Movie Event: ‘ಜೇಮ್ಸ್‘ ಪ್ರೀ ರಿಲೀಸ್ ಇವೆಂಟ್; ದೊಡ್ಮನೆ ಕುಟುಂಬ ಸೇರಿದಂತೆ ಹಲವು ತಾರೆಯರು ಭಾಗಿ

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದೆ. ಇವೆಂಟ್ ನಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದಾರೆ.

ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್

ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್

  • Share this:
    ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರತಂಡ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಪ್ರಿ-ರಿಲೀಸ್ (James Pre Release Event) ಇವೆಂಟ್ ಆಯೋಜಿಸಿದೆ. ಇವೆಂಟ್ ನಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದಾರೆ. ಅಪ್ಪು ನಟನೆಯ ‘ಜೇಮ್ಸ್’ (James) ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗಲಿದೆ. ಅಪ್ಪು ಜನ್ಮದಿನದಂದು ಜೇಮ್ಸ್ ರಿಲೀಸ್ ಆಗುತ್ತಿದ್ದು, ಚಿತ್ರ ಕಣ್ತುಂಬಿಕೊಳ್ಳಲು, ನೆಚ್ಚಿನ ನಟನನ್ನು (Actor) ಕಾಣಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಪುನೀತ್ ಅವರ ಪಾತ್ರಕ್ಕೆ ಶಿವರಾಜ್‍ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಒಂದು ಪಾತ್ರವನ್ನು ಮಾಡಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಕೂಡ ಒಂದು ಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ರಾಜ್‍ಕುಮಾರ್ ಅವರ ಮೂವರು ಮಕ್ಕಳು ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚಿದಂತಾಗಿದೆ.

    ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

    ಜೇಮ್ಸ್ ಇವೆಂಟ್ ನಲ್ಲಿ 30 ವಿಶೇಷಗಳು

    ದಿ. ಪುನೀತ್ ರಾಜ್ ಕುಮಾರ್ ಅಭಿನಯದ 30ನೇ ಸಿನಿಮಾ ಜೇಮ್ಸ್ ಆಗಿದೆ. ಜೇಮ್ಸ್ ಸಿನಿಮಾ ಅಪ್ಪು ಅವರ 30ನೇ ಸಿನಿಮಾ ಕಾರ್ಯಕ್ರದಲ್ಲೂ 30 ವಿಶೇಷಗಳು ಇವೆ. ಕಾರ್ಯಕ್ರಮದ ಆರಂಭದಿಂದ ಅಂತ್ಯದ ವರೆಗೂ 30 ಕಾರ್ಯಕ್ರಮಗಳು ಇರಲಿವೆ. ಫಸ್ಟ್ ಟೈಂ ಜೇಮ್ಸ್ ಇವೆಂಟ್ ನಲ್ಲಿ ಅಭಿಮಾನಿಗಳ ಮುಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಲಿದ್ದಾರೆ.

    ಕಾರ್ಯಕ್ರಮದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ವಿಶ್ ಬೈಟ್ ಪ್ಲೇ ಆಗಲಿದೆ. ಜೇಮ್ಸ್ ವೇದಿಕೆಯಲ್ಲಿ ಅಪ್ಪುಗಾಗಿ ಹಾಸ್ಯ ಕಲಾವಿದ ಸಾಧು ಕೋಕಿಲ ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವಣ್ಣ,ಉಪೇಂದ್ರ, ಸಿಎಂ ಮಾತನಾಡಲಿದ್ದಾರೆ. ಅಲ್ಲದೆ ಪುನೀತ್ ರಾಜ್ ಕುಮಾರ್ ಬಾಲ್ಯದಿಂದ ಜೇಮ್ಸ್ ವರೆಗೂ ವಿಶೇಷ ಎವಿ ಪ್ಲೇ ಅಗಲಿದೆ.

    ಇದನ್ನೂ ಓದಿ: ಸಿನಿ ಪ್ರಿಯರೇ ಗಮನಿಸಿ, ಇದೇ ಏಪ್ರಿಲ್ 1ರಿಂದ ಲೋಕಲ್ ಟ್ರೈನ್ ಸಂಚರಿಸಲಿದೆ

    ಇವೆಂಟ್ ಜಾಗಕ್ಕೂ ಜೇಮ್ಸ್ ತಂಡಕ್ಕೂ ವಿಶೇಷ ನಂಟು

    ಜೇಮ್ಸ್ ಇವೆಂಟ್ ನಡೆಯುತ್ತಿರುವ ಜಾಗಕ್ಕೂ ಜೇಮ್ಸ್ ತಂಡಕ್ಕೂ ಇದೆ ವಿಶೇಷ ನಂಟಿದೆ. ಜೇಮ್ಸ್ ಚಿತ್ರದ ಶೂಟಿಂಗ್ ಮಾಡಿದ್ದ ಜಾಗದಲ್ಲೆ ಚಿತ್ರತಂಡ ಇವೆಂಟ್ ಮಾಡುತ್ತಿದೆ. ಭಾವನಾತ್ಮಕ  ಸನ್ನಿವೇಶದ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ನಿರ್ದೇಶಕ ಚೇತನ್ ಮಾಹಿತಿ ನೀಡಿದ್ದಾರೆ.

    ನಿರ್ದೇಶಕ ಚೇತನ್ ಮಾತನಾಡಿ, ಇವೆಂಟ್ ಮಾಡ್ತಿರುವ ಜಾಗದಲ್ಲಿ ಬೃಹತ್ ಸೆಟ್ ಹಾಕಿ 18 ದಿನ ಶೂಟಿಂಗ್ ಮಾಡಲಾಗಿತ್ತು. ಈಗ ಅದೇ ಜಾಗದಲ್ಲಿ ಅವರಿಲ್ಲದೆ ಇವೆಂಟ್ ಮಾಡ್ತಿದ್ದೀವಿ. ಜೇಮ್ಸ್ ಅಪ್ಪು ಸರ್ ನಟನಾಗಿ ಅಭಿನಯಿಸಿದ ಕೊನೆಯ ಚಿತ್ರ. ಅದೇ ರೀತಿ ಅಪ್ಪು ಸರ್ ದೇವರಾಗಿ ನಟಿಸಿದ ಮೊದಲ‌ ಸಿನಿಮಾ "ಜೇಮ್ಸ್" ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಅಪ್ಪು ಚಿತ್ರಕ್ಕೆ ಡ್ಯಾನ್ಸ್ ಮಾಡಿದ್ದನ್ನು ನೋಡಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕರಾಗಿ ಕಾರ್ಯಕ್ರಮದಿಂದ ಹೊರ ಹೋದರು.

    ಇನ್ನು ಕಾರ್ಯಕ್ರಮದ ಬಗ್ಗೆ ನಟ ಶ್ರೀ ಮುರುಳಿ ಮಾತನಾಡಿದ್ದಾರೆ. ಅಪ್ಪು ಮಾಮ ತರ ಎರಡು ಡ್ಯಾನ್ಸ್, ಎರಡು ಫೈಟ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಇರೋದು ಒಬ್ಬರೇ ಪವರ್ ಸ್ಟಾರ್ ಅವರು ಪುನೀತ್ ರಾಜ್ ಕುಮಾರ್ . ಪುನೀತ್ ರಾಜ್ ಕುಮಾರ್ ರನ್ನ ಒಂದು ಯೂನಿವರ್ಸಿಟಿ ತರ ಎಲ್ಲಾ ಕಲಾವಿದರು ಪಾಲಿಸಬೇಕು.

    ಇದನ್ನೂ ಓದಿ: ಮೆಗಾಸ್ಟಾರ್​​​ ಚಿರಂಜೀವಿ-ತಮಿಳು ನಟ ವಿಶಾಲ್​ ಮಧ್ಯೆ ಇರುವ ನಂಟೇನು? ನೋಡಿದ್ರೆ ಶಾಕ್ ಆಗ್ತೀರಾ!

    ನಮಗೆ ಗೊತ್ತೇ ಇರಲಿಲ್ಲ ನಮ್ಮ ಜೊತೆ ದೇವರು ಇದ್ರು ಅಂತ. ಆ ದೇವರನ್ನ ಮತ್ತೊಂದು ದೇವರು ಇಷ್ಟು ಬೇಗ ಕಿತ್ತುಕೊಂಡ್ರಲ್ಲಾ ಅಂತ ಬೇಜಾರಾಗಿದೆ. ಆದ್ರೆ ಅಪ್ಪು ಮಾವ ಜೇಮ್ಸ್ ಸಿನಿಮಾ ಮೂಲಕ ನಮ್ಮ ಜೊತೆ ಬರ್ತಾರೆ ಎಲ್ಲರು ಸಿನಿಮಾ ನೋಡಿ ಎಂದು ಹೇಳಿದರು.

    ನಟ ಶ್ರೀಕಾಂತ್ ಮಾತನಾಡಿ, ಏನು ಮಾತಾಡಬೇಕು ಅಂತ ಗೊತ್ತಿಲ್ಲ . ನಾನು ಹುಟ್ಟಿದ್ದು ಗಂಗಾವತಿಯಲ್ಲಿ. ರಾಜ್ ಕುಮಾರ್ ಸಿನಿಮಾಗಳನ್ನ ನೋಡಿ ಬೆಳೆದವನು. ಅಣ್ಣಾವ್ರ ಸಿನಿಮಾ ನನಗೆ ತುಂಬಾ ಇಷ್ಟ. ಶಿವರಾಜ್ ಕುಮಾರ್ ಜೊತೆ ವಿಲನ್ ಸಿನಿಮಾದಲ್ಲಿ ಮಾಡಿದ್ದೆ.

    ಈಗ ಜೇಮ್ಸ್ ಸಿನಿಮಾದಲ್ಲಿ ನಟಿಸಿದ್ದೇನೆ. ಅವರ ಜತೆ 45 ದಿನ ಕೆಲಸ ಮಾಡಿದ್ದೇನೆ. ಅವರ ನೆನಪುಗಳು ಆದಾಗ ತುಂಬಾ ನೋವಾಗುತ್ತೆ. ನಮ್ಮ ಜೊತೆ ಗೆ ಇದ್ದಾರೆ‌. ಎಲ್ಲರ ಹೃದಯದಲ್ಲೂ ಇದ್ದಾರೆ. ಅಪ್ಪು‌ಸರ್ ಹೇಳ್ತಿದ್ರು. ಜೇಮ್ಸ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಎಲ್ಲಾ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಪ್ಪು ವಿ ಮಿಸ್ ಯು, ಲವ್ ಯು ಆಲ್, ಆಲ್ ವೇಸ್ ಪವರ್ ಸ್ಟಾರ್ ಎಂದರು.
    Published by:renukadariyannavar
    First published: