ಅಣ್ಣ ಅರ್ಜುನ್​ ಹುಟ್ಟುಹಬ್ಬಕ್ಕೆ ಜಾಹ್ನವಿ ಕಪೂರ್ ನೀಡಿದ ಮನ ಮಿಡಿಯುವ ಉಡುಗೊರೆ ಏನು ಗೊತ್ತಾ?​

news18
Updated:June 26, 2018, 2:15 PM IST
ಅಣ್ಣ ಅರ್ಜುನ್​ ಹುಟ್ಟುಹಬ್ಬಕ್ಕೆ ಜಾಹ್ನವಿ ಕಪೂರ್ ನೀಡಿದ ಮನ ಮಿಡಿಯುವ ಉಡುಗೊರೆ ಏನು ಗೊತ್ತಾ?​
news18
Updated: June 26, 2018, 2:15 PM IST
ನ್ಯೂಸ್​ 18 ಕನ್ನಡ 

ಇಂದು ನಟ ಅರ್ಜುನ್​ ಕಪೂರ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂತಹ ದಿನದಂದು ಪ್ರೀತಿ ಪಾತ್ರರಿಂದ ಪ್ರೀತಿಯ ಹೃದಯ ಸ್ಪರ್ಶಿ ಸಂದೇಶವೊಂದು ಸಿಕ್ಕರೆ ಸಾಕು. ಅದೇ ದೊಡ್ಡ ಉಡುಗೊರೆಯಾಗುತ್ತದೆ. ಇಂತಹದೊಂದು ಉಡುಗೊರೆ ಈಗ ಅರ್ಜುನ್​ಗೆ ತಂಗಿ ಜಾಹ್ನವಿಯಿಂದ ಸಿಕ್ಕಿದೆ.

ಅಣ್ಣ ಅರ್ಜುನ್​ ಹುಟ್ಟುಹಬ್ಬಕ್ಕೆ ಫೋಟೋ ಒಂದನ್ನು ಪೋಸ್ಟ್​ ಮಾಡಿರುವ ಜಾಹ್ನವಿ 'ನೀನೆ ನಮ್ಮ ಶಕ್ತಿ, ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಷಯಗಳು ಅಣ್ಣ' ಎಂದು ಬರೆದುಕೊಂಡಿದ್ದಾರೆ ಜಾಹ್ನವಿ.
You are the reason for our strength. Love you, happy birthday Arjun bhaiya ❤️


Loading...

A post shared by Janhvi Kapoor (@janhvikapoor) on


ಈ ಫೋಟೋದಲ್ಲಿ ಅರ್ಜುನ್ ಕಪೂರ್​ ಮೂವರು ತಂಗಿಯರಾದ ಖುಷಿ, ಅನ್ಶುಲಾ ಹಾಗೂ ಖುಷಿ ಜತೆ ಇದ್ದಾರೆ. ತಾಯಿಯನ್ನು ಕಳೆದುಕೊಳ್ಳುವ ದುಖಃವನ್ನು ಅನುಭವಿಸಿದ್ದ ಅರ್ಜುನ್​ , ಶ್ರೀದೇವಿ ಸಾವಿನ ನಂತರ ತಂದೆ ಹಾಗೂ ತಂಗಿಯರಿಗೆ ಧೈರ್ಯ ಹೇಳುವ ಸ್ಥಾನದಲ್ಲಿ ನಿಂತು ಮನೋಸ್ಥೈರ್ಯ ತುಂಬಿದ್ದರು. ಅಲ್ಲದೆ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ದುಬೈನಿಂದ ಮುಂಬಗೆ ತಂದು ಅವರ ಅಂತಿಮ ಸಂಸ್ಕಾರ ಹಾಗೂ ಇತರೆ ವಿಧಿವಿಧಾನಗಳನ್ನೆಲ್ಲ ಮುಂದೆ ನಿಂತು ನೆರವೇರಿಸಿದ್ದರು ಅರ್ಜುನ್​ ಕಪೂರ್​.

ಇದಾದ ನಂತರ ಅರ್ಜುನ್​, ಅನ್ಶುಲಾ, ಖುಷಿ ಹಾಗೂ ಜಾಹ್ನವಿ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಅರ್ಜುನ್​ ಹುಟ್ಟುಹಬ್ಬಕ್ಕೆಂದು ಅರ್ಜುನ್​ ಮನೆಗೆ ತಂದೆ ಜೊತೆಗೆ ಬಂದಿದ್ದ ಜಾಹ್ನವಿ ಹಾಗೂ ಖುಷಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ