James Director Chethan: ಜೇಮ್ಸ್ ಡೈರೆಕ್ಟರ್ ಬಹದ್ದೂರ್ ಚೇತನ್ ಹೊಸ ಆ್ಯಕ್ಷನ್ ಸಿನಿಮಾ! ಇವರೇ ನೋಡಿ ಹೀರೋ

ಪವರ್ ಸ್ಟಾರ್ ಪುನಿತ್ ರಾಜ್​ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಆದ್ಮೇಲೆ ಡೈರೆಕ್ಟರ್ ಚೇತನ್ ಆಕ್ಷನ್ ಚಿತ್ರಕ್ಕಾಗಿಯೇ ಕೆಲಸ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಹೆಚ್ಚಿನ ಆಕ್ಷನ್​ಗಳನ್ನೇ ಪ್ಲಾನ್ ಮಾಡಿಕೊಳ್ಳಲಾಗಿದೆ.

ಜೇಮ್ಸ್ ಡೈರೆಕ್ಟರ್ ಚೇತನ್ ಹೊಸ ಸಿನಿಮಾ

ಜೇಮ್ಸ್ ಡೈರೆಕ್ಟರ್ ಚೇತನ್ ಹೊಸ ಸಿನಿಮಾ

  • Share this:
ಪವರ್ ಸ್ಟಾರ್ ಪುನಿತ್ ರಾಜಕುಮಾರ್ (Power Star Puneeth Rajkumar) ಅಭಿನಯದ ಜೇಮ್ಸ್ ಚಿತ್ರ (James Film) ಬಂದ್ಮೇಲೆ ಚಿತ್ರದ ಡೈರೆಕ್ಟರ್ ಚೇತನ್ ಕುಮಾರ್ (Chethan Kumar) ಮಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಸ್ವತಃ ಚೇತನ್ ಉತ್ತರ ಕೊಟ್ಟಿದ್ದಾರೆ. ಮತ್ತೊಂದು ಆಕ್ಷನ್ (Action Cinema) ಸಿನಿಮಾ ತಯಾರಿಯಲ್ಲಿಯೇ ಡೈರೆಕ್ಟರ್ ಚೇತನ್ ಕುಮಾರ್ ಇದ್ದಾರೆ. ತಮ್ಮ ಚಿತ್ರ ಬದುಕಿನ ಇಲ್ಲಿವರೆಗಿನ ಸಿನಿಮಾಗಳಲ್ಲಿ ಜೇಮ್ಸ್ ರೀತೀನೆ ಈ ಚಿತ್ರವೂ ಹೆಚ್ಚು ಗಮನ ಸೆಳೆಯೋ ಹಾಗೇನೆ ಇದೆ. ಸಿನಿಮಾದಲ್ಲಿ (Action Sequences) ಒಂದಲ್ಲ ಎರಡಲ್ಲ 6 ಆಕ್ಷನ್ ಸಿಕ್ವೆನ್ಸ್​ಗಳು ಇವೆ. ಒಂದೊಂದು ಫೈಟ್ಸ್ ಇಲ್ಲಿ ಭಾರೀ ಥ್ರಿಲ್ಲ್ ಮೂಡಿಸಲಿವೆ. ಈ ಹಿನ್ನೆಲೆಯಲ್ಲಿಯೇ ಚಿತ್ರೀಕರಣ ಪೂರ್ವ ಕೆಲಸಗಳೂ ಭರ್ಜರಿಯಾಗಿಯೇ ನಡೆಯುತ್ತಿವೆ.

ಡೈರೆಕ್ಟರ್ ಬಹದ್ದೂರ್ ಚೇತನ್ ಕೂಡ ಈ ಸಿನಿಮಾಗೋಸ್ಕರವೇ ಹೊಸದೊಂದು ಕಥೆ ಮಾಡಿಕೊಂಡು ಚಿತ್ರೀಕರಣಕ್ಕೆ ಹೋಗೋಕೆ ಈಗ ರೆಡಿ ಆಗುತ್ತಿದ್ದಾರೆ.

James Director Chetan Planned for another Action Movie
ಡೈರೆಕ್ಟರ್ ಚೇತನ್  ಮುಂದಿನ ಚಿತ್ರದ ಹೀರೋ


ಪವರ್ ಸ್ಟಾರ್ ಪುನಿತ್ ರಾಜ್​ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಆದ್ಮೇಲೆ ಡೈರೆಕ್ಟರ್ ಚೇತನ್ ಆಕ್ಷನ್ ಚಿತ್ರಕ್ಕಾಗಿಯೇ ಕೆಲಸ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಹೆಚ್ಚಿನ ಆಕ್ಷನ್​ಗಳನ್ನೇ ಪ್ಲಾನ್ ಮಾಡಿಕೊಳ್ಳಲಾಗಿದೆ.

ಆಕ್ಷನ್ ಸಿನಿಮಾ ಡೈರೆಕ್ಷನ್ ತಯಾರಿಯಲ್ಲಿ ಜೇಮ್ಸ್ ಡೈರೆಕ್ಟರ್
ಚಿತ್ರದ ಕಥೆಯಲ್ಲಿ ಎಂಟರ್​ಟೈನ್​ಮೆಂಟ್​ ಕೂಡ ಇರೋದ್ರಿಂದ ಇದು ಆಕ್ಷನ್ ಬೇಸ್​ ಎಂಟರ್​ಟೈನ್​ಮೆಂಟ್ ಸಿನಿಮಾನೇ ಆಗಿದೆ. ಚಿತ್ರದ ಕೆಲಸ ಈಗಾಗಲೇ ಶುರು ಆಗಿದೆ. ಸಿನಿಮಾದಲ್ಲಿ 6 ಆಕ್ಷನ್ ಸಿಕ್ವೆನ್ಸ್​ಗಳು ಇವೆ. ಇದಕ್ಕಾಗಿಯೇ ಹೆಸರಾಂತ ಸಾಹಸ ನಿರ್ದೇಶಕರೇ ಕೆಲಸ ಮಾಡಲಿದ್ದಾರೆ.

ಚೇತನ್ ನಿರ್ದೇಶನದ ಈ ಚಿತ್ರಕ್ಕೆ ಸಾಹಸ ನಿರ್ದೇಶಕ ರವಿ ವರ್ಮ ಕೆಲಸ ಮಾಡಲಿದ್ದಾರೆ. ಟಾಲಿವುಡ್​ನ ಸಾಹಸ ನಿರ್ದೇಶಕರಾದ ರಾಮ್​ ಲಕ್ಷ್ಮಣ ಕನ್ನಡದ ಈ ಆಕ್ಷನ್ ಚಿತ್ರಕ್ಕೆ ಆ್ಯಕ್ಷನ್ ಡೈರೆಕ್ಷನ್ ಮಾಡಲಿದ್ದಾರೆ. ಸಿನಿಮಾದಲ್ಲಿ ಭಾರೀ ಆ್ಯಕ್ಷನ್ ಗಳನ್ನೇ ಇಲ್ಲಿ ಪ್ರೇಕ್ಷಕರು ನೋಡಬಹುದು.

ಆಕ್ಷನ್ ಸಿನಿಮಾದಲ್ಲಿ ಐದು ಸಾಂಗ್​ ಧಮಾಕಾ
ಚೇತನ್ ತಮ್ಮ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಜೊತೆಗೆ ಒಳ್ಳೆ ಹಾಡುಗಳನ್ನ ಪ್ಲಾನ್​ ಮಾಡಿದ್ದಾರೆ. ಒಂದಲ್ಲ ಎರಡಲ್ಲ, ಐದು ಹಾಡುಗಳನ್ನ ಈ ಚಿತ್ರಕ್ಕೆ ಈಗಾಗಲೇ ಪ್ಲಾನ್ ಮಾಡಲಾಗಿದೆ. ಸಿನಿಮಾದಲ್ಲಿ ಆ್ಯಕ್ಷನ್ ಪ್ರಿಯರಿಗೆ ಆಕ್ಷನ್, ಸಂಗೀತ ಪ್ರಿಯರಿಗೆ ಸಂಗೀತ ಅನ್ನೋ ಹಾಗೆ ಪ್ಲಾನ್ ಮಾಡಲಾಗಿದೆ.

James Director Chetan Planned for another Action Movie
ಡೈರೆಕ್ಷನ್ ಚೇತನ್ ಮುಂದಿನ ಚಿತ್ರದ ನಾಯಕ ಇಷಾನ್


RAYMO ಚಿತ್ರದ ಇಷಾನ್ ಈ ಸಿನಿಮಾದ ಹೀರೋ
ಹೌದು, ಚೇತನ್ ನಿರ್ದೇಶನ ಮಾಡಲಿರೋ ಈ ಚಿತ್ರಕ್ಕೆ RAYMO ಸಿನಿಮಾದ ಯುವ ನಾಯಕ ನಟ ಇಷಾನ್ ನಾಯಕ ನಟರಾಗಿದ್ದಾರೆ. ಇವರ ಈ ಸಿನಿಮಾ ಬಂದ್ಮೇಲೆ ಚೇತನ್ ಆ್ಯಕ್ಷನ್ ಸಿನಿಮಾದ ಚಿತ್ರೀಕರಣದ ಕೆಲಸ ಶುರು ಆಗುತ್ತದೆ ಎಂದು ಸ್ವತಃ ಚೇತನ್ ಕುಮಾರ್ ಹೇಳಿಕೊಂಡಿದ್ದಾರೆ.

ಶೀಘ್ರದಲ್ಲಿಯೇ ಸಿನಿಮಾದ ಇತರ ಡಿಟೈಲ್ಸ್​ ಅನ್ನ ಸಿನಿಮಾ ತಂಡ ಕೊಡಲಿದೆ. ಚಿತ್ರದ ಇತರ ಭಾಗದ ಟೆಕ್ನಿಷನ್​ಗಳ ಆಯ್ಕೆ ಇನ್ನಷ್ಟೆ ಫೈನಲ್​ ಆಗಬೇಕಿದೆ.ಆ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಚೇತನ್ ಶೀಘ್ರದಲ್ಲಿಯೇ ಈ ಕುರಿತು ಅಧಿಕೃತ ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಬಿಗ್ ಪ್ರೊಡ್ಯೂಸರ್ ಮನೋಹರ್ ನಿರ್ಮಾಣದ ಸಿನಿಮಾ
ಚೇತನ್​ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮನೋಹರ್ ಬಂಡವಾಳ ಹೂಡುತ್ತಿದ್ದಾರೆ. ಇದು ಬಿಟ್ಟರೇ, ನಾಯಕಿಯ ಮತ್ತು ಇತರ ಕಲಾವಿದರ ಆಯ್ಕೆ ನಡೆಯಬೇಕಿದ್ದು, ಮ್ಯೂಸಿಕ್ ಡೈರೆಕ್ಟರ್ ಯಾರು ಅನ್ನೋದು ಕೂಡ ಇನ್ನೂ ಫೈನಲ್ ಆಗಬೇಕಿದೆ.  ಉಳಿದಂತೆ ಡೈರೆಕ್ಟರ್ ಚೇತನ್ ಕುಮಾರ್ ಮತ್ತೊಂದು ಆ್ಯಕ್ಷನ್ ಸಿನಿಮಾ ಮಾಡ್ತಿರೋ ಖುಷಿಯಲ್ಲಿಯೇ ಇದ್ದಾರೆ
First published: