ಬೆಂಗಳೂರು: “ಕರ್ನಾಟಕದಲ್ಲಿ (Karnataka) ಕನ್ನಡಿಗನೇ (Kannadiga) ಸಾರ್ವಭೌಮ” ಎಂಬ ಡೆೈಲಾಗ್(Dialogue)ಗಳೆಲ್ಲ ಸವೆದು ಅದೆಷ್ಟೋ ಕಾಲವಾಗಿ ಹೋಗಿದೆ. ಈಗೇನಿದ್ದರೂ “ಕರ್ನಾಟಕದಲ್ಲಿ ಪರಭಾಷಿಕರೇ ಸಾರ್ವಭೌಮರು” ಎನ್ನುವಂತ ಸ್ಥಿತಿ ಬಂದಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಂತೂ (Bengaluru) “ಎನ್ನಡ, ಎಕ್ಕಡಗಳ ಮಧ್ಯೆ ಕನ್ನಡಿಗ ಗಡಗಡ” ನಡುಗುವ ಪರಿಸ್ಥಿತಿ ಬಂದಿದೆ. ಸಿನಿಮಾ (Cinema) ವಿಚಾರದಲ್ಲಂತೂ ಇದು ಮತ್ತೆ ಮತ್ತೆ ಪ್ರೂವ್ (Prove) ಆಗುತ್ತಲೇ ಇದೆ. ಇದೀಗ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚಾಗಿದ್ದು, ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ (Puneeth Rajkumar) ಅವರಂತ ಮೇರುನಟನ ಸಿನಿಮಾಕ್ಕೆ ಅಡ್ಡಿ ಆತಂಕ ಎದುರಾಗಿದೆ. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ‘ಜೇಮ್ಸ್’ (James) ಸಿನಿಮಾವನ್ನು ಬಾಲಿವುಡ್ನ (Bollywood) ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಹಾಗೂ ತೆಲುಗಿನ (Telugu) ‘ಆರ್ಆರ್ಆರ್’ (RRR) ಸಿನಿಮಾಕ್ಕಾಗಿ ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎನ್ನಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
‘ಜೇಮ್ಸ್’ಗೆ ಅಡ್ಡಿಯಾಗುತ್ತಾ ‘ದಿ ಕಾಶ್ಮೀರ್ ಫೈಲ್ಸ್’?
ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನಕ್ಕಾಗಿ ‘ಜೇಮ್ಸ್’ ಚಿತ್ರವನ್ನು ಬಲವಂತವಾಗಿ ಎತ್ತಂಗಡಿ ಮಾಡಲಾಗುತ್ತಿದೆ ಎಂದು ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದರು. ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ. ಒಂದು ಶೋ ಮಾತ್ರ ಬೇರೆ ಚಿತ್ರ ಹಾಕ್ತಿವಿ ಅಂತಾ ಕೇಳಿಕೊಂಡಿದ್ರು.. ನಾಲ್ಕು ಶೋ ನನಗೆ ಬೇಕೇ ಬೇಕು ಎಂದಿದ್ದೆ ಅಂತ ಹೇಳಿದ್ದರು. ಆದರೆ ಇಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್ ಸಿನಿಮಾಕ್ಕೆ ಯಾವುದೇ ತೊಂಜರಿಯಾಗಿಲ್ಲ ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ.
ಆರ್ಆರ್ಆರ್ ಸಿನಿಮಾದಿಂದ ಅಪ್ಪು ಚಿತ್ರಕ್ಕೆ ಅಡ್ಡಿ
ಮತ್ತೊಂದೆಡೆ ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಆರ್ಆರ್ಆರ್ ಸಹ ಜೇಮ್ಸ್ ಸಿನಿಮಾಕ್ಕೆ ಅಡ್ಡಿಯಾಗಿದೆ. ದಿ ಕಾಶ್ಮೀರಿ ಸಿನಿಮಾದಿಂದ ಜೇಮ್ಸ್ ಸಿನಿಮಾಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ಆರ್ ಆರ್ ಆರ್ ಸಿನಿಮಾ ದಿಂದ ಅಷ್ಟೇ ಸ್ವಲ್ಪ ಆಗಿದೆ ಅಷ್ಟೇ ಅಂತ ಜೇಮ್ಸ್ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ.
ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ಸಾಗ 386 ಥಿಯೇಟರ್ ಗಳಲ್ಲಿ ಆಗಿತ್ತು. ಆದರೆ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಯಿಂದ ಜೇಮ್ಸ್ ಸಿನಿಮಾ ಥಿಯೇಟರ್ ಗಳು ಕಡಿಮೆ ಯಾಗಿವೆ ಅಂತ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ.
ಇದನ್ನೂ ಓದಿ: Puneeth Rajkumarರವರ 'ಜೇಮ್ಸ್'ಗೆ ಅಡ್ಡಿಯಾಗುತ್ತಾ 'The Kashmir files'? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?
ಜೇಮ್ಸ್ ಸಿನಿಮಾಕ್ಕೆ ತೊಂದೆರೆಯಾಗಲ್ಲ ಅಂತ ಸಿಎಂ ಭರವಸೆ
ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಅಂತ ಭರವಸೆ ನೀಡಿದ್ದಾರೆ. ಜೇಮ್ಸ್ ಸಿನಿಮಾ ವಿವಾದದ ಬಗ್ಗೆ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಜೊತೆ ಮಾತಾಡಿದ್ದೀನಿ. ಸಮಸ್ಯೆ ಇದ್ದರೆ ಶಿವರಾಜಕುಮಾರ್ ಜೊತೆಯೂ ಮಾತಾಡಿದ್ದೀನಿ, ನನ್ನ ಗಮನಕ್ಕೆ ತನ್ನಿ ಎಂದಿದ್ದೇನೆ.
ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿದ್ದೆನೆ. ಅನಾವಶ್ಯಕವಾಗಿ . ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ, ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಅಂತಾ ಹೇಳಿದ್ದೇನೆ ಅಂತ ಹೇಳಿದ್ದಾರೆ.
ಸಿಎಂ ಜೊತೆ ಚರ್ಚೆ ಮಾಡಿದ ಶಿವರಾಜ್ ಕುಮಾರ್
ಈ ನಡುವೆ ನಟ ಶಿವರಾಜ್ಕುಮಾರ್ ಹಾಗೂ ಪತ್ನಿ ಗೀತಾ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರುಪ. ಈ ವೇಳೆ ಜೇಮ್ಸ್ ಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ನಿರ್ಮಾಪಕ ಶ್ರೀಕಾಂತ್ ಕೂಡ ಇದ್ದರು. ಜೇಮ್ಸ್ ಚಿತ್ರ ಪ್ರದರ್ಶನದ ಕುರಿತ ಗೊಂದಲದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ರು.
ಈ ಗೊಂದಲದ ಬಗ್ಗೆ ಶಿವಣ್ಣ ಹೇಳಿದ್ದೇನು?
ಥಿಯೇಟರ್ ಸಮಸ್ಯೆ ಯಾವಾಗ್ಲು ಬರ್ತಾನೆ ಇರುತ್ತೆ, ಇದರಲ್ಲಿ ಯಸರ ತಪ್ಪು ಅಂತ ಹೇಳೋಕೆ ಆಗಲ್ಲ ಅಂತ ಶಿವರಾಜ್ ಕುಮಾರ್ ಹೇಳಿದ್ರು. ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ, ಅಪ್ಪು ಸಿನಿಮಾ ಅಂದ್ರೆ ಒಂದು ಎಮೋಷನ್ ಇದೆ. ಅದನ್ನ ಬಿಟ್ಡುಕೊಡೋದಕ್ಕೆ ಆಗಲ್ಲ ಸಿಎಂ ಮೂರು ಭಾರಿ ಕಾಲ್ ಮಾಡಿ ಮಾತನಾಡಿದ್ರು. ಇವತ್ತು ಭೇಟಿ ಮಾಡಿ ಮಾತನಾಡಿದೆಎಲ್ಲರೂ ಸೇರಿ ಮಾತನಾಡಿ ಸಮಸ್ಯೆ ಬಗೆ ಹರಿದಿದೆ ಅಂತ ಶಿವಣ್ಣ ಹೇಳಿದ್ದಾರೆ.
ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ
ಜೇಮ್ಸ್ ವಿವಾದ ಬಗೆಹರಿಸುವಂತೆ ಸಿಎಂ ಕಚೇರಿಯಿಂದ ಫಿಲ್ಮ್ ಚೇಂಬರ್ಗೆ ಸೂಚನೆ ಬಂದಿತ್ತು. ಇದಾದ ಬಳಿಕ ಎಚ್ಚೆತ್ತ ಫಿಲ್ಮ್ ಚೇಂಬರ್, ಮಹತ್ವದ ಸಭೆ ನಡೆಸಿತು. ಬೆಂಗಳೂರಿನ ಒಂಬತ್ತು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ತೆಗೆಯಂತೆ ಸೂಚನೆ ನೀಡಿದ್ದು, ಜೇಮ್ಸ್ ಸಿನಿಮಾದ ಕಲೆಕ್ಷನ್ ಚೆನ್ನಾಗಿರುವ ಕಡೆ ಸಿನಿಮಾ ತೆಗೆಯದಂತೆ ಸೂಚನೆ ನೀಡಿದೆ. ನಾಳೆಯೂ ಜೇಮ್ಸ್ ಪ್ರದರ್ಶನವಾಗ್ತಿರುವ ಥಿಯೇಟರ್ ಗಳ ಕಲೆಕ್ಷನ್ ಬಗ್ಗೆ ಪರಿಶೀಲನೆ ಮಾಡುವಂತೆ ಆದೇಶಿಸಿದೆ.
ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳ ಆಕ್ರೋಶ
ಇನ್ನು ಜೇಮ್ಸ್ ಸಿನಿಮಾ ಎತ್ತಗಂಡಿಗೆ ಪ್ರಯತ್ನ ನಡೆದಿದೆ ಎಂಬ ವಿಚಾರಕ್ಕೆ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ. ಪರಭಾಷೆ ಸಿನಿಮಾಗಳಿಗಾಗಿ ಚೆನ್ನಾಗಿ ಓಡುತ್ತಿರುವ ಸಿನಿಮಾವನ್ನು ಎತ್ತಗಂಡಿ ಮಾಡಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
ಆರ್ಆರ್ಆರ್ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ
ಇನ್ನು ಜೇಮ್ಸ್ ತೆರವು ಮಾಡಿ RRR ಪ್ರದರ್ಶನಕ್ಕೆ ಸಜ್ಜಾಗಿರುವುದಕ್ಕೆ ಕನ್ನಡ ಪರ ಹೋರಾಟಗಾರರು ಗರಂ ಆಗಿದ್ದಾರೆ. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದ ನಾಳೆ ಬೆಳಗ್ಗೆ ಗಾಂಧಿನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: RRR: ಕರ್ನಾಟಕದಲ್ಲಿ ಬಾಯ್ಕಾಟ್ `ಆರ್ಆರ್ಆರ್’ ಅಭಿಯಾನ ಶುರು! ಶಿವಣ್ಣನಿಗೆ ಕೊಟ್ಟ ಮಾತು ಮುರಿದ್ರಾ ರಾಜಮೌಳಿ?
ಬೆಳಗ್ಗೆ 11:30ಕ್ಕೆ ಗಾಂಧಿನಗರದ ತ್ರಿವೇಣಿ ಚಿತ್ರ ಮಂದಿರದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ ಮಂದಿರದಿಂದ ಜೇಮ್ಸ್ ತೆಗೆಯಬಾರದು ಎಂದು ಒತ್ತಾಯಿಸಿದ್ದು, ಆರ್ಆರ್ಆರ್ ಬೇಕಿದ್ದರೆ ಬೇರೆ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿ ಅಂತ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ