40 ರ ಹರೆಯದ ಅಮೆರಿಕನ್ ನಟ ಜೇಕ್ ಗ್ಲೆನ್ಹಾಲ್ (American Actor Jake Gyllenhaal) ತಮ್ಮ ಕುರಿತಾಗಿ ಹಬ್ಬಿಸಲಾಗಿರುವ ವದಂತಿಯೊಂದಕ್ಕೆ ತೆರೆ ಎಳೆಯಲು ಬಯಸಿದ್ದು, ತನ್ನ ವಿಷಯವಾಗಿ ಹಬ್ಬುತ್ತಿರುವ ಊಹಾಪೋಹಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. ಹಾಲಿವುಟ್ ನಟ (Hollywood Actor) ಜೇಕ್ ಗ್ಲೆನ್ಹಾಲ್ ಸ್ನಾನ ಮಾಡುವುದಿಲ್ಲವೆಂಬ ವದಂತಿ ಇದ್ದು, ಈ ಕುರಿತು ಜೇಕ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸ್ನಾನದ ಕುರಿತಾಗಿ ಅಥವಾ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನನ್ನ ಬಳಿ ಬಂದಿಲ್ಲ. ಹಾಗಾಗಿ ಈ ವದಂತಿಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲವೆಂದು ತಿಳಿಸಿದ್ದಾರೆ ದ ಗಿಲ್ಟಿ ಸಿನಿಮಾ (The Guilty) ಖ್ಯಾತಿಯ ನಟ.
‘ದ ಗಿಲ್ಟಿ’ ಚಿತ್ರದ ನಟ ಯಾರಿಗೂ ತಿಳಿಯದೇ ಇರುವ ವಿಷಯವೊಂದನ್ನು ತಿಳಿಸಲಿದ್ದೇನೆ ಎಂದು ಹೇಳಿದ್ದು, ಹೆಚ್ಚೆಚ್ಚು ಬಾರಿ ಸ್ನಾನ ಮಾಡುವುದು ನನ್ನ ಪ್ರಕಾರ ಅನಗತ್ಯ. ನಾನು ನಂಬಿಕೆ ಇರಿಸಿರುವುದು ಒಳ್ಳೆಯ ವರ್ತನೆ ಹಾಗೂ ಕೆಟ್ಟ ಉಸಿರು ಎಲ್ಲಿಯೂ ದೊರಕುವುದಿಲ್ಲ ಅಂತ. ನಾನು ಅದನ್ನೇ ಅನುಸರಿಸುತ್ತಿರುವೆ ಅಷ್ಟೇ. ಸ್ನಾನ ಮಾಡದೇ ಇರುವುದರಿಂದ ತ್ವಚೆಯ ನಿರ್ವಹಣೆಗೆ ಸಹಕಾರಿಯಾಗಿದೆ. ಹಾಗೂ ನಾವು ನೈಸರ್ಗಿಕವಾಗಿ ನಮ್ಮನ್ನು ಶುಚಿಯಾಗಿರಿಸಿಕೊಳ್ಳಬಹುದೆಂದೂ ಈ ನಟ ಹೇಳಿದ್ದಾರೆ.
40 ಹರೆಯದ ಹಾಲಿವುಡ್ ನಟ ತಮ್ಮ ಸ್ನಾನದ ಕುರಿತಾಗಿ ಹಬ್ಬಿಕೊಂಡಿದ್ದ ವದಂತಿಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. ಎಂಟರ್ಟೈನ್ಮೆಂಟ್ ಟು ನೈಟ್ ಪ್ರಕಾರ ಗ್ಲೆನ್ಹಾಲ್ ಟೈಮ್ಸ್ಗೆ ನೀಡಿದ್ದ ಸಂದರ್ಶನದಲ್ಲಿ ವೈರಲ್ ಸುದ್ದಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ನನ್ನ ಬಳಿ ಸ್ನಾನದ ದಿನಚರಿಯ ಕುರಿತು ಪ್ರಶ್ನಿಸಿದ್ದಾರೆ. ಇದು ನನಗೆ ಅಸಂಬದ್ಧ ಎಂದೆನ್ನಿಸಿದೆ. ಇದಕ್ಕೆ ನನ್ನ ಉತ್ತರ ಏನೆಂದರೆ ನಾನು ಪ್ರತಿಯೊಂದನ್ನು ಮಾಡುತ್ತೇನೆ. ಆದರೆ, ಕೆಲವೊಮ್ಮೆ ಮಾತ್ರ. ಆದರೆ ನನಗೆ ದೊರಕಿದ್ದು, ನಾನು ಸ್ನಾನ ಮಾಡುವುದಿಲ್ಲ ಎಂಬುದಾಗಿದೆ.
ಇದನ್ನೂಓದಿ: Rajamouli: ರಾಜಮೌಳಿ ಹಾಲಿವುಡ್ ಎಂಟ್ರಿ: ಗುಟ್ಟು ರಟ್ಟು ಮಾಡಿದ ನಿರ್ದೇಶಕರ ತಂದೆ..!
ಆನ್ಲೈನ್ನಲ್ಲಿ ಚರ್ಚಿತವಾಗಿರುವ ಈ ಸುದ್ದಿಯ ಕುರಿತು ಜೇಕ್ ಗ್ಲೆನ್ಹಾಲ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸ್ನಾನ ಮಾಡದೇ ಇರುವುದರಿಂದ ನನ್ನ ಮೈ ದುರ್ಗಂಧ ಬೀರುತ್ತಿದೆ ಎಂದೂ ಇಲ್ಲಿಯವರೆಗೆ ಯಾರೂ ದೂರಿಲ್ಲ. ಹಾಗಾಗಿ ನನ್ನ ಸ್ನಾನದ ಕುರಿತಾಗಿರುವ ವದಂತಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲವೆಂದು ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Kangana Ranut: ಬಾಲಿವುಡ್ ಕ್ವೀನ್ ಕಂಗನಾಗೆ ಭಯ ಹುಟ್ಟಿಸುತ್ತಿವೆಯಾ ಹಾಲಿವುಡ್ ಸಿನಿಮಾಗಳು..!
ದ ಗಿಲ್ಟಿ ಸಿನಿಮಾ ಖ್ಯಾತಿಯ ನಟ ಜೇಕ್ ಗ್ಲೆನ್ಹಾಲ್ ಅವರ ಹೊಸ ಚಿತ್ರದ ಪ್ರದರ್ಶನದ ನಂತರ ನನ್ನ ಸ್ನಾನದ ವಿಷಯ ಕುರಿತಾಗಿ ಬರುತ್ತಿರುವ ಕಾಮೆಂಟ್ಗಳನ್ನು ಹಾಗೂ ವೈರಲ್ ಸುದ್ದಿಗಳನ್ನು ನಾನು ಗಮನಿಸುತ್ತಿದ್ದೇನೆ ಎಂದು ನಟ ತಿಳಿಸಿದ್ದಾರೆ. ಈ ಪ್ರಶ್ನೆ ಯಾಕೆ ಉದ್ಭವಿಸಿದೆ ಏತಕ್ಕಾಗಿ ನನ್ನ ಸುತ್ತಲೂ ಸುದ್ದಿಯಾಗಿ ಹಬ್ಬಿಕೊಂಡಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಾನು ಎಲ್ಲಿಯೇ ಹೋದರೂ ನನ್ನನ್ನು ಈ ಪ್ರಶ್ನೆ ಕಾಡುತ್ತಿತ್ತು. ಹಾಗಾಗಿ ಇದಕ್ಕೆ ಸೂಕ್ತ ಉತ್ತರವನ್ನು ನೀಡಿದ್ದೇನೆ ಎಂದು ನಟ ತಿಳಿಸಿದ್ದಾರೆ.
ಈ ವೈರಲ್ ಸುದ್ದಿಗಳನ್ನು ನಾನು ಹಾಸ್ಯಮಯವಾಗಿಯೇ ಸ್ವೀಕರಿಸಿದ್ದು, ನನ್ನ ಸ್ನಾನದ ವಿಷಯ ಇಷ್ಟೊಂದು ಚರ್ಚೆಗೆ ಕಾರಣವಾಗುತ್ತದೆ. ಅದೊಂದು ದೊಡ್ಡ ಸುದ್ದಿಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಜೇಕ್ ಗ್ಲೆನ್ಹಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Shirley Temple: ಹಾಲಿವುಡ್ ನಟಿ ಶಿರ್ಲೆ ಟೆಂಪಲ್ಗೆ ಗೂಗಲ್ ಡೂಡಲ್ ಗೌರವ
ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿತವಾಗಿದ್ದ ಜೇಕ್ ಗ್ಲೆನ್ಹಾಲ್ ಸ್ನಾನದ ವಿಷಯವು ಅವರ ಉತ್ತರದಿಂದ ಕೊಂಚ ಶಾಂತವಾದಂತೆ ಕಾಣಿಸುತ್ತಿದೆ. ಅಂತೂ ಜೇಕ್ ಅವರ ಉತ್ತರದಿಂದಲೇ ನಟ ಸ್ನಾನ ಮಾಡುತ್ತಾರೆ ಹಾಗೂ ಅವರ ಮೈಯಿಂದ ದುರ್ಗಂಧ ಬರುತ್ತಿಲ್ಲ. ಹಾಗಾಗಿ ನಿತ್ಯವೂ ಸ್ನಾನ ಮಾಡುತ್ತಾರೆ ಎಂಬ ಉತ್ತರವನ್ನು ಪಡೆದುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ