ಈಗ ಎಲ್ಲೆಲ್ಲೂ ಪುನೀತ್ ರಾಜ್ಕುಮಾರ್(Puneeth Rajkumar) ಅವರಿಗೆ ಜೈಕಾರ ಕೇಳಿಸುತ್ತಿದೆ. ಈ ಪರಿ ಅಭಿಮಾನದ ಹೊಳೆ ಹರಿಯುತ್ತಿರುವುದನ್ನು ನೋಡಿದರೆ ಅಪ್ಪು(Appu) ಇಲ್ಲ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಇಂದು ಪುನೀತ್ ಜನ್ಮದಿನ(Puneeth Birthday). ಅವರ ಅನುಪಸ್ಥಿತಿಯ ನಡುವೆಯೂ ಹಲವು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪುನೀತ್ ಜನ್ಮದಿನ(Puneeth Birthday)ವನ್ನು ಸಂಭ್ರಮದಿಂದ ಆಚರಿಸಿ ಅವರ ಅಭಿಮಾನಿಗಳು ಪುನೀತರಾಗುತ್ತುದ್ದಾರೆ. ಜೇಮ್ಸ್(James) ಕೂಡ ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳಿಗೆ ಗಿಫ್ಟ್ ನೀಡಿರುವಂತೆಯೆ. ಎಲ್ಲೆಲ್ಲೂ ಜೇಮ್ಸ್ ಜಾತ್ರೆ ನಡೆಯುತ್ತಿದೆ. ಬೆಳ್ಳಿ ತೆರೆಯಲ್ಲಿ ಕಡೆಯ ಬಾರಿಗೆ ಅಪ್ಪು ಅವರನ್ನು ಕಂಡ ಅಭಿಮಾನಿಗಳು ಎದೆ ಬಡಿದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಕೆರಿಯರ್ನಲ್ಲೇ ಈ ಪುನೀತ್ ರಾಜ್ಕುಮಾರ್ ಅವರ ಬೆಸ್ಟ್ ಪರ್ಫಾಮೆನ್ಸ್(Best Performance) ಅಂದರೆ ತಪ್ಪಾಗಲಾರದು. ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಬೋರ್ಡ್ ಬಿದ್ದಿದೆ.
ಬಾನಂಗಳದಲ್ಲಿ ಹಾರಾಡುತ್ತಿದೆ ಪುಷ್ಪಕ ವಿಮಾನ
ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳು ತಮ್ಮದೇ ರೀತಿ ಪುನೀತ್ ಹಬ್ಬ ಆಚರಿಸುತ್ತಿದ್ದಾರೆ. ಬೆಂಗಳೂರಿನ ಬಾನಂಗಳಲ್ಲಿ ಪುಟ್ಟ ವಿಮಾನವೊಂದು ಪುನೀತ್ ಹುಟ್ಟು ಹಬ್ಬದ ಬಾವುಟ ಹಿಡಿದು ಹಾರಾಡುತ್ತಿದೆ.ವಿಮಾನವೊಂದು ಬೆಂಗಳೂರಿನಲ್ಲಿ ಬಾನಂಗಳದಲ್ಲಿ ಪುನೀತ್ ಹುಟ್ಟುಹಬ್ಬದ ಬಾವುಟ ಹಿಡಿದು ಹಾರಾಡುತ್ತಿದೆ. ಬಾನಿಗೊಂದು ಎಲ್ಲೆ ಎಲ್ಲಿದೆ ಅಂತ ಅಪ್ಪು ಹುಟ್ಟುಹಬ್ಬದ ಬ್ಯಾನರ್ ಹಿಡಿದು ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರುತ್ತಿದೆ.
ಬೆಂಗಳೂರು ಸುತ್ತಿದ ವಿಮಾನ!
ಮೊದಲು ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟು ಡಾ.ರಾಜ್ಕುಮಾರ್ ಪುಣ್ಯಭೂಮಿ ಮೇಲೆ ಹಾರಾಟ ನಡೆಸಿದೆ. ಇಲ್ಲಿ ಸುಮಾರು 20 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಇಲ್ಲಿಂದ ಒರಾಯನ್ ಮಾಲ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್ ಹಾಗೂ ಗಾಂಧಿನಗರದ ಸುತ್ತಮುತ್ತ ಸುಮಾರು 40 ನಿಮಿಷಗಳ ಕಾಲ ಹಾರಾಟ ನಡೆಸಿದೆ.
ಸಂಜೆ 4ರಿಂದ ಮತ್ತೆ ಹಾರಾಡಲಿದೆ ವಿಮಾನ!
ಸಂಜೆ 4 ಗಂಟೆ ಹೊತ್ತಿಗೆ ಮತ್ತೆ ಹಾರಾಟ ನಡೆಸಲಿದೆ. ಈ ಬಾರಿ ಕೆ ಆರ್ ಮಾರುಕಟ್ಟೆ, ವಿವಿ ಪುರಂ, ಬನಶಂಕರಿ, ಮೈಸೂರು ರಸ್ತೆ, ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಲ್ಲಂದೂರು, ದೊಮ್ಮಲೂರು, ಕೆಆರ್ ಪುರಂ, ಬನಶಂಕರಿ, ಬಾಣಸವಾಡಿ, ಮಾನ್ಯತಾ ಟೆಕ್ ಪಾರ್ಕ್ ಬಳಿಕ ಜಕ್ಕೂರು ವಿಮಾನ ನಿಲ್ದಾಣ ಸೇರಲಿದೆ.
ಇದನ್ನೂ ಓದಿ: ತಮ್ಮನ ಕೊನೆ ಸಿನಿಮಾದಲ್ಲಿ ಸೋಲ್ಜರ್ ಪಾತ್ರದಲ್ಲಿ ಶಿವಣ್ಣ! ಅಪ್ಪುಗೆ ಗುರು ಆದ ರಾಘವೇಂದ್ರ ರಾಜ್ಕುಮಾರ್
ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡ ಶಿವಣ್ಣ!
ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಸೈನಿಕನ ಪಾತ್ರದಲ್ಲಿ ಕಾಣಸಿಕೊಂಡಿರವುದು ಎಲ್ಲರಿಗೂ ಗೊತ್ತಿತ್ತು. ಆದರೆ, ಶಿವಣ್ಣ ಕೂಡ ಈ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿರುವುದು ಯಾರಿಗೂ ತಿಳಿದಿರಲಿಲ್ಲ. ಹೌದು, ತಮ್ಮನ ಸಿನಿಮಾದಲ್ಲಿ ಶಿವಣ್ಣ, ರಾಘಣ್ಣ ನಟಿಸಿರುವುದು ಎಲ್ಲರಿಗೂ ಗೊತ್ತೆ ಇತ್ತು. ಆದರೆ, ಈಗ ಶಿವಣ್ಣ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರನ್ನು ನೋಡಿಯೇ ಸಿನಿಮಾದಲ್ಲಿ ಅಪ್ಪು ಸೈನಿಕನಾಗಬೇಕು ಎಂದು ಅಂದುಕೊಳ್ಳುತ್ತಾರೆ. ಶಿವಣ್ಣ ಪಾತ್ರವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಅಪ್ಪು ಸೈನಿಕನಾಗುತ್ತಾರೆ.
ಇದನ್ನೂ ಓದಿ: ಇಂದು ಕರುನಾಡಿನ ದೇವರ ಹುಟ್ಟುಹಬ್ಬ.. 4 ದಿನದ ಹಸುಗೂಸಿಗೆ ಪುನೀತ್ ಹೆಸರಿಟ್ಟ ಶಿವಣ್ಣ!
ಜೇಮ್ಸ್ಗೆ ಗುರುವಾದ ರಾಘವೇಂದ್ರ ರಾಜ್ಕುಮಾರ್!
ಇನ್ನೂ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಕೂಡ ನಟಿಸಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ಗೆ ಶಿವಣ್ಣ ಗುರಿ ತೋರಿಸಿಕೊಟ್ಟರೆ, ರಾಘಣ್ಣ ಪುನೀತ್ಗೆ ಗುರುವಾಗಿದ್ದಾರೆ. ಹೌದು, ಶಿವಣ್ಣ ಆಶ್ರಮದ ಗುರುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಶಿವಣ್ಣ -ರಾಘಣ್ಣ ಒಂದೇ ಸೀನ್ನಲ್ಲಿ ಕಾಣಿಸಿಕೊಂಡಿರದಿದ್ದರೂ, ಶಿವಣ್ಣ - ರಾಘಣ್ಣ ಮುಖಾಮುಖಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ