Avatar Sequel: ಅವತಾರ್​ ಸೀಕ್ವೆಲ್​ನ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್​ಗೆ ಬಂದಿಳಿದ ಚಿತ್ರತಂಡ..!

ಜೇಮ್ಸ್​ ಕ್ಯಾಮರೂನ್ ನಿರ್ದೇಶನದ ಅವತಾರ್​ ಸಿನಿಮಾ 2009ರಲ್ಲಿ ತೆರೆ ಕಂಡಿತ್ತು. ಆಗಿನಿಂದ ಒಂದು ದಶಕದವರೆಗೂ ಅವತಾರ್​ ಅತಿ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಮಾರ್ವೆಲ್ ಸ್ಟುಡಿಯೋಸ್​ನ ಅವೆಂಜರ್ಸ್​ ಎಂಡ್​ಗೇಮ್​ ತೆರೆಕಂಡ ನಂತರ ಮೊದಲ ಸ್ಥಾನ ಈ ಚಿತ್ರ ತನ್ನದಾಗಿಸಿಕೊಂಡಿತು. 

ಅವತಾರ್ ಸಿನಿಮಾದ ಪೋಸ್ಟರ್​

ಅವತಾರ್ ಸಿನಿಮಾದ ಪೋಸ್ಟರ್​

  • Share this:
ಹಾಲಿವುಡ್​ನ ಅನಿಮೇಟೆಡ್ ಸಿನಿಮಾ ಅವತಾರ್​ ತೆರೆಕಂಡು ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾದ ಸೀಕ್ವೆಲ್​ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಈ ಸಿನಿಮಾ

ಜೇಮ್ಸ್​ ಕ್ಯಾಮರೂನ್ ನಿರ್ದೇಶನದ ಅವತಾರ್​ ಸಿನಿಮಾ 2009ರಲ್ಲಿ ತೆರೆ ಕಂಡಿತ್ತು. ಆಗಿನಿಂದ ಒಂದು ದಶಕದವರೆಗೂ ಅವತಾರ್​ ಅತಿ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಮಾರ್ವೆಲ್ ಸ್ಟುಡಿಯೋಸ್​ನ ಅವೆಂಜರ್ಸ್​ ಎಂಡ್​ಗೇಮ್​ ತೆರೆಕಂಡ ನಂತರ ಮೊದಲ ಸ್ಥಾನ ಈ ಚಿತ್ರ ತನ್ನದಾಗಿಸಿಕೊಂಡಿತು.

James Cameron and Jon Landau along with 50 other crew members reached New Zealand for Avatar Sequel
ನ್ಯೂಜಿಲೆಂಡ್​ಗೆ ಬಂದಿಳಿದ ಅವತಾರ್ ಸೀಕ್ವೆಲ್​ನ ನಿರ್ದೇಶಕ ಹಾಗೂ ನಿರ್ಮಾಪಕ


ಇನ್ನು 2019ರಲ್ಲೇ ಈ ಸೀಕ್ವೆಲ್​ನ ಶೂಟಿಂಗ್​ ಆರಂಭವಾಗಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆಯಂತೆ. ಈ ಕುರಿತಾಗಿ ಇತ್ತೀಚೆಗಷ್ಟೆ ಚಿತ್ರತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿತ್ತು. ಚಿತ್ರತಂಡ ಕೊಟ್ಟಿರುವ ಮಾಹಿತಿ ಪ್ರಕಾರ ಸೆಟ್​ನಲ್ಲಿ ಚಿತ್ರೀಕರಿಸಲಾಗುವ ಭಾಗದ ಕೆಲಸಗಳು ಮುಗಿದಿವೆಯಂತೆ. ಇನ್ನೇನಿದ್ದರೂ ಸಿಜಿಐ ಭಾಗ ಮಾತ್ರ ಬಾಕಿ ಇದೆಯಂತೆ.



The celebration continues, Na'vi Nation!



ಕೊರೋನಾ ಕಾರಣದಿಂದಾಗಿ ಈಗ ದೇಶಗಳ ನಡುವಿನ ಗಡಿ ಬಂದ್ ಮಾಡಲಾಗಿದ್ದರೂ, ಅವತಾರ್​ ಚಿತ್ರತಂಡ ಮಾತ್ರ ನ್ಯೂಜಿಲೆಂಡ್​ಗೆ ಬಂದಿಳಿದಿದೆ. ನಿರ್ದೇಶಕ ಜೇಮ್ಸ್​ ಕ್ಯಾಮರೂನ್ ಹಾಗೂ ಜಾನ್​ ಲಾಂದೌ ಸೇರಿದಂತೆ 50 ಮಂದಿ ಅನುಮತಿ ಪಡೆದು ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ಈ ಬಗ್ಗೆ ಸಿನಿಮಾದ ನಿರ್ಮಾಪಕ ಜಾನ್​ ತಮ್ಮ ಇನ್​ಸ್ಟಾ ಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

James Cameron and Jon Landau along with 50 other crew members reached New Zealand for Avatar Sequel
ನ್ಯೂಜಿಲೆಂಡ್​ಗೆ ಬಂದಿಳಿದ ಅವತಾರ್ ಸೀಕ್ವೆಲ್​ನ ನಿರ್ದೇಶಕ ಹಾಗೂ ನಿರ್ಮಾಪಕ


ಚಿತ್ರತಂಡವನ್ನು ಲಾಸ್ ಏಂಜಲಿಸ್​ನಿಂದ ವಿಶೇಷ ವಿಮಾನದಲ್ಲಿ ನ್ಯೂಜಿಲೆಂಡ್​ನ ವೆಲ್ಲಿಂಟನ್​ಗೆ ಕರೆತರಲಾಗಿದ್ದು, ಅವರನ್ನೂ ಕ್ವಾರಂಟೈನ್​ ಮಾಡಲಾಗಿದೆಯಂತೆ. ಇದು ಮುಗಿದ ನಂತರ ಚಿತ್ರತಂಡ ಸಿನಿಮಾ ಕೆಲಸ ಆರಂಭಿಸಲಿದೆಯಂತೆ. ಆದರೆ ಕೊರೋನಾದಿಂದಾಗಿ ಗಡಿಗಳು ಬಂದ್​ ಆಗಿದ್ದರೂ ಚಿತ್ರತಂಡಕ್ಕೆ ವಿಶೇಷ ಅನುಮತಿ ನೀಡಿರುವುದಕ್ಕೆ ಈಗಾಗಲೇ ಟೀಕೆಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ರಿಲೀಸ್ ಆಯ್ತು ವಿದ್ಯಾ ಬಾಲನ್​ ನಿರ್ಮಿಸಿ ನಟಿಸಿರುವ ಕಿರುಚಿತ್ರ..!

ಇನ್ನು ನ್ಯೂಜಿಲೆಂಡ್​ನಲ್ಲಿ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದ ಚಿತ್ರತಂಡಕ್ಕೆ ಅಲ್ಲಿನ ಸರ್ಕಾರ ಮಾರ್ಚ್​ನಲ್ಲಿ ಶೂಟಿಂಗ್​ ನಿಲ್ಲಿಸುವಂತೆ ಹೇಳಿತ್ತು. ಕೊರೋನಾದಿಂದಾಗಿ ಚಿತ್ರತಂಡ ಅರ್ಧಕ್ಕೆ ಕೆಲಸ ನಿಲ್ಲಿಸಿತ್ತು.

First published: