Totapuri: ಕನ್ನಡದ ತೋತಾಪುರಿ ಬಹುಭಾಷೆಯಲ್ಲಿ ಬಿಡುಗಡೆ! ರಿಲೀಸ್ ಡೇಟ್ ಫಿಕ್ಸ್

ಎಷ್ಟು ಥಿಯೇಟರ್​ಗಳಲ್ಲಿ ಕನ್ನಡದ ತೋತಾಪುರಿ ರಿಲೀಸ್ ಆಗುತ್ತದೆ? ಅನ್ನೋ ಪ್ರಶ್ನೆಗೆ ನಿರ್ಮಾಪಕರು ಉತ್ತರ ಕೊಟ್ಟಿದ್ದಾರೆ.

ತೋತಾಪುರಿ ಕಾಮಿಡಿ ಕಿಕ್

ತೋತಾಪುರಿ ಕಾಮಿಡಿ ಕಿಕ್

  • Share this:
ನವರಸ ನಾಯಕ ಜಗ್ಗೇಶ್ (Actor Jaggesh) ಹಾಗೂ ನಟಿ ಅದಿತಿ ಪ್ರಭುದೇವ
(Aditi Prabhudeva) ಅಭಿನಯದ ತೋತಾಪುರಿ ಸಿನಿಮಾ ರಿಲೀಸ್ ಆಗೋದು ಯಾವಾಗ ? ಈ ಚಿತ್ರದ ಲೇಟೆಸ್ಟ್ ನ್ಯೂಸ್ ಏನು ? ಹಾಸ್ಯ ಪ್ರಿಯರಿಗೆ ಈ ಸಿನಿಮಾದ ರಸದೌತಣ ಇನ್ಯಾವಾಗ ? ತೋತಾಪುರಿ (Totapuri Cinema ) ಸಿನಿಮಾ ಪಾರ್ಟ್​-1 ಮೊದಲು ಬರುತ್ತದೆಯೇ ಎರಡೂ ಒಟ್ಟಿಗೆ ಬರೋದು ಪ್ಲಾನಿಂಗಾ ? ಇದರ ಸುತ್ತ ಈಗ ಒಂದಷ್ಟು ಮಾಹಿತಿ ಸಿಕ್ಕಿದೆ. ನಿರ್ಮಾಪಕ  ಕೆ.ಎ.ಸುರೇಶ್ (Producer) ಅವ್ರೇ ತಮ್ಮ ಚಿತ್ರದ ಬಗ್ಗೆ ಈಗ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ರಿಲೀಸ್ ಡೇಟ್ ಅನ್ನೂ ಕೂಡ ಫಿಕ್ಸ್ ಮಾಡಿದ್ದು, ಅದನ್ನೂ ಇಲ್ಲಿ ಹೇಳಿಕೊಂಡಿದ್ದಾರೆ.


ನವರಸನಾಯಕ ಜಗ್ಗೇಶ್ ತೋತಾಪುರಿ ಇದೇ 30ಕ್ಕೆ ರಿಲೀಸ್
ತೋತಾಪುರಿ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನಿರ್ಮಾಪಕರು ಸುರೇಶ್ ತಮ್ಮ ಈ ಚಿತ್ರವನ್ನ ಇದೇ ತಿಂಗಳು 30ರಂದು ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಚಿತ್ರವನ್ನ ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡದೇ ಬೇರೆ ಭಾಷೆಯಲ್ಲೂ ತೋತಾಪುರಿ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ.



ತೋತಾಪುರಿ ಸಿನಿಮಾ ಬಹು ಭಾಷೆಯಲ್ಲೂ ರಿಲೀಸ್
ಹೌದು. ಕನ್ನಡದ ಕೆಜಿಎಫ್ ಚಿತ್ರ ಪ್ಯಾನ್ ಮಟ್ಟದಲ್ಲಿ ಬಂದ್ಮೇಲೆ ಸ್ಯಾಂಡಲ್​ ವುಡ್ ಸಿನಿಮಾಗಳಲ್ಲಿ ಎಲ್ಲೆಡೆ ಬೇಡಿಕೆ ಬಂತು. ಅದರಂತೆ ಚಾರ್ಲಿ 777, ವಿಕ್ರಾಂತ್ ರೋಣ ಎಲ್ಲವೂ ಬೇರೆ ಭಾಷೆಯಲ್ಲೂ ಬಂದವು. ಅದರಂತೆ ಈಗ ಕನ್ನಡದ ತೋತಾಪುರಿ ಸಿನಿಮಾ ಕೂಡ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಪರ ಭಾಷೆಯಲ್ಲೂ ಇದು ರಿಲೀಸ್ ಆಗುತ್ತಿದೆ.

This month 30th Cinema Release
ಇದೇ ತಿಂಗಳು 30ಕ್ಕೆ ಸಿನಿಮಾ ರಿಲೀಸ್


ತೋತಾಪುರಿ ಸಿನಿಮಾ ಎಷ್ಟು ಥಿಯೇಟರ್​ನಲ್ಲಿ ರಿಲೀಸ್?
ಜಗ್ಗೇಶ್ ಅವರ ತೋತಾಪುರಿ ಸಿನಿಮಾ ಇದೇ ತಿಂಗಳು ರಿಲೀಸ್ ಆಗ್ತಿದೆ. ಬಹು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಆದರೆ, ಎಷ್ಟು ಥಿಯೇಟರ್​ಗಳಲ್ಲಿ ಕನ್ನಡದ ತೋತಾಪುರಿ ರಿಲೀಸ್ ಆಗುತ್ತದೆ? ಅನ್ನೋ ಪ್ರಶ್ನೆಗೆ ನಿರ್ಮಾಪಕರು ಉತ್ತರ ಕೊಟ್ಟಿದ್ದಾರೆ. ಸಿನಿಮಾ ರಿಲೀಸ್ ದಿನಗಳು ಹತ್ತಿರವಾದಂತೆ ಅದೆಲ್ಲವನ್ನೂ ಡಿಟೈಲ್ ಆಗಿಯೇ ಕೊಡ್ತಿನಿ ಅಂತಲೇ ಹೇಳಿಕೊಂಡಿದ್ದಾರೆ.

ತೋತಾಪುರಿ ಚಿತ್ರದ ಪಾರ್ಟ್ -2 ರಿಲೀಸ್ ಯಾವಾಗ ?
ಡೈರೆಕ್ಟರ್ ವಿಜಯಪ್ರಸಾದ್ ಹಾಸ್ಯಭರಿತ ತೋತಾಪುರಿ ಚಿತ್ರವನ್ನ ಎರಡು ಭಾಗದಲ್ಲಿ ನಿರ್ದೇಶನ ಮಾಡಿದ್ದಾರೆ. ತೋತಾಪುರಿ ಪಾರ್ಟ್-1 ನಲ್ಲಿ ಒಂದು ಕಂಟೆಂಟ್ ಇದ್ದರೇ, ಎರಡನೇ ಪಾರ್ಟ್​ ನಲ್ಲಿ ಮತ್ತೊಂದಷ್ಟು ಹಾಸ್ಯ ತುಂಬಿರುತ್ತದೆ. ಆದರೆ, ಇವರೆಡೂ ಸಿನಿಮಾ ಒಟ್ಟಿಗೆ ಬರ್ತಿಲ್ಲ. ಮೊದಲು ತೋತಾಪುರಿ ಪಾರ್ಟ್-1 ಬರುತ್ತದೆ. ಪಾರ್ಟ್-2 ರಿಲೀಸ್ ಕೂಡ ನಂತರವೇ ಆಗುತ್ತದೆ.

ಇದನ್ನೂ ಓದಿ: Puneeth Rajkumar: ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾದಲ್ಲಿ ಕಾಲಿವುಡ್​ ಸ್ಟಾರ್​ ನಟ! ಶೀಘ್ರದಲ್ಲೇ ಶೂಟಿಂಗ್​ ಸ್ಟಾರ್ಟ್​?

ತೋತಾಪುರಿ ಚಿತ್ರದ ಟ್ರೈಲರ್ ಕೊಟ್ಟಿದೆ ಸಖತ್ ಕಿಕ್
ತೋತಾಪುರಿ ಚಿತ್ರದ ಹಾಡು ಸಾಕಷ್ಟು ಗಮನ ಸಳೆದಿವೆ.  ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಸಂಗೀತದ ಈ ಹಾಡುಗಳನ್ನ ಜನ ಈಗಾಗಲೇ ಮೆಚ್ಚಿಕೊಂಡಿದ್ದಾರೆ.  ಚಿತ್ರದ ಟ್ರೈಲರ್ ಅಂತಲೂ ಇನ್ನೂ ಮಜಾ ಇದೆ. ಹಾಸ್ಯ ಪ್ರಿಯರಿಗೆ ಈಗಾಗಲೇ ಈ ಟ್ರೈಲರ್ ಭಾರೀ ಖುಷಿನೂ ಕೊಟ್ಟಿದೆ. ಭರವಸೆಯನ್ನೂ ಮೂಡಿಸಿದ್ದು ಚಿತ್ರದಲ್ಲಿ ದೊಡ್ಡ ತಾರಾಬಳಗವೇ  ಕೆಲಸ ಮಾಡಿದೆ.

ಇದನ್ನೂ ಓದಿ: Guru Shishyaru: ಗುರು ಶಿಷ್ಯರು ರಿಲೀಸ್ ಡೇಟ್ ಫಿಕ್ಸ್! ನಿರೀಕ್ಷೆ ಹುಟ್ಟಿಸಿದ ಶರಣ್ ಹೊಸ ಸಿನಿಮಾ

ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ,ಸುಮನ್ ರಂಗನಾಥ್, ಡಾಲಿ ಧನಂಜಯ್, ದತ್ತಣ್ಣ, ವೀಣಾ ಸುಂದರ, ಹೇಮಾದತ್ ಸೇರಿದಂತೆ ಇನ್ನೂ ಅನೇಕರು ಅಭಿನಯಸಿದ್ದಾರೆ. ಇವರೆಲ್ಲರೂ  ಇಲ್ಲಿ ಹಾಸ್ಯದ ರಸದೌತಣವನ್ನೇ ನೀಡಲಿದ್ದಾರೆ. ಅದನ್ನ ಕಣ್ತುಂಬಿಕೊಳ್ಳೋದೊಂದೇ ಈಗ ಬಾಕಿ ಇದ್ದು  ಜಗ್ಗೇಶ್ ಚಿತ್ರ ಪ್ರೇಮಿಗಳು
ತೋತಾಪುರಿ ಸಿನಿಮಾ ರಿಲೀಸ್ ಅನ್ನು  ಎದುರು ನೋಡ್ತಿದ್ದಾರೆ.
First published: