No Time to Die: ಜೇಮ್ಸ್ ಬಾಂಡ್ ಸರಣಿಯ​ 25ನೇ ಸಿನಿಮಾ: 'ನೋ ಟೈಮ್ ಟು ಡೈ' ಅಂತಿದ್ದಾರೆ 007 ಕ್ರೇಗ್ !

No Time to Die: ಗೂಢಚಾರಿ ಅಂದರೆ ಹೀಗೇ ಇರಬೇಕು ಅನ್ನೋ ಭಾವನೆ ಮೂಡಿಸಿದ್ದೇ ಈ ಜೇಮ್ಸ್ ಬಾಂಡ್ ಸಿನಿಮಾಗಳು. ಫ್ಯಾಂಟಸಿ, ಆ್ಯಕ್ಷನ್ ಸಿನಿಮಾಗಳ ನಡುವೆ ಸ್ಪೈ ಥ್ರಿಲ್ಲರ್ ಕಥೆ ಹೇಳಿ ಸಿನಿಪ್ರಿಯರನ್ನು ರಂಜಿಸಿದವ ಇದೇ ಏಜೆಂಟ್ 007. ಈಗ ಹಲವು ಅಡೆತಡೆಗಳ ನಡುವೆ 25ನೇ ಬಾರಿಗೆ ತೆರೆಯ ಮೇಲೆ ವಿಶ್ವವನ್ನುಳಿಸಲು, ಸಿನಿಪ್ರಿಯರನ್ನು ರಂಜಿಸಲು ರೆಡಿಯಾಗಿದ್ದಾನೆ.

25ನೇ ಬಾಂಡ್​ ಸರಣಿ ಸಿನಿಮಾದಲ್ಲಿ ಡೇನಿಯಲ್​ ಕ್ರೇಗ್​

25ನೇ ಬಾಂಡ್​ ಸರಣಿ ಸಿನಿಮಾದಲ್ಲಿ ಡೇನಿಯಲ್​ ಕ್ರೇಗ್​

  • Share this:
ಹಾಲಿವುಡ್​ನ ಖ್ಯಾತ ಸೀರೀಸ್​ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಸರಣಿ ಸಹ ಒಂದು. ಕಾಸ್ಲಿ ಸೂಟು, ಬೂಟು, ಹೈಫೈ ವೆಪನ್​.... ಸೂಪರ್​ ಕಾರುಗಳು... ಹೀಗೆ ವಿಶ್ವದ ಒಳಿತಾಗಿ ದುಡಿಯುವ ಸೂಪರ್ ಸ್ಪೈಗಳೇ ಈ ಬಾಂಡ್​ಗಳು. ಈಗ ಈ ಬಾಂಡ್​ ಸರಣಿಯ 25ನೇ ಸಿನಿಮಾ ಪ್ರಕಟವಾಗಿದೆ.

ಗೂಢಚಾರಿ ಅಂದರೆ ಹೀಗೇ ಇರಬೇಕು ಅನ್ನೋ ಭಾವನೆ ಮೂಡಿಸಿದ್ದೇ ಈ ಜೇಮ್ಸ್ ಬಾಂಡ್ ಸಿನಿಮಾಗಳು. ಫ್ಯಾಂಟಸಿ, ಆ್ಯಕ್ಷನ್ ಸಿನಿಮಾಗಳ ನಡುವೆ ಸ್ಪೈ ಥ್ರಿಲ್ಲರ್ ಕಥೆ ಹೇಳಿ ಸಿನಿಪ್ರಿಯರನ್ನು ರಂಜಿಸಿದವ ಇದೇ ಏಜೆಂಟ್ 007. ಈಗ ಹಲವು ಅಡೆತಡೆಗಳ ನಡುವೆ 25ನೇ ಬಾರಿಗೆ ತೆರೆಯ ಮೇಲೆ ವಿಶ್ವವನ್ನುಳಿಸಲು, ಸಿನಿಪ್ರಿಯರನ್ನು ರಂಜಿಸಲು ರೆಡಿಯಾಗಿದ್ದಾನೆ.


'ಬಾಂಡ್, ಜೇಮ್ಸ್ ಬಾಂಡ್...' ಐದನೇ ಬಾರಿಗೆ ಏಜೆಂಟ್ 007ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ ನಟ ಡೇನಿಯಲ್ ಕ್ರೇಗ್. ಕಳೆದ 57 ವರ್ಷಗಳಲ್ಲಿ ಇದು 25ನೇ ಬಾಂಡ್ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ 'ನೋ ಟೈಮ್ ಟು ಡೈ' ಅಂತ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ. ಎಂದಿನಂತೆ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸುತ್ತಾ, ರಿಲೀಸ್‍ಗೆ ರೆಡಿಯಾಗುತ್ತಿದ್ದಾನೆ ದಿ ಬಾಂಡ್.

Danial Craig in 25th Bond Movie
25ನೇ ಬಾಂಡ್ ಸಿನಿಮಾದಲ್ಲಿ ಡೇನಿಯಲ್​ ಕ್ರೇಗ್​


'ನೋ ಟೈಮ್ ಟು ಡೈ', ನಟ ಡೇನಿಯಲ್ ಕ್ರೇಗ್ ಬಾಂಡ್‍ಆಗಿ ನಟಿಸುತ್ತಿರುವ ಐದನೇ ಹಾಗೂ ಕೊನೆಯ ಚಿತ್ರ. ಹೀಗಾಗಿಯೇ ಹಿಂದಿನ ಎಲ್ಲ ಬಾಂಡ್ ಸಿನಿಮಾಗಳಿಗೆ ಹೋಲಿಸಿದರೆ, ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ ಇದೆ. 2006ರ ಕ್ಯಾಸಿನೋ ರಾಯೇಲ್ ಮೂಲಕ ಪಿಯರ್ಸ್ ಬ್ರಾಸ್ನನ್ ನಂತರ ಬಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಡೇನಿಯಲ್, ನಂತರ 2008ರಲ್ಲಿ 'ಕ್ವಾಂಟಮ್ ಆಫ್ ಸೊಲೇಸ್', 2012ರಲ್ಲಿ 'ಸ್ಕೈ ಫಾಲ್' ಹಾಗೂ 2015ರಲ್ಲಿ 'ಸ್ಪೆಕ್ಟರ್ ಸೂಪರ್ ಸ್ಪೈ' ಪಾತ್ರದಲ್ಲಿ ಮಿಂಚಿದ್ದರು. ಈಗ 2020ರ ಏಪ್ರಿಲ್‍ನಲ್ಲಿ ತೆರೆಗೆ ಬರಲಿರುವ 'ನೋ ಟೈಮ್ ಟು ಡೈ' ಅವರ ಬಾಂಡ್ ಅವತಾರಕ್ಕೆ ದಿ ಎಂಡ್ ಹಾಡಲಿರುವ ಸಿನಿಮಾ.

ಇದನ್ನೂ ಓದಿ: ಮಾವ ನಾಗಾರ್ಜುನರ ರಾಸಲೀಲೆಯಿಂದ ಕಷ್ಟಪಡುತ್ತಿರುವ ನಟಿ ಸಮಂತಾ..!

'ಸ್ಪೆಕ್ಟರ್' ತೆರೆಗೆ ಬಂದ ಒಂದು ವರ್ಷದಲ್ಲೇ ಅರ್ಥಾತ್ 2016ರಲ್ಲೇ ಜೇಮ್ಸ್ ಬಾಂಡ್ ಸೀರೀಸ್​ನ 25ನೇ ಚಿತ್ರದ ಸಿದ್ಧತೆಗಳು ಪ್ರಾರಂಭವಾದ್ವು. 'ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ನಿರ್ದೇಶಕ ಡ್ಯಾನಿ ಬಾಯ್ಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಆಯ್ಕೆಯಾದರು. ಅದರಂತೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡು ಇನ್ನೇನು ಶೂಟಿಂಗ್ ಪ್ರಾರಂಭವಾಗಬೇಕು ಅನ್ನುವಷ್ಟರಲ್ಲಿ, ಕಥೆ ವಿಷಯದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರ ನಡುವೆ ಗೊಂದಲವುಂಟಾಯ್ತು. ಇದರಿಂದಾಗಿ ಡ್ಯಾನಿ ಬಾಯ್ಲ್ ಚಿತ್ರತಂಡದಿಂದ ಹೊರ ಬರಬೇಕಾಯ್ತು. ಇದೇ ಕಾರಣದಿಂದಾಗಿ ಸಿನಿಮಾ ಶೂಟಿಂಗ್ ಕೂಡ ತಡವಾಯ್ತು.

25ನೇ ಬಾಂಡ್​ ಸಿನಿಮಾಗೆ ಮತ್ತೊಬ್ಬ ನಿರ್ದೇಶಕನ ಆಯ್ಕೆಯಾಯಿತು. 'ಬೀಸ್ಟ್ಸ್ ಆಫ್ ನೋ ನೇಷನ್' ಖ್ಯಾತಿಯ ಕ್ಯಾರಿ ಫುಕುನಾಗ, ಬಾಯ್ಲ್ ಜಾಗಕ್ಕೆ ಎಂಟ್ರಿಯಾದ್ರು. 2018ರ ಡಿಸೆಂಬರ್​ನಲ್ಲಿ ಪ್ರಾರಂಭವಾಗಬೇಕಿದ್ದ ಸಿನಿಮಾ ಶೂಟಿಂಗ್ ಇದೇ ಏಪ್ರಿಲ್‍ನಲ್ಲಿ ಶುರುವಾಯ್ತು. ಆದರೆ ಬಾಂಡ್ ಚಿತ್ರಕ್ಕೆ ಅದ್ಯಾರ ಕಣ್ಣುಬಿತ್ತೋ ಏನೋ, ಡೈರೆಕ್ಟರ್ ಬದಲಾಗುವ ಮೂಲಕ ಆರಂಭವಾದ ಕಂಟಕ, ಬೇರೆ ಬೇರೆ ರೀತಿಗಳಲ್ಲಿ ಮತ್ತೆ ಮತ್ತೆ ಕಾಡತೊಡಗಿತ್ತು.

ಇದನ್ನೂ ಓದಿ: Mission Mangal Collections: ಮೂರೇ ವಾರಕ್ಕೆ ಬಾಕ್ಸಾಫಿಸ್​ನಲ್ಲಿ ತಣ್ಣಗಾದ ಮಿಷನ್​ ಮಂಗಲ್​ ಬಿಸಿ

ಹೌದು, ಸಿನಿಮಾ ಶೂಟಿಂಗ್ ವೇಳೆ ಒಮ್ಮೆ ಸೆಟ್‍ನಲ್ಲಿ ಕಾರ್ಮಿಕನೊಬ್ಬ ಬಿದ್ದು ಮೈಮೂಳೆ ಮುರಿದುಕೊಂಡಿದ್ದ. ಅದಾದ ಕೆಲವೇ ದಿನಗಳಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಶೂಟಿಂಗ್ ನಡೆಯುತ್ತಿದ್ದ ಬಹುತೇಕ ಸೆಟ್ ಬೆಂಕಿಗೆ ಆಹುತಿಯಾಯ್ತು. ಇನ್ನು ಸಾಹಸ ದೃಶ್ಯವೊಂದರ ಚಿತ್ರೀಕರಣದ ವೇಳೆ ಡೇನಿಯಲ್ ಕ್ರೇಗ್ ಆಕಸ್ಮಿಕವಾಗಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ನಂತರ ಆಸ್ಪತ್ರೆ, ಆಪರೇಷನ್, ಸರ್ಜರಿ ಅಂತ ಸರಿಸುಮಾರು ಒಂದು ತಿಂಗಳ ಕಾಲ ಕ್ರೇಗ್ ಶೂಟಿಂಗ್‍ನಿಂದ ದೂರ ಉಳಿಯಬೇಕಾಯ್ತು.

ಇನ್ನು 25ನೇ ಸಿನಿಮಾ ಆಗಿರುವ ಕಾರಣ 'ನೋ ಟೈಮ್ ಟು ಡೈ' ಚಿತ್ರ ಹಿಂದೆಂದಿಗಿಂತಲೂ ಅದ್ಧೂರಿ ಬಜೆಟ್‍ನಲ್ಲಿ ಮೂಡಿಬರಲಿದೆ. ಎರಡು ವರ್ಷಗಳ ಪ್ರೀ-ಪ್ರೊಡಕ್ಷನ್, ಆರು ತಿಂಗಳ ಶೂಟಿಂಗ್ ಬಳಿಕ ಇನ್ನಾರು ತಿಂಗಳ ಕಾಲ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿವೆ. ಇಟಲಿ, ಜಮೈಕಾ, ನಾರ್ವೇ, ಲಂಡನ್, ಸ್ಕಾಟ್‍ಲೆಂಡ್ ಹೀಗೆ ಹಲವು ದೇಶಗಳಲ್ಲಿ ನಡೆದಿದೆ. ಜತೆಗೆ ಆಷ್ಟನ್ ಮಾರ್ಟಿನ್ ಕಂಪನಿಯ V8 ವ್ಯಾಂಟೇಜ್, Dಬಿ5 ಹಾಗೂ ವಲ್ಹಲ್ಲ ಸೇರಿದಂತೆ ಹಲವು ಐಶಾರಾಮಿ ಕಾರುಗಳನ್ನು ಹಾಗೂ ಗ್ಯಾಜೆಟ್‍ಗಳನ್ನು ಈ ಚಿತ್ರದಲ್ಲಿ ನೋಡಬಹುದು.

ಇನ್ನು ಇದು ತಾವು ಬಾಂಡ್ ಆಗಿ ನಟಿಸುತ್ತಿರುವ ಕೊನೆಯ ಚಿತ್ರವಾಗಿರುವ ಕಾರಣ ಡೇನಿಯಲ್ ಕ್ರೇಗ್ ಕೂಡ ಸಾಕಷ್ಟು ಉತ್ಸುಕರಾಗಿದ್ದಾರೆ. ಅಮೆರಿಕದ ಸಿಐಎಗೆ ಅಂದರೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಗೆ ಭೇಟಿ ಕೊಟ್ಟು, ಅಲ್ಲಿನ ಗೂಢಚಾರಿಗಳು ಹಾಗೂ ಏಜೆಂಟ್‍ಗಳೊಂದಿಗೆ ಹಲವು ದಿನಗಳ ಕಾಲ ತರಬೇತಿ ಪಡೆದಿದ್ದಾರೆ. ಅವರು ಹೇಗೆ ಕೆಲಸ ಮಾಡ್ತಾರೆ ಎಂಬುದನ್ನು ಅರಿತುಕೊಂಡೇ ಬಾಂಡ್‍ಆಗಿ ಕೊನೆಯ ಬಾರಿಗೆ ಕಣಕ್ಕಿಳಿದಿದ್ದಾರಂತೆ.

'ನೋ ಟೈಮ್ ಟು ಡೈ', ಚಿತ್ರದ ಕಥೆಯೂ ಈಗಾಗಲೇ ರಿವೀಲ್ ಆಗಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ 51 ವರ್ಷವಾಗಿದ್ದರೂ ಡೇನಿಯಲ್ ಕ್ರೇಗ್ ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ. ಈಗ 'ನೋ ಟೈಮ್ ಟು ಡೈ' ಚಿತ್ರದಲ್ಲೂ ಅದ್ಭುತ ಆ್ಯಕ್ಷನ್‍ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: SriMurali: ನ್ಯೂಯಾರ್ಕ್​ನಲ್ಲಿ ಟಾಲಿವುಡ್​ ನಟಿಯೊಂದಿಗೆ ಶ್ರೀಮುರಳಿ..!

ಇದರಲ್ಲಿ ರಾಮಿ ಮಲೆಕ್ ಮೈನ್ ಖಳನಾಗಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಬಾಂಡ್ ಸಿನಿಮಾ. ಆದರೆ ತಮ್ಮ ಅದ್ಭುತ ನಟನೆ ಮೂಲಕ ಕ್ಯಾರಕ್ಟರ್ ಆ್ಯಕ್ಟರ್ ಎನಿಸಿಕೊಂಡಿರುವ 38 ವರ್ಷದ ಮಲೆಕ್, ಎಂತಹ ಪಾತ್ರವಾದರೂ ಅದಕ್ಕೆ ಬೇಕಾದ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡೇ, ಸೆಟ್‍ಗೆ ಬರೋದು. ಆದರೆ ಅವರ ಲುಕ್ ಇನ್ನೂ ರಿವೀಲ್ ಆಗಿಲ್ಲವಾದ್ರೂ, ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಟಾಕ್ ಕ್ರಿಯೇಟ್ ಆಗಿದೆ.

ಉಳಿದಂತೆ ರಾಲ್ಫ್ ಫಿಯೆನ್ಸ್, ನವೋಮಿ ಹ್ಯಾರಿಸ್, ರೋರಿ ಕಿನ್ನೆಯರ್, ಲಶಾನಾ ಲಿಂಚ್, ಜೆಫ್ರಿ ರೈಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ 24ನೇ ಬಾಂಡ್ ಚಿತ್ರ 'ಸ್ಪೆಕ್ಟರ್​'ನಲ್ಲಿ ಜೇಮ್ಸ್ ಬಾಂಡ್ ಗರ್ಲ್‍ಫ್ರೆಂಡ್ ಡಾಕ್ಟರ್ ಮ್ಯಾಡಲೀನ್ ಸ್ವಾನ್ ಪಾತ್ರದಲ್ಲಿ ಮಿಂಚಿದ್ದ ಲಿಯಾ ಸೆಡಾಕ್ಸ್ ಈಗ 'ನೋ ಟೈಮ್ ಟು ಡೈ'ನಲ್ಲೂ ಕಂಟಿನ್ಯೂ ಆಗಿದ್ದಾರೆ. ಒಟ್ಟಾರೆ ಜೇಮ್ಸ್ ಬಾಂಡ್ ಸಿರೀಸ್‍ನ ಈ 25ನೇ ಸಿನಿಮಾ 2020ರ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ.

 

Mouni Roy: ಮೌನವಾದ ಮೈಮಾಟದಿಂದಲೇ ಮತ್ತೇರಿಸುವ ಕೆ.ಜಿ.ಎಫ್​ ಚೆಲುವೆ ಮೌನಿ..!

First published: