• Home
  • »
  • News
  • »
  • entertainment
  • »
  • Puneeth Rajkumar: ನಾನು ಪುನೀತ್​ ವ್ಯಕ್ತಿತ್ವದ ಅಭಿಮಾನಿ, ಅಪ್ಪು ವಿಶ್ವಮಾನವ- ಜೇಮ್ಸ್ ಡೈರೆಕ್ಟರ್ ಚೇತನ್

Puneeth Rajkumar: ನಾನು ಪುನೀತ್​ ವ್ಯಕ್ತಿತ್ವದ ಅಭಿಮಾನಿ, ಅಪ್ಪು ವಿಶ್ವಮಾನವ- ಜೇಮ್ಸ್ ಡೈರೆಕ್ಟರ್ ಚೇತನ್

ನಾನು ಅಪ್ಪು ವ್ಯಕ್ತಿತ್ವದ ಅಭಿಮಾನಿ

ನಾನು ಅಪ್ಪು ವ್ಯಕ್ತಿತ್ವದ ಅಭಿಮಾನಿ

ಪುನೀತ್ ರಾಜಕುಮಾರ್ ಅವರು ನನ್ನ ಎಂದೂ ಏಕವಚನದಲ್ಲಿ ಕರೆಯಲೇ ಇಲ್ಲ. ಏಜ್​ ನಲ್ಲಿ ನಾನು ಅವರಿಗಿಂತಲೂ ಕಿರಿಯ, ಆದರೂ ಅಪ್ಪು ಬನ್ನಿ ಚೇತನ್ ಹೋಗಿ ಚೇತನ್ ಎಂದು ಕರೆಯುತ್ತಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ಸೂಪರ್ ಸ್ಟಾರ್ ಪುನೀತ್ (Puneeth Rajkumar) ರಾಜ್ ಕುಮಾರ್ ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಪುನೀತ್ ಎಂದೂ ಸೂಪರ್ (Super Star) ಸ್ಟಾರ್ ರೀತಿ ವರ್ತಿಸಲೇ ಇಲ್ಲ. ಅವರ ವ್ಯಕ್ತಿತ್ವಕ್ಕೆ ಸಾಟಿ ಯಾರೂ ಇಲ್ಲ. ಅವರ ಮಾತು ಅವರ ಸರಳತೆ ನಿಜಕ್ಕೂ ಎಲ್ಲರಿಗೂ ಮಾದರಿನೇ ಸರಿ. ಪುನೀತ್ ಜೊತೆಗೆ 30 ಸೆಕೆಂಡ್ ಮಾತನಾಡಿದ್ರೆ ಸಾಕು. ಪುನೀತ್ ಆತ್ಮೀಯರಾಗಿ ಬಿಡುತ್ತಿದ್ದರು. ಮಾನವನಾಗಿಯೇ (Appu) ಅಪ್ಪು ಒಬ್ಬ ವಿಶೇಷ ವ್ಯಕ್ತಿತ್ವದ ವ್ಯಕ್ತಿ ಅಂದ್ರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಂತಹ ಈ ವಿಶೇಷ ವ್ಯಕ್ತಿತ್ವದ ವ್ಯಕ್ತಿಯ ಅಭಿಮಾನಿಯಾಗಿದ್ದಾರೆ ಜೇಮ್ಸ್ (James Director) ಡೈರೆಕ್ಟರ್ ಚೇತನ್ ಕುಮಾರ್. ತಮ್ಮ ಈ ಅಭಿಮಾನವನ್ನ ನ್ಯೂಸ್-18 ಕನ್ನಡದ ಡಿಜಿಟಲ್ ಜೊತೆಗೆ ಮನಸಾರೆ ಹಂಚಿಕೊಂಡಿದ್ದಾರೆ.


ಅಪ್ಪು ಸಾಮಾನ್ಯ ವ್ಯಕ್ತಿ ಅಲ್ಲ ವಿಶ್ವ ಮಾನವ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಶ್ವ ಮಾನವರೇ ಆಗಿದ್ದಾರೆ. ಈ ಒಂದು ಮಾತನ್ನ ಇಡೀ ನಾಡು ಕೂಗಿ ಕೂಗಿ ಈಗ ಹೇಳುತ್ತಿದೆ. ವಿಶೇಷ ವ್ಯಕ್ತಿತ್ವದ ವ್ಯಕ್ತಿ ಪುನೀತ್ ರಾಜಕುಮಾರ್ ತಮ್ಮ ಜೀವನದುದ್ದಕ್ಕೂ ಸಮಾಜ ಮುಖಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ.


ಆದರೆ ಪುನೀತ್ ರಾಜಕುಮಾರ್ ಎಲ್ಲೂ ಅದನ್ನ ಹೇಳಿಕೊಂಡಿಲ್ಲ. ಅಂತಹ ಪುನೀತ್ ರಾಜಕುಮಾರ್ ಅವರನ್ನ ಡೈರೆಕ್ಷನ್ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ಒಂದು ಅವಕಾಶ ನಿಜಕ್ಕೂ ನನ್ನ ಅದೃಷ್ಟವೇ ಆಗಿದೆ.


ಪುನೀತ್ ಎಂದೂ ಏಕವಚನದಲ್ಲಿ ಕೂಗಲೇ ಇಲ್ಲ
ಪುನೀತ್ ರಾಜಕುಮಾರ್ ಅವರು ನನ್ನ ಎಂದೂ ಏಕವಚನದಲ್ಲಿ ಕರೆಯಲೇ ಇಲ್ಲ. ಏಜ್​ ನಲ್ಲಿ ನಾನು ಅವರಿಗಿಂತಲೂ ಕಿರಿಯ, ಆದರೂ ಅಪ್ಪು ಬನ್ನಿ ಚೇತನ್ ಹೋಗಿ ಚೇತನ್ ಎಂದು ಕರೆಯುತ್ತಿದ್ದರು.


James Director Chetan Kumar talk about Puneeth Rajkumar
ಮಲ್ಲಾಪುರದ ಆ ಒಂದು ಘಟನೆಗೆ ನಾನೇ ಸಾಕ್ಷಿ


ಚಿತ್ರೀಕರಣದ ಸಮಯದಲ್ಲೂ ಅಷ್ಟೇ, ಯಾರನ್ನೂ ಏಕವಚನದಲ್ಲಿ ಕರೆದದ್ದು ಇಲ್ಲವೇ ಇಲ್ಲ. ಎಲ್ಲರನ್ನೂ ತುಂಬಾ ಆತ್ಮೀಯವಾಗಿಯೇ ಗೌರವದಂದಲೇ ಕರೆಯುತ್ತಿದ್ದರು ಪುನೀತ್ ರಾಜಕುಮಾರ್


ಮಲ್ಲಾಪುರದ ಆ ಒಂದು ಘಟನೆಗೆ ನಾನೇ ಸಾಕ್ಷಿ
ಹೌದು, ಪುನೀತ್ ರಾಜಕುಮಾರ್ ಯಾರೇ ಬಂದ್ರೂ ಅಷ್ಟೆ. ಅವರ ನೋವಿಗೆ ಮಿಡಿಯೋರು, ಅವರ ನೋವಿಗೆ ಸ್ಪಂದಿಸೋರು. ಅಂತಹ ಒಂದು ಘಟನೆ ನನ್ನ ಕಣ್ಮುಂದೆ ನಡೆದು ಹೋಯಿತು. ಗಂಗಾವತಿಯ ಮಲ್ಲಾಪುರ ಎಂಬ ಗ್ರಾಮದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ.


ಇದನ್ನೂ ಓದಿ: Kantara Abbara: ಕಾಂತಾರ ಗುಂಗಿನಲ್ಲಿ ಸಿನಿಫ್ಯಾನ್ಸ್! ಪ್ರಜ್ವಲ್ ಅಭಿನಯದ ಅಬ್ಬರ ರಿಲೀಸ್​ಗೆ ಪಕ್ಕಾ ಪ್ಲಾನ್


ಆಗ ಒಬ್ಬ ಮುಖ್ಯ ಶಿಕ್ಷಕ ಬಂದ್ರು, ಶಾಲೆಗೆ ಸಂಬಂಧಿಸಿದಂತೆ ದುಡ್ಡಿನ ಅವಶ್ಯಕತೆ ಇದೆ ಎಂದು ಹೇಳಿದರು. ಆಗ ನಾನು ಕ್ಯಾರವಾನ್​ ನಲ್ಲಿ ಅಪ್ಪು ಅವರಿಗೆ ಡೈಲಾಗ್ ವಿಚಾರವಾಗಿ ಮಾತನಾಡಲು ಹೋಗಿದ್ದೇ ನೋಡ್ರಿ.


ಆಗ ಕೂಡಲೇ ಅಪ್ಪು ಒಂದು ಲಕ್ಷದ ಚೆಕ್ ಬರೆದು ಕೊಟ್ಟರು. ಅವರೂ ಅಷ್ಟೇ, ದುಡ್ಡಿನ ಚೆಕ್ ಪಡೆದುಕೊಂಡು ಮರು ರಶೀದಿ ಕೂಡ ಕೊಟ್ಟು ಹೋದ್ರು ಎಂದು ಆ ಘಟನೆಯನ್ನ ಡೈರೆಕ್ಟರ್ ಚೇತನ್ ಈಗ ನೆನಪಿಸಿಕೊಂಡ್ರು.


ಅಪ್ಪು ಒಳ್ಳೆತನಕ್ಕೆ ಲೆಕ್ಕವೇ ಇಲ್ಲ-ಕೊಟ್ಟದ್ದನ್ನ ಹೇಳೋದೂ ಇಲ್ಲ
ಪುನೀತ್ ರಾಜಕುಮಾರ್ ಇಂತಹ ಅನೇಕ ಕೆಲಸಗಳನ್ನ ಮಾಡಿದ್ದಾರೆ. ಸೂಪರ್ ಸ್ಟಾರ್ ಆಗಿ ಆರಾಮಾಗಿಯೇ ಇರಬಹುದಿತ್ತು.


ಆದರೆ ತಮ್ಮ ಗಂಧದ ಗುಡಿಯಲ್ಲಿ ಪ್ಲಾಸ್ಟಿಕ್ ಬಳಸ ಬೇಡಿ ಅಂತ ಸಂದೇಶ ಕೊಡ್ತಾರೆ. ಶಾಲೆಗಳು ಉಳಿಯಬೇಕು, ಬೆಳೆಯಬೇಕು ಅಂತಲೂ ಸಾರಿ ಸಾರಿ ಹೇಳ್ತಾರೆ ಎಂದು ಗಂಧದ ಗುಡಿ ಚಿತ್ರ ನೋಡಿದ ಆ ಅನುಭವವನ್ನೂ ಇಲ್ಲಿ ಹಂಚಿಕೊಳ್ತಾರೆ.


James Director Chetan Kumar talk about Puneeth Rajkumar
ಕನ್ನಡ ನಾಡಿನ ಜನರ ಮನದಲ್ಲಿ ಪುನೀತ್ ರಾಜಕುಮಾರ್


ಅಪ್ಪು ತಮ್ಮ ಜೊತೆಗಿದ್ದವರ ಬಗ್ಗೆ ಹೆಚ್ಚು ಚಿಂತನೆ ಮಾಡ್ತಿದ್ದರು
ಪುನೀತ್ ತಮ್ಮ ಬಗ್ಗೆ ಅದೆಷ್ಟು ಚಿಂತಿಸುತ್ತಿದ್ದರೋ ಏನೋ. ಆದರೆ ತಮ್ಮ ಜೊತೆಗಿದ್ದವರ ಬಗ್ಗೆ ಯೋಚ್ನೆ ಮಾಡುತ್ತಿದ್ದರು. ಹೀಗಾಗಿಯೇ ಅಪ್ಪು ಶೂಟಿಂಗ್ ಸ್ಪಾಟ್​ಗೆ ಬಂದ್ರೆ, ಅಲ್ಲಿ ಎಲ್ಲರ ಮೊಗದಲ್ಲಿ ನಗು ಮೂಡುತ್ತಿತ್ತು.


ಅಪ್ಪು ವ್ಯಕ್ತಿತ್ವವೇ ಹಾಗಿತ್ತು. ಅಪ್ಪು ಇದ್ದಲ್ಲಿ ಯಾವುದೇ ಟೆನ್ಷನ್ ಇರುತ್ತಿರಲಿಲ್ಲ. ಅವರಿದ್ದಾಗ ಆರಾಮಾಗಿಯೇ ಕೆಲಸಗಳು ನಡೆಯುತ್ತಿತ್ತು. ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಎರಡು ದಿನಗಳವರೆಗೂ ಈ ಒಂದು ಹಾಡನ್ನ ಸತತವಾಗಿಯೇ ಚಿತ್ರೀಕರಣ ಮಾಡಿದೆವು. ಎರಡು ದಿನವೂ ನೃತ್ಯ ಕಲಾವಿದರು ಕೆಲಸ ಮಾಡಿದ್ದರು.


ಇದನ್ನೂ ಓದಿ: Gandhadagudi: ಜಿಲ್ಲೆಗಳಲ್ಲಿ ಗಂಧದಗುಡಿ ಹಬ್ಬ! ಹೀಗಿತ್ತು ಅಪ್ಪು ಸಿನಿ ಸಂಭ್ರಮ


ಈ ಒಂದು ಸಮಯದಲ್ಲಿ ಆಯುಧ ಪೂಜೆ ಕೂಡ ಇತ್ತು. ಈ ವೇಳೆ ಚಿತ್ರೀಕರಣವೂ ಪೂರ್ಣಗೊಂಡಿತ್ತು. ಆದರೆ ಅಪ್ಪು ಯಾರನ್ನೂ ಅಂದು ಹಾಗೆ ಕಳಿಸಲಿಲ್ಲ. ಒಂದು ಒಳ್ಳೆಯ ಊಟದ ವ್ಯವಸ್ಥೆಯನ್ನ ಕೂಡ ಮಾಡಿದ್ದರು ಎಂದು ಆ ದಿನದ ಈ ಘಟನೆಯನ್ನ ಕೂಡ ಚೇತನ್ ಇಲ್ಲಿ ನೆನಪಿಸಿಕೊಂಡ್ರು.


ಕನ್ನಡ ನಾಡಿನ ಜನರ ಮನದಲ್ಲಿ ಪುನೀತ್ ರಾಜಕುಮಾರ್
ಪುನೀತ್ ದೈಹಿಕವಾಗಿ ಅಷ್ಟೇ ಹೋಗಿದ್ದಾರೆ. ಆದರೆ ಇಡೀ ಕನ್ನಡ ನಾಡಿನ ಜನರ ಮನದಲ್ಲಿ ಪುನೀತ್ ಇದ್ದಾರೆ. ಒಂದು ಹಳ್ಳಿ, ಒಂದು ಊರು, ಜಾತ್ರೆ ಹಬ್ಬ ಹೀಗೆ ಪುನೀತ್ ಎಲ್ಲರ ಮನದಲ್ಲೂ ಶಾಶ್ವತ ಜಾಗ ಮಾಡಿದ್ದಾರೆ. ಗಂಧದ ಗುಡಿ ಮೂಲಕ ಒಂದ್​ ಒಳ್ಳೆ ಗಿಫ್ಟ್ ಕೊಟ್ಟು ಹೋಗಿದ್ದಾರೆ.

First published: