಣಾವ್ರ ಹುಟ್ಟೂರು ಚಾಮರಾಜನಗರದಲ್ಲಿ ಪ್ರೀ ರಿಲೀಸ್  ಇವೆಂಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಮುಂದೆ ಓದಿ ...
 • Share this:

  ಜೇಮ್ಸ್ (James)  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಭಿನಯದ ಕೊನೆಯ ಸಿನಿಮಾ. ಈ ಪವರ್ ಪುಲ್ ಸಿನಿಮಾ ನೋಡಲು ಪವರ್ ಫ್ಯಾನ್ಸ್ (Fans) ನಿದ್ದೆ ಬಿಟ್ಟು ಕಾಯ್ತಿದ್ತಾರೆ. ಮಾರ್ಚ್ 17  ಕ್ಕೆ ಅಂದರೆ ಅಪ್ಪು ಜನ್ಮ ದಿನಕ್ಕೆ " ಜೇಮ್ಸ್" ಆಗಮನಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮೆನೆ ಅಭಿಮಾನಿಗಳು ದೊಡ್ಡ ಮಟ್ಟದ ತಯಾರಿ ಮಾಡ್ಕೊಂತಿದ್ದಾರೆ. ಈ ಗ್ಯಾಪ್ ನಲ್ಲಿ ಈಗ ಪುನೀತ್ ಅಭಿಮಾನಿ ದೇವರುಗಳಿಗೆ " ಜೇಮ್ಸ್" ಸಿನಿ ಬಳಗದಿಂದ ಸಿಹಿ ಸುದ್ದಿಯೊಂದು ಬಂದಿದೆ.

  ಹೌದು ಜೇಮ್ಸ್ ಚಿತ್ರದ ಟೀಸರ್ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಈ ಚಿತ್ರದ ಅಪ್ಡೇಟ್‌ ಬಗ್ಗೆ ಕಾಯ್ತಿದ್ರು.. ಈಗ ಜೇಮ್ಸ್  ಚಿತ್ರದ ಭರ್ಜರಿ ಅಪ್ಡೇಟ್‌ ನ್ಯೂಸ್ 18 ಕನ್ನಡಕ್ಕೆ ಸಿಕ್ಕಿದೆ. ಚೇಮ್ಸ್ ಚಿತ್ರದ ಚಿಕ್ಕ ಝಲಕ್ ಬಿಟ್ಟು ಅಪ್ಪು ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದ್ದ ನಿರ್ದೇಶಕ ಚೇತನ್ ಕುಮಾರ್ ಈಗ "ಜೇಮ್ಸ್" ಚಿತ್ರದ ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ಅನ್ನು  ಅಭಿಮಾನಿಗಳ ಅಂಗಳಕ್ಕೆ ತಲುಪಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

  ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ರಿಲೀಸ್

  ಫೆಬ್ರವರಿ ಕೊನೆಯಲ್ಲಿ ಇಲ್ಲ ಮಾರ್ಚ್ 1 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 5  ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ಚೇತನ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.‌ ಇನ್ನು ಈ ಹಾಡು " ಟ್ರೇಡ್  ಮಾರ್ಕ್" ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ,ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ.

  ಇದನ್ನೂ ಓದಿ: ರಜಾ ದಿನ ರಂಜನಿ ಮಾಡೋ ಕೆಲಸಗಳಿವು..! ಕನ್ನಡತಿ ಚೆಲುವೆಯ ರಜಾ ರೊಟೀನ್

  ಅಲ್ಲದೆ ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ವೆಚ್ಚದ ಸೆಟ್ ಹಾಕಿ ಆ ಕಲರ್ ಪುಲ್ ಸೆಟ್ ಗಳಲ್ಲಿ ಪವರ್ ಸ್ಟಾರ್ ಗೆ ಪವರ್ ಪುಲ್ ಸ್ಟೆಪ್ ಗಳ ಕಂಪೋಸ್ ಮಾಡಿದ್ದಾರೆ ಟಾಲಿವುಡ್ ಸ್ಟಾರ್ ಕೋರಿಯೋಗ್ರಫರ್ ಶಂಕರ್. ಇದಲ್ಲದೆ ಈ ಹಾಡು ಅಪ್ಪು  ಅಭಿಮಾನಿಗಳ ಟಾರ್ಗೆಟ್‌ ಮಾಡಿ ಮಾಡಿದ್ದು, ಅಪ್ಪು ಅಭಿಮಾನಿ ಬಳಗದಲ್ಲಿ ಈ ಹಾಡು ಹೊಸ " ಟ್ರೇಡ್ ಮಾರ್ಕ್ " ಹುಟ್ಟು ಹಾಕುತ್ತೆ ಅನ್ನೋದು ಚಿತ್ರ ತಂಡದ ನಂಬಿಕೆ.

  ಇದರ ಜೊತೆಗೆ  ಜೇಮ್ಸ್ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಪ್ಲಾನ್ ಮಾಡಿರುವ ಜೇಮ್ಸ್ ಸಿನಿ ಬಳಗ ಮೂರು ಕಡೆ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಲು ಸಿದ್ದತೆ ಮಾಡಿ ಕೊಳ್ತಿದೆ.  ಪುನೀತ್ ರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವ ಬಳ್ಳಾರಿಯ ಹೋಸ ಕೋಟೆ, ಬೆಂಗಳೂರು ಹಾಗೂ ಅಣ್ಣಾವ್ರ ಹುಟ್ಟೂರು ಚಾಮರಾಜನಗರದಲ್ಲಿ ಪ್ರೀ ರಿಲೀಸ್  ಇವೆಂಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇನ್ನು ಚಿತ್ರದ ರಿಲೀಸ್ ಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದ್ದು, ಜೇಮ್ಸ್ ರಿಲೀಸ್ ದಿನ ಹೊಸ ಇತಿಹಾಸ ಬರೆಯಲು ದೊಡ್ಮನೆ ಅಭಿಮಾನಿಗಳು ಸಿದ್ದವಾಗಿದ್ದಾರೆ.

  ಜೇಮ್ಸ್​ ಉತ್ಸವಕ್ಕೆ ಅಭಿಮಾನಿಗಳು ಸಜ್ಜು

  ಇದನ್ನೂ ಓದಿ:ಜಾಕಿ ಭಗ್ನಾನಿಯನ್ನು ಮದ್ವೆಯಾದ್ರೆ ಜೈಲಿಗೆ ಹೋಗ್ತಾರಂತೆ ರಾಕುಲ್​! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

  ಬೆಂಗಳೂರಿನ ಚಿತ್ರಮಂದಿರಗಳ ಬಳಿ ನಿಲ್ಲಿಸಲು ಅಪ್ಪು ಕಟೌಟ್ ಗಾಗಿಯೇ ಸುಮಾರು 15 ಲಕ್ಷ ಖರ್ಚು ಮಾಡಿದ್ದು, ಮೂರು ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್ ಬುಕ್ ಮಾಡಿದ್ದಾರೆ. ಅಲ್ಲದೆ ಅಪ್ಪು ಕಟೌಟ್ ಗಳಿಗೆ ಹೂವಿನ ಅಲಂಕಾರಕ್ಕಾಗಿ 12 ಲಕ್ಷ ಮೀಸಲಿಟ್ಟಿರುವ ಪವರ್ ಫ್ಯಾನ್ಸ್ ಗಳು ಮಾರ್ಚ್ 17 ರಿಂದ ಮಾರ್ಚ್ 20 ವರೆಗೆ ನಾಲ್ಕು ದಿನಗಳು ಜೇಮ್ಸ್ ಉತ್ಸವ ಮಾಡಲು ಉತ್ಸುಕರಾಗಿದ್ದಾರೆ.

  ವರದಿ: ಸತೀಶ್​ ಎಂ.ಬಿ

  Published by:Sandhya M
  First published: