Avatar: ಚಿತ್ರಮಂದಿರಗಳಲ್ಲಿ ಮತ್ತೆ ಅವತಾರ್ ದರ್ಶನ! ಚಿತ್ರದ ಹೊಸ ಟ್ರೇಲರ್ ಹೇಗಿದೆ?

ಜೇಮ್ಸ್ ಕ್ಯಾಮರೂನ್ ಅವರ ಅಕಾಡೆಮಿ ಪ್ರಶಸ್ತಿ ವಿಜೇತ 2009 ರ ಮಹಾಕಾವ್ಯ ಸಾಹಸಮಯ "ಅವತಾರ್ ಚಿತ್ರವು," ಸಾರ್ವಕಾಲಿಕ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದೆನಿಸಿ ಹೆಸರುವಾಸಿಯಾಗಿತ್ತು. ಅಂತೆಯೇ ಇದು ಮಕ್ಕಳು ಸೇರಿದಂತೆ ಹಿರಿಯರನ್ನೂ ರಂಜಿಸಿತ್ತು. ಇದೀಗ ಇದೇ ಚಲನಚಿತ್ರ, ಚಿತ್ರಮಂದಿರಗಳಿಗೆ ಪುನಃ ಮರಳುತ್ತಿದೆ. ಅವತಾರ್ ಚಿತ್ರವನ್ನು ಅದರ ಮುಂದಿನ ಭಾಗದ ಕಥೆಯನ್ನೊಳಗೊಂಡ ‘ದಿ ವೇ ಆಫ್ ವಾಟರ್‌’ ಬಿಡುಗಡೆಗೂ ಮುನ್ನ ಮರು-ಬಿಡುಗಡೆ ಮಾಡಲಾಗುತ್ತಿದೆ.

ಅವತಾರ್ ಚಿತ್ರ

ಅವತಾರ್ ಚಿತ್ರ

  • Share this:
ಜೇಮ್ಸ್ ಕ್ಯಾಮರೂನ್ (James Cameron) ಅವರ ಅಕಾಡೆಮಿ ಪ್ರಶಸ್ತಿ ವಿಜೇತ 2009 ರ ಮಹಾಕಾವ್ಯ ಸಾಹಸಮಯ "ಅವತಾರ್ ಚಿತ್ರವು," ಸಾರ್ವಕಾಲಿಕ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ (Movies) ಒಂದೆನಿಸಿ ಹೆಸರುವಾಸಿಯಾಗಿತ್ತು. ಈ ಚಿತ್ರವನ್ನು ಕಣ್ತುಂಬಿಸಿಕೊಳ್ಳದವರು ಬಹುಶಃ ಯಾರೂ ಇರಲಾರರು. ಅನಿಮೇಶನ್ ದೃಶ್ಯಾವಳಿಗಳು, ಸುಂದರ ಚಿತ್ರ ಕಥಾ ಹಂದರ, ಪಾತ್ರಗಳ ಅಮೋಘ ಅಭಿನಯ ಚಿತ್ರದಲ್ಲಿ ಅಷ್ಟು ಸೊಗಸಾಗಿ ಮೂಡಿಬಂದಿತ್ತು. ಅಂತೆಯೇ ಇದು ಮಕ್ಕಳು ಸೇರಿದಂತೆ ಹಿರಿಯರನ್ನೂ ರಂಜಿಸಿತ್ತು. ಇದೀಗ ಇದೇ ಚಲನಚಿತ್ರ, ಚಿತ್ರಮಂದಿರಗಳಿಗೆ (Movie Theater) ಪುನಃ ಮರಳುತ್ತಿದೆ. ಅವತಾರ್ (Avatar) ಚಿತ್ರವನ್ನು ಅದರ ಮುಂದಿನ ಭಾಗದ ಕಥೆಯನ್ನೊಳಗೊಂಡ ‘ದಿ ವೇ ಆಫ್ ವಾಟರ್‌’ ಬಿಡುಗಡೆಗೂ ಮುನ್ನ ಮರು-ಬಿಡುಗಡೆ ಮಾಡಲಾಗುತ್ತಿದೆ.

ಚಿತ್ರಮಂದಿರಗಳಲ್ಲಿ ಪುನಃ ಪ್ರದರ್ಶನಗೊಳ್ಳಲಿರುವ ಅವತಾರ್
ಅವತಾರ್ ಮರು ಬಿಡುಗಡೆಯ ದ್ಯೋತಕವಾಗಿ, ತಯಾರಕರು ಮೂಲ ಚಿತ್ರದ ಹೊಸ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ. ಇದು ಪಂಡೋರಾ ಪ್ರಪಂಚವನ್ನು ಅನ್ವೇಷಿಸುವ ಮೂಲ ಪಾತ್ರಗಳನ್ನು ಹೊಂದಿದೆ.

ಗಲ್ಲಾಪೆಟ್ಟಿಗೆಯನ್ನು ಉಢೀಸ್ ಮಾಡಿದ ಚಿತ್ರ
ಕ್ಯಾಮರೂನ್‌ರ ಅವತಾರ್ USD 2.8 ಬಿಲಿಯನ್‌ಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸುವ ಮೂಲಕ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯನ್ನು ಧೂಳೆಬ್ಬಿಸಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ರೂಪುಗೊಂಡಿತ್ತು. ಇದು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಒಂಬತ್ತು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು ಮತ್ತು ಅತ್ಯುತ್ತಮ ಛಾಯಾಗ್ರಹಣ, ನಿರ್ಮಾಣ ವಿನ್ಯಾಸ ಮತ್ತು ದೃಶ್ಯ ಪರಿಣಾಮಗಳಿಗಾಗಿ ಮೂರು ಆಸ್ಕರ್‌ಗಳನ್ನು ಗೆದ್ದುಕೊಂಡಿತು.

ಇದನ್ನೂ ಓದಿ: Puneeth Rajkumar: ಲಕ್ಕಿ ಮ್ಯಾನ್​ನಲ್ಲಿ ಅಪ್ಪು-ಪ್ರಭು ಸಖತ್​ ಡ್ಯಾನ್ಸ್​; ಈ ಸಿನಿಮಾ ಮಿಸ್​ ಮಾಡ್ಕೊಬೇಡಿ ಎಂದ್ರು ಸುದೀಪ್​

2010 ರಲ್ಲಿ, "ಅವತಾರ್" ನ ವಿಶೇಷ ವಿಸ್ತೃತ ನಾಟಕೀಯ ಪುನರ್-ಬಿಡುಗಡೆಯು 3D ಥಿಯೇಟರ್‌ಗಳಲ್ಲಿ ಮತ್ತು IMAX 3D ಪ್ರಪಂಚದಾದ್ಯಂತ USD 44 ಮಿಲಿಯನ್ ಗಳಿಸಿತು. ಕಳೆದ ವರ್ಷದ ಆರಂಭದಲ್ಲಿ, ಚೀನಾದಲ್ಲಿ ಚಲನಚಿತ್ರದ ಪುನರ್-ಬಿಡುಗಡೆಯು USD 57.7 ಮಿಲಿಯನ್ ಸಂಗ್ರಹಿಸಿತು.

ಸಪ್ಟೆಂಬರ್ 23 ಕ್ಕೆ ಚಿತ್ರದ ಮರುಬಿಡುಗಡೆ ಮುಹೂರ್ತ ಫಿಕ್ಸ್
ಅವತಾರ್‌ನ ಚಿತ್ರವು ಸಪ್ಟೆಂಬರ್ 23 ರಂದು ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ .'ಅವತಾರ್: ದಿ ವೇ ಆಫ್ ವಾಟರ್' ಚಿತ್ರದ ಮುಂದಿನ ಭಾಗದ ಬಿಡುಗಡೆಯ ಮೂರು ತಿಂಗಳ ಮೊದಲು ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ಮರು-ಬಿಡುಗಡೆ ಮಾಡಲಾಗುತ್ತದೆ. ಚಿತ್ರದ ಎರಡನೇ ಭಾಗವು ಡಿಸೆಂಬರ್ 16, 2022 ರಂದು ಜಾಗತಿಕವಾಗಿ ಥಿಯೇಟರ್‌ಗೆ ಬರಲಿದೆ. ಚಿತ್ರದ ಮೊದಲ ಭಾಗವನ್ನು ತಪ್ಪಿಸಿಕೊಂಡಿದ್ದರೆ, ನೀವು ಇದೀಗ ಅದನ್ನು ಸಪ್ಟೆಂಬರ್ 23 ರಿಂದ ಥಿಯೇಟರ್‌ಗಳಲ್ಲಿ ನೋಡಬಹುದು.

[embed]https://youtu.be/ajL3s0K_FoY[/embed]

ಅವತಾರ್‌ನ ಮುಂದಿನ ಭಾಗ 'ದಿ ವೇ ಆಫ್ ವಾಟರ್' ಡಿಸೆಂಬರ್ 16 ಕ್ಕೆ ಬಿಡುಗಡೆ
ಅವತಾರ್‌ನ ಹೆಚ್ಚು ನಿರೀಕ್ಷಿತ ಮುಂದಿನ ಭಾಗವಾದ 'ದಿ ವೇ ಆಫ್ ವಾಟರ್' ಈ ವರ್ಷ ಡಿಸೆಂಬರ್ 16 ರಂದು ತೆರೆಕಾಣದಲಿದೆ. 2009 ರಲ್ಲಿ ತೆರೆಕಂಡ ಅವತಾರ್ ಚಿತ್ರವು ಸಪ್ಟೆಂಬರ್ 23 ರಿಂದ ಎರಡು ವಾರಗಳವರೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದ್ದು IMAX, 4K / HDR ಒಳಗೊಂಡಂತೆ 3 ಡಿಯಲ್ಲಿ ಕೂಡ ಕಣ್ತುಂಬಿಕೊಳ್ಳಬಹುದಾಗಿದೆ. ಅವತಾರ್‌ನ ಮುಂದಿನ ಭಾಗ 'ದಿ ವೇ ಆಫ್ ವಾಟರ್' ಚಿತ್ರವು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಚಿತ್ರದ ಕಥಾ ಹಂದರ ಏನು ಹೇಳುತ್ತದೆ?
ಚಿತ್ರ ನಿರ್ಮಾಪಕರು ಮೇ ತಿಂಗಳಿನಲ್ಲಿ ಅವತಾರ್‌ನ ಮುಂದಿನ ಭಾಗದ ಟೀಸರ್ ಅನ್ನು ಅನಾವರಣಗೊಳಿಸಿದ್ದರು. 'ದಿ ವೇ ಆಫ್ ವಾಟರ್' ಸುಲ್ಲಿ ಕುಟುಂಬದ (ಜೇಕ್, ನೈತ್ರಿ ಹಾಗೂ ಅವರ ಮಕ್ಕಳು) ಕಥೆಯ ಜೊತೆಗೆ ಅವರು ಎದುರಿಸಿದ ಸವಾಲುಗಳು, ಪರಸ್ಪರರ ಸುರಕ್ಷತೆಗೆ ಅವರು ಮಾಡಿದ ಸಾಹಸಗಳು, ಜೀವಂತವಾಗಿರಲು ಅವರು ಹೋರಾಡಿದ ಯುದ್ಧಗಳು ಹಾಗೂ ಸಹಿಸಿಕೊಳ್ಳುವ ದುರಂತಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ.

ಇದನ್ನೂ ಓದಿ:  KL Rahul-Athiya Shetty: ಶೀಘ್ರದಲ್ಲೇ ರಾಹುಲ್​-ಆತಿಯಾ ಕಲ್ಯಾಣೋತ್ಸವ! ಬಿಗ್​ ನ್ಯೂಸ್​ ಕೊಟ್ಟ ಭಾವಿ ಮಾವ ಸುನೀಲ್​ ಶೆಟ್ಟಿ

'ಅವತಾರ್: ದಿ ವೇ ಆಫ್ ವಾಟರ್' ಚಿತ್ರದಲ್ಲಿ ಜೊಯ್ ಸಲ್ಡಾನಾ, ಸ್ಯಾಮ್ ವರ್ಥಿಂಗ್ಟನ್, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್, ಜೋಯಲ್ ಡೇವಿಡ್ ಮೂರ್, CCH ಪೌಂಡರ್, ಎಡಿ ಫಾಲ್ಕೊ, ಜೆಮೈನ್ ಕ್ಲೆಮೆಂಟ್ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ.
Published by:Ashwini Prabhu
First published: